ಸಹಿ ಮಾಡುವ ಮುನ್ನ ಇರಲಿ ಎಚ್ಚರ..!!

ಒಬ್ಬಾತ ಸಂದರ್ಶನಕ್ಕೆ ಹಾಜರಾದ…ಇಂಟರ್ವ್ಯೂವ್ ಮಾಡುವ ವ್ಯಕ್ತಿ…ಉದ್ಯೋಗಕ್ಕಾಗಿ ಬಂದ ಅಭ್ಯರ್ಥಿಗೆ ಸಂಬಂಧಿಸಿದ ಕೆಲವು ಪರ್ಸನಲ್ ಪ್ರಶ್ನೆಗಳನ್ನು ಕೇಳಿದ ಬಳಿಕ….ಸಹಿಯನ್ನು ಅವಲಂಭಿಸಿ ವ್ಯಕ್ತಿಯೊಬ್ಬರ ವ್ಯಕ್ತಿತ್ವವನ್ನು ಹೇಳಬಹುದೆಂದು ಹೇಳುತ್ತಾ….ಎಲ್ಲಿ…ಈ ಬಿಳಿ ಕಾಗದ ಮೇಲೆ ನಿಮ್ಮ ಸಹಿ ಹಾಕು ಎಂದು ಕಾಗದವನ್ನು ಆತನ ಕೈಗೆ ಕೊಟ್ಟನಂತೆ!! ಆ ವೈಟ್ ಪೇಪರ್ ತೆಗೆದುಕೊಂಡ ಅಭ್ಯರ್ಥಿ ಸ್ವಲ್ಪ ಹೊತ್ತು ಆಲೋಚಿಸಿ ಕಾಗದವನ್ನು ನಾಲ್ಕು ಕಡೆಯಿಂದ ಮಡಚಿ…ಆ ನಾಲ್ಕು ಮೂಲೆಗಳು ಕವರ್ ಆಗುವಂತೆ ಸಹಿ ಹಾಕಿ ಇಂಟರ್ವ್ಯೂವರ್‌ಗೆ ಕೊಟ್ಟನಂತೆ..! ಅದನ್ನು ನೋಡಿ ಇಂಟರ್ವ್ಯೂವರ್…ಯಸ್ ಯೂ ಆರ್ ಸೆಲೆಕ್ಟೆಡ್ ಎಂದನಂತೆ.!ಬ್ಲಾಂಕ್ ಪೇಪರ್ ಮೇಲೆ ಸಹಿ ಹಾಕು ಎಂದ ಕೂಡಲೆ ಸಹಿ ಹಾಕಿದ್ದರೆ…ಅಭ್ಯರ್ಥಿಗೆ ಲೋಕಜ್ಞಾನ ಇಲ್ಲ ಎಂದರ್ಥ. ಈ ರೀತಿ ಮಾಡು ಎಂದು ಹೇಳುವುದು…ಅಭ್ಯರ್ಥಿ ಕಾಮನ್ ಸೆನ್ಸನ್ನು, ಪ್ರೆಸೆನ್ಸ್ ಆಫ್ ಮೈಂಡನ್ನು ಪರೀಕ್ಷಿಸಲು.! ಒಂದು ವೇಳೆ ಸೈನ್ ಮಾಡು ಎಂದರೂ ಆತನನ್ನು ನೆಗಟೀವ್ ಆಗಿ ಅರ್ಥ ಮಾಡಿಕೊಳ್ಳಬಹುದು…ಸೋ ಆ ರೀತಿಯ ಆಪತ್ತಿನ ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ಡೀಲ್ ಮಾಡಿದ್ದರಿಂದ….ಅಭ್ಯರ್ಥಿಯ ಪ್ರೆಸೆನ್ಸ್ ಆಫ್ ಮೈಂಡ್ ಇಷ್ಟವಾಗಿ ಉದ್ಯೋಗ ಕೊಟ್ಟರಂತೆ!