ಸೋಬಾನ ಹಾಡುವ ತಾಯಮ್ಮನವರಿಗೆ ರಾಜ್ಯೋತ್ಸವ ಪ್ರಶಸ್ತಿ..

ಆ ಕಾಲವೊಂದಿತ್ತು ಯಾರ ಮನೆಯಲ್ಲಾದರೂ ಸೀಮಂತ, ನಾಮಕರಣ ಇತ್ಯಾದಿ ಕಾರ್ಯಕ್ರಮಗಳಿದ್ದರೆ ಓಣಿಯ ಹಿರಿಯ ಮಹಿಳೆಯರು ತಟ್ಟನೆ ಹಾಜರಾಗುತ್ತಿದ್ದರು. ಓಣಿಯಲ್ಲಾ ಕಾರ್ಯಕ್ರಮ ಇರುವ ಅವರ ಕಿವಿಗೆ ಬಿದ್ದರೆ ಸಾಕು ” ಏ ಕಲ್ಲವ್ವಾ, ಮೂಲಿಮನಿ ಸಂಗವ್ವನ ಸೊಸಿ ಮಗಂದ ನಾಮಕರಣ ಐತಿ ಹೋಗುಣ ಬಾರಬೇ ದೌಡ” ಅಂತ ಓಣಿಯಲ್ಲಿನ ಮಹಿಳೆಯರು ಕಾರ್ಯಕ್ರಮದ ಮನೆಗೆ ದೌಡಯಿಸುತ್ತಿದ್ದರು.

“ಜೋ ಜೋ ಎನ್ನ ಜ್ಯೋತಿಯ ಕಂದ ಜೊ ಜೋ..
ಕಣ್ಣು ಇದ್ದು ಕಣ್ಣು ಇಲ್ಲದಂಗ ಇರಬೇಕು, ಕಣ್ಣಿನ ಕಳೆಗಳು ತಿಳಿದಿರಬೇಕು,
ಜೋ ಜೋ ಜ್ಯೋತಿಯ ಕಂದ ಜೋ ಜೋ” ಎಂಬ ಶೋಬಾನ ಪದ ಓಣಿಯ ತುಂಬೆಲ್ಲಾ ಕೇಳಿಸುತ್ತಿತ್ತು..

ಆದರೆ ಈಗ ಈ ದಿನಗಳು ವಿರಳವಾಗಿವೆ. ಆದರೂ ಇಂದಿನ ಕಾಲದಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ಸೊಗಡಿನ ಸಾಂಪ್ರದಾಯಿಕ ಸೋಬಾನೆ ಪದಗಳನ್ನು ನೆನಪಿಲ್ಲಿಟ್ಟುಕೊಂಡಂತಹ
ಸೊಲ್ಲಾಪುರದ ತಾಯಮ್ಮನವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಹಳ್ಳಿಯ ಸೊಗಡಿಗೆ ನೀಡಿದ ಗೌರವ‌.

ಸೋಬಾನೆ ಪದಗಳನ್ನು ಹಾಡುವ ಹಾಡುಗಾರ್ತಿ ತರೀಕೆರೆ ತಾಲ್ಲೂಕಿನ ಅಜ್ಜಂಪುರ ಸಮೀಪದ ಸೊಲ್ಲಾಪುರ ಗ್ರಾಮದ ಮಹಿಳೆ ತಾಯಮ್ಮನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸರಕಾರ ಗೌರವಿಸಿದೆ.

ಈ ನಿರ್ಣಯದಿಂದ ಪ್ರಶಸ್ತಿಗಳಿಗೆ ಒಂದು ಬೆಲೆ ಸಿಕ್ಕಂತಾಗಿದೆ. ಕಳೆದ ಬಾರಿ ಕೆಲ ರಾಜಕೀಯ ಕುತಂತ್ರಿಗಳು ಇವುಗಳನ್ನು ಪಡೆಯಲು ಲಾಭಿ ನೆಡೆಸಿದ್ದನ್ನು ಸ್ಮರಿಸಬಹುದು.

  • 1
    Share