ಅಂಕಣ

ಮುಸಲ್ಮಾನ ಧರ್ಮಾಂದತೆ ಕಾಲಿಟ್ಟಲ್ಲೆಲ್ಲ ವಿಧ್ವಂಸಕತೆಯಿದೆ..!!

ಮುಸಲ್ಮಾನ ಧರ್ಮಾಂದತೆ ಕಾಲಿಟ್ಟಲ್ಲೆಲ್ಲ ವಿಧ್ವಂಸಕತೆಯಿದೆ

ಇಸ್ಲಾಂಮಿಗರು ತನ್ನ ಧರ್ಮಕ್ಕಾಗಿ ಧರ್ಮಾಂತೆಯಲ್ಲಿ ಪ್ರಾಣತೆತ್ತ ಉದಾಹರಣೆಗಳಿವೆ.
ಧರ್ಮಾಂದತೆಯಲ್ಲಿ ಕುರುಡರಾದ ತುರ್ಕರ “ಅನ್ನವಿಕ್ಕಿದ ಪ್ರಭು ಮದಕರಿನಾಯಕರಿಗೆ ದ್ರೋಹ ಮಾಡಿದ ಸತ್ಯಕಥೆಯನ್ನು ತಿಳಿಯೋಣ.

ಚಿತ್ರದುರ್ಗದ ಬಗ್ಗೆ ಮೊದಲ ವಿವರಣೆ ಕೊಡೋಣ.

ದುರ್ಗದ ಕೋಟೆಯ ಸುತ್ತಲೂ ಆಳವಾದ ಅಗಳುಗಳಿದ್ದವು. ನೀರಿನ ಕಾಲುವೆಗಳಿದ್ದವು. ಅವನ್ನು ಮುಚ್ಚಿಸಿಬಿಡಲು ಪ್ರಯತ್ನಪಟ್ಟ. ಕೋಟೆಯೊಳಗೆ ಹೋಗುತ್ತಿದ್ದ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಹಾಳುಗೆಡವಿದರೆ ಒಳಗಿರುವವರು ಹಾಹಾಕಾರ ಎಬ್ಬಿಸಬಹುದೆಂಬ ಲೆಕ್ಕಾಚಾರ ಹಾಕಿದ. ಕೋಟೆಯೊಳಗೆ ನುಸುಳಲು ಅನುವಾಗುವ ಸುರಂಗ ಮಾರ್ಗವನ್ನು ಪತ್ತೆ ಮಾಡಿ ಆ ಮೂಲಕ ತನ್ನ ಸೈನಿಕರನ್ನು ಕಳಿಸಿದ. ಆದರೆ ಆ ಕಿಂಡಿಯ ಮೂಲಕ ಹೊರಬರುತ್ತಿದ್ದ ಸೈನಿಕರನ್ನು ನೋಡಿದ ಕಾವಲುಗಾರನೊಬ್ಬನ ಹೆಂಡತಿಯಾದ ಓಬವ್ವ ಎಂಬಾಕೆ ಒನಕೆ ತಂದು ಆ ಸೈನಿಕರನ್ನು ಒಬ್ಬೊಬ್ಬರನ್ನಾಗಿ ಹೊಡೆದು ಸಾಯಿಸಿ ದುರ್ಗದ ರಕ್ಷಣೆಗೆ ತನ್ನ ಪಾಲಿನ ಹಿರಿಕಾಣಿಕೆಯನ್ನೂ ಕೊಟ್ಟಳು.
ಯಾರ ಸೈನ್ಯವೆಂದು ನಿಮಗೆ ಮನದಟ್ಟಾಗಿದೆಯಲ್ಲವೆ?
ಅದೆ ತುರ್ಕರ ಹೈದರಾಲಿಯ ಸೈನ್ (ತಿಪ್ಪೆಸುಲ್ತಾನನ ಅಪ್ಪ)

ತನ್ನ ಯಾವ ಪ್ರಯತ್ನಗಳೂ ಯಶಗೂಡದೆ ಇದ್ದಾಗ ಬಾಹ್ಯ ಒತ್ತಡ ತಂದು ಜನರನ್ನು ಗಲಿಬಿಲಿಗೊಳಿಸುವ ಕೆಲಸಕ್ಕೆ ಹೈದರಾಲಿ ಕೈ ಹಾಕಿದ. ಹತ್ತಾರು ಫಿರಂಗಿಗಳನ್ನು ಒಟ್ಟಾಗಿ ಇಟ್ಟು ಕೋಟೆಯತ್ತ ಗುಂಡು ಸಿಡಿಸಿ ನೋಡಿದ. ಆದರೆ ಅವೆಲ್ಲ ಸಿಡಿಗುಂಡುಗಳು ಕೋಟೆಯ ಕಲ್ಲುಗಳ ಮೇಲೆ ಉಳಿಯ ಸಣ್ಣ ಹೊಡೆತದಷ್ಟು ಗಾಯ ಮಾಡಿದವೇ ಹೊರತು ಬೇರೆ ಪರಿಣಾಮವೇನೂ ಆಗಲಿಲ್ಲ. ಕೊಟ್ಟಕೊನೆಯ ಪ್ರಯತ್ನವಾಗಿ ಹೈದರಾಲಿ,
ಮದಕರಿ ನಾಯಕರ ಸೈನ್ಯದಲ್ಲಿದ್ದ ಮೂರು ಸಾವಿರ ಮುಸ್ಲಿಮ್ ಸೈನಿಕರಿಗೆ ಬಲೆ ಬೀಸಿದ. ಮತದ ಮಾತನ್ನು ಮುಂದೆ ಮಾಡಿದ. ಅವರಿಗೆಲ್ಲ ಬೇಕುಬೇಕಾದಲ್ಲಿ ಮಸೀದಿ ಕಟ್ಟಿಸಿಕೊಡುವ ಆಮಿಷ ಒಡ್ಡಿದ. ತಮ್ಮ ನಿಷ್ಠೆಯೇನಿದ್ದರೂ ಅನ್ನ ಕೊಟ್ಟ ನೆಲಕ್ಕಿಂತ ಅಸ್ಮಿತೆ ಕೊಟ್ಟ ಮತಕ್ಕೇ ಎಂದು ಭಾವಿಸಿದ ಮತಾಂಧ ಸೈನಿಕರು ಕೊನೆಗೂ ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವುದಕ್ಕೆ ಸಿದ್ಧರಾಗಿಬಿಟ್ಟರು.

ಎಚ್.ಎಸ್. ಪಾಂಡುರಂಗ ಜೋಯಿಸರು ಬರೆದ ಒಂದು ಕೃತಿಯಲ್ಲಿ ಬರುವ ಸಾಲುಗಳು ಆ ಕಾಲದ ಪರಿಸ್ಥಿತಿಗೆ ಕನ್ನಡಿ ಹಿಡಿಯುವಂತಿವೆ “ಹೈದರನ ಕಡೆಯಿಂದ ದಿನದಿನವೂ ಕದನ ಪ್ರಬಲವಾಗುತ್ತಾ ಬಂದಿತು. ಮುಖ್ಯದ್ವಾರಗಳ ಬಳಿ ಲಗ್ಗೆ ಹತ್ತುವುದು ಹೆಚ್ಚಾಯಿತು. ಒಂದು ಸಲ ಮದಕರಿಯ ಕಡೆ ಸಾವಿರಾರು ಯೋಧರು ಮಡಿದರು. ಮತ್ತೊಂದು ಸಲ ಎಂದೂ ಬೆನ್ನು ಕೊಡದ ದುರ್ಗದ ಸೈನಿಕರು ಓಡಿಹೋದರು. ಇದೇ ಸಮಯವೆಂದು ರಂಗಯ್ಯನ ಬಾಗಿಲ ಸುರಂಗ ಮಾರ್ಗದ ಮೂಲಕ ಶತ್ರು ಸೈನಿಕರು ನುಗ್ಗಿದರು. ಪಿತೂರಿಗೆ ಒಳಗಾದ ಮದಕರಿ ಸೈನಿಕರು ಯುದ್ಧ ಮಾಡದೆ ನಿಂತರು. ಮದ್ದು ಸಂಗ್ರಹಕ್ಕೆ ಎಣ್ಣೆ ಹಾಕಿದ್ದುದು ಕಂಡುಬಂದಿತು. ನಿಷ್ಠರಾದ ಪಡೆಗಳು ಮದ್ದು ಹಾರದೆ ಶತ್ರುವಶರಾದರು. ಸಂತೇಬಾಗಿಲ ಬಳಿ ಸೈನ್ಯವು ನಾಶವಾಗಿ ಎದುರಿಸಲು ಯಾರೂ ಇಲ್ಲವಾಯಿತು. ವೈರಿಗಳು ಅಪಾರ ಸಂಖ್ಯೆಯಲ್ಲಿ ಒಳನುಗ್ಗಿದರು. ಬಸವನ ಬುರುಜಿನ ಮದ್ದು ಸಿಡಿಯದೆ ವೈರಿಗಳಿಗೆ ಸುಲಭವಾಗಿ ವಶವಾಯಿತು.

ಜರಮಲೆಯವರು ಕಳ್ಳದಾರಿ ತೋರಿಸಿದರು. ಹೊರಕೋಟೆಯ ಒಳಭಾಗವೆಲ್ಲಾ ಶತ್ರುಮಯವಾಯಿತು. ಹೈದರಾಲಿಯು ಉತ್ಸವಾಂಬ ದೇವಸ್ಥಾನದಲ್ಲಿ ಬಿಡಾರ ಮಾಡಿದನು. ಈ ಸಾಲುಗಳು ಮದಕರಿ ನಾಯಕರನ್ನು ಅವರ ಸೈನ್ಯದೊಳಗಿನ ವಂಚಕರು ಹೇಗೆ ರಾಜದ್ರೋಹ ಮೆರೆದು ಸದೆಬಡಿದರು ಎಂಬುದನ್ನು ಹೇಳುವ ಜತೆಗೇ ಏಳು ಸುತ್ತಿನ ಕೋಟೆಯನ್ನು ಬಗ್ಗುಬಡಿಯಲು ವೈರಿಗಳು ಏನೆಲ್ಲ ಕಸರತ್ತುಗಳನ್ನು ಮಾಡಬೇಕಾಯಿತು ಎಂಬುದನ್ನೂ ಕಣ್ಣಿಗೆ ಕಟ್ಟುವಂತೆ ಹೇಳುತ್ತದೆ.
ದುರ್ಗದ ಕೋಟೆಯೆಂಬುದು ಮಹಾವೃಕ್ಷ; ಕೆಡುವುದಿದ್ದರೆ ಒಳಗಿನ ಒರಲೆಗಳಿಂದಲೇ ಹೊರತು ಹೊರಗಿನ ಕೊಡಲಿಯಿಂದಲ್ಲ ಎಂಬ ಮಾತು ಜನಮಾನಸದಲ್ಲಿತ್ತು. ಅದು ಹೀಗೆ ನಿಜವಾಯಿತು.
ಇಷ್ಟೆಲ್ಲ ಆದಮೇಲೆ ರಾಜ್ಯ ಉಳಿದೀತೇ? ದುರ್ಗ ಹೈದರಾಲಿಯ ವಶವಾಯಿತು. ಮದಕರಿ ನಾಯಕರ ಜೊತೆ ಕೊನೆಗೂ ಉಳಿದವರು ಅವರ ನಿಷ್ಠಾವಂತ ಬೇಡ ಸಮುದಾಯದ ಸೈನಿಕರು ಮಾತ್ರ.

ಮದಕರಿಯವರನ್ನೂ ಅವರ ಅಷ್ಟೂ ಜನ ಸೈನಿಕರನ್ನೂ ತುರುಕಸೇನೆ ಕೊನೆಗೆ ಯುದ್ಧಕೈದಿಗಳಾಗಿ ಹಿಡಿಯಿತು. ಹೈದರಾಲಿಯು ಮದಕರಿ ನಾಯಕರನ್ನು ಶ್ರೀರಂಗಪಟ್ಟಣದ ಸೆರೆಯಲ್ಲಿಟ್ಟ, ಅಲ್ಲೇ ಅವರು ಕೊನೆಯುಸಿರೆಳೆದರು ಎಂದು ಚರಿತ್ರೆ ಹೇಳುತ್ತದೆ. ತರಾಸು ಅವರು ತನ್ನ ಕಾದಂಬರಿಯ ನಾಯಕನಿಗೆ ರಣರಂಗದಲ್ಲೇ ವೀರಮರಣವನ್ನು ಕೊಡಿಸಿ ಚರಿತ್ರೆೆಗೆ ಕಾವ್ಯಾತ್ಮಕ ಸ್ಪರ್ಶ ನೀಡಿದ್ದಾರೆ. ತನ್ನ ಕೈ ಕಾಲು ಎದೆ ಹೊಟ್ಟೆಗಳಿಗೆ ಮಾರಣಾಂತಿಕವಾದ ಏಟುಗಳು ಬಿದ್ದರೂ ಮದಕರಿ ನಾಯಕರು ಕಣ್ಣೆದುರಿದ್ದ ಹೈದರಾಲಿಯ ಧ್ವಜವನ್ನು ಹೊಡೆದುರುಳಿಸುತ್ತಾರಂತೆ. ತಾಯ ತೊಡೆಯ ಮೇಲೆ ಮಲಗಿದಂತೆ ದುರ್ಗದ ನೆಲದ ಮೇಲೊರಗಿತ್ತು ಮದಕರಿ ನಾಯಕನ ದೇಹ. ಹತ್ತಾರು ಕಡೆಯಿಂದ ರಕ್ತ ಪುಟಿದು ಚಿಮ್ಮುತ್ತಿರಲು ಕೆಳಗೆ ಬಿದ್ದ ಮದಕರಿ ನಾಯಕ ತನ್ನ ರಕ್ತಸಿಕ್ತ ತುಟಿಗಳಿಂದ, ಅವ್ವಾ ಎಂದು ಮುತ್ತಿಟ್ಟ, ದುರ್ಗದ ಭೂಮಿಯನ್ನು. ಮತ್ತವನ ದೇಹ ಅಲುಗಾಡಲಿಲ್ಲ. ರಕ್ತ ನೆಲವನ್ನು ತೋಯಿಸುತ್ತಿತ್ತು.

ನನ್ನ ರಕ್ತದ ಕೊನೆಯ ಹನಿಯೂ ನಿನ್ನ ಚರಣವನ್ನು ತೊಳೆಯಲು ಮೀಸಲು, ಎಂಬಂತೆ. ದುರ್ಗದಲ್ಲೀಗ ಮಸಣ ಮೌನ. ಬೆಳಕನ್ನು ಕಬಳಿಸುತ್ತಿರುವ ಕತ್ತಲು, ಕತ್ತಲಿನೊಂದಿಗೆ ದಟ್ಟವಾಗಿ ಹೆಣೆದ ಮೌನವನ್ನು ಕಣ್ಣೀರಾಗಿ ಹಿಂಡಿ ಮಾತುಗಳನ್ನು ಹನಿಹನಿಯಾಗಿ ಕರೆದಂತೆ ಆ ರಣ ಬಯಲಿನಲ್ಲೆಲ್ಲೋ ಪರಶುರಾಮನಾಯಕನ ಧ್ವನಿ, ಅಣ್ಣಾ ಅಣ್ಣಾ ಮದಕೇರಣ್ಣಾ.. ಎಂದು ಕೂಗಿಕೊಂಡು ಪ್ರೇತದಂತೆ ಅಲೆಯುತ್ತಿತ್ತು. ದುರ್ಗದ ಹೃದಯವೇ ಹಂಬಲಿಸಿ ಕರೆದಂತೆ. ಆ ಕೂಗನ್ನೂ ನುಂಗಿ ದುರ್ಗವನ್ನು ಕತ್ತಲಾವರಿಸಿತು. ಕತ್ತಲಾಯಿತು. ಮತ್ತೆ ಹಗಲಾಗಲಿಲ್ಲ – ಇದು ತರಾಸು ಕಟ್ಟಿಕೊಡುವ ಚಿತ್ರಣ. ಮದಕರಿ ಎಂಬ ಮಹಾ ಸಂಕೀರ್ಣ ವ್ಯಕ್ತಿತ್ವದ ಅಂತ್ಯವನ್ನು ಬಹುಶಃ ಇದಕ್ಕಿಂತ ಭಾವಪೂರ್ಣವಾಗಿ ಚಿತ್ರಿಸಲು ಸಾಧ್ಯವಿಲ್ಲವೇನೋ ಅನ್ನಿಸುವಂತಹ ವಿವರಗಳು ಇವು.

ಎರಡು ದಿನದಲ್ಲಿ ದುರ್ಗದ ಕೋಟೆಯನ್ನು ವಶ ಮಾಡಿಕೊಳ್ಳುತ್ತೇನೆಂದು ಜಂಬ ಕೊಚ್ಚಿದ್ದ ತುರುಕನಿಗೆ, ಅದೇನು ಮೇಣದಿಂದಾಗಿದೆಯೇ ಎಂದು ಹೂಂಕರಿಸಿ 1 ವರ್ಷ 6 ತಿಂಗಳು 25 ದಿನಗಳ ಕಾಲ ಅಟ್ಟಾಡಿಸಿದ, ಆಟವಾಡಿಸಿದ ಮದಕರಿ ನಾಯಕರು ಮತ್ತು ಅವರ ದುರ್ಗ ಕ್ಷಾತ್ರತೇಜದ, ಹೆಮ್ಮೆ, ಅಭಿಮಾನಗಳ ಸಂಕೇತ. ಅಂತಹ ಸಾಮ್ರಾಜ್ಯವನ್ನು ಕುಟ್ಟಿ ಪುಡಿಗಟ್ಟಿದ ಹೈದರಾಲಿ ಎಂಬ ಕುಟಿಲ ದೊರೆಯ ಮಗನ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಹೊರಟಿರುವುದು ಚಿತ್ರದುರ್ಗಕ್ಕೆ, ಅಲ್ಲಿನ ಏಳು ಸುತ್ತಿನ ಕೋಟೆಗೆ, ಸಾಯುವವರೆಗೂ ಮದಕರಿ ನಾಯಕರಿಗೆ ಬೆಂಬಲವಾಗಿ ನಿಂತ ನಿಷ್ಠಾವಂತ ಬೇಡರ ಸಮುದಾಯಕ್ಕೆ ಸರಕಾರವು ಮಾಡುತ್ತಿರುವ ಬಹುದೊಡ್ಡ ಅವಮಾನ.

– ವೀರ ಶಿವಾಜಿ

ಈ ಸುದ್ದಿಯನ್ನು ಶೇರ್ ಮಾಡಿ
  • 8
    Shares
Show More

Related Articles