ನಾಡು-ನುಡಿಗೆ ಗೌರವ ನೀಡದವರು ರಾಜ್ಯ ಬಿಟ್ಟು ತೊಲಗಲಿ

ನಾಡು-ನುಡಿಗೆ ಗೌರವ ನೀಡದವರು ರಾಜ್ಯ ಬಿಟ್ಟು ತೊಲಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಗುಡುಗಿದ್ದಾರೆ. ಕಸಾಪ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಕಲಿತು ನಾಡು-ನುಡಿ- ಸಂಸ್ಕೃತಿಯನ್ನು  ಗೌರವಿಸಬೇಕು ಎಂದು ಕರೆ ನೀಡಿದರು.
ರಾಜಧಾನಿಯಲ್ಲಿ ಕನ್ನಡ ಕ್ಷೀಣಿಸುತ್ತಿದ್ದು, ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಸೂಕ್ತ ಕಾನೂನು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕಸಾಪ ಗೌರವ ಕಾರ್ಯದರ್ಶಿ ಚನ್ನೇಗೌಡ, ಗೌರವ ಕೋಶಾಧ್ಯಕ್ಷರಾದ ಪಿ.ಮಲ್ಲಿಕಾರ್ಜುನಪ್ಪ, ಶೇಖರ್‍ಗೌಡ ಮಾಲಿ ಪಾಟೀಲ ಮತ್ತಿತರರು ಹಾಜರಿದ್ದರು.

ಮೂಲ : DailyHunt