ಅಲ್ರಪ್ಪ ನೀವ್ಯಾಕೆ ನವೆಂಬರ್ 1 ಕ್ಕೆ ಕನ್ನಡದ ಬಗ್ಗೆ ಜಾಸ್ತಿ ಮಾತನಾಡುತ್ತೀರಿ ಅನ್ನುವವರಿಗೆ..! ನನ್ನದೊಂದು ಖಡಕ್ ಉತ್ತರ.

ಕನ್ನಡವೆಂಬ ಕಾನನದೊಳು ಟೀಕಾಕಾರ ಎಂಬ ಗುಳ್ಳೆ ನರಿ ಹೊಕ್ಕು ಕನ್ನಡಿಗನೆಂಬ ಸಿಂಹವ ವಂಚಿಸಲು ಹೊಂಚು ಹಾಕೆ ವಂಚನೆಯ ಸಂಚು ಅರಿತಾಗ ಸಿಂಹವು ಸೀಳದೇ ಇರುವುದೇ ನರಿಯ ಹೃದಯವ ??

ಟೀಕೆ ಮಾಡುವವರಿಗೊಂದು ಟೀಕೆ, ಹೌದು ಕನ್ನಡದ ಬಗ್ಗೆ ಯಾಕೆ ಜಾಸ್ತಿ ನವೆಂಬರ್ ನಲ್ಲಿ ಮಾತಾಡುತ್ತೀರಿ ಅನ್ನುವವರ ಸಂಖ್ಯೆ ಬರ್ತಾ ಬರ್ತಾ ಹೆಚ್ಚು ಆಗ್ತಾ ಇದೆ. ಫೇಸ್ಬುಕ್ ಮತ್ತು ವಾಟ್ಸಪ್ ಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ.

ನೀವು ನಿಮ್ಮ ಹುಟ್ಟಿದ ಹಬ್ಬ ವರ್ಷ ಪೂರ್ತಿ ಆಚರಣೆ ಮಾಡ್ತಿರೋ ಅಥವಾ ಒಂದೇ ದಿನ ಮಾಡ್ತಿರಿ..?

ಭಾರತದ ಸ್ವಾತಂತ್ರ್ಯ ದಿನ ಆಗಸ್ಟ್ ೧೫ ಕ್ಕೆ ಮಾತ್ರ ಆಚರಣೆ ಮಾಡ್ತಿರೋ ಅಥವಾ ವರ್ಷ ಪೂರ್ತಿ ಮಾಡ್ತಿರೋ?

ಭಾರತದ ಗಣರಾಜ್ಯ ದಿನ ಜನವರಿ ೨೬ ಕ್ಕೆ ಮಾತ್ರ ಆಚರಣೆ ಮಾಡ್ತಿರೋ ಅಥವಾ ವರ್ಷ ಪೂರ್ತಿ ಮಾಡ್ತಿರೋ?

ಮೇಲಿನ ಎಲ್ಲವೂ ಒಂದೇ ದಿನ ಆಚರಣೆ ಮಾಡುತ್ತೇವೆ ಎಂದು ಭಾವಿಸುತ್ತೇನೆ,
ಹೌದು ನಾವು ಅದೇ ತರ ನವೆಂಬರ್ ೧ ಕ್ಕೆ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ಇದು ಒಂದು ನಾಡಹಬ್ಬ, ಹಬ್ಬ ಆಚರಣೆಗೆ ವರ್ಷದಲ್ಲಿ ಒಂದು ದಿನ ಸೀಮಿತ.

ನಿಮಗಿದು ಗೊತ್ತಿರಲಿ ಬೆಂಗಳೂರಿನಲ್ಲಿ ಒಂದು ತಿಂಗಳ ದಿನ ನಮ್ಮ ಭಾಷೆ ಬಗ್ಗೆ ಚಿಂತನೆ ಮಾಡ್ತವೆ ಮತ್ತು ಗಾನಮೇಳವನ್ನು(orchestra)
ನಗರದ ಗಲ್ಲಿ ಗಲ್ಲಿ ಯಲ್ಲಿ ಹಮ್ಮಿಕೊಳ್ಳುತೇವೆ,
ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತೆ. ಭಾರತದ ಯಾವ ರಾಜ್ಯದಲ್ಲಿ ಒಂದು ತಿಂಗಳು ಈ ಎಲ್ಲಾ ಕಾರ್ಯಕ್ರಮಗಳು ಆಯೋಜನೆ ಮಾಡುತ್ತಾರೆ ಒಮ್ಮೆ ನನಗು ತೋರಿಸಿ..?? ಇದಲ್ಲವೇ ಭಾಷಾಭಿಮಾನ??

ಈ ರೀತಿ ಪ್ರಶ್ನೆ ಕೇಳುವುದರಿಂದ ಕನ್ನಡ ಹಿಗ್ಗುತಾ ಅಥವಾ ಕುಗ್ಗುತಾ ?? ಅನ್ನುವುದನ್ನು ಟೀಕಾಕಾರರೇ ಉತ್ತರಿಸಬೇಕಾಗಿದೆ.

ಪ್ರಪಂಚದ ಅತ್ಯಂತ ಸುಲಭವಾದ ಕೆಲಸ ಪ್ರಶ್ನೆಗಳನ್ನು ಕೇಳುವುದು. ಜರೂರಾಗಿ
ಅದರ ಪರಿಣಾಮಗಳು ಏನೋ ಅಂತ ಮೊದಲೇ ನಾವು ಯೋಚನೆ ಮಾಡೋದು ಲೇಸು, ಪ್ರಶ್ನೆ ಕೇಳುವ ಬದಲಿಗೆ ನಾವೆಷ್ಟು ಕನ್ನಡಿಗರಾಗಿದ್ದೇವೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ.

– ಪ್ರಭಾಕರ್ ಜವಳಿ (IAS ವಿದ್ಯಾರ್ಥಿ)