ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಈ ವಿಶೇಷ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು?

ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಈ ವಿಶೇಷ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು? ಹೊಸಪೇಟೆಯ ಪ್ರತಿಯೊಬ್ಬನೂ ಈ ವ್ಯಕ್ತಿಯನ್ನ ಗೌರವದಿಂದ ಕಾಣೋದ್ಯಾಕೆ ಗೊತ್ತಾ?

ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಈ ವ್ಯಕ್ತಿ ಹೊಸಪೇಟೆ, ಹಂಪಿ ಹಾಗು ಸುತ್ತಮುತ್ತಲಿನ ಜನರಿಗೆ ಅಚ್ಚುಮೆಚ್ಚಿನ ವ್ಯಕ್ತಿ, ಕಷ್ಟ ಅಂತ ತನ್ನ ಹತ್ತಿರ ಬಂದ ಜನರಿಗೆ ತನ್ನ ಕೈಲಾದ ಸಹಾಯ ಮಾಡುವ ಈ ವ್ಯಕ್ತಿಯ ವ್ಯಕ್ತಿತ್ವವೇ ವಿಶೇಷ!!

ಹಂಪಿಯ ವಿಜಯನಗರ ಸಾಮ್ರಾಜ್ಯ ಪತನವಾಗಿ 500 ವರ್ಷಗಳೇ ಕಳೆದಿವೆ, ಇಷ್ಟು ವರ್ಷಗಳಾದರೂ ಹಂಪಿಯ ಸುಪ್ರಸಿದ್ಧ ವಿರೂಪಾಕ್ಷ ದೇವಾಲಯದ ಗೋಪುರ ಮಾತ್ರ ಇಲ್ಲೀವರೆಗೂ ಬಣ್ಣವನ್ನ ಕಂಡಿರಲಿಲ್ಲ, ಪುರಾತತ್ವ ಇಲಾಖೆ ಹಾಗು ಸಂಬಂಧಪಟ್ಟ ಅಧಿಕಾರಿಗಳನ್ನ ಸತತವಾಗಿ ಸಂಪರ್ಕಿಸಿ, ತನ್ನ ಕೈಯಿಂದ ಹಣ ಖರ್ಚು ಮಾಡಿಕೊಂಡು ಸತತ ಪ್ರಯತ್ನ ಪಟ್ಟು ಕೊನೆಗೂ ವೀರುಪಾಕ್ಷ ಮಂದಿರದ ಗೋಪುರಕ್ಕೆ ಬಣ್ಣ ಹಾಗು ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಿದ್ದು ಈ ವ್ಯಕ್ತಿಯೇ ಅಂದರೆ ಅತಿಶಯೋಕ್ತಿಯೇನಲ್ಲ ಬಿಡಿ.

ಭಿಕ್ಷುಕರನ್ನ ಕಂಡರೆ ಸಾಕು ನಾಯಿಗಳ ರೀತಿಯಲ್ಲಿ ಅವರ ಜೊತೆ ವ್ಯವಹರಿಸಿ ಬೈದು ಕಳಿಸುವ ಇಂದಿನ ಯುಗದಲ್ಲಿ ಈ ವ್ಯಕ್ತಿ ಮಾತ್ರ ಭಿಕ್ಷುಕರನ್ನೂ ಗೌರವದಿಂದ ಕಾಣುತ್ತ ಅವರನ್ನ ತನ್ನ ಅಣ್ಣ-ತಮ್ಮಂದಿರ ಹಾಗೆ ಮನೆಗೆ ಕರೆಸಿ ಊಟ ಹಾಕುವುದೂ ಈ ವ್ಯಕ್ತಿಯ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯೇ ಸರಿ.

ಇಷ್ಟೆಲ್ಲ ಹೇಳುತ್ತಿರೋ ಆ ವ್ಯಕ್ತಿಯಾದರೂ ಯಾರು ಅನ್ನೋ ಪ್ರಶ್ನೆ ನಿಮಗೆ ಕಾಡುತ್ತಿರಬಹುದಲ್ಲವೇ? ಆತನ್ಯಾರೋ ಹೊಸಪೇಟೆಯ MLA ಅಥವ ದೊಡ್ಡ ರಾಜಕೀಯ ವ್ಯಕ್ತಿ ಅಂತ ನೀವು ಅಂದುಕೊಳ್ಳಿತ್ತಿರಬಹುದುಲ್ಲವೇ?

ಉಹುಂ ಅಲ್ಲ, ನಿಮ್ಮ ಊಹೆ ತಪ್ಪು, ಆ ವ್ಯಕ್ತಿಯ ಹೆಸರು “ಜಯಂತ್ ಪಂಥರ” ಅಂತ, ಹೊಸಪೇಟೆಯ ನಿಸ್ವಾರ್ಥ ವ್ಯಕ್ತಿ, ಕಷ್ಟ ಅಂತ ಬಂದ ಜನರಿಗೆ ತನ್ನ ಶಕ್ತಿಮೀರಿ ಅವರ ಕಷ್ಟವನ್ನ ತನ್ನ ಕಷ್ಟವಂತ ತಿಳಿದು ಪರಿಹರಿಸುವ ಈ ವ್ಯಕ್ತಿಯನ್ನ ಹೊಸಪೇಟೆಯ ಜನ ಧಣಿ, ಅಣ್ಣ, ಬಡವರ ಬಂಧು, ಕಷ್ಟದಲ್ಲಿರುವ ಭಗೀರಥ ಅಂತೆಲ್ಲ ಕರೆಯುತ್ತಾರೆ.

ಹಾಗಂತ ಈ ವ್ಯಕ್ತಿ ತಾನು ಮಾಡುವ ನಿಸ್ವಾರ್ಥ ಸೇವೆಗೆ ಯಾವತ್ತೂ ಪ್ರತಿಫಲಾಪೇಕ್ಷೆ ಬೇಡಿ ತನ್ನ ಸೇವೆ ಮಾಡುತ್ತಿರುವನಲ್ಲ, ಬದಲಾಗಿ ಈ ವ್ಯಕ್ತಿಗೆ ಸಮಾಜದಲ್ಲಿರುವ ಪ್ರತಿಯೊಬ್ಬರು ಸುಖದಿಂದ ಬಾಳಬೇಕು ಅನ್ನೋ ಸ್ವಾರ್ಥವಷ್ಟೇ ಈ ಮನುಷ್ಯನಲ್ಲಿರೋದು.

ಈ ವ್ಯಕ್ತಿಯ ಪ್ರಭಾವ ಹೊಸಪೇಟೆಯಲ್ಲಿ ಎಷ್ಟಿದೆಯಂದರೆ ಹೊಸಪೇಟೆ ಹಾಗು ಹೊಸಪೇಟೆಯ ಸುತ್ತಮುತ್ತ ಈ ವ್ಯಕ್ತಿಯ ಹೆಸರನ್ನ ಯಾರಿಗೆ ಕೇಳಿದರೂ ಈ ವ್ಯಕ್ತಿ ಅವರಿಗೆ ಪರಿಚಯವಿಲ್ಲ ಅನ್ನೋ ಉತ್ತರ ನಿಮಗೆ ಸಿಗೋಕೆ ಸಾಧ್ಯವೇ ಇಲ್ಲ.

ಇಂತಹ ವ್ಯಕ್ತಿಯನ್ನ ಭೇಟಿ ಮಾಡುವ ಅವಕಾಶ ಇತ್ತೀಚೆಗೆ ನನಗೂ ಕೂಡ ಸಿಕ್ಕಿತ್ತು. ಈ ವ್ಯಕ್ತಿಯ ಮಾತುಗಳು ಒರಟನ್ನಿಸಬಹುದು ಆದರೆ ಮನಸ್ಸು ಮಾತ್ರ ಮಗುವಿನಂತೆ ಕೋಮಲ.

ನಾನ್ಯಾರೋ ಅವರ್ಯಾರೋ, ನಾನು ಹೊಸಪೇಟೆಗೆ ಅವರನ್ನ ಭೇಟಿಯಾಗಲೆಂದೇ ಹೋಗಿ ಅವರನ್ನ ಅವರ ವ್ಯಕ್ತಿತ್ವವನ್ನ ಸಂದರ್ಶಿಸಿಕೊಂಡು ಬಂದಿದ್ದು ನನ್ನ ಅದೃಷ್ಟವೇ ಸರಿ ಎನ್ನಬಹುದೇನೋ!!

ಜನಸೇವೆ, ಬಡವರ ಕಲ್ಯಾಣ, ಕಷ್ಟದಲ್ಲಿರುವ ಜನರಿಗೆ ಈ ವ್ಯಕ್ತಿ ಹೊಸಪೇಟೆಯ ಆಶಾಕಿರಣ!!

ಈ ವ್ಯಕ್ತಿಯ ಇನ್ನೊಂದು ವಿಶೇಷತೆಯೆಂದರೆ ಇವರು ಆಧ್ಯಾತ್ಮದಲ್ಲೂ ಮುಂದು, ಎದುರಿಗಿರುವ ವ್ಯಕ್ತಿಯ ಚಹರೆಯಷ್ಟೇ ಯಾಕೆ, ನೀವು ಫೋನ್ ಮಾಡಿದರೂ ನಿಮ್ಮ ವ್ಯಕ್ತಿತ್ವವನ್ನು ಗುರುತಿಸುವಷ್ಟು ಜ್ಞಾನ ಆ ವ್ಯಕ್ತಿಯಲ್ಲಿದೆ.

ಅವರ ಜೊತೆ ಹಂಪಿಗೆ ತೆರಳುವ ಸದಾವಕಾಶ ನನಗೂ ಒದಗಿ ಬಂತು, ಹಂಪಿಗೆ ಜಯಂತ್ ಪಂಥರ್ ಅವರ ಜೊತೆ ತೆರಳಿದಾಗ ಹಂಪಿಯಲ್ಲಿನ ಸಾಮಾನ್ಯ ವ್ಯಕ್ತಿ, ಅಂಗಡಿ ಮಾಲೀಕರು, ಹೋಟೆಲ್ ಮಾಲೀಕರಿಂದ ಹಿಡಿದು ದೇವಸ್ಥಾನದ ಅರ್ಚಕರವರೆಗೆ ಪ್ರತಿಯೊಬ್ಬರು ಇವರಿಗೆ ನೀಡುವ ಗೌರವವನ್ನು ಕಣ್ಣಾರೆ ಕಂಡ ನನಗೆ ಈ ವ್ಯಕ್ತಿಯಲ್ಲಿ ಅದೇನೋ ವಿಶೇಷತೆಯಿದೆ ಅಂತ ಅನಿಸಿದ್ದಕ್ಕೆ ಆ ವ್ಯಕ್ತಿಯ ಬಗ್ಗೆ ಈ ಅಂಕಣ ಬರೀತಿರೋದು.

ಹೊಸಪೇಟೆಯಲ್ಲಿ 100 ಬೆಡ್ ಸರ್ಕಾರಿ ಆಸ್ಪತ್ರೆಯನ್ನೇನೋ ಅಲ್ಲಿನ ಶಾಸಕರು ಹಾಗು ಅಲ್ಲಿನ ಸರ್ಕಾರಿ ನೌಕರರು sanction ಮಾಡಿಸಿಕೊಂಡಿದ್ದರಂತೆ ಆದರೆ ಆಸ್ಪತ್ರೆಗೆ ಜಾಗ ಮಾತ್ರ ಸಿಗಲಿಲ್ಲವಂತೆ, ಆ ಆಸ್ಪತ್ರೆಗೆ ಮೃತ್ಯಂಜಯ ನಗರದಂತಹ ಇಂಚಿಂಚು ಜಾಗವೂ ಲಕ್ಷಾಂತರ ರೂ. ಬೆಲೆ ಬಾಳುವ ಜಾಗವನ್ನ ಕೊಟ್ಟಿದ್ದು ಇದೇ ಪಂಥರ್ ಕುಟುಂಬ ಅಂದರೆ ಈ ವ್ಯಕ್ತಿ ಹಾಗು ಇವರ ಕುಟುಂಬ ಅದೆಷ್ಟು ಬಡವರ ಸ್ನೇಹಿ ಕುಟುಂಬ ಅನ್ನೋದನ್ನ ನೀವೇ ಊಹಿಸಬಹುದು.

ಇವರದ್ದು ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ!!

ಈ ವ್ಯಕ್ತಿ ಶಾಸಕನಲ್ಲ, ಮಂತ್ರಿಯಲ್ಲ ಅಥವ ಸರ್ಕಾರದಲ್ಲಿ ಉನ್ನತ ಹುದ್ದೆ ಹೊಂದಿರುವ ಅಧಿಕಾರಿಯೂ ಅಲ್ಲ, ಆದರೂ ಹೊಸಪೇಟೆ ಹಾಗು ಸುತ್ತಮುತ್ತಲಿನ ಜನ ಈ ವ್ಯಕ್ತಿಯ ಹತ್ತಿರ ತಮ್ಮ ಕಷ್ಟ ಕಾರ್ಪಣ್ಯಗಳನ್ನ ಹೇಳಿಕೊಂಡು ಬರುತ್ತಾರೆ. ಜನರ ಕಷ್ಟಕ್ಕೆ ಸ್ಪಂದಿಸಲೆಂದೆ ಮನೆಯ ಹೊರಭಾಗದಲ್ಲಿ ಹಳ್ಳಿಮನೆಯ ಹಾಗೆ ಚಿಕ್ಕ ಸಭಾಂಗಣ ಮಾಡಿರೋ ಇವರು ಅಲ್ಲಿ ಬೋರ್ಡ್ ಒಂದನ್ನ ಹಾಕಿದ್ದಾರೆ. ಅದರಲ್ಲಿ ಬರೆದಿರೋದೇನು ಗೊತ್ತಾ?

“All are one, All are Equal: Joy (ಎಲ್ಲರೂ ಒಂದೇ, ಎಲ್ಲರೂ ಸಮಾನರು: ಜಾಯ್)”

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ದೇವರಿರುತ್ತಾನೆ, ನಾವು ವ್ಯಕ್ತಿಯನ್ನ ಕೀಳಾಗಿ ಕಂಡರೆ ಅದು ಅವನಲ್ಲಿಯ ದೇವರನ್ನ ಕೀಳಾಗಿ ಕಂಡಹಾಗೆ ಅನ್ನೋದು ಜಯಂತ್ ಪಂಥರ್ ರವರ ಮಾತುಗಳು.

ಈ ವ್ಯಕ್ತಿ ಬರೀ ಸಮಾಜಮುಖಿಯಷ್ಟೇ ಅಲ್ಲ, ಈ ವ್ಯಕ್ತಿ ಅದ್ಭುತ ವಾಗ್ಮಿಯೂ ಕೂಡ ಹೌದು, ಜಾತಿ ಮತ ಪಂಥ ಪಕ್ಷವೆನ್ನದೆ ಶಾಲಾ ಕಾಲೇಜುಗಳನ್ನಲ್ಲದೆ ಯಾವುದೇ ಸಭೆ ಸಮಾರಂಭ ಅಥವ ಸಂಘಗಳಲ್ಲೂ ಜಯಂತ್ ಪಂಥರ್ ರವರ ಸ್ಪೂರ್ತಿದಾಯಕ ಮಾತುಗಳನ್ನು ಕೇಳಲು ಜನ ಹಾತೊರಡಯುತ್ತಾರೆ.

ಮುಖತಃ ಭೇಟಿಯಾಗಿ ಆ ವ್ಯಕ್ತಿಯ ಜೊತೆಗೆ ಎರಡು ದಿನ ಇದ್ದು ಆತನ ಬಗ್ಗೆ ಅರಿತುಕೊಂಡಿದ್ದರಲ್ಲಿ ಹೇಳೋಕೆ ನನ್ನಲ್ಲಿ ಪದಗಳಿಲ್ಲ.

ಇಂತಹ ವ್ಯಕ್ತಿಗೆ ಆ ಭಗವಂತ ಆಯುರ್ ಆರೋಗ್ಯ ನೀಡಿ ನೂರು ಕಾಲ ಸುಖವಾಗಿ ಬಾಳುವ ಆಶೀರ್ವಾದ ನೀಡಲಿ ಅನ್ನೋದೇ ನಮ್ಮ ಆಶಯ!!

– Vinod Hindu Nationalist

  • 2K
    Shares