ಮುಂಬೈ ಪೋಲಿಸರ ಮಹತ್ವದ ಕಾರ್ಯಾಚರಣೆ ಉಗ್ರ ಅಬು ಜೈದ್ ಅರೆಸ್ಟ್

ಕಳೆದ ವಾರವಷ್ಟೇ ಕೇರಳದ ಕಣ್ಣೂರಿನಲ್ಲಿ 5 ಮಂದಿ ಶಂಕಿತ ಇಸಿಸ್ ಉಗ್ರರನ್ನು ಬಂಧಿಸಲಾಗಿತ್ತು. ಈ ವೇಳೆ ಎಲ್ಲರೂ ಸಿರಿಯಾಗೆ ತೆರಳಿ ಅಲ್ಲಿ ಇಸಿಸ್ ಗೆ ಸೇರಲು ಹೊರಟಿದ್ದಾಗಿ ತಿಳಿದು ಬಂದಿತ್ತು. ಈಗ ಇದರ ಬೆನ್ನಲ್ಲೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಭಯೋತ್ಪಾದಕನನ್ನು ಭಯೋತ್ಪಾದಕನನ್ನು ನಿಗ್ರಹದಳ ಅಧಿಕಾರಿಗಳು ರವಿವಾರ ಬಂಧಿಸಿದ್ದಾರೆ.

ಉಗ್ರನ ಹೆಸರು ಅಬು ಜೈದ್ ಪಶ್ಚಿಮ ಉತ್ತರ ಪ್ರದೇಶದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದವನು. ಈತ ದುಬೈನಲ್ಲಿ ನೆಲೆಸಿದ್ದ. ಹಾಗಾಗಿ ನಿಗ್ರಹ ದಳ ಮಹತ್ವದ ಕಾರ್ಯಾಚರಣೆ ಮಾಡಿ ಆತನನ್ನು ಬಂಧಿಸಿದೆ.

ದುಬೈನಿಂದ ಉಗ್ರ ಅಬು ಜೈದ್ ಮುಂಬೈಗೆ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ನಿಗ್ರಹ ದಳ ಕಾರ್ಯಾಚರಣೆ ಮಾಡಿ ಬಂಧಿಸಿದೆ‌.

ಈತನ ಸುಮಾರು ಸಲ ಅಬು ಜೈದ್ ಹೆಸರು ಹಿಂದಿನಿಂದಲೂ ಉತ್ತರ ಪ್ರದೇಶದಲ್ಲಿ ಅರೆಸ್ಟ್ ಆಗಿದ್ದ ಶಂಕಿತರ ಬಾಯಲ್ಲಿ ಕೇಳಿ ಬಂದಿತ್ತು. ಹೀಗಾಗಿ ನಿಗ್ರಹ ದಳ ಅಬು ಜೈದ್ ನ ಚಲನವಲನಗಳ ಮೇಲೆ ನಿಗಾವಹಿಸಿ ಆತ ದುಬೈನಿಂದ ಭಾರತಕ್ಕೆ ಬರುವ ನಿಖರ ಮಾಹಿತಿಯೊಂದಿಗೆ ರವಿವಾರ ಮಹತ್ವದ ಕಾರ್ಯಾಚರಣೆ ಮಾಡಿ ಉಗ್ರ ಅಬು ಜೈದ್ ನನ್ನು ಬಂಧಿಸಿದೆ.