ನೋಟ್ ನಿಷೇಧದಿಂದ ಶೆಲ್ ಕಂಪನಿಗಳ ಕೋಟ 4 ಸಾವಿರ ಕೋಟಿ ರೂಪಾಯಿ ವಂಚನೆ ಪತ್ತೆ..!!??

ಮೋದಿಯವರ ಸರ್ಕಾರ ನೋಟ್ ಬ್ಯಾನ್ ಮಾಡಿ ಒಂದು ವರ್ಷ ಆಗುತ್ತಾ ಬಂತು. ನೋಟ್ ಬ್ಯಾನಿಗೆ ಸಂಭಂದಿಸಿದಂತೆ ಪರ ವಿರೋಧಗಳಾಗಿದ್ದವು. ಮೋದಿಯವರು ತಾವು ಮಾಡಿದ್ದ ಈ ನೋಟ್ ಬ್ಯಾನಿನ ಕುರಿತು ಸಮರ್ಥನೆ ಮಾಡುತ್ತಲೇ ಬಂದಿದ್ದರು. ಈಗ ಒಂದು ನೋಟ್ ಬ್ಯಾನ್ ಆಗಿ ಒಂದು ವರ್ಷ ಪೂರೈಸುತ್ತಿದೆ. ಇದರ ಬಗ್ಗೆ ಮೋದಿಯವರು ತಮ್ಮ ನಿರ್ಧಾರದಿಂದ ಉತ್ತಮ ಫಲಿತಾಂಶ ದೊರಕಿದೆ. ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಚುನಾವಣೆ ಸಮೀಪದ ಹಿನ್ನಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಭರಪೂರ ಪ್ರಚಾರ ನಡೆದಿದೆ. ನಿನ್ನೆ ಹಿಮಾಚಲ ಪ್ರದೇಶದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನೋಟುಗಳ ಬ್ಯಾನ್ ಬಳಿಕ ಮೂರು ಲಕ್ಷಕ್ಕಿಂತಲೂ ಅಧಿಕ ಶೆಲ್ ಕಂಪೆನಿಗಳು ಮುಚ್ಚಿವೆ. 5,000 ಕ್ಕೂ ಅಧಿಕ ವಂಚನೆ ಎಸಗುತ್ತಿದ್ದ ಕಂಪೆನಿಗಳನ್ನು ಪತ್ತೆಹಚ್ಚಿ 4,000 ಕೋಟಿ ರೂಪಾಯಿಗೂ ಅಧಿಕ ವಂಚನೆಯನ್ನು ಕಂಡುಹಿಡಿಯಲಾಗಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಮತ್ತಷ್ಟು ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.