ಈ ಒಂದು ಸಭೆಯಿಂದ ಚೀನಾಗೆ ನಡುಕ ಶುರುವಾಗಿದೆಯಾ?

ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ರಾಷ್ಟ್ರಗಳ ಈಸ್ಟ್ ಏಷ್ಯಾ ಶೃಂಗಸಭೆ ನವೆಂಬರ್ 13 ರಂದು ಮನಿಲಾದಲ್ಲಿ ನಡೆಯಲಿದೆ. ಇದರಿಂದ ಚೀನಾಗೆ ಈಗಾಗಲೇ ಸಣ್ಣ ನಡುಕ ಪ್ರಾರಂಭವಾಗಿದೆ. ಇದು ಸುಮಾರು 10 ವರ್ಷಗಳ ನಂತರ 4 ರಾಷ್ಟ್ರಗಳ ನಡುವೆ ಇಂತಹದ್ದೊಂದು ಸಭೆ ನಡೆಯುತ್ತಿದೆ. ಅದರಲ್ಲಿ ಭಾರತವೂ ಒಂದು ಪ್ರಧಾನಿ ಮೋದಿಯವರು ಭಾಗವಹಿಸಲಿದ್ದಾರೆ.

ಇದು ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ರಾಷ್ಟ್ರಗಳ ನಡುವಿನ ಸಭೆ ಅಭಿವೃದ್ಧಿ, ಶಾಂತಿ, ಸಹಕಾರಗಳಿಗೆ ಉಪಯೋಗವಾಗಲಿದೆ. ಈ ಸಭೆಯಿಂದ ಮತ್ತೊಂದು ರಾಷ್ಟ್ರಗಳ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಚೀನಾ ಹೇಳಿದೆ.

ಈ ಮಾತಿನ ಅರ್ಥ 4 ರಾಷ್ಟ್ರಗಳ ಸಭೆಯಿಂದಾಗಿ ಚೀನಾಗೆ ಈಗಾಗಲೇ ಸಣ್ಣ ನಡುಕ ಪ್ರಾರಂಭವಾಗಿದೆ ಎಂದು ಹೇಳಬಹುದಾಗಿದೆ.