ಪ್ರತ್ಯೇಕ ಧ್ವಜದ ರಚನೆಗೆ ಇಂದು ಮಹತ್ವದ ಸಭೆ

ಭರಪೂರ ವಾದ ವಿವಾದದ ಬಳಿಕ ಇಂದು ಪ್ರತ್ಯೇಕ ನಾಡಧ‍್ವಜದ ಕುರಿತು ಸಭೆ ನಡೆಯಲಿದೆ.ಪ್ರತ್ಯೇಕ ನಾಡಧ‍್ವಜ ರಚನೆ ಕುರಿತು ತಜ್ಞರ ಸಮಿತಿಯ ಮಹತ್ವದ ಸಭೆ ಇಂದು ಸಂಜೆ 4 ಗಂಟೆಗೆ ವಿಕಾಸಸೌಧದಲ್ಲಿ ನಡೆಯಲಿದೆ.

ತಜ್ಞರ ಸಮಿತಿಯ ರಚನೆಯಾಗಿ 5 ತಿಂಗಳಾಯ್ತು. ಅಂದರೆ ಜೂನ್ 6 ರಂದು ನಾಡಧ್ವಜ ವಿನ್ಯಾಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ತಜ್ಞರ ಸಮಿತಿ ರಚನೆಯಾಗಿದೆ. ಸಮಿತಿ ರಚನೆಯಾಗಿ 5 ತಿಂಗಳ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಮಿತಿ ಈ ಸಭೆ ಕರೆದಿದೆ.

ನಡೆಯಲಿರುವ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಣೆ ಮಾಡಲಾಗುತ್ತದೆ. ಬಳಿಕ ಸರ್ಕಾರಕ್ಕೆ ತಜ್ಞರ ಸಮಿತಿಯಿಂದ ವರದಿ ಸಲ್ಲಿಕೆಯಾಗಲಿದೆ.

ತಜ್ಞರ ಸಮಿತಿ ಕೊಡುವ ವರದಿ ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿದ್ದು, ಅಧಿವೇಶನದಲ್ಲಿ ವರದಿಯ ಮೇಲೆ ಗಂಭೀರ ಚರ್ಚೆ ನಡೆಯುವ ಸಾಧ್ಯತೆ ಇದೆ. ಏನೇ ಇರಲಿ ಪ್ರತ್ಯೇಕ ಧ್ವಜದ ಕುರಿತಂತೆ ಒಂದು ನಿರ್ಣಾಯಕ ಸಭೆ ನಡೆಯುತ್ತಿರುವುದಂತು ಒಳ್ಳೆಯದು.