ಮಗ ತಂದೆಯ ಜವಾಬ್ದಾರಿ ಹೊತ್ತಾಗ ಏನಾಗುತ್ತದೆ ಅಂತ ತಿಳ್ಕೋಬೇಕಾದ್ರೆ ಈ ಸಿನಿಮಾ ನೋಡಿ..

ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಜನರ ಮನಗೆದ್ದ ಕಾಲೇಜ್ ಕುಮಾರ

ಮೊದಲ ದಿನವೇ ಕಾಲೇಜ್ ಕುಮಾರನಿಗೆ ಒಲಿದ ಪ್ರೇಕ್ಷಕ ಮಹಾಶಯರು..

ಕೆಂಡಸಂಪಿಗೆಯ ವಿಕ್ಕಿ ವರುನ್ ಹಾಗೂ ಕಿರಿಕ್ ಪಾರ್ಟಿಯ ಸಂಯುಕ್ತ ಹೆಗ್ಡೆ ನಟಿಸಿರುವ ಈ ಸಿನಿಮಾವನ್ನು ಅಲೆಮಾರಿ ಸಂತೋಷ್ ನಿರ್ದೇಶನ ಮಾಡಿದ್ದಾರೆ..

MR ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ L ಪದ್ಮನಾಭ ರವರು ಅದ್ಧೂರಿಯಾಗಿ ನಿರ್ಮಾಣ ಮಾಡಿರುವ ಕಾಲೇಜ್ ಕುಮಾರ್ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಶ್ರುತಿ, ರವಿಶಂಕರ್, ಸಾಧು ಕೋಕಿಲ, ವನ್ನವಳ್ಳಿ ಕೃಷ್ಣ, ಸಿಲ್ಲಿ ಲಲ್ಲಿಯ ವಿಶಾಲು, ಅಚ್ಯುತ್ ಕುಮಾರ್ ಹೀಗೇ ದೊಡ್ಡ ತಾರಾ ಬಳಗವೇ ಇದೆ.

ಒಬ್ಬ ಮಿಡಲ್ ಕ್ಲಾಸ್ ಫ್ಯಾಮಿಲಿಯ ಚಿತ್ರಣವನ್ನು ಹಾಸ್ಯಭರಿತವಾಗಿ ಹೆಣೆದು ಎಷ್ಟು ಮನರಂಜಿಸಬಹುದೊ ಅಷ್ಟು ಪ್ರಯತ್ನಪಟ್ಟು ಯಶಸ್ವಿಯಾಗಿದ್ದಾರೆ..

ಆಫೀಸರ್ ಮಾಡಬೇಕೆಂಬ ಅಪ್ಪನ ಕನಸು..‌ಕಾಲೇಜ್ ನಲ್ಲಿ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಅಡ್ಡಾಡುವ ಮಗ.. ಗಂಡ ಹಾಗೂ ಮಗ ಇಬ್ಬರನ್ನು ನಿಭಾಯಿಸುವ ಅಮ್ಮ.. ಇದರ ಮಧ್ಯೆ ಕಾಲೇಜ್ ಕುಮಾರನ ಲವ್ ಅಲ್ಲಿ ಬೀಳಿಸುವ ಕಥಾ ನಾಯಕಿ.. ಎಲ್ಲರ ಅಭಿನಯ ಮನ ಮುಟ್ಟುವಂತಿದೆ..

ಇನ್ನು ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರದಾರಿಗಳೂ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿ ಜನರ ಮೆಚ್ಚುಗೆಯನ್ನು ಪಡೆಯುತ್ತಾರೆ..
ಕಾಲೇಜ್ ನಲ್ಲಿ ಮಗ ಪೊರ್ಕಿಯಾಗಿರುವ ವಿಷಯ ತಿಳಿದ ತಂದೆ ಏನು ಮಾಡುತ್ತಾನೆ?? ಅದೇ ಈ ಚಿತ್ರದ ದೊಡ್ಡ ಟ್ವಿಸ್ಟ್.. ಯಾರೂ ಊಹಿಸಲಾಗದ ಈ ಕಥೆ ಮನಸ್ಸಿಗೆ ಬೇಜಾರು ಒತ್ತಡ ಅಥವಾ ಇನ್ಯಾವುದೇ ಇರಲಿ.. ಎಲ್ಲರನ್ನೂ ಮನರಂಜಿಸದೇ ಕಳಿಸಲಾರದು..

ರವಿಶಂಕರ್ ಹಾಗೂ ವಿಕ್ಕಿ ರವರ ಅಭಿನಯ ಹೈಲೈಟ್ ಆಗುತ್ತದೆ.. ಎಲ್ಲರೂ ನಗೆ ಗಡಲಲ್ಲಿ ತೇಲುವುದಂತೂ ಸತ್ಯ..

ಅರ್ಜುನ್ ಜನ್ಯ ಮ್ಯೂಸಿಕ್ ಇರುವ ಈ ಸಿನಿಮಾದ ಎಲ್ಲಾ ಹಾಡುಗಳು ಹಿಟ್ ಆಗಿ ಅದರಲ್ಲೂ ಯೂಟ್ಯೂಬ್ ನಲ್ಲಿ ಟ್ರೆಂಡ್ ನಲ್ಲಿ ಇದ್ದದ್ದು ವಿಶೇಷ.. ಸುಮ್ಮ ಸುಮ್ಮನೆ ಬೇಡದ ಸನ್ನಿವೇಶದಲ್ಲಿ ಹಾಡುಗಳು ಬರದೆ ಸಂಧರ್ಭಕ್ಕೆ ತಕ್ಕ ಹಾಗೆ ಹಾಡುಗಳು ಬಂದು ಎಲ್ಲರಿಗೂ ಇಷ್ಟವಾಗುತ್ತದೆ..

ಇನ್ನು ಈ ಚಿತ್ರದ ಸೆಕೆಂಡ್ ಆಫ್ ನಲ್ಲಿ ಬರುವ ಟ್ವಿಸ್ಟ್ ನಿಂದಾಗಿ ಸಿನಿಮಾ ನೋಡಿದ ಪ್ರೇಕ್ಷಕರು ಇನ್ನಷ್ಟು ಜನರಿಗೆ ಹೇಳಿ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಕಳುಹಿಸುವುದಂತು ಸತ್ಯದ ಮಾತು..

ಚಿತ್ರದ ನಾಯಕ ನಾಯಕಿಯರಿಬ್ಬರದೂ ಇದು ಎರಡನೇ ಸಿನಿಮಾ.. ವಿಕ್ಕಿ ವರುನ್ ಈಗಾಗಲೇ ಕೆಂಡಸಂಪಿಗೆಯ ಮೂಲಕ ಎಲ್ಲರ ಮನ ಗೆದ್ದ ನಾಯಕ.. ಇನ್ನೂ ಕಿರಿಕ್ ಪಾರ್ಟಿಯ ಸಂಯುಕ್ತ ಕಿರಿಕ್ ಹುಡುಗಿ ಎಂದೇ ಹೆಸರುವಾಸಿ.. ಇವರಿಬ್ಬರ ಕಾಂಬಿನೇಷನ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ..

ಚಿತ್ರಮಂದಿರದಿಂದ ಹೊರಗೆ ಬರುವ ಪ್ರೇಕ್ಷಕನ ಮುಖದಲ್ಲಿ ಮಂದಹಾಸ ಬೀರುವುದಂತೂ ಸತ್ಯ..

ಏನೇ ಆಗಲಿ ಕನ್ನಡದಲ್ಲಿ ಇಂತಹ ಸದಭಿರುಚಿಯ ಸಿನಿಮಾಗಳು ಬಂದಾಗ ನಮ್ಮ ಪ್ರೇಕ್ಷಕರು ಗೆಲ್ಲಿಸುತ್ತಾರೆ ಎಂಬುದಕ್ಕೆ ಈಗ ಕಾಲೇಜ್ ಕುಮಾರ ಕೂಡ ಒಂದು ನಿದರ್ಶನ.. ಕೊಟ್ಟ ದುಡ್ಡಿಗೆ ಎರಡರಷ್ಟು ಮನರಂಜಿಸುವ ಸಿನಿಮಾ ನೀವು ನಿಮ್ಮ ಸ್ನೇಹಿತರು ಕುಟುಂಬದ ಜೊತೆ ಹೋಗಿ ನೋಡಿ ಬನ್ನಿ..