ರಾಜಕೀಯಸುದ್ದಿ ಜಾಲ

ಸಿದ್ಧುಗೆ ಮತ್ತೆ ಕಂಟಕ : 60 ಸಾವಿರ ರೂಪಾಯಿಯ ಬೂಟು ಹಾಕಿಕೊಳ್ತಾರಾ?

ಸುದ್ದಿಗೋಷ್ಠಿ ಯಲ್ಲಿ ಮಾತನಾಡುತ್ತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರು ಪ್ರತಿಪಕ್ಷಗಳ ವಿರುದ್ಧ ಡೋಂಗಿ ಎಂಬ ಪದವನ್ನು ಬಳಕೆ ಮಾಡುತ್ತಾರೆ.

ಆದರೆ, ಆ ಪದವು ಮುಖ್ಯಮಂತ್ರಿಗಳಿಗೆ ಸರಿಹೊಂದುತ್ತದೆ ಎಂದು ವಿಡಂಬಿಸಿದರು.
ಹಾಗೆ ಅವರು ಡೋಂಗಿ ಸಮಾಜವಾದಿಯಾಗಿದ್ದು, ಸಮಾಜವಾದ ಹಿನ್ನೆಲೆಯಿಂದ ಬಂದರೂ ಸುಮಾರು 60 ಸಾವಿರ ಮೌಲ್ಯದ ಶೂಗಳನ್ನು ಹಾಕುತ್ತಾರೆ.

‘ಈ ಹಿಂದೆ ದುಬಾರಿ ವಾಚ್ ಧರಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡ ಮುಖ್ಯಮಂತ್ರಿಗಳು ದುಬಾರಿ ಶೂ ಧರಿಸುವ ಮೂಲಕ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ಸಮಾಜವಾದ ಜೀವನ ಆಳವಡಿಸಿಕೊಂಡಿರುವ ಕುರಿತು ಅವರು ಮಾತನಾಡುತ್ತಾರೆ. ಆದರೆ, ಬಂಡವಾಳಶಾಯಿ ಧೋರಣೆಯ ಐಷಾರಾಮಿ ಜೀವನ ನಡೆಸುತ್ತಾರೆ’ ಎಂದು ಟೀಕಿಸಿದರು.

ಸೋಮವಾರದಿಂದ ಆರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ರೈತರ ಬೆಳೆನಷ್ಟ, ಕಲ್ಲಿದ್ದಲು ಕೊರತೆ, ವಿದ್ಯುತ್ ಲೋಡ್ಶೆಡ್ಡಿಂಗ್ ವಿಷಯಗಳ ಕುರಿತು ಜೆಡಿಎಸ್ ಪ್ರಮುಖವಾಗಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ ಎಂದವರು ತಿಳಿಸಿದ್ದಾರೆ.

ರೈತರ ಸಮಸ್ಯೆಗಳನ್ನು ಸರ್ಕಾರ ಪರಿಗಣಿಸುತ್ತಿಲ್ಲ. ರೈತರ ಸಂಕಷ್ಟ ಮತ್ತು ಬೆಳೆ ನಷ್ಟ ಕುರಿತು ಹಾಗೂ ವಿದ್ಯುತ್ ಲೋಡ್ ಶೆಡ್ಡಿಂಗ್ ಕುರಿತಾಗಿ
ಇಂಧನ ಇಲಾಖೆಯ ಸದನ ಸಮಿತಿ ವರದಿಯ ಕುರಿತು ಅಲ್ಲದೇ, ಸರ್ಕಾರ ಮಂಡಿಸುವ ಮಸೂದೆಗಳ ಮೇಲಿನ ಚರ್ಚೆಯಲ್ಲಿನ ಪಕ್ಷದ ಶಾಸಕರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ
Show More

Related Articles