ಒಂದು ಕೈ ಇಲ್ಲದಿದ್ದರೂ 14 ಬೌಂಡರಿ ಹೊಡೆದ ಛಲದೇಕ ವೀರ ಕನ್ನಡಿಗ..!!

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುಂಟಿಗಾನ ಹಳ್ಳಿಯ ಶಿವಶಂಕರ್ ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಯ ಅಭ್ಯಾಸ ಪಂದ್ಯದಲ್ಲಿ 95 ರನ್ ಗಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. 98 ಎಸೆತಗಳಲ್ಲಿ ಶಿವಶಂಕರ್ 14 ಬೌಂಡರಿ ಸಹಿತ 95 ರನ್ ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಅಪಘಾತದಲ್ಲಿ ತನ್ನ ಒಂದು ಕೈ ಕಳೆದಕೊಂಡಿದ್ದರೂ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ 95 ರನ್ ಗಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ.
ಶಿವಶಂಕರ್ ಗೆ ರಾಜ್ಯ ರಣಜಿ ತಂಡದ ಆಟಗಾರ ಮೀರ್ ಕೌನೇನ್ ಅಬ್ಬಾಸ್ ಪೂರ್ಣ ಕಿಟ್ ನೀಡಿ ಪ್ರೋತ್ಸಾಹಿಸಿದ್ದಾರೆ.