ಜಾತ್ಯಾತೀಯತೆಯ ವಿರುದ್ಧ ಯೋಗಿ ಗರಂ..!!

ಚತ್ತೀಸಘಡ ರಾಯಪುರದಲ್ಲಿ ನೆಡೆದ ಜಗ್ರಾನ್ ಗುಂಪಿನವರು ಆಯೋಜಿಸಿದ ಪುಟ್ಟ ಸಭೆಗೆ ಆಗಮಿಸಿದ ಯೋಗಿ ಆದಿತ್ಯನಾಥರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜಾತ್ಯಾತೀತತೆ ಮತ್ತು ಮೀಸಲಾತಿ ಎಂಬ ಪಿಡುಗು ಈಗಲೂ ದೇಶವನ್ನು ಕಾಡುತ್ತಿದೆ. ಜಾತ್ಯಾತೀತತೆ ಪದವನ್ನು ಸೃಷ್ಠಿಸಿದ ಕಾಂಗ್ರೇಸಿನ ಹಿರಿಯ ಧುರಿಣರು ಅದನ್ನೆ ದಾಳವಾಗಿಸಿ ಚುನಾವಣೆ ಗೆದ್ದು ಬಂದಿದ್ದಲ್ಲದೆ ಅದರ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚಲು ಸಫಲವಾದರೆಂದು ತಿಳಿಸಿದರು.

ರಾಜಕೀಯ ವ್ಯವಸ್ಥೆಯಲ್ಲಿ ಈ ಪದವನ್ನು ಪ್ರಯೋಗಿಸುವವನನ್ನು ದೇಶದ್ರೋಹಿಯೆಂದು ಪರಿಗಣಿಸಬೇಕು. ಮತ್ತು ಅಲ್ಪಸಂಖ್ಯಾತ ಕಾಯ್ದೆಯನ್ನು ಬಿಗಿಗೊಳಿಸಬೇಕು ಎಂದು ಹೇಳಿದರು.

ಭಾಜಪಾ ಮತ್ತು ಮೋದಿಯವರ ನಡೆಯನ್ನು ಸಮರ್ಥಿಸಿಕೊಂಡ ಅವರು ಅಲ್ಲಿನ ಸಮುದಾಯಗಳಿಗೆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಸರ್ಕಾರ ಬದ್ಧವಿದ್ದು ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಲು ಪ್ರೇರಣೆ ನೀಡಿದರು…