ಭಾರತಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡುವವರಿಗೆ ಸಿಗುವ ಬಹುಮಾನ ಇದೇನಾ? ನೊಂದು ಬಲಿದಾನಗೈದ ಸೈನಿಕನಿಂದ ಬಹಿರಂಗ ಪತ್ರ..!!

ತಾಯಿ ಭಾರತಿಗೆ ಪೂಜಿತಗೊಂಡ ಕ್ರಾಂತಿಯ ಹೂವುಗಳು ಅಸಂಖ್ಯ.ಅಂತಹ ಒಬ್ಬ ಮಹಾಪುರುಷನ ಸ್ಮರಣೆ ಇದು. ಆ ಮಹಾಪುರುಷ ದೇಶಕ್ಕಾಗಿ ತನ್ನ ಪ್ರಾಣವನ್ನು ಸಮರ್ಪಿಸಿದ ಆದರೆ ನಮ್ಮ ಘನಸರ್ಕಾರ ಸ್ವಲ್ಪವೂ ಸೌಜನ್ಯತೆ ತೋರಿಸಲಿಲ್ಲ. ಅಸಲಿಗೆ ಘನ ಸರ್ಕಾರ ಅವನನ್ನು ನೆನಪಿಸಿ ಕೊಳ್ಳಲೂ ಇಲ್ಲ. ಆತ ಭಾರತದ RAW(ಭಾರತದ ಗುಪ್ತದಳ )ಏಜೆಂಟ್ ಆಗಿ ಕೆಲಸ ನಿರ್ವಹಿಸಿ,ಪಾಕಿಸ್ತಾನಕ್ಕೆ ಪಾಕಿಸ್ತಾನದವನ ತರ ನಂಬಿಸಿ ಅಲ್ಲಿನ ಸೇನೆಯ ಮೇಜರ್ ಆಗಿ ಕಾರ್ಯ ನಿರ್ವಹಿಸುತ್ತಾ ಭಾರತಕ್ಕೆ ಅಲ್ಲಿನ ಪ್ರತಿಯೊಂದು ಗುಟ್ಟನ್ನು ತಿಳಿಸುತ್ತಾ ಭಾರತ ಮಾತೆಯ ಸೇವೆ ಸಲ್ಲಿಸುತ್ತಿದ್ದ. ಕೊನೆಗೆ ಒಂದು ದಿನ ಪಾಕಿಸ್ತಾನಕ್ಕೆ ಈ ಸುದ್ದಿ ಗೊತ್ತಾದಾಗ ಅವನನ್ನು ಚಿತ್ರಹಿಂಸೆ ಕೊಟ್ಟು,ಅನಾರೋಗ್ಯದಿಂದ ನರಳಿ ಅಲ್ಲಿಯೇ ಸಾಯುವಂತೆ ಮಾಡಿದರು. ಇತ್ತ ನಮ್ಮ ಸರ್ಕಾರ ಆತನ ಮನೆಯವರ ಪತ್ರಕ್ಕೂ ಪ್ರತಿಕ್ರಿಯಿಸಲಿಲ್ಲ. ತಿಂಗಳಿಗೆ 500 ರೂಪಾಯಿ ಭಿಕ್ಷೆಯಂತೆ ಮಾಶಾಸನ ಕೊಟ್ಟು ಕೈತೊಳೆದುಕೊಳ್ಳಬೇಕೆಂದು ಆಲೋಚಿಸಿತ್ತು ಸರ್ಕಾರ. ಆದರೆ ಆತನ ಮನೆಯವರು ಆ ಭಿಕ್ಷೆಯನ್ನು ಸ್ವೀಕರಿಸಲಿಲ್ಲ.

ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಧ್ಯೇಯ ನನಗಿದೆ. ಪ್ರಾಣಬಿಡುತ್ತಾ ಭಾರತಾಂಬೆಯ ಸೇವೆ ಮಾಡುತ್ತೇನೆಂದವನು ಕೌಶಿಕ್. ಹೌದು ಆತನ ಹೆಸರು ರವೀಂದ್ರ ಕೌಶಿಕ್. ‘ಬ್ಲ್ಯಾಕ್ ಟೈಗರ್‌’ ಎಂದೇ ಹೆಸರಾದ ಅಪ್ರತಿಮ ವೀರ ರವೀಂದ್ರ ಕೌಶಿಕ್‌. ಹುಟ್ಟಿದ್ದು ಏಪ್ರಿಲ್ 11ರಂದು ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ . ಬಾಲ್ಯದಿಂದಲೇ ಕೌಶಿಕ್ ಸುಭಾಷ್,ಸಾವರ್ಕರ್ ಭಗತ್ ಸಿಂಗರ ಜೀವನದ ಕತೆಗಳನ್ನು ಕೇಳುತ್ತಾ ಬೆಳೆದ. ಸುಭಾಷರ ಸಾಗರದಾಚೆಗೆನ ಹೋರಾಟ. ಸುಭಾಷರ ಐನ್ಎ(ಇಂಡಿಯನ್ ನ್ಯಾಷನಲ್ ಆರ್ಮಿಯ) ಬಗ್ಗೆ ತುಂಬಾ ಕೇಳುತ್ತಾ ಬೆಳೆದ. ಸಾವರ್ಕರರ ಅಂಡಮಾನಿನ ಕರಿನೀರ ಶಿಕ್ಷೆಯ ಬಗ್ಗರ,ಆ ಮಹಾಪುರುಷ ವೀರ ಸಾವರ್ಕರರ ಜೀವನದ ಬಗ್ಗೆ ಓದಿ ರವೀಂದ್ರ ಕೌಶಿಕ್ ರೋಮಾಂಚಿತನಾದ.

ರವೀಂದ್ರ ಕೌಶಿಕನ ಅದೃಷ್ಟವೋ,ದುರಾದೃಷ್ಟವೋ ಗೊತ್ತಿಲ್ಲ ಭಾರತದ ಗುಪ್ತದಳ ‘ರಾ'(RAW) ಅವನನ್ನು ಹುಡುಕಾಡಿಕೊಂಡು ಬಂದಿತು. ಭಾರತದ ಗುಪ್ತದಳ ಮುಖ್ಯಸ್ಥರು ಕೌಶಿಕ್‌ನ ದೇಶಪ್ರೇಮ,ದೇಶದೆಡೆಗಿನ ಒಲವನ್ನು ನೋಡಿ ಅದನ್ನು ಗುರುತಿಸಿ ಆತನನ್ನು ಭಾರತದ ಗುಪ್ತದಳಕ್ಕೆ ಸೇರುವಂತೆ ಹೇಳಿದರು. ಕೌಶಿಕ್ ಯಾವಾಗಲೂ ಭಾರತಾಂಬೆಯ ಸೇವೆ ಮಾಡಬೇಕೆಂಬ ಉತ್ಸಾಹದಲ್ಲಿದ್ದನು. ಈಗ ಆ ಕೆಲಸ ಅವನನ್ನು ಹುಡುಕಿಕೊಂಡು ಬಂದಾಗ ಬಿಡ್ತಾನಾ? ಇಲ್ಲ ಖಂಡಿತ ಬಿಡಲಿಲ್ಲ. ಭಾರತದ ಗುಪ್ತದಳದ ಮುಖ್ಯಸ್ಥರು ಹೇಳಿದಂತೆ ಡಿಗ್ರಿಯನ್ನು ನಾಮಕಾವಸ್ಥೆಗೆ ಮುಗಿಸಿದವನೇ ತನ್ನ 23ನೇ ವಯಸ್ಸಿನಲ್ಲಿ ಗುಪ್ತದಳದ ವಿಶೇಷ ‘ಅಂಡರ್ ಕವರ್‌’ ಏಜೆಂಟ್ ಆಗಿ ಸೇರ್ಪಡೆಯಾದ.

‘ಅಂಡರ್ ಕವರ್‌’ ಏಜೆಂಟ್ ಆಗಿ ಸೇರುತ್ತಿದ್ದಂತೆಯೇ ಅವನನ್ನು ಪಾಕಿಸ್ತಾನಕ್ಕೆ ಒಂದು ಮಿಷನ್‌ನ ಮೇಲೆ ಕಳುಹಿಸಿತು. ಪಾಕಿಸ್ತಾನಕ್ಕೆ ಸುಮ್ಮನೆ ಕಳಿಸಲಿಲ್ಲ. ಅಲ್ಲಿ ಪಾಕಿಸ್ತಾನಿ ನಾಗರಿಕನಾಗಿ, ಭಾರತದ ಗುಪ್ತದಳದ ಏಜೆಂಟ್ ನಂತೆ ಕೆಲಸ ಮಾಡಲು ಕಳುಹಿಸಿದರು. ಭಾರತದ ಒಬ್ಬ ಗುಪ್ತದಳದ ಏಜೆಂಟ್ ಪಾಕಿಸ್ತಾನಿ ನಾಗರಿಕಂತೆ ಪಾಕಿಗಳ ಜೊತೆ ಇರುವುದು ಸಾಮಾನ್ಯ ಮಾತಲ್ಲ. ಅದರಲ್ಲೂ ಒಬ್ಬ ಹಿಂದು ಪಾಕಿ ನಾಗರಿಕನಂತೆ ಇರುವುದು ಸುಲಭದ ಕೆಲಸವಲ್ಲ. ಆದರೆ ರವೀಂದ್ರ ಕೌಶಿಕ್ ಆ ಕೆಲಸಕ್ಕೆ ಮುಂದಾದ. ಭಾರತದ ಗುಪ್ತದಳ ವಿಭಾಗ ಕೌಶಿಕ್ ನನ್ನು ಪಾಕಿಸ್ತಾನದ ನಾಗರಿಕನಂತೆ ವರ್ತಸಲು 2 ವರ್ಷಗಳ ತರಬೇತಿ ನೀಡಿತು. ಜೊತೆಗೆ ಪಾಕಿಸ್ತಾನದ ಮುಸಲ್ಮಾನರ ಎಲ್ಲಾ ಪದ್ದತಿ,ರೀತಿ-ರಿವಾಜುಗಳನ್ನು ಕಲಿಸಿತು. ಬರೀ ಇಷ್ಟೇ ಅಲ್ಲ ಮುಸಲ್ಮಾನ ಪದ್ಧತಿಯಂತೆ ಸುನ್ನತ್ ಕೂಡಾ ಮಾಡಲಾಯಿತು. 2 ವರ್ಷಗಳ ತರಬೇತಿಯಲ್ಲಿ ಆತ ಸಂಪೂರ್ಣ ಉರ್ದು ಕಲಿತು ಪಾಕಿಸ್ತಾನಿಯರ ಧಾರ್ಮಿಕಾಚರಣೆಯನ್ನು ಕಲಿತು ಪಕ್ಕಾ ಮುಸ್ಲಿಂನಂತೆ ಕಾಣತೊಡಗಿದ.

ಭಾರತದ ಗುಪ್ತದಳ ಇಲಾಖೆ ರವೀಂದ್ರ ಕೌಶಿಕನನ್ನು 1975 ರಲ್ಲಿ ‘ನಬೀ ಅಹಮ್ಮದ್ ಶಕೀರ್‌’ ಎಂದು ಮರುನಾಮಕರಣ ಮಾಡಿ ಭಾರತದ ಅಂಡರ್‌ ಕವರ್ ಏಜೆಂಟ್ ಆಗಿ ಪಾಕಿಸ್ತಾನಕ್ಕೆ ಕಳುಹಿಸಲಾಯಿತು.

ಪಾಕಿಸ್ತಾನಕ್ಕೆ ಹೋದವನೇ ಸುಮ್ಮನೆ ಕೂರಲಿಲ್ಲ ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಎಸ್‌ಎಲ್‌ಬಿ ಮುಗಿಸಿದ. ಎಸ್‌ಎಲ್‌ಬಿ ಪದವಿ ಮುಗಿದ ತಕ್ಷಣ ಪಾಕಿಸ್ತಾನ ಸೇನೆಯನ್ನು ಸೇರಿದ. ಪಾಕಿಸ್ತಾನೀ ಸೈನ್ಯಕ್ಕೆ ಸೇರಿದ ಕೆಲವೇ ವರ್ಷಗಳಲ್ಲಿ ತನ್ನ ಚಾಕಚಕ್ಯತೆಯಿಂದ ಪ್ರತಿಷ್ಠಿತ ಮೇಜರ್ ಆದ. ಪಾಕಿಸ್ತಾನಿ ಸೇನೆಯಲ್ಲಿ ಮೇಜರ್ ಆಗಿ 1979ರಿಂದ 1983ರವರೆಗೆ ಇದ್ದು ಪಾಕಿಸ್ತಾನದ ಕುತಂತ್ರಗಳನ್ನೆಲ್ಲಾ ಅರಿಯುತ್ತಾ ಭಾರತದ ರಕ್ಷಣಾ ಇಲಾಖೆಗೆ ಅತಿ ಮುಖ್ಯವಾದ ವಿಷಯಗಳನ್ನೆಲ್ಲಾ ರಹಸ್ಯವಾಗಿ ರವಾನಿಸುತ್ತಿದ್ದ.

ಈ ಅತ್ಯುನ್ನತ ಸಾಧನೆಗಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಕೌಶಿಕ್‌ನ ಅನುಪಸ್ಥಿತಿಯಲ್ಲಿ ಆತನಿಗೆ BLACK TIGER ಎಂಬ ಬಿರುದನ್ನೂ ನೀಡಿದರು.

ಈ ರಹಸ್ಯ ಕಾರ್ಯಾಚರಣೆ ಒಂದೆರಡು ವರ್ಷಗಳದ್ದಲ್ಲ. ಅದಕ್ಕಾಗಿ ಕೌಶಿಕ್ ಭಾರತ ಮತ್ತು ತನ್ನ ಕುಟುಂಬವನ್ನು ಬಿಟ್ಟಿದ್ದದ್ದು ಬರೋಬ್ಬರಿ 26 ವರ್ಷಗಳು.

ಯುದ್ಧದ ಸಮಯದಲ್ಲಿ ಕೌಶಿಕ್‌ನ ಸೇವೆ ನಿಜಕ್ಕೂ ಅತ್ಯಮೋಘವಾದದ್ದು. ಯುದ್ಧದ ಸಮಯದಲ್ಲಿ ಕೌಶಿಕ್ ಕೊಟ್ಟ ಅತ್ಯುಪಯುಕ್ತ ಮಾಹಿತಿಯಿಂದ ಭಾರತದ ನಡಿಗೆ ಪಾಕಿಸ್ತಾನಕ್ಕಿಂತ ಒಂದು ಹೆಜ್ಜೆ ಮೇಲಕ್ಕೇರಿತು. ಪಾಕಿಸ್ತಾನ ಯುದ್ಧದಲ್ಲಿ ಮಾಡುವ ಕುತಂತ್ರಗಳಿಗೆಲ್ಲಾ ಭಾರತ ತಲೆಕಡೆಸಿಕೊಳ್ಳದೆ ಮುನ್ನುಗ್ಗುತ್ತಿತ್ತು. ಇದಕ್ಕೆಲ್ಲಾ ಕಾರಣ ವೀರ ರವೀಂದ್ರ ಕೌಶಿಕ್.ಇನ್ನು ಕೆಲ ಸಂದರ್ಭಗಳಲ್ಲಿ ಪಾಕಿಸ್ತಾನ ರಾಜಸ್ಥಾನದ ಗಡಿ ಭಾಗಗಳಿಂದಲೂ ಯುದ್ಧ ಮಾಡಲು ಬರುವ ತಯಾರಿಯಲ್ಲಿದ್ದಾಗ, ಭಾರತಕ್ಕೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿ ಪಾಕಿಸ್ತಾನದ ಕುತಂತ್ರಗಳನ್ನೆಲ್ಲ ರಹಸ್ಯವಾಗಿ ಭಾರತಕ್ಕೆ ತಿಳಿಸಿ ಭಾರತಾಂಬೆಯ ಸೇವೆ ಮಾಡಿದ.

ಇದಾದ ಕೆಲವೇ ವರ್ಷಗಳಲ್ಲಿ ಒಂದು ಅಚಾತುರ್ಯ ನಡೆದುಹೋಯಿತು. ಭಾರತದ ಗುಪ್ತದಳ ಇಲಾಖೆ ಕೌಶಿಕ್ ನ ಸಹಾಯಕ್ಕಾಗಿ 1983 ಸೆಪ್ಟೆಂಬರ್ ತಿಂಗಳಿನಲ್ಲಿ ಇನ್ಯತ್ ಮಸಿಹಾ ಎಂಬ ಏಜೆಂಟ್‌ನನ್ನು ಸಹಾಯಕ್ಕಾಗಿ ಕಳುಹಿಸಿತು. ಇನ್ಯತ್ ಮಸಿಹಾ ಏಜೆಂಟ್ ಕೌಶಿಲ್ ಸಹಾಯಕ್ಕೆ ಬಂದ ಕೆಲವೇ ದಿನಗಳಲ್ಲಿ ಎಲ್ಲವೂ ಉಲ್ಟಾ ಆಗಿಹೋಯಿತು. ಇನ್ಯತ್ ಮಸಿಹಾ ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಇಂಟಲಿಜೆನ್ಸ್ ಕೈಗೆ ಸಿಕ್ಕಿಬಿದ್ದ. ಸಿಕ್ಕಿಬಿದ್ದವನೇ ಎಲ್ಲವೂ ಬಾಯಿಬಿಟ್ಟ. ಬ್ಲ್ಯಾಕ್ ಟೈಗರ್ ವೀರ ಕೌಶಿಕನ ಬಗ್ಗೆ ಎಲ್ಲಾ ರಹಸ್ಯವೂ ಬಯಲಾಯಿತು. ಒಂದು ಕ್ಷಣ ಪಾಕಿಸ್ತಾನ ಬೆಕ್ಕಸ ಬೆರಗಾಯಿತು. ಆ ಕ್ಷಣವೇ ಕೌಶಿಕ್‌ನನ್ನು ಬಂಧಿಸಿ ಹಿಡಿದು ಚಿತ್ರಹಿಂಸೆ ನೀಡಿತು. ಕೊನೆಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ 1985 ರಲ್ಲಿ ಆತನಿಗೆ ಮರಣ ದಂಡನೆ ವಿಧಿಸಿತು. ಆದರೆ ಅದನ್ನು ಕಾರಣಾಂತರಗಳಿಂದ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಲಾಯಿತು.

ಆ ಜೀವಾವಧಿ ಶಿಕ್ಷೆಯಲ್ಲಿ 16 ವರ್ಷಗಳ ಪಾಕಿ ಸರ್ಕಾರ ಅತೀ ಕೆಟ್ಟದಾಗಿ ಹಿಂಸಿಸಿತು. ಇದರಿಂದ ಕೌಶಿಕ್‌ಗೆ ಟಿ.ಬಿ., ಅಸ್ತಮಾ ಮತ್ತಿನ್ನಿತರ ಹೃದಯ ಸಂಬಂಧಿ ಕಾಯಿಲೆಗಳು ಶುರುವಾದವು.

ವೀರ ಕೌಶಿಕ್ ತನಗೆ ನೀಡುತ್ತಿರುವ ಪಾಕಿಗಳು ನೀಡುತ್ತಿರುವ ಚಿತ್ರಹಿಂಸೆಯ ಬಗ್ಗೆ ರಹಸ್ಯವಾಗಿ ಭಾರತಕ್ಕೆ ಪತ್ರಗಳನ್ನು ರವಾನಿಸುತ್ತಿದ್ದ. ಆದರೆ ಇಂದಿರಾ ಗಾಂಧಿ ಅವರ ಭಾರತ ಸರ್ಕಾರ ಆ ಪತ್ರದ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಸೌಜನ್ಯತೆಗೂ ಒಂದೇ ಒಂದು ಮಾತು ಕೂಡಾ ಕೌಶಿಕನ ಬಗ್ಗೆ ಆಡಲೇ ಇಲ್ಲ.

ಆ ವೀರ ಕೌಶಿಕ ಚಿತ್ರಹಿಂಸೆಯಿಂದ ನರಳಿ ಸಾಕಾಗಿ ಒಂದು ಪತ್ರದಲ್ಲಿ ತನ್ನ ನೋವನ್ನು ಹೇಳುತ್ತಾ ಭಾರತ ಸರ್ಕಾರದ ಕುರಿತು ಬರೆದಿರುತ್ತಾನೆ- ‘ಕ್ಯಾ ಭಾರತ್ ಜೈಸೇ ಬಡೇ ದೇಶ್ ಕೆ ಲಿಯೇ ಕುರ್ಬಾನಿ ದೇನೆ ವಾಲೋಂಕೊ ಯಹೀ ಮಿಲ್ತಾ ಹೈ?’ (ಭಾರತಕ್ಕಾಗಿ ತಮ್ಮ ಜೀವನವನ್ನೇ ತ್ಯಾಗಮಾಡುವವರಿಗೆ ಸಿಗುವ ಬಹುಮಾನ ಇದೇನಾ?)! ಹೀಗೆ ಒಬ್ಬ ಭಾರತಾಂಬೆಯ ಪುತ್ರ ಪತ್ರದಲ್ಲಿ ಬರೆದಿದ್ದಾನೆಂದರೆ ಭಾರತದ ಅಂದಿನ ನೀಚ ಸರ್ಕಾರ ಯಾವ ಮಟ್ಟಕ್ಕೆ ಇಳಿದಿತ್ತು ಎಂದು ಆಲೋಚಿಸಿ.

ಕೊನೆಗೂ ಸರ್ಕಾರ ಕೌಶಿಕನಿಗೆ ಮೋಸ ಮಾಡಿತು. ಅವನ ತಂದೆ ತಾಯಿ ಸರ್ಕಾರಕ್ಕೆ ಪತ್ರ ಬರೆದು ವಿಚಾರಿಸಿದರೆ ಸರ್ಕಾರ ಸೌಜನ್ಯತೆಗೂ ಒಂದೇ ಒಂದು ಪತ್ರ ಬರೆದು ಸಮಾಧಾನ ಮಾಡಲಿಲ್ಲ. ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ನವೆಂಬರ್ 21, 2001ರಂದು ಬ್ಲ್ಯಾಕ್ ಟೈಗರ್ ಕೌಶಿಕ್ ಭಾರತಾಂಬೆಗಾಗಿ ಪಾಕಿಸ್ತಾನದಲ್ಲಿ ಇಹಲೋಕ ತ್ಯಜಿಸಿದ. ಕೌಶಿಕ್‌ನ ಶವವನ್ನೂ ಭಾರತ ಸರ್ಕಾರ ತರುವ ಪ್ರಯತ್ನವೂ ಮಾಡಲಿಲ್ಲ. ಪಾಕಿಸ್ತಾನವೇ ಅಲ್ಲಿನ ಜೈಲಿನ ಹಿಂಭಾಗದಲ್ಲಿ ವೀರನ ಶವ ಹೂಳಿತು. ಭಾರತಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ ವೀರನಿಗೆ ಸರ್ಕಾರ ಕೇವಲ 500 ರುಪಾಯಿಗಳ ಮಾಶಾಸನ ನಿಗದಿ ಮಾಡಿ ಕೈ ತೊಳೆದುಕೊಳ್ಳಲು ಮುಂದಾಯಿತು. ಆದರೆ ರೋಷಿ ಹೋದ ಕೌಶಿಕ್‌ನ ಮನೆಯವರು ಸರ್ಕಾರ ಕೊಡುವ ಭಿಕ್ಷೆಗೆ ಕೈಯೊಡ್ಡಲಿಲ್ಲ. ನೋಡಿ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟವನಿಗೆ ನಮ್ಮ ಸರ್ಕಾರ ಮಾಡಿದ ನೀಚತನ. ಇದನ್ನು ಭಾರತೀಯ ಯಾವತ್ತೂ ಕ್ಷಮಿಸಲ್ಲ. ಕ್ಷಮಿಸಿಬಿಡಿ ಬ್ಲ್ಯಾಕ್ ಟೈಗರ್ ರವೀಂದ್ರ ಕೌಶಿಕ್.

ಜೈ ಹಿಂದ್

-ಸಾಮ್ರಾಟ್ ಭಾರದ್ವಾಜ್