350 ವರ್ಷಗಳ ದೀರ್ಘಾವಧಿಯ ನಂತರ ದೆಹಲಿ ಸಿಂಹಾಸವನ್ನೇರಿ ಘರ್ಜಿಸಿದ್ದ ಈ ಹಿಂದೂ ಮಹಾಸಮ್ರಾಟನ ಬಗ್ಗೆ ನಿಮಗೆಷ್ಟು ಗೊತ್ತು? ಇತಿಹಾಸಕಾರರು ಈ ಮಹಾನ್ ಪುರುಷನ ಬಗ್ಗೆ ಮರೆತು ಬಿಟ್ಟರೆ..??

ರಾಜಾ ಪೃಥ್ವಿರಾಜ ಚವ್ಹಾಣನ ನಂತರ 350 ವರ್ಷಗಳ ಮುಸ್ಲಿಂ ಆಡಳಿತದ ಬಳಿಕ ದೆಹಲಿಯ ಗದ್ದುಗೆಯನ್ನೇರಿ ರಾಜತಿಲಕವಿಟ್ಟುಕೊಂಡು ಹಿಂದೂ ಸಾಮ್ರಾಜ್ಯವನ್ನು ಮರಳಿ ಸ್ಥಾಪಿಸಿದ್ದ ಸಾಮ್ರಾಟನ ಬಗ್ಗೆ ನಮ್ಮ ಪಠ್ಯಪುಸ್ತಕಗಳಲ್ಲಿ ನಾವು ಓದಲೇ ಇಲ್ಲ.

ಅಷ್ಟಕ್ಕೂ ಆ ಹಿಂದೂ ಸಾಮ್ರಾಟನಾದರೂ ಯಾರು?

ಪೃಥ್ವಿರಾಜ್ ಚೌಹಾಣ್(ಕ್ರಿ.ಶ.1192) ನ ನಂತರ ಭಾರತದ ಇತಿಹಾಸದಲ್ಲಿ ಮೊಘಲರ ಉಪಟಳವನ್ನೇ ಅವರ ಸುಶಾಸನ ಎಂದು ಇತಿಹಾಸದ ಪುಸ್ತಕಗಳಲ್ಲಿ ಬಿಂಬಿಸಿದ ಇತಿಹಾಸಕಾರರು ‘ಹೇಮು’ ಸಾಮ್ರಾಟ ಹೇಮಚಂದ್ರ ವಿಕ್ರಮಾದಿತ್ಯನ ಬಗ್ಗೆ ನಮಗೆ ತಿಳಿಸಲೇ ಇಲ್ಲ.

ಮಧ್ಯಕಾಲೀನ ರಾಜರಲ್ಲಿ ಕೇವಲ ಹೇಮು ಮಾತ್ರ ದೆಹಲಿಯನ್ನಾಳಿದ ಮುಸ್ಲಿಮೇತರ ಸಾಮ್ರಾಟನಾಗಿದ್ದನು. ಮಹಾಸಮ್ರಾಟನ ಕುರಿತು ಚಿಂತಿಸುವ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬೇಕಾಗಿದೆ.

ಹೇಮು ಒಬ್ಬ ಧೀಮಂತ ಹಿಂದೂ ಮಹಾಸಾಮ್ರಾಟನಾಗಿದ್ದ. ಮೊಘಲ್ ದೊರೆ ಅಕ್ಬರ್ ಕನಸಿನಲ್ಲಿಯೂ ದೆಹಲಿ ಗದ್ದುಗೆಯನ್ನು ಯೋಚಿಸದಂತೆ ಮಾಡಿದ ಪರಾಕ್ರಮಿ.

ಅಖಂಡ ಭಾರತದ ನಕ್ಷೆಯಿಂದಲೇ ಮೊಘಲ್‌ರನ್ನು ತೆಗೆದುಹಾಕಬೇಕೆಂದು ಸಂಕಲ್ಪ ಮಾಡಿದ ಅಪ್ರತಿಮ ಶೂರನಾತ.

350 ವರ್ಷಗಳ ದೀರ್ಘಾವಧಿ ನಂತರ ದೆಹಲಿ ಸಿಂಹಾಸವನ್ನೇರಿ ಘರ್ಜಿಸಿದ ಸಮರಸಿಂಹ. ಇಂತಹ ವ್ಯಕ್ತಿತ್ವದ ಮಹಾನ್ ನಾಯಕನ ಚರಿತ್ರೆ ಇತಿಹಾಸದ ಪುಟಗಳಲ್ಲಿ ಕಾಣದಂತೆ ಮಾಡುವಲ್ಲಿ ಇತಿಹಾಸಕಾರರು ನಡೆದುಕೊಂಡ ರೀತಿ ಭಾರತದ ಇತಿಹಾಸಕ್ಕೆ ಎಸಗಿದ ಅಪಚಾರವೇ ಸರಿ.

ಜೀವನದುದ್ದಕ್ಕೂ ಕೆಲವೇ ಸಮರಗಳಲ್ಲಿ ಪಾಲ್ಗೊಂಡು, ಪ್ರಮುಖ ಯುದ್ಧಗಳಲ್ಲಿ ವೈರಿಗಳೊಂದಿಗೆ ಹೋರಾಡದೇ ರಜಪೂತ ರಾಜರುಗಳ ಸಹಾಯದಿಂದ ಸಾಮ್ರಾಜ್ಯವನ್ನು ವಿಸ್ತರಿಸಿದ, ಪಲಾಯನ ಪ್ರವೀಣನ ಪುತ್ರ, ಅನಕ್ಷರಸ್ಥ, ಅಕ್ಬರ್ ಮಹಾಶಯ (The Great) ಎಂದು ವರ್ಣಿಸಲ್ಪಟ್ಟ. ಹಿಂದೂಗಳ ಮಾರಣಹೋಮ ಮಾಡಿ,  ಒತ್ತೆಯಾಳಾಗಿದ್ದ ತನ್ನ ಮಕ್ಕಳ ಬಿಡುಗಡೆಗಾಗಿ ರಾಜ್ಯದ ಸಂಪತ್ತನ್ನು ಬ್ರಿಟೀಷರಿಗೆ ನೀಡಿದ ಟಿಪ್ಪು ಇತಿಹಾಸಕಾರರ ದೃಷ್ಟಿಯಲ್ಲಿ ಮೈಸೂರು ಹುಲಿಯಾದ. ಆದರೆ ತನ್ನ ಸ್ವಸಾಮರ್ಥ್ಯದಿಂದ ಮೊಘಲ್ ಸಾಮ್ರಾಜ್ಯವನ್ನೇ ನಡುಗಿಸಿ, ದೆಹಲಿ ಗದ್ದುಗೆಯನ್ನೇರಿದ ಹೇಮಚಂದ್ರನನ್ನು ಇತಿಹಾಸಕಾರರು ಕೇವಲ ಹೇಮು ಎಂದು ಉಲ್ಲೇಖಿಸಿದ್ದಾರೆ. ಸಾಮ್ರಾಟ ಹೇಮಚಂದ್ರ ಎಂದು ಎಲ್ಲಿಯೂ ಉಲ್ಲೇಖಿಸಲೇ ಇಲ್ಲ.

ಹೇಮಚಂದ್ರನ ಸಾಧನೆಯನ್ನು ಸಾಮ್ರಾಟ ವಿಕ್ರಮಾದಿತ್ಯ ಎಂದು ಬಿಂಬಿಸಿದರೆ, ಅಕ್ಬರ್‌ನ ಖ್ಯಾತಿ ಕಡಿಮೆಯಾಗುತ್ತದೆ ಎಂಬ ಭಯದಿಂದಲೇ ಆತನ ವ್ಯಕ್ತಿತ್ವ ಹಾಗೂ ಸಾಧನೆಗೆ ಮಹತ್ವ ನೀಡದಿರುವ ಸಾಧ್ಯತೆಗಳಿವೆ.

ಭಾರತದ ಮೂಲ ಸಂಸ್ಕೃತಿಗೆ ಮರುಜೀವ ನೀಡಲು ಪ್ರಯತ್ನಿಸಿದ ಕೀರ್ತಿ ರಾಜಾ ಹೇಮಚಂದ್ರ ವಿಕ್ರಮಾದಿತ್ಯನಿಗೆ ಸಲ್ಲುತ್ತದೆ. ಇಂತಹ ಸಾಮ್ರಾಟ ಹೇಮಚಂದ್ರನ ಸಾಧನೆಗಳನ್ನು ಯಥಾವತ್ತಾಗಿ ಚಿತ್ರಿಸಿದ್ದರೆ ಹೇಮು ಅಕ್ಬರ್‌ನಿಗಿಂತ ಹೆಚ್ಚು ವಿಜೃಂಭಿಸುತ್ತಿದ್ದ. ಅಕ್ಬರ್‌ನ ವ್ಯಕ್ತಿತ್ವ ಗೌಣವಾಗುವುದೆಂಬ ಭಾವನೆಯಿಂದಲೇ ಇತಿಹಾಸಕಾರರು ತಮ್ಮ ಕರ್ತವ್ಯನಿಷ್ಠೆಯನ್ನು ಬದಿಗಿಟ್ಟು, ಅಕ್ಬರ್‌ನನ್ನು ಉತ್ಪ್ರೇಕ್ಷೆ(Exaggerate)

ಹೇಮಚಂದ್ರನನ್ನು ಉಪೇಕ್ಷಿಸುವಲ್ಲಿ ತಮ್ಮ ಪಾಂಡಿತ್ಯವನ್ನು ಮೆರೆದಿದ್ದಾರೆ.

ಇತಿಹಾಸಕಾರರು ಯಾವ ಅನಿವಾರ್ಯತೆಯಿಂದ ಹೇಮುನನ್ನು ಕಡೆಗಣಿಸಿದ್ದಾರೆ? ಎನ್ನುವುದೇ ವಿಪರ್ಯಾಸ. ಆ ಕಾಲದ ಇತಿಹಾಸಕಾರರು ಮೊಘಲ್‌ರ ಕಪಿಮುಷ್ಟಿಯಲ್ಲಿದ್ದರೇ? ಎಂಬ ಪ್ರಶ್ನೆ ಕಾಡುತ್ತದೆ.

ರಾಜಾ ಹೇಮಚಂದ್ರ ಛಲದಿಂದ ದೆಹಲಿಯ ಸಿಂಹಾಸನವನ್ನೇರಿ ಶೋಭಿಸಿದನು. ಸಜೀವ ಸಿಂಹವನ್ನೇ ಆಸನ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದ ಪರಾಕ್ರಮಿ ಆತ. ರಾಜಾ ಹೇಮಚಂದ್ರನನ್ನು ವಿಕ್ರಮಾದಿತ್ಯ ಎಂದು ಆ ಕಾಲದ ಪ್ರಜೆಗಳೇ ಗೌರವಿಸಿದ್ದಾರೆ. ರಾಜಾ ಹೇಮಚಂದ್ರ ವಿಕ್ರಮಾದಿತ್ಯನ ಜೀವನಪೂರ್ತಿ ಸಾಧನೆಗಳನ್ನು ಪರಿಗಣಿಸಿದರೆ ಅಕ್ಬರ್‌ನಿಗಿಂತಲೂ ಶ್ರೇಷ್ಠನಾಗಬಹುದು.

ಮಹಾ ಸಾಮ್ರಾಟ ಎಂದರೆ ಅವನ ಸಾಮರ್ಥ್ಯಕ್ಕೆ  ಯೋಗ್ಯವಾದ ನ್ಯಾಯ ನೀಡಿದಂತಾಗುತ್ತದೆ. ಮೊಘಲ್ ಇತಿಹಾಸಕಾರರೂ ಹೇಮುವಿನ ಬಗ್ಗೆ ಉಲ್ಲೇಖಿಸಿರುವುದು ಬಹಳ ಕಡಿಮೆ. ತಮ್ಮ ಪ್ರಸಂಶನೀಯ ಶಬ್ದ ಭಂಡಾರವನ್ನು ಮೊಘಲ್‌ರಿಗಾಗಿಯೇ ಮೀಸಲಿಟ್ಟುಬಿಟ್ಟಿದ್ದರು.

ಪಂಜಾಬ್ ದಿಂದ ಬಂಗಾಳದವರೆಗೆ ಸತತ ಇಪ್ಪತ್ತೆರಡು ಯುದ್ಧಗಳಲ್ಲಿ ವಿಜಯಪತಾಕೆಯನ್ನು ಹಾರಿಸಿ ಭಾರತದಿಂದ ಮೊಘಲ್‌ರನ್ನು ಬೇರುಸಮೇತ ಕಿತ್ತೊಗೆಯಬೇಕೆನ್ನುವ ಸಂಕಲ್ಪವನ್ನು ಶುಭಾರಂಭದೊಂದಿಗೆ ಪ್ರಾರಂಭಿಸಿದ ಅಮೋಘ ಅರಸ ಹೇಮು.

ಸೇನಾಧಿಪತಿಗಳನ್ನ ರಣರಂಗಕ್ಕೆ ಕಳುಹಿ ತಾನು ಅರಮನೆಯಲ್ಲಿ ಸುಖದಲ್ಲಿ ಕುಳಿತು ಸಾಧಿಸಿದ ಗೆಲುವುಗಳಲ್ಲ ಅವು. ಪ್ರತೀ ಯುದ್ಧದಲ್ಲಿ ಸ್ವಯಂ ಸೇನಾಧಿಪತಿಯಾಗಿ, ರಣರಂಗದಲ್ಲಿ ಸ್ವಯಂ ಸೇನೆಯನ್ನು ನಡೆಸಿ ಸಾಧಿಸಿದ ಅತ್ಯದ್ಭುತ ವಿಜಯಗಳು.

ನಿಜವಾದ ಭಾರತದ ಇತಿಹಾಸವು ವಿದೇಶಿ ಪ್ರವಾಸಿಗರಿಂದ, ಇತಿಹಾಸಕಾರರಿಂದ ಬಹುಪಾಲು ತಿಳಿದುಬರುತ್ತದೆ. ಆ ಕಾಲದ ಸ್ಥಳಿಯ ಇತಿಹಾಸಕಾರರು ನೈಜ ಇತಿಹಾಸವನ್ನು ವ್ಯಕ್ತಪಡಿಸುವಲ್ಲಿ ವಿಫಲರಾಗಿದ್ದಾರೆ. ಕೇವಲ ಮುಸ್ಲಿಂ ದೊರೆಗಳನ್ನು ಮಾತ್ರ ವೈಭವೀಕರಿಸಿದ್ದಾರೆ.

ಮೊಘಲ್‌ರೊಂದಿಗೆ ಹೋರಾಡಿದ ಏಕಮಾತ್ರ ಹಿಂದೂ ರಾಜನೆಂದರೆ ಶಿವಾಜಿ ಎಂದು ಬಿಂಬಿಸಿದ್ದಾರೆ. ಹೇಮುವಿನ ಬಗ್ಗೆ ಉಲ್ಲೇಖಿಸಿದ್ದು ತುಂಬ ಕಡಿಮೆ.

ಮೊಘಲ್ ಇತಿಹಾಸಕಾರರಾದ ಬದೌನಿ ಹಾಗೂ ಅಬು-ಅಲ್-ಫಜಲ್ ಇವರು ಹೇಮು ಮೊಘಲ್‌ರ ವೈರಿಯಾಗಿದ್ದರಿಂದ ಅಂದವಾಗಿ ಚಿತ್ರಿಸಿದ್ದಾರೆ. ಹೇಗೆ ಶ್ರೀಗಂಧವನ್ನು ಎಲ್ಲಿ ಬಚ್ಚಿಟ್ಟರೂ ಅದು ತನ್ನ ಸುಗಂಧವನ್ನು ಹರಡುವದನ್ನು ನಿಲ್ಲಿಸುವುದಿಲ್ಲವೋ ಅದೇ ರೀತಿ ಮಹಾಸಾಮ್ರಾಟ  ಹೇಮಚಂದ್ರನು ಶೌರ್ಯ ಪ್ರರಾಕ್ರಮದ ಪರಿಮಳ ಯಾರಿಂದಲೂ ನಿಯಂತ್ರಿಸಲು ಸಾಧ್ಯವಾಗಿಲ್ಲ.

ಇತಿಹಾಸಕಾರ ಕೆ.ಕೆ. ಭಾರಧ್ವಾಜ ಅವರು ಬಿಹಾರದಿಂದ ದಿಲ್ಲಿಯವರೆಗಿನ ಹೇಮುವಿನ ವಿಜಯಯಾತ್ರೆ ನೆಪೋಲಿಯನ್ ಅಭಿಯಾನದಂತಿತ್ತು ಎಂದು ವರ್ಣಿಸಿದ್ದಾರೆ. ಇಲ್ಲಿಯೂ ಕೂಡಾ ಇತಿಹಾಸಕಾರರು ತಪ್ಪೆಸಗಿದಂತೆ ಅನಿಸುತಿದೆ.

ಯಾಕಂದ್ರೆ ನೆಪೋಲಿಯನ್ ಸನ್ 11769 ರಲ್ಲಿ ಜನಿಸಿದ್ದು, ಅದಕ್ಕಿಂತ 268 ವರ್ಷಗಳ ಮುಂಚೆ ಜನಿಸಿದ್ದ, 253 ವರ್ಷಗಳ ಮುಂಚೆಯೇ ತನ್ನ ಪ್ರಾಬಲ್ಯವನ್ನು ಮೆರೆದ ಹೇಮಚಂದ್ರನನ್ನು ನೆಪೋಲಿಯನ್‌ಗೆ ಹೋಲಿಸುವುದು ಎಷ್ಟರ ಮಟ್ಟಿಗೆ ಸರಿ.

ನೆಪೋಲಿಯನ್ ಚರಿತ್ರೆಯಲ್ಲಿ ಹೇಮುವನ್ನು ಉಲ್ಲೇಖಿಸಬೇಕೊ? ಅಥವಾ ಹೇಮು ಚರಿತ್ರೆಯಲ್ಲಿ ನೆಪೋಲಿಯನ್ ಉದಾಹರಣೆ ನೀಡಬೇಕೊ? ಬುದ್ಧಿಜೀವಿಗಳಿಂದಲೂ ವಿದೇಶಿ ಹೇರಿಕೆ ಎಷ್ಟು ಸಮಂಜಸ?

ನೆಪೋಲಿಯನ್ ಸಾಧನೆ ಭಾರತದ ಹೇಮುವಿನಂತೆ ಎಂದು ವರ್ಣಿಸುವಂತಾಗಬೇಕು. ಕೀಳರಿಮೆ(inferior) ಹೋಗಲಾಡಿಸಿ ಭಾರತದ ಗರಿಮೆ(Superior) ಹೆಚ್ಚಿಸಲು ಪ್ರಯತ್ನಿಸಬೇಕು.

ಪಂಜಾಬನಿಂದ ಬಂಗಾಲದವರೆಗೆ ಜಯಗಳಿಸಿದ ಅವಿರತ ಪರಾಕ್ರಮಿ. ಸಮರಗಳಲ್ಲಿ ಸತತ ಜಯಗಳಿಸಿದ ರಣೋತ್ಸಾಹಿ. ಮೊಗಲ್‌ರನ್ನು ಭಾರತದಿಂದ ಓಡಿಸಬೇಕೆಂದು ಸಂಕಲ್ಪ ಮಾಡಿದ ಸ್ವದೇಶ ರಕ್ಷಕ. ಹಿಂದೂ ಸಾಮ್ರಾಜ್ಯ ಮರುನಿರ್ಮಾಣ ಮಾಡಿದ ಧೀರ, ರಾಜ್ಯಾಭಿಷೇಕವಾದ ಮರುಘಳಿಗೆಯೇ ಪಾಣಿಪತ್ ಯುದ್ಧಕ್ಕೆ ಅಣಿಯಾದ ಶೂರ.

ಪಾಣಿಪತ್‌ನಲ್ಲಿ ನಡೆದ ಸಮರದಲ್ಲಿ ಹೇಮು ತನ್ನ ನೆಚ್ಚಿನ ದೈತ್ಯಗಾತ್ರದ ಹವಾಯಿ ಎಂಬ ಆನೆಯ ಮೇಲೆ ಭಯಂಕರ ರಣೋತ್ಸಾಹದಿಂದ ಮುನ್ನುಗ್ಗುತ್ತಿದ್ದರೆ, ಮಹಾಶಯನೆನಿಸಿಕೊಂಡ ಅಕ್ಬರ್ ಹಾಗೂ ಬೈರಮ್‌ಖಾನ್ ರಣರಂಗದಿಂದ ಎಂಟು ಮೈಲು ದೂರದಿಂದ ಎಲ್ಲ ಗತಿವಿಧಿಗಳನ್ನು ಗಮನಿಸುತ್ತಿದ್ದರು.

ರಣರಂಗದಲ್ಲಿ ಹೇಮುವಿನ ವೀರಾವೇಶ ಕಂಡು ಮೊಗಲ್ ಸೈನ್ಯ ದಿಕ್ಕೆಟ್ಟು ಹೋಯಿತು. ಇನ್ನೇನು ವಿಜಯಮಾಲೆ ಕೊರಳಿಗೆ ಹಾಕಿಕೊಳ್ಳುವ ಘಳಿಗೆ ಸಮೀಪಿಸುತ್ತಿತ್ತು. ಅಷ್ಟರಲ್ಲಿಯೇ ಘೋರ ದುರ್ವಿಧಿ ಆಟ ಬದಲಾಯಿಸಿತು.

ಯುದ್ಧಕ್ಕೆ ಹೊರಟ ನಿಸ್ವಾರ್ಥಿ ನಾಯಕ, ಕಣ್ಣು ಕಳೆದುಕೊಂಡು ನೋವಿನಲ್ಲಿಯೂ ಹುಮ್ಮಸ್ಸಿನಿಂದ ಹೋರಾಡಿದ ಪರಾಕ್ರಮಿ. ತನ್ನ 55 ನೇ ವಯಸ್ಸಿನಲ್ಲಿಯೂ ರಣರಂಗದಲ್ಲಿ ಹೋರಾಡಿದ ರಣಧೀರ. ಕಡೆಯವರೆಗೂ
ಆತ್ಮಬಲದಿಂದ ಹೋರಾಡಿ ವೀರಮರಣವನ್ನಪ್ಪಿದ ದೇಶಭಕ್ತ. ಭಾರತದ ಭವಿಷ್ಯವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದ ನಾಯಕ. ಒಂದೇ ಮಾತಿನಲ್ಲಿ ವರ್ಣಿಸುವುದಾದರೆ ಹೇಮು ಒಬ್ಬ ಪರಿಪೂರ್ಣ ರಾಷ್ಟ್ರಾಭಿಮಾನಿ.

ಮಹಾಸಾಮ್ರಾಟ ಹೇಮುವಿನ ಜೀವನ ಚರಿತ್ರೆ ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ.  ರಾಜಾ ಹೇಮಚಂದ್ರ ವಿಕ್ರಮಾದಿತ್ಯನ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಮೂಡುತ್ತದೆ.

ನಮ್ಮೆಲ್ಲರ ಕರ್ತವ್ಯ
ಹೇಮುವಿನ ಸ್ಪೂರ್ತಿದಾಯಕ ಚರಿತ್ರೆ ಪ್ರತಿಯೊಬ್ಬನೂ ಹೆಮ್ಮೆ ಪಡುವಂತಹದ್ದು. ರಾಷ್ಟ್ರ ಚಿಂತನೆ ಮೂಡಿಸುವಂತಹದ್ದು. ಹಾಗಾಗಿ ಸಾಮ್ರಾಟ ಹೇಮಚಂದ್ರ ವಿಕ್ರಮಾದಿತ್ಯನ ಚರಿತ್ರೆ ಜನ ಸಾಮಾನ್ಯರಿಗೂ ತಿಳಿಸುವ ಕಾರ್ಯವನ್ನು ಚಿಂತಕರು, ಲೇಖಕರು ಮತ್ತು ಸರ್ಕಾರ ಮಾಡಬೇಕಾಗಿದೆ.

ಇಂದಿಗೂ ಹೇಮುವಿನ ಮನೆ ರೇವಾಡಿಯಲ್ಲಿ ಇದೆ. ಅದನ್ನು ರಕ್ಷಿಸುವ ಸತ್ಕಾರ್ಯದ ಬಗ್ಗೆ ಇನ್ನೂ ಯಾರೂ ಯೋಚಿಸಿಯೂ ಇಲ್ಲ. ನಿಜವಾದ ಧರ್ಮರಕ್ಷಕ, ರಾಷ್ಟ್ರಭಕ್ತನಿಗೆ ಈ ದುರ್ಗತಿ ಬಂದಿದ್ದು ನಮ್ಮೆಲ್ಲರ ದೌರ್ಭಾಗ್ಯ.

ಇಂತಹ ಹಿಂದೂ ರಾಜರುಗಳಿಂದಾಗಿ ಕಾಲ ಕಾಲಕ್ಕೆ ವಿದೇಶಿಯರಿಂದಾಗುವ ದಾಳಿಯಿಂದ ನಾವು
ಸುರಕ್ಷಿತವಾಗಿದ್ದೇವೆ ಹಾಗಾಗಿ ಮಹಾಸಾಮ್ರಾಟ ಹೇಮಚಂದ್ರ ವಿಕ್ರಮಾದಿತ್ಯನ ಬಗ್ಗೆ ಶಾಲೆಯಲ್ಲಿ ಮಕ್ಕಳು ಅಭ್ಯಾಸ ಮಾಡುವಂತಾಗಬೇಕು. ಹೇಮು ವಾಸಿಸಿದ ಮನೆಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಮಾಡಬೇಕು. ಹೇಮುವಿನ ಹೆಸರಿನಲ್ಲಿ ನಾಣ್ಯಗಳನ್ನು ಮುದ್ರಿಸಬೇಕು.

ಅವನು ಜನಿಸಿದ ದಿನವನ್ನು ಸ್ವದೇಶಿ ದಿನವ್ನಾಗಿ ಘೋಷಿಸಬೇಕು ಅಲ್ಲದೇ ಹೇಮುವಿನ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಬೇಕು. ಒಟ್ಟಿನಲ್ಲಿ ಹೇಮು ಎಲ್ಲರಿಗೂ ಪರಿಚಿತನಾಗುವಂತಹ ಕಾರ್ಯಗಳು ನಡೆಯಬೇಕಾಗಿವೆ

– ಪೃಥ್ವಿ

  • 1.6K
    Shares