ಬ್ರೇಕಿಂಗ್ ನ್ಯೂಸ್ : ಜಾತಿ ಒಡೆದು ಆಳಲು ಮುಂದಾಗಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಬೇಸತ್ತು ಕಾಂಗ್ರೆಸ್ ಪಕ್ಷ ತೊರೆಯಲು ಗಂಭೀರ ಚಿಂತನೆ ನಡೆಸುತ್ತಿರುವ ಆ ಪ್ರಭಾವಿ ವ್ಯಕ್ತಿಗಳಾದರೂ ಯಾರು?

ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ‘ಕಾವು’ ಜೋರಾಗಿದೆ, ಒಂದು ಕಡೆ ಸರ್ಕಾರದ ಸಚಿವರುಗಳೇ ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆಯ ಸಭೆಗಳನ್ನ ಏರ್ಪಡಿಸುತ್ತ ವೀರಶೈವ ಹಾಗು ಲಿಂಗಾಯತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಜ್ಯದಲ್ಲಿ ಇಷ್ಟು ದಿನ ಇರದಿದ್ದ ಪ್ರತ್ಯೇಕ ಧರ್ಮದ ಕಾವು ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಹೆಚ್ಚಾಗತೊಡಗಿದೆ.

ಮಂತ್ರಿಗಳಾಗಿ, ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ತಾವು ಜಾತಿ ಮತ ಪಂಥ ಧರ್ಮ ಯಾವುದನ್ನೂ ನೋಡದೆ ಸರ್ವಜನರ ಉದ್ಧಾರಕ್ಕಾಗಿ ನಿಷ್ಪಕ್ಷಪಾತ ಕೆಲಸ ಮಾಡುತ್ತೇವಂತ ಪ್ರಮಾಣವಚನ ಸ್ವೀಕರಿಸಿದ ರಾಜಕಾರಣಿಗಳು ಜಾತಿಗಳನ್ನು ಒಡೆದು ಸಮಾಜದಲ್ಲಿ ಪ್ರತ್ಯೇಕತೆಗೆ ಬೆಂಬಲಿಸುವುದು ಎಷ್ಟು ಸರಿ? ಇದು ಕಾನೂನಿನ ಉಲ್ಲಂಘನೆಯಾದಂತಲ್ಲವೇ?

ಸ್ವತಃ ಸಚಿವರುಗಳೇ ಮುಂದೆ ನಿಂತು ಪ್ರತ್ಯೇಕ ಧರ್ಮದ ರ್ಯಾಲಿ ಗಳಲ್ಲಿ ಭಾಗವಹಿಸುತ್ತ ಇವರು ರಾಜ್ಯದ ಜನರಿಗೆ, ತಮ್ಮ ಮತದಾರರಿಗೆ ನೀಡುತ್ತಿರೋ ಸಂದೇಶವಾದರೂ ಏನು?

ಅಷ್ಟಕ್ಕೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಚುನಾವಣೆ ಹತ್ತಿರವಿರುವಾಗಲೇ ಯಾಕೆ ಇಷ್ಟು ಕಾವು ಪಡೆದುಕೊಂಡಿದೆ?

ಸಿದ್ದರಾಮಯ್ಯನವರ ಸರ್ಕಾರ ಇದರ ಹಿಂದೆ ನಿಂತು ಷಡ್ಯಂತ್ರ ರೂಪಿಸಿ ವೀರಶೈವ ಲಿಂಗಾಯತರನ್ನ ಒಡೆದು ಆಳುವ ನೀತಿಗೆ ಮುಂದಾಗಿದೆಯೆಂದು ಸ್ವತಃ ಕಾಂಗ್ರೆಸ್ ಪಕ್ಷದಲ್ಲೇ ಅಸಮಾಧಾನ ಭುಗಿಲೆದ್ದಿದೆ.

ರಾಜ್ಯದ ಬಹುತೇಕ ವೀರಶೈವರು ಲಿಂಗಾಯತರು ಬೆಂಬಲಿಸುವುದು ಯಡಿಯೂರಪ್ಪನವರನ್ನೇ ಎಂಬುದನ್ನ ಅರಿತ ಸಿದ್ದರಾಮಯ್ಯನವರು ಲಿಂಗಾಯತರ ವೋಟ್ ಬ್ಯಾಂಕ್ ಹೇಗಾದರೂ ಮಾಡಿ ಒಡೆದು ತಮ್ಮ ಪಕ್ಷಕ್ಕೆ ಅವರು ವಾಲುವಂತೆ ಮಾಡಲು ಈ ಕುತಂತ್ರಕ್ಕೆ ಕೈ ಹಾಕಿದ್ದಾರೆ ಅಂತ ಕಾಂಗ್ರೆಸ್ಸಿನ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರಬಲ ಅಖಂಡ ವೀರಶೈವ ಲಿಂಗಾಯತ ಸಮುದಾಯವನ್ನ , ತಮ್ಮ ಸ್ವಾರ್ಥಕ್ಕಾಗಿ ಇಡೀ ಸಮುದಾಯವನ್ನೆ ಒಡೆಯುವ ಹುನ್ನಾರಕ್ಕೆ ಮುನ್ನುಡಿಯಿಟ್ಟಿರುವ CM ಸಿದ್ಧರಾಮಯ್ಯನವರ ಒಡೆದಾಳುವ ನೀತಿಗೆ ಬೇಸತ್ತು ಈಗ ರಾಜ್ಯ ಮಂತ್ರಿಮಂಡಲದಲ್ಲಿ ಸಚಿವರಾಗಿರುವಂತಹ ಈಶ್ವರ ಖಂಡ್ರೆ ಹಾಗು ಕಾಂಗ್ರೆಸ್ಸಿನ ಹಿರಿಯ ಮುಖಂಡರು, ಮಾಜಿ ಮಂತ್ರಿ ಶಾಮನೂರು ಶಿವಶಂಕರಪ್ಪನವರು ಕೂಡ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಲು ಗಂಭೀರವಾದ ಚಿಂತನೆ ನಡೆಸಿರುವುದು ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂಬುದನ್ನ ಮತ್ತೆ ಮತ್ತೆ ಜಗಜ್ಜಾಹೀರಾಗುತ್ತಿದೆ.

ಅಷ್ಟಕ್ಕೂ ವೋಟ್ ಗಾಗಿ ಇಂತಹ ಕೆಲಸಕ್ಕೆ ಸಿದ್ದರಾಮಯ್ಯನವರು ಕೈ ಹಾಕುತ್ತಾರಂತ ನಾವು ಅಂದುಕೊಂಡಿರಲಿಲ್ಲ ಅಂತ ಕಾಂಗ್ರೆಸ್ಸಿನ ಮುಖಂಡರುಗಳೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳನ್ನ ನೋಡಿದರೆ ಲಿಂಗಾಯತರ ವೋಟ್ ಪಡೆಯೋಕೆ ಸಿದ್ದರಾಮಯ್ಯನವರು ಹೂಡಿದ್ದ ತಂತ್ರ ತಮಗೇ ತಿರುಮಂತ್ರವಾಗುವ ಎಲ್ಲಾ ಲಕ್ಷಣಗಳೂ ಈ ಇಬ್ಬರು ಪ್ರಭಾವಿ ಕಾಂಗ್ರೆಸ್ಸಿಗರಿಂದ ಸಿಗುತ್ತಿದೆ.