ಮೊಗಲರ ಆಡಳಿತವಿದ್ದಾಗಲೇ ದೆಹಲಿಯ ಕೆಂಪುಕೋಟೆಯ ಮೇಲೆ “ಭಗವಾ ಧ್ವಜ” ಹಾರಿಸಿದ್ದ ಆ ವೀರಕೇಸರಿಯ ಬಗ್ಗೆ ನಿಮಗೆ ಗೊತ್ತೇ?

 

ಶಿವಾಜಿ ಮಹಾರಾಜರ ನ೦ತರ ಹಿ೦ದು ಧರ್ಮದ ಕೀರ್ತಿ ಪತಾಕೆ ಹಾರಿಸಿದ ವೀರ ರಾಜ ಯಾರು ಗೊತ್ತೆ?

ಇಡೀ ಹಿಂದುಸ್ಥಾನದಲ್ಲಿ ಬರುವ ಎರಡು ಪ್ರಮುಖ ಘೋಷಣೆಗಳು :

ಧರ್ಮ ಮರುಸ್ಥಾಪಕ “ಶಿವಾಜಿ” ,
ಧರ್ಮ ರಕ್ಷಕ “ಸಾಂಭಾಜಿ”. ಹೌದು ಶಿವಾಜಿ ಮಹಾರಾಜರ ನಂತರ ಹಿಂದೂ ಧರ್ಮದ ಪತಾಕೆಯನ್ನು ಹಾರಿಸಿದ ವೀರ ಬೇರೆ ಯಾರೂ ಅಲ್ಲ ಶಿವಾಜಿ ಮಹಾರಾಜರ ಮಗ ಸಾಂಭಾಜಿ ಮಹಾರಾಜ್. ಧರ್ಮದ ಮರುಸ್ಥಾಪಕ ಶಿವಾಜಿ ಮಹಾರಾಜರಾದರೆ,ಧರ್ಮ ರಕ್ಷಕ ಸಾಂಭಾಜಿ ಮಹರಾಜ್.

ವೀರ ಸಾಂಭಾಜಿ ಮಹಾರಾಜರು ಶಿವಾಜಿ ಮಹಾರಾಜ ಮತ್ತು ಸಾಯಿಭಾಯಿ ದಂಪತಿಯ ಮಗನಾಗಿ 14ನೇ ಮೇ 1657ರಲ್ಲಿ ಪುಣೆಯ ಪುರ೦ಧರಘಡನಲ್ಲಿ ಜನ್ಮತಾಳಿದರು.

“ಸಾಂಭಾಜಿ” ಮಹಾರಾಜರಿಗೆ ತಂದೆಯ ಧರ್ಮನಿಷ್ಠೆ ಗುರುಭಕ್ತಿಯೆ ಆದರ್ಶ. ವೀರ ಪರಾಕ್ರಮಿಯಾದ ತಂದೆಯ ಜೊತೆ ಬೆಳೆದ ಸಾಂಭಾಜಿ ಮಹಾರಾಜರ ಧೈರ್ಯ ತಿಳಿಯೊದು ಇಂತಹ ಸಮಯದಲ್ಲಿಯೇ ಒಮ್ಮೆ ಶಿವಾಜಿ ಮಹಾರಾಜರು ಮತ್ತು ಚಿಕ್ಕ ಬಾಲಕ ಸಾಂಭಾಜಿ ಮಹಾರಾಜರು ಔರಂಗ್ ಜೇಬನ ಆಸ್ಥಾನದಲ್ಲಿ ನಿಂತಿರೋ ಸಮಯ ಔರಂಗ್ ಜೇಬನ ಆಗಮನವಾಯಿತು. ಎಲ್ಲರೂ ತಲೆ ತಗ್ಗಿಸಿ ವಂದಿಸೊದು ಅಲ್ಲಿಯ ಸಂಪ್ರದಾಯ ಇದನ್ನು ತಿರಸ್ಕರಿಸಿದ ಶಿವಾಜಿ ಮಹಾರಾಜರು ಮತ್ತು ಪುತ್ರ ಸಾ೦ಭಾಜಿ ಎದೆಯೆತ್ತಿ ನಿಂತರು. ಇದನ್ನು ವಿರೋಧಿಸಿದ ಆಸ್ಥಾನದ ಮಂತ್ರಿ ರಾಜನಿಗೆ ವಂದಿಸೊದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ. ಅದಕ್ಕೆ ಶಿವಾಜಿ ಮಹಾರಾಜರ ಉತ್ತರ ಅದ್ಭುತವಾಗಿತ್ತು. ನಮಗೆ ಶಿವಾಜಿ ಮಹಾರಾಜರು ಇಷ್ಟ ಆಗೊದು ಇದೇ ಕಾರಣಕ್ಕಾಗಿಯೇ. ರಾಜನಿದ್ದರೆ ಅದು ನಿಮಗೆ ನನಗಲ್ಲ ನಾನು ಕೂಡ ನಿಮ್ಮ ರಾಜನ ತರ ಸ್ವತಂತ್ರ ರಾಜನೇ ಎಂದರು.

ಆಗ ಅಲ್ಲಿನ ಸಂದರ್ಭ ವಾಗ್ವಾದಕ್ಕೆ ಹೋಗಿ ಶಿವಾಜಿ ಮತ್ತು ಬಾಲಕ ಸಾಂಭಾಜಿಯ ಗೃಹ ಬಂಧನವಾಯಿತು. ಇದನ್ನು ನೋಡಿದ ಅಲ್ಲಿನ ಸೇವಕರು “ಸಂಭಾಜಿಗೆ” ಮಗು ಭಯವಾಗುತ್ತಿದೆಯಾ ಎಂದು ಕೇಳಿದ್ದಕ್ಕೆ ಶಿವಾಜಿ ಮಹಾರಾಜನ ಮಗ ನಾನು ನನಗೆ ಭಯವೇ???ಅನ್ನೋ ಉತ್ತರ ಕೊಟ್ಟ ಧೀರ ಸಾಂಭಾಜಿ.

ಸಾಂಭಾಜಿ ಮಹಾರಾಜರು ವಯಸ್ಕರಾದಾಗ ಅವರ
ಎತ್ತರ 7.5ಅಡಿ, ತೂಕ 170ಕೆಜಿ, ಎದೆಯ ಸುತ್ತಳತೆ 75, ಅವರು ಯದ್ದದಲ್ಲಿ ಉಪಯೋಗಿಸಿದ ಖಡ್ಗದ ಎತ್ತರ 4 ಅಡಿ, ಆ ಖಡ್ಗದ ತೂಕ ಬರೊಬ್ಬರಿ 65 ಕೆಜಿ, ಅವರ ಮಾಡುತ್ತಿದ್ದ ಊಟದ ಪದ್ಧತಿ 12, ರೊಟ್ಟಿ 2 ಲಿಟರ್ ಹಾಲು, ಇವರ ಸೈನ್ಯದಲ್ಲಿದ್ದ 500 ಜನರ ಸೈನ್ಯ ಎದುರಾಳಿಯ 10,000 ಜನರನ್ನು ಕೊಲ್ಲುವ ಶಕ್ತಿ ಹೊಂದಿತ್ತು.

 

ಇವರು ಹೋರಾಡಿದ 128 ಯುದ್ಧಗಳಲ್ಲಿ ಕನಿಷ್ಠ ಒಂದೂ ಯುದ್ಧವನ್ನು ಸೊಲದೇ ಅಜೇಯನಾಗಿ ತಂದೆಯ ಮತ್ತು ಹಿಂದು ಧರ್ಮದ ಕೀರ್ತಿಯನ್ನು ಉತ್ತುಂಗಕ್ಕೆ ಹಾರಿಸಿದ ರೂವಾರಿ “ಧರ್ಮರಕ್ಷಕ ಸಾಂಭಾಜಿ ಮಹಾರಾಜರು”.

ಸಾಂಭಾಜಿ ಮಹಾರಾಜರು ಕಾಡಿನಲ್ಲಿ ಎದುರಾದ ವ್ಯಾಘ್ರ(ಸಿಂಹ)ದ ಬಾಯಿಯನ್ನು ಸೀಳಿದ ಪರಾಕ್ರಮಿ ಸೋಲನ್ನರಿಯದ ಸರದಾರ.

ಮೊಗಲರ ಆಡಳಿತವಿದ್ದಾಗ ದೆಹಲಿ ಕೆಂಪುಕೋಟೆಯ ಮೇಲೆ ಮೊದಲು “ಭಗವಾ ಧ್ವಜ” ಹಾರಿಸಿದ ಈ ವೀರ ಕೇಸರಿ, ಧರ್ಮ ನಿಷ್ಠೆ ಗೆ ಇವರ ತಂದೆಯೆ ಭದ್ರ ಬುನಾದಿ.

ಕುತಂತ್ರಕ್ಕೆ ಒಳಗಾಗಿ ಮೋಸದಿಂದ ಸಾಂಭಾಜಿ ಮಹಾರಾಜರನ್ನು ಬಂಧಿಸಿದ ನಿಜಾಮ ನಿರಂತರ ಒಂದು ತಿಂಗಳ ಘೋರವಾಗಿ ಶಿಕ್ಷಿಸಿದ ದಿನಕ್ಕೆ ಒಂದು ಬೆರಳುಗಳನ್ನು ಕಿತ್ತೆಸೆಯುತ್ತಿದ್ದ. ಬೆರಳುಗಳು ಮುಗಿದ ಮೇಲೆ ಕೈ ಆಮೆಲೆ ಕಾಲು ಹೀಗೆ ದಿನಾಲು ಹಿಂಸಿಸುತ್ತಿದ್ದ. ಜೊತೆಗೆ ಮುಸ್ಲಿಂ ಧರ್ಮಕ್ಕೆ ಮತಾ೦ತರವಾಗು ನಿನಗೆ ನಿನ್ನ ರಾಜ್ಯ ಬಿಟ್ಟು ಕೊಡ್ತಿನಿ ಅಂತ ಆಮಿಷ ಒಡ್ಡುತ್ತಿದ್ದ. ಆದರೆ ಇದಕ್ಕೆ ಸಾಂಭಾಜಿ ಮಹಾರಾಜರ ಉತ್ತರ “ನನ್ನಲ್ಲಿ ಹರಿಯುತ್ತಿರೊದು ಶಿವಾಜಿಯ ರಕ್ತ ಅದು ಎಂದಿಗೂ ತನ್ನ ಧರ್ಮ ಬಿಟ್ಟು ಇನ್ನೂಂದಕ್ಕೆ ಶರಣಾಗಲ್ಲ. ನಿನ್ನ ರಾಜ್ಯ ಬಿಟ್ಟು ಕೊಟ್ಟರು ನಾನು ನಿನ್ನ ಧರ್ಮಕ್ಕೆ ಬರಲ್ಲ. ಹೀಗೆ ಹೆಳುತ್ತ ಒಂದು ತಿಂಗಳವರೆಗೂ ಜೀವ ಸವೆಸಿದ ಹೊರತು ಧರ್ಮ ಬಿಡಲಿಲ್ಲ. 11 ನೇ ಮಾರ್ಚ್ 1689 ರಲ್ಲಿ ತಮ್ಮ ಕೊನೆ ಉಸಿರೆಳೆದರು.

ಆಗಿನ್ನು ಸಾಂಭಾಜಿ ಮಹಾರಾಜರ ವಯಸ್ಸು ಬರೀ 31 ವರ್ಷ, ಅವರ ಕಠಿಣ ದಿನಗಳನ್ನು ಮಹಾರಾಷ್ಟ್ರದ ಜನತೆ ಇನ್ನೂ ಮರೆಯದೆ ಆ ಒಂದು ತಿಂಗಳ ಮಟ್ಟಿಗೆ ಆಹಾರ ಮುಟ್ಟದೆ, ಕಾಲಿಗೆ ಚಪ್ಪಲಿ ಧರಿಸದೇ, ಕಠಿಣ ವೃತಗೈಯುತ್ತಾರೆ.

ಇಂತಹ ಅಪ್ರತಿಮ ನಾಯಕ ವೀರ ಕೇಸರಿಗೆ ನನ್ನ ಅನಂತ ಕೋಟಿ ನಮನ.

ಜೈ ಹಿಂದವಿ ಸ್ವರಾಜ್ಯ

– ಶಾರ್ವರಿ ಸೊಲ್ಲಾಪುರ

  • 67
    Shares