ಈಗಲೂ ಮೋದಿಜಿ ಅತ್ಯಂತ ಪ್ರಖ್ಯಾತ ವ್ಯಕ್ತಿಯಾ ಹೀಗೆಂದು ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್” ಬಹಿರಂಗ ಪಡಿಸಿದಿಯಾ?

ನೋಟ್ ಬ್ಯಾನ್ ಮತ್ತು GST ನಂತರ ಮೋದಿಯವರ ವರ್ಚಸ್ಸು ಕಡಿಮೆ ಆಗಿದೆ ಎಂಬಂತಹ ಮಾತುಗಳು ಕೇಳಿ ಬಂದಿದ್ದವು. ಆದರೆ ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್” ಬಹಿರಂಗ ಪಡಿಸಿದ ವರದಿಯ ಪ್ರಕಾರ

ಭಾರತೀಯ ರಾಜಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರೇ ಅತ್ಯಂತ ಪ್ರಖ್ಯಾತ ವ್ಯಕ್ತಿ ಎಂದು ಸಾಬೀತಾಗಿದೆ.

ವಿಶ್ವ ವಿಖ್ಯಾತ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್” ಬಹಿರಂಗ ಪಡಿಸಿದ ವರದಿಯ ಪ್ರಕಾರ
ದೇಶದ 88 % ಜನರು ಪ್ರಧಾನಿ ಮೋದಿಗೆ ಬೆಂಬಲವಾಗಿದ್ದಾರೆ ಎನ್ನಲಾಗಿದೆ.

ಮೋದಿ ಸರ್ಕಾರದ ಹಲವು ಆರ್ಥಿಕ ಕ್ರಮಗಳ ಬಗೆಗಿನ ಪರ ವಿರೋಧದಗಳಿದ್ದವು. ಅದರ ನಡುವೆಯೇ ಈ ಸಮೀಕ್ಷೆ ಮೋದಿಯವರ ವರ್ಚಸ್ಸನ್ನು ಮತ್ತೆ ಸಾಬೀತು ಮಾಡಿದೆ.

ಸಮೀಕ್ಷೆಯ ಪ್ರಕಾರ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ದೆಹಲಿ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಿದ್ದು “2015 ರಿಂದೀಚೆಗೆ, ಭಾರತದ ಉತ್ತರದಲ್ಲಿ ಮೋದಿ ಜನಪ್ರಿಯತೆ ಬದಲಾಗಿಲ್ಲ ಎನ್ನಲಾಗಿದೆ.

ಕರ್ನಾಟಕದಲ್ಲೂ ಮೋದಿಜಿಯವರ ಜನಪ್ರಿಯತೆ ಹೆಚ್ಚುತ್ತಿದೆ ಎನ್ನುವುದು ಈ ಸಮೀಕ್ಷೆಯಿಂದ ಸಾಬೀತಾಗಿದೆ.

ಇದರ ಜೊತೆ ಜೊತೆಗೆ ಅಮೆರಿಕನ್ ಮೂಡಿಸ್ ಎಂಬ ಕ್ರೆಡಿಟ್ ಸಂಸ್ಥೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಏರಿಕೆಯಾಗಿದೆ ಎಂದು ವರದಿ ಬಹಿರಂಗ ಪಡಿಸಿದೆ. ನೋಟ್ ಬ್ಯಾನ್ ಮತ್ತು GSTಯಿಂದ ಈ ದಾಖಲೆಯ ಬೆಳವಣಿಗೆಯಾಗಿದೆ ಎನ್ನುವುದು ನಿಜ. ಮೋದಿಯವರ ಪರ ಭಾರತದ 88% ಜನ ನಿಂತಿರುವುದು,ಮೋದಿಯವರ ಮೇಲೆ ಭರವಸೆ ಇಟ್ಟಿರುವುದು ಈ ವರದಿಯಿಂದ ಸಾರ್ಥವಾಗಿದೆ.

ಅಮೆರಿಕಾ ಮೂಲದ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ನ ವರದಿಯ ಪ್ರಕಾರ ಭಾರತೀಯ ರೂಪಾಯಿ ಕಳೆದ 4 ವರ್ಷಗಳಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಏರಿಕೆಯಾಗಿದೆ. ಷೇರ್ ಮಾರ್ಕೆಟ್ ನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 69.63 ಪೈಸೆ ಏರಿಕೆ ಕಂಡು ಬಂದಿದೆ. ಅಂದರೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 64.62 ರೂಪಾಯಿಗಳಿಗೆ ತಲುಪಿದೆ.

ಇದು ಕಳೆದ ನಾಲ್ಕು ವರ್ಷಗಳಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ದಾಖಲೆಯ ಏರಿಕೆಯಾಗಿದೆ‌ ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕಳೆದ ನವೆಂಬರ್ ನಲ್ಲಿ ಭ್ರಷ್ಟಾಚಾರದ ಮತ್ತು ಕಪ್ಪು ಹಣವನ್ನು ತಕ್ಕ ಮಟ್ಟಿಗೆ ಕಡಿವಾಣ ಹಾಕಲು ದೇಶದ ಪ್ರಮುಖ ಚಲಾವಣೆಯಲ್ಲಿದ್ದ 1000 ಮತ್ತು 500 ರೂ ನೋಟ್ ಗಳು ಇನ್ನು ಮುಂದೆ ಕಾನೂನು ಬಾಹಿರ ಎಂದು ಘೋಷಿಸಿದ್ದರು. ಪ್ರಧಾನಿ ಮೋದಿಯ ಈ ಕ್ರಮವನ್ನು ಪ್ರಮುಖ ಅರ್ಥಶಾಸ್ತ್ರಜ್ಞರು ಬೆಂಬಲಿಸಿದ ಬೆನ್ನಲ್ಲೇ ಇದೀಗ ಅಮೆರಿಕಾದ ಖ್ಯಾತ ಅರ್ಥಶಾಸ್ತ್ರ ಮತ್ತು ನೊಬೆಲ್ ಪ್ರಶಸ್ತಿಯನ್ನು ಪಡೆದ ರಿಚರ್ಡ್ ಥಾಲೇರ್ ಅವರು “ಭ್ರಷ್ಟಾಚಾರವನ್ನು ಕಡಿಮೆ ಮಾಡಲು ನೋಟ್ ಬ್ಯಾನ್ ಅತ್ಯುತ್ತಮ ಆರಂಭ” ಎನ್ನುವ ಮೂಲಕ ನೋಟ್ ಬ್ಯಾನ್ ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧವಾದ ಒಂದು ಪ್ರಬಲ ಕ್ರಮವಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಅಂದ್ರೆ ಅರ್ಥವಾಯ್ತಲ್ವಾ ಮೋದಿಯವರ ವರ್ಚಸ್ಸು ಜಾಸ್ತಿಯಾಗಿದೆ ಹೊರತು ಕಡಿಮೆ ಆಗಿಲ್ಲ. ಜಗತ್ತಿನ ಖ್ಯಾತ ಅರ್ಥಶಾಸ್ತ್ರಜ್ಞರು, ನೊಬೆಲ್ ಪ್ರಶಸ್ತಿ ಪುರಸ್ಕೃತರು,ಮೂಡೀಸ್ ಸಂಸ್ಥೆಯ ವರದಿಗಳು ಮೋದಿಯವರ ವರ್ಚಸ್ಸು ಜಾಸ್ತಿಯಾಗಿದ್ದನ್ನು ಬಹಿರಂಗ ಪಡಿಸಿವೆ.

-ಸೌಮ್ಯ ಪಾಟೀಲ್