ಅಯೋಧ್ಯೆಯ ರಾಮ ಮಂದಿರ ವಿವಾದಕ್ಕೆ ಮತ್ತೊಂದು ಟ್ವಿಸ್ಟ್..!!

ಹಿಂದುಗಳ ಧಾರ್ಮಿಕ ನಂಬಿಕೆಯ ಪ್ರಕಾರ ಮೋಕ್ಷ ನೀಡುವ ಪವಿತ್ರ 7 ಕ್ಷೇತ್ರಗಳಲ್ಲಿ ಅಯೋಧ್ಯೆಗೆ ಮೊದಲ ಸ್ಥಾನ. ಸರಯೂ ನದಿ ತೀರದಲ್ಲಿರುವ ಭವ್ಯನಗರ ಅಯೋಧ್ಯೆ. ಹಿಂದುಗಳ ಆರಾಧ್ಯದೇವ ,ಮರ್ಯಾದಾ ಪುರುಷೋತ್ತಮನ ಜನ್ಮಭೂಮಿ ಅಯೋಧ್ಯೆ. 14-15 ನೇ ಶತಮಾನದಲ್ಲಿ ರಾಜ ವಿಕ್ರಮಾದಿತ್ಯನು 7 ಅಂತಸ್ತಿನ ಭವ್ಯ ಶ್ರೀರಾಮ ಮಂದಿರವನ್ನು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಕಟ್ಟಿಸಿ ಸಮಾಜಕ್ಕೆ ಅರ್ಪಿಸಿ , ಪ್ರಭು ಶ್ರೀರಾಮನ ನೆನಪನ್ನು ಶಾಶ್ವತವಾಗಿಸಿದ.

15 ನೇ ಶತಮಾನದಲ್ಲಿ ಭಯೋತ್ಪಾದಕ ಬಾಬರ್ ನ ಕೆಟ್ಟ ಕಣ್ಣು ಭಾರತದ ಮೇಲೆ ಬಿತ್ತು. ಭಾರತಕ್ಕೆ ಬಂದು ದಾಳಿಮಾಡಿ ಮೊಗಲ ದೊರೆ ಎನಿಸಿಕೊಂಡ. ಆ ಭಯೋತ್ಪಾದಕನ ಕೆಟ್ಟ ಕಣ್ಣು ಏಳು ಅಂತಸ್ತಿನ ಭವ್ಯ ರಾಮಮಂದಿರದ ಮೇಲೆ ಬಿತ್ತು .ಹಿಂದುಗಳ ಆರಾಧ್ಯ ದೇವ ಶ್ರೀರಾಮನ ಮಂದಿರ ಕೆಡವಿದರೆ ಹಿಂದೂ ಧರ್ಮವೇ ನಾಶವಾಗುತ್ತೆ ಎಂದು ಭಾವಿಸಿ 1528ರಲ್ಲಿ ತನ್ನ ಸೇನೆಯನ್ನ ಮೀರ್ ಬಾಕಿ ನೇತೃತ್ವದಲ್ಲಿ ಮಂದಿರದ ಮೇಲೆ ದಾಳಿ ಮಾಡಿಸಿ ಕೆಡವಿದ. ಅದೇ ಕೆಡವಿದ ಮಂದಿರದ ಅವಶೇಷಗಳಿಂದ ಮಸೀದಿಯನ್ನು ಕಟ್ಟಿಸಿದ .

ಇದು ರಾಮ ಮಂದಿರದ ಇತಿಹಾಸ. ಇಲ್ಲಿ ಇನ್ನೊಂದು ಮುಖ್ಯವಾದ ವಿಚಾರವನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕು. ಬಾಬರ್ ವಿದೇಶಿ ದಾಳಿಕೋರ. ಭಾರತದ ಮೇಲೆ ದಾಳಿ ಮಾಡಿ ರಾಮ ಮಂದಿರವನ್ನು ದ್ವಂಸ ಮಾಡಿ ಮಸೀದಿ ಕಟ್ಟಿದ. ಅಂದ್ರೆ ಬಾಬರ್ ಒಬ್ಬ ಭಯೋತ್ಪಾದಕ. ಅವನ ಹೆಸರಿನಲ್ಲಿ ಭಾರತದಲ್ಲಿ ಮಸೀದಿ ಬೇಕಾ? ಅವನ ಹೆಸರಿನಲ್ಲಿ ಮಸೀದಿ ಬೇಕು ಎನ್ನುವವರನ್ನು ಪ್ರಶ್ನಿಸೋದು ಬೇಡವೇ?

ಬಾಬರ್ ಮಧ್ಯ ಏಶಿಯಾದ ಉಜ್ಬೇಕಿಸ್ತಾನದವನು. ಬಾಬರ್, ಮಧ್ಯ ಏಷ್ಯಾದ ಪ್ರಸಿದ್ಧ ದಾಳಿಕೋರರ ಟರ್ಕ್ ಮೂಲದ ತೈಮೂರ ಮತ್ತು ಮೊಗಲ್ ಮೂಲದ ಚೆಂಗಿಸ್ ಖಾನ್‌ರ ರಕ್ತಸಂಬಂಧಿಯಾಗಿದ್ದ.ಇದೆಲ್ಲಾ ಗೊತ್ತಿದ್ರೂ ಆ ವಿದೇಶಿ ದಾಳಿಕೋರನ ಮಸೀದಿ ಬೇಕು ಅಂತಾರಲ್ಲ ಅವರ ದೇಶಪ್ರೇಮದ ಬಗ್ಗೆ ಪ್ರಶ್ನಿಸಬೇಕಾಗಿದೆ.

1528ರ ನಂತರ 1934ರವರೆಗೆ ನಾಲ್ಕು ಶತಮಾನಗಳ ಕಾಲ 76 ಬಾರಿ ರಾಮ ಮಂದಿರಕ್ಕಾಗಿ ಹಿಂದುಗಳು ಕಾದಾಟ ಮಾಡುತ್ತಲೇ ಬಂದಿದ್ದಾರೆ ಆದರೆ ವಿವಾದ ಮಾತ್ರ ಮುಗಿದಿಲ್ಲ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆಯಾದರೂ ರಾಮಮಂದಿರ ನಿರ್ಮಾಣವಾಗುತ್ತೆ ಅಂತ ಹಿಂದುಗಳು ನಂಬಿದ್ದರು,ಅದರಲ್ಲೂ ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಚುಕ್ಕಾಣಿ ಹಿಡಿದಮೇಲಂತೂ ರಾಮ ಮಂದಿರ ಖಂಡಿತ ಸಧ್ಯದಲ್ಲೇ ನಿರ್ಮಾಣವಾಗುತ್ತೆ ಅಂತ ಭರವಸೆ ಮೂಡಿತ್ತು.

ಆದರೆ ರಾಮ ಮಂದಿರ ವಿವಾದಕ್ಕೆ ಮತ್ತೆ ಅಡ್ಡಿಯಾಗಿದೆ.ಬಾಬರಿ ಮಸೀದಿ ವಿವಾದವನ್ನು ಬಗೆ ಹರಿಸುವ ನಿಟ್ಟಿನಲ್ಲಿ ಆರ್ಟ್‌ ಆಫ್ ಲಿವಿಂಗ್‌ನ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಗುರೂಜಿಯವರು ನವೆಂಬರ್ 15ರಂದು ಉತ್ತರ ಪ್ರದೇಶಕ್ಕೆ ಹೋಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೊಂದಿಗೆ ಮಾತುಕತೆ ನಡೆಸಿದ್ದರು. ತರುವಾಯ ಅಂದರೆ ಇವತ್ತು ಅಯೋಧ್ಯೆಗೆ ಹೋಗಿ ಅಲ್ಲಿ ಮಾತುಕತೆ ನಡೆಯುವುದಿತ್ತು. ಆದರೆ ಈಗ ಬಾಬರಿ ಮಸೀದಿಗೆ ಸಂಬಂಧಿಸಿದ ಜಾಗದ ಮೇಲಿನ ಹಕ್ಕನ್ನು ಮುಸ್ಲಿಮರು ಮಾತ್ರಕ ಬಿಟ್ಟುಕೊಡುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಮ್‌ ವೈಯಕ್ತಿಕ ಕಾನೂನು (ಎಐಎಂಪಿಎಲ್‌ಬಿ) ಮತ್ತು ಅಖೀಲ ಭಾರತ ಬಾಬರಿ ಮಸೀದಿ ಕ್ರಿಯಾಸಮಿತಿ (ಎಐಎಂಬಿಎಸಿ) ಹೇಳಿವೆ. ಇದರಿಂದ ಅಯೋಧ್ಯೆಯ ವಿವಾದ ಮತ್ತಷ್ಟು ಜಟಿಲಗೊಂಡಿದೆ.

ಎಐಬಿಂಎಸಿ ಸಂಚಾಲಕ ಹಾಗೂ ಎಐಎಂಪಿಎಲ್‌ಬಿ ಕಾರ್ಯದರ್ಶಿ ಜಾಫ್ರೆ ಯಾಬ್‌ ಜಿಲಾನಿ ಹೇಳುವಂತೆ ಶ್ರೀ ಶ್ರೀ ರವಿಶಂಕರ್‌ ಅವರಿಂದ ತಮಗೆ ಈ ತನಕ ಯಾವುದೇ ಪ್ರಸ್ತಾವ ಅಥವಾ ಸಂಧಾನ ಸೂತ್ರ ಬಂದಿಲ್ಲ. ಅವರು ಬಂದರೂ ಕೂಡಾ ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಜಾಗದ ಮೇಲಿರುವ ಕಾನೂನು ಹಕ್ಕನ್ನು ಮುಸ್ಲಿಮರು ಬಿಟುಕೊಡಲು ಅಥವಾ ಒಪ್ಪಿಸಲು ಸಿದ್ಧರಿಲ್ಲ ಎಂದು ಸ್ಪಷ್ಠವಾಗಿ ಹೇಳಿದ್ದಾನೆ.

-ಶಾರ್ವರಿ ಸೊಲ್ಲಾಪುರ್