ಸದ್ಯದಲ್ಲೇ ಮೋದಿಜಿಯ ಶಪಥ ಪೂರ್ತಿಗೊಳ್ಳಲಿದೆ.!! ಹಾಗಾದರೆ ಯಾವುದು ಆ ಶಪಥ..??

ಸದ್ಯದಲ್ಲೇ ಮೋದಿಜಿಯ ಶಪಥ ಪೂರ್ತಿಗೊಳ್ಳಲಿದೆ…!! ಸ್ವಿಸ್ ಖಾತೆಯಲ್ಲಿರುವ ಕೋಟಿ ಗಟ್ಟಲೆ ಹಣ 2019 ರ ಒಳಗೆ ಭಾರತದ ಕೈ ಸೇರಲಿದೆ…!

ಮೋದಿಜಿ ಕಪ್ಪು ಹಣ ವಾಪಸ್ಸು ತರಲು ಏನೂ ಮಾಡುತ್ತಿಲ್ಲ ಎಂದು ಬೊಗಳುತ್ತಿದ್ದವರಿಗೆ ಸಧ್ಯದಲ್ಲೇ ಉತ್ತರ ಸಿಗಲಿದೆ. ಹೌದು ಸಧ್ಯದಲ್ಲೇ ವಿದೇಶದಲ್ಲಿ ಅಕ್ರಮವಾಗಿ ಗಳಿಸಿ ಇಟ್ಟ ಹಣ ಭಾರತಕ್ಕೆ ಬರಲಿದೆ. ಮೋದಿಯವರು ಅಧಿಕಾರ ಸ್ವೀಕರಿಸಿದಾಗ ಮಾಡಿದ ಶಪಥದಂತೆ ತೆರೆಯ ಮರೆಯಲ್ಲಿ ಸದ್ದಿಲ್ಲದೆ ಯೋಜನೆ ಮಾಡಿ ಸ್ವಿಟ್ಜರ್ಲೆಂಡ್‌‌ ಸರ್ಕಾರದ ಜೊತೆ ಮಾತನಾಡಿ ಒಂದು ಅನುಮೋದನೆ ಮಾಡಲು ತಯಾರಿ ನಡೆಸಿದೆ.

ನೋಟ್ ಬ್ಯಾನ್ ಮಾಡಿ ಬಹುತೇಕ ಕಪ್ಪು ಕುಳಗಳನ್ನು ಹಿಡಿದದ್ದಾಯ್ತು ಜೊತೆ ಜೊತೆಗೆ ಬೇನಾಮಿ ಆಸ್ತಿ ಹೊಂದಿರುವವನ್ನು ಹಿಡಿಯಲು ಯೋಜನೆ ತಯಾರಿ ನಡೆದಿದೆ. ಇನ್ನು ಭಾರತದ ಹೊರಗಡೆ ಈ ಕಪ್ಪು ಕುಳಗಳು ಇಟ್ಟಿರುವ ಹಣವನ್ನು ಭಾರತಕ್ಕೆ ತರಲು ಮೋದಿ ಶಪಥ ಮಾಡಿದ್ದರು. ಮೋದಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಸ್ವಿಸ್ ಬ್ಯಾಂಕ್ ನಲ್ಲಿ ಯಾರು ಯಾರು ಎಷ್ಟೆಷ್ಟು ಕಪ್ಪು ಹಣವನ್ನು ಇಟ್ಟಿದ್ದಾರೋ ಅವೆಲ್ಲವನ್ನೂ ಭಾರತಕ್ಕೆ ತರುತ್ತೇನೆಂದು ನರೇಂದ್ರ ಮೋದಿಯವರು ಶಪಥ ಮಾಡಿದ್ದರು.

ಶಪಥ ಮಾಡಿದಂತೆ ಸದ್ದಿಲ್ಲದೆ ಆ ಕಾರ್ಯವನ್ನು ಮೋದಿಯವರು ನಡೆಸಿದ್ದರು. ಸ್ವಿಟ್ಜರ್ಲೆಂಡ್‌‌ ನ ಸ್ವಿಸ್ ಬ್ಯಾಂಕಿನಲ್ಲಿ ಭಾರತದ ಕಪ್ಪು ಕುಳಗಳು ಇಟ್ಟಿರುವ ಹಣವನ್ನು ಹೇಗೆ ತರಬೇಕು ಎಂಬ ಯೋಜನೆಯನ್ನು ಸದ್ದಿಲ್ಲದೆ ಹಾಕಿದ್ದರು. ಅದಕ್ಕೆ ಏನೆಲ್ಲಾ ಪ್ರಯತ್ನ ಮಾಡಬೇಕು ಎಲ್ಲವನ್ನು ರಹಸ್ಯವಾಗಿಯೇ ಮಾಡಿದ್ದರು. ಈಗ ಸ್ವಿಟ್ಜರ್ಲೆಂಡ್‌‌ ಭಾರತದ ಕಪ್ಪು ಕುಳಗಳು ಹೊಂದಿರುವ ಖಾತೆಯ ಸಂಪೂರ್ಣ ಮಾಹಿತಿಯನ್ನು ಕೊಡಲು ಮುಂದಾಗಿದೆ.

ಸ್ವಿಟ್ಜರ್ಲೆಂಡ್‌‌ ನ ಮೇಲ್ಮನೆಯ ಉನ್ನತ ಸಂಸತ್ ಸಮಿತಿಯೊಂದು Automatic Exchange of Information (AEOI) ಒಪ್ಪಂದಕ್ಕೆ ಒಪ್ಪಿಗೆ ನೀಡಿದೆ. ಅಂದರೆ ಈ ಒಪ್ಪಂದದ ಪ್ರಕಾರ ಭಾರತ ಸರಕಾರಕ್ಕೆ ಸ್ವಿಟ್ಜರ್ಲೆಂಡ್‌‌ ನ ಸರಕಾರ ಸದಾಕಾಲ ಕಪ್ಪು ಹಣ ಇಟ್ಟವರ
1)ಹೆಸರು,
2)ಅಡ್ರೆಸ್ ,
3)ಅಕೌಂಟ್ ನಂಬರ್ ,
4)ಅಕೌಂಟ್ ನಲ್ಲಿರುವ ಹಣದ ಮೊತ್ತ ,
5)ಜನ್ಮ ದಿನಾಂಕ,
6)Tax identification number ಇತ್ಯಾದಿಗಳನ್ನು ಹಸ್ತಾಂತರಿಸುತ್ತದೆ.

ಸ್ವಿಸ್ ಪಾರ್ಲಿಮೆಂಟ್ ಮೇಲ್ಮನೆ ಕೊಠಡಿಯ ಅನುಮೋದನೆಗಾಗಿ ಪ್ರಸ್ತಾಪವನ್ನು ಈಗ ನವೆಂಬರ್ 27 ರಿಂದ ಚಳಿಗಾಲದ ಅಧಿವೇಶನದಲ್ಲಿ ಕೌನ್ಸಿಲ್ ಆಫ್ ಸ್ಟೇಟ್ಸ್ಗೆ ಸಲ್ಲಿಸಲಾಗುತ್ತದೆ. ಭಾರತದ ಸರ್ಕಾರದ ಕೋರಿಕೆಯ ಮೇರೆಗೆ ಸ್ವಿಟ್ಜರ್ಲೆಂಡ್ನ ಪ್ರಮುಖ ಸಂಸದೀಯ ಸಮಿತಿಯು ಎರಡು ದೇಶಗಳ ನಡುವೆ ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದವನ್ನು ಅನುಮೋದಿಸಿದೆ.

ಇಲ್ಲಿಯವರೆಗೂ ಸ್ವಿಸ್ ಖಾತೆಯ ಬಗ್ಗೆ ಏಕೆ ಮಾಹಿತಿ ಸಿಕ್ಕಿಲ್ಲವೆಂದರೆ ವೈಯಕ್ತಿಕ ಕಾನೂನಿನ ಉಲ್ಲಂಘನೆ ಸಂಭವಿಸುವ ಸಾಧ್ಯತೆಗಳಿರುವುದರಿಂದ ಮಾಹಿತಿ ಸಿಕ್ಕಿರಲಿಲ್ಲ.
‎ಹೀಗಾಗಿ ಭಾರತ ಸರ್ಕಾರ ಸ್ವಿಸ್ ಪ್ರಸ್ತಾವನೆಯನ್ನು ಈಗ ಸ್ವಿಸ್ ಪಾರ್ಲಿಮೆಂಟ್ ಮೇಲ್ಮನೆ ಕೊಠಡಿಯ ಅನುಮೋದನೆಗಾಗಿ, ಕೌನ್ಸಿಲ್ ಆಫ್ ಸ್ಟೇಟ್ಸ್, ನವೆಂಬರ್ 27 ರಿಂದ ಚಳಿಗಾಲದ ಅಧಿವೇಶನದಲ್ಲಿ ಸಲ್ಲಿಸುತ್ತದೆ.

ಈಗ ಸಲ್ಲಿಸಿರುವ ಒಪ್ಪಂದದ ಪ್ರಕಾರ ಒಂದು ಚೌಕಟ್ಟಿನಡಿಯಲ್ಲಿ ವಿನಿಮಯ ಮಾಡಬಹುದಾದ ಮಾಹಿತಿಯು ಖಾತೆ ಸಂಖ್ಯೆ, ಹೆಸರು, ವಿಳಾಸ, ಹುಟ್ಟಿದ ದಿನಾಂಕ, ತೆರಿಗೆ ಗುರುತಿನ ಸಂಖ್ಯೆ, ಆಸಕ್ತಿ, ಲಾಭಾಂಶ, ವಿಮಾ ಪಾಲಿಸಿಗಳ ರಸೀದಿಗಳು, ಖಾತೆಗಳಲ್ಲಿ ಕ್ರೆಡಿಟ್ ಸಮತೋಲನ ಮತ್ತು ಹಣಕಾಸಿನ ಆಸ್ತಿಗಳ ಮಾರಾಟದಿಂದ ಬಂದ ಆದಾಯಗಳ ವರದಿಯನ್ನು ಕೊಡುತ್ತದೆ.

ಈ ವಿನಿಮಯದ ಪ್ರಕಾರ ಒಬ್ಬ ಭಾರತೀಯ ಸ್ವಿಟ್ಜರ್ಲೆಂಡ್‌‌ ಲ್ಲಿ ಬ್ಯಾಂಕ್ ಖಾತೆ ಹೊಂದಿದ್ದರೆ ಸಂಬಂಧಪಟ್ಟ ಬ್ಯಾಂಕ್ ಅಲ್ಲಿ ಹಣಕಾಸು ಖಾತೆ ಡೇಟಾವನ್ನು ಅಧಿಕಾರಿಗಳಿಗೆ ಬಹಿರಂಗಪಡಿಸುತ್ತದೆ. ಸ್ವಿಸ್ ಪ್ರಾಧಿಕಾರವು ಸ್ವಯಂಚಾಲಿತವಾಗಿ ಮಾಹಿತಿಯನ್ನು ಭಾರತ ಸರ್ಕಾರಕ್ಕೆ ಒದಗಿಸುತ್ತದೆ.

ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ಆರ್ಥಿಕ ಖಾತೆಗಳ ಮೇಲೆ ಸ್ವಯಂಚಾಲಿತ ಮಾಹಿತಿ ವಿನಿಮಯವನ್ನು ಮುಂದಿನ ವರ್ಷದಿಂದ ಜಾರಿಯಾಗುತ್ತದೆ. ಇದರ ಕುರಿತಾಗಿ ಸೆಪ್ಟೆಂಬರ್‌ನಲ್ಲಿ ನ್ಯಾಷನಲ್ ಕೌನ್ಸಿಲ್ ಪಾರ್ಲಿಮೆಂಟ್ ಲೋಯರ್ ಹೌಸ್ ಅನುಮೋದಿಸಿದೆ.

ಭಾರತ ಸರ್ಕಾರ ಈ ತಯಾರಿಯನ್ನು ನಡೆಸಿದ್ದಾಗ ಅನೇಕರು ವಿರೋಧ ಮಾಡಿದ್ದರು ಕಾರಣವಿಷ್ಟೇ ತಮ್ಮ ಅಸಲಿ ಮುಖ ಬೆಳಕಿಗೆ ಬರುತ್ತದೆ ಎಂದು.
ಮೋದಿಯವರ ಪ್ರಯತ್ನದಿಂದ ಇನ್ನೇನು ಕೆಲವೇ ಸಮಯದಲ್ಲಿ ನಕ ಮುಖಗಳ ಪೊರೆ ಕಳಚಿ ಬೀಳೋದಂತು ನಿಜ.

-ಸೌಮ್ಯ ಪಾಟೀಲ್

  • 1.8K
    Shares