ಅಂಕಣಸುದ್ದಿ ಜಾಲ

ರಾಷ್ಟ್ರ ಧ್ವಜಕ್ಕಾಗಿ ಪ್ರಾಣ ತೆತ್ತವರನ್ನು ನೋಡಿದ್ದೆವು ಆದರೆ ರಾಷ್ಟ್ರ ಧ್ವಜ ಕಂಬಕ್ಕೆ ಚಪ್ಪಲಿ ಕಟ್ಟುವ ಚಪ್ಪರ್ ಗಳನ್ನೂ ನೋಡಬೇಕಾಯಿತಲ್ಲಾ..!!

ದೇಶದ್ರೋಹಿಗಳೇ ನಿಮಗಿದೋ ಧಿಕ್ಕಾರ

ಒಂದೋ ನಾನು ತ್ರಿವರ್ಣವನ್ನು ಹಾರಿಸಿ ಬರುತ್ತೇನೆ ಅಥವಾ ನಾನು ಅದನ್ನು ಸುತ್ತಿಕೊಂಡಾದರೂ ಬರುತ್ತೇನೆ ಆದರೆ ನಾನು ಖಚಿತವಾಗಿ ಮರಳುತ್ತೇನೆ. ಹೀಗೆಂದು ಹೇಳಿದವರು ಕಾರ್ಗಿಲ್ ವೀರ ಯೋಧ ವಿಕ್ರಮ್ ಭಾತ್ರಾ. ಇಂತಹ ವೀರ ಯೋಧ ದೇಶ ಪ್ರೇಮಿಗಳನ್ನು ಈ ದೇಶ ನೋಡಿದೆ. ದೇಶಕ್ಕಾಗಿ , ದೇಶದ ಧ್ವಜಕ್ಕಾಗಿ ಪ್ರಾಣ ತೆತ್ತ ರನ್ನು ಈ ದೇಶ ನೋಡಿದೆ. ಆದರೆ ಅದೇ ರಾಷ್ಟ್ರ ಧ್ವಜದ ಕಂಬಕ್ಕೆ ಚಪ್ಪಲಿ ಕಟ್ಟಿದವರನ್ನು ನೋಡಿರಲಿಲ್ಲ.

ರಾಷ್ಟ್ರ ಧ್ವಜದ ಕಂಬಕ್ಕೆ ಅವಮಾನ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಎಂಭತ್ನಾಳ ಗ್ರಾಮದಲ್ಲಿ ನಡೆದಿದೆ. ಎಂಭತ್ನಾಳ ಸರ್ಕಾರಿ ಪ್ರೌಢಶಾಲೆಯಲ್ಲಿರುವ ಧ್ವಜದ ಕಂಬಕ್ಕೆ ಚಪ್ಪಲಿ ಹಾಕಿ ಕಟ್ಟುವ ಮೂಲಕ ಕಿಡಿಗೇಡಿಗಳು ದೇಶಕ್ಕೆ ಅವಮಾನ ಮಾಡಿದಂತಾಗಿದ್ದಾರೆ.

ಈ ದೇಶ ಏನೆಲ್ಲಾ ನೋಡಿತ್ತು ಗೊತ್ತಾ? ಹೆಣ್ಣು- ಗಂಡು ಎನ್ನದೇ ಮಗುವಿನಿಂದ ಹಿಡಿದು ವೃದ್ಧರವರೆಗೆ ಅನೇಕರು ಈ ದೇಶಕ್ಕಾಗಿ ಪ್ರಾಣತೆತ್ತು ಸುಮಾರು 6.5 ಲಕ್ಷ ಬಲಿದಾನಿಗಳಿಂದ ನಮಗೆ ಸ್ವಾತಂತ್ರ್ಯ ಪ್ರಾಪ್ತಿಯಾಗಿದೆ. ಸ್ವರಾಜ್ಯವೇನೋ ನಮಗೆ ತಂದು ಕೊಟ್ಟರು ಆದರೆ ಅದಕ್ಕೆ ಗೌರವಿಸುವುದು,ಸಂರಕ್ಷಿಸುವುದು ನಮ್ಮ ಜವಾಬ್ದಾರಿ ತಾನೇ? ರಾಷ್ಟ್ರ ದ್ವಜದ ಕಂಬಕ್ಕೆ ಅವಮಾನ ಮಾಡಿದರೆ ದೇಶಕ್ಕೆ ಅವಮಾನ ಮಾಡಿದಂತೆ. ಅಂತಹ ದೇಶದ್ರೋಹಿಗಳನ್ನು ಬಲಿ ಕೊಟ್ಟರೂ ತಪ್ಪಿಲ್ಲ. ಅಂಥವರನ್ನ ಸಿಗಿದು ಹಾಕಿದರೂ ತಪ್ಪಿಲ್ಲ. ಅವರಿಗೆ ಬುದ್ಧಿ ಕಲಿಸಿದರೆ ಮಂದಿನ ಬಹು ಕಾಲ ಇಂತಹ ತಪ್ಪುಗಳು ಮರುಕಳಿಸುವುದಿಲ್ಲ.

ರಾಷ್ಟ್ರ ಧ್ವಜ ಬರೀ ಬಟ್ಟೆಯಲ್ಲ,ರಾಷ್ಟ್ರ ಧ್ವಜದ ಕಂಬ ಬರೀ ಒಂದು ಕಂಬವಲ್ಲ ಅದಕ್ಕೆ ಅದರದ್ದೆ ಆದ ಗೌರವವಿದೆ. ರಾಷ್ಟ್ರ ಧ್ವಜಕ್ಕಾಗಿ ಬಲಿದಾನ ಮಾಡಿರುವುದು ಎಷ್ಟು ಜನರಿಗೆ ಗೊತ್ತಿದೆ. ಹೌದು ರಾಷ್ಟ್ರ ಧ್ವಜಕ್ಕಾಗಿ ನಮ್ಮ ದೇಶದಲ್ಲಿ ಬಲಿದಾನಗಳು ನಡೆದಿವೆ. ಅಂತದ್ದೊದ್ದು ಬಲಿದಾನದ ಉಲ್ಲೇಖ ಮಾಡುತ್ತೇನೆ.

1942ರಲ್ಲಿ ಸ್ವಾತಂತ್ರ್ಯ ಚಳುವಳಿ ಎಲ್ಲೆಡೆ ಹೂಂಕರಿಸುತ್ತಿತ್ತು. ಎಲ್ಲಿ ನೋಡಿದರಲ್ಲಿ ದೇಶ ಭಕ್ತರು ವಂದೇ ಮಾತರಂ,ಭಾರತ ಮಾತಾ ಕೀ ಜೈ ಘೋಷಣೆ ಹಾಕುತ್ತಿದ್ದರು. ಅದು (Quit India ) ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನಜವ ಚಳುವಳಿಯ ಕಾವು ಎಲ್ಲೆಡೆ ಏರಿತ್ತು. ಇಡೀ ದೇಶ ಸ್ವಾತಂತ್ರ್ಯದ ಗಾಳಿ ಸೇವಿಸುವ ಉತ್ಸಾಹದಲ್ಲಿತ್ತು. ಗ್ರಾಮ ಗ್ರಾಮಗಳಲ್ಲಿ ದೇಶ ಪ್ರೇಮದ ಭಜನೆ ನಡೆದಿತ್ತು.ಅದೇ ಸಮಯದಲ್ಲಿ ಆಸ್ಸಾಂನಲ್ಲಿ ಒಂದು ಘಟನೆ ನಡೆಯಿತು. ಅದೊಂದು ದಿನ ಆಸ್ಸಾಂನ ಕ್ರಾಂತಿಕಾರಿಗಳು ತಮ್ಮ ಗುಪ್ತ ಸಭೆಯಲ್ಲಿ 1942 ಸೆಪ್ಟೆಂಬರ್ 20ರಂದು ಪೋಲಿಸ್ ಠಾಣೆಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಬೇಕೆಂದು ಯೋಜನೆ ಹಾಕಿದರು. ಆ ಕ್ರಾಂತಿಕಾರಿಗಳಲ್ಲಿ ಮಹಿಳೆಯರೂ ಇದ್ದರು. ಆ ಯೋಜನೆಗೆ ಮುಂದಾಳತ್ವ ವಹಿಸಿಕೊಂಡವಳು 17ರ ಬಾಲೆ ವೀರ ಮಹಿಳೆ ಕನಕಲತಾ ಬರುವಾ.’

ಯೋಜನೆ ಮಾಡಿದ ದಿನ ಬಂದೇ ಬಿಟ್ಟಿತು. ಕನಕಲತಾ ಬರುವಾ ನೇತೃತ್ವದಲ್ಲಿ ಕ್ರಾಂತಿಕಾರಿಗಳು ಕೈಯ್ಯಲ್ಲಿ ರಾಷ್ಟ್ರ ಧ್ವಜವನ್ನು ಹಿಡಿದುಕೊಂಡು ಚಳುವಳಿ ಹಮ್ಮಿಕೊಂಡು ವಂದೇ ಮಾತರಂ , ಭಾರತ ಮಾತಾ ಕೀ ಜೈ ಘೋಷಣೆ ಹಾಕುತ್ತಾ ಹೊರಟರು. ಒಮ್ಮೆಂದೊಮ್ಮೆಲೆ ಬ್ರಿಟಿಷ್ ಪೋಲಿಸರು ಕ್ರಾಂತಿಕಾರಿಗಳ ಮೇಲೆ ದಾಳಿ ಮಾಡಿದರು. ಅದಕ್ಕೆ ಜಗ್ಗದೇ ಕ್ರಾಂತಿಕಾರಿಗಳು ಮುನ್ನುಗ್ಗಿದರು.

ಬ್ರಿಟಿಷ್ ಪೋಲಿಸರು ಗುಂಡಿನ ದಾಳಿ ನಡೆಸಿಬಿಟ್ಟರು. ಅದರಲ್ಲೊಂದು ಗುಂಡು ವೀರ ಮಹಿಳೆ ಕನಕಲತಾ ಬರುವಾಗೆ ತಾಗಿತು. ಆ ಗುಂಡೇಟಿಗೆ ಕನಕಲತಾ ನೆಲಕ್ಕೆ ಉರುಳಿ ಬಿದ್ದಳು. ಆ ಸಮಯದಲ್ಲಿ ತಾನು ಬಿದ್ದರೂ ಕೂಡಾ ಧ್ವಜವನ್ನು ನೆಲಕ್ಕೆ ಬೀಳಿಸಿರಲಿಲ್ಲ, ಆ ನೋವಿನಲ್ಲಿಯೂ ಧ್ವಜವನ್ನು ಎತ್ತಿ ಹಿಡಿದಿದ್ದಳು.

ಬೇರೊಬ್ಬ ಕ್ರಾಂತಿಕಾರಿ ಬಂದು ಆ ಧ್ವಜವನ್ನು ಹಿಡಿಯುವವರೆಗೂ ಉಸಿರನ್ನು ಬಿಗಿ ಹಿಡಿದಿದ್ದಳು. ಒಬ್ಬ ಕ್ರಾಂತಿಕಾರಿ ಬಂದು ಆ ಧ್ವಜವನ್ನು ಹಿಡಿದ ಮೇಲೆ ಕನಕಲತಾಳ ಪ್ರಾಣ ಪಕ್ಷಿ ಹಾರಿ ಹೋಯಿತು. ಅಂದು ಕೊಂಡಂತೆ ಆವತ್ತು ಪೋಲೊಸ್ ಠಾಣೆಯ ಮೇಲೆ ಧ್ವಜ ಹಾರಿಸಿಯೇ ಬಿಟ್ಟರು.

ರಾಷ್ಟ್ರ ಧ್ವಜಕ್ಕಾಗಿ ಪ್ರಾಣವನ್ನು ಬಲಿಕೊಟ್ಟ ಪರಂಪರೆಯ ನಾಡು ನಮ್ಮದು. ಆದರೆ ಈಗಿನ ಕೆಲ ಕಲಬೆರಕೆಗಳು ರಾಷ್ಟ್ರ ಗೀತೆಗೆ,ರಾಷ್ಟ್ರ ಧ್ವಜಕ್ಕೆ ಗೌರವ ಕೋಡೋದಕ್ಕೆ ಹಿಂಜರಿಯುತ್ತಾರೆ. ರಾಷ್ಟ್ರ ಧ್ವಜವನ್ನು ಹಾಡಲಿಕ್ಕೆ ತಕರಾರು ಮಾಡುತ್ತಾರೆ.

ಇಂತವರನ್ನು ನಮ್ಮ ದೇಶದಲ್ಲಿ ಇಟ್ಟುಕೊಂಡು ಸಲಹುತ್ತಿದ್ದೇವಲ್ಲಾ ನಾವೇ ಮೂರ್ಖರು. ರಾಷ್ಟ್ರ ಧ್ವಜದ ಕಂಬಕ್ಕೆ ಚಪ್ಪಲಿ ಕಟ್ಟಿರುವ ದೇಶದ್ರೋಹಿಗಳ ಮನಸ್ಥಿತಿ ಹೇಗಿರಬಹುದು ಆಲೋಚಿಸಿ. ಇಂಥವರಿಗೆ ತಕ್ಕ ಪಾಠ ಕಲಿಸಲೇಬೇಕು.

-ಶಾರ್ವರಿ ಸೊಲ್ಲಾಪುರ್

ಈ ಸುದ್ದಿಯನ್ನು ಶೇರ್ ಮಾಡಿ
Show More

Related Articles