ರಾಣಿ ಪದ್ಮಾವತಿ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ ಅಷ್ಟಕ್ಕೂ ಯಾರೀ ರಾಣಿ ಪದ್ಮಾವತಿ? ಇಲ್ಲಿದೆ ಸಂಪೂರ್ಣ ಮಾಹಿತಿ!!

ರಾಣಿ ಪದ್ಮಾವತಿ ರಜಪೂತರ ಪ್ರಸಿದ್ಧ ರಾಣಿ. ದಿಟ್ಟತನ ಹಾಗೂ ಪ್ರಾವಿತ್ರ್ಯತೆಗಾಗಿ ಇಂದಿಗೂ ಅವಳನ್ನು ನೆನೆಯಲಾಗುತ್ತದೆ. ಅವಳನ್ನು ಪದ್ಮಿನಿ ಅಂತಲೂ ಕರೆಯುತ್ತಾರೆ.

ಅವಳ ಬಗ್ಗೆ ಮಲಿಕ್ ಮಹಮದ ಜಯಸಿಬರೆದ ‘ಪದ್ಮಾವತ್’ ಎಂಬ ಗ್ರಂಥದಲ್ಲಿ ಸ್ಪಷ್ಟವಾದ ಉಲ್ಲೇಖಗಳಿವೆ. ಈಗ ಅವಳ ಜೀವನದ ಕಥೆ ಬಾಲಿವುಡನಲ್ಲಿ ಚಿತ್ರಕಥೆಯಾಗಿ ಬಿಡುಗಡೆಯಾಗುತ್ತಿದೆ.

ರಜಪೂತರ ರಾಣಿಯಾಗುವ ಮುಂಚೆ ಪದ್ಮಾವತಿ ಸಿಂಹಳ ರಾಜ್ಯದ ರಾಜಕುಮಾರಿ. ಅವಳು ಅಪ್ರತಿಮ ಸುಂದರಿಯಾಗಿದ್ದಳು. ಅವಳ ಸೌಂದರ್ಯದ ಬಗ್ಗೆ ನಾಲ್ಕು ದಿಕ್ಕುಗಳಲ್ಲಿ ನಾನಾ ಬಗೆಯ ವರ್ಣನೆಗಳು ನಡೆಯುತ್ತಿದ್ದವು. ಯುವರಾಣಿ ಪದ್ಮಿನಿಯ ಬಳಿ ‘ಹೀರಾಮಣಿ’ ಎಂಬ ಮಾತನಾಡುವ ಗಿಳಿಯಿತ್ತು.

 

ಕಾಲ ಕೂಡಿ ಬಂದಾಗ ಸಿಂಹಳದ ರಾಜ ಪದ್ಮಿನಿಗೆ ಮದುವೆ ಮಾಡಲು ನಿರ್ಧರಿಸಿ ಯೋಗ್ಯ ವರನನ್ನು ಆರಿಸಲು ಸ್ವಯಂವರವನ್ನು ಏರ್ಪಡಿಸಿದರು.

ಯುವರಾಣಿ ಪದ್ಮಿನಿಯ ಮಾತನಾಡುವ ಗಿಳಿ ಹೀರಾಮಣಿಯಿಂದ ರಾಜಸ್ಥಾನದ ಚಿತ್ತೋಢಿನ ರಾಜ ರತನಸಿಂಗನಿಗೆ ಅವಳ ಸೌಂದರ್ಯ ಹಾಗೂ ಸ್ವಯಂವರದ ವಿಷಯ ತಿಳಿಯಿತು. ಅವಳ ಸೌಂದರ್ಯದ ವರ್ಣನೆಗೆ ಮಾರುಹೋದ ರಾಜಾ ರತನಸಿಂಗ ಸಿಂಹಳಕ್ಕೆ ಧಾವಿಸಿದನು. ಸ್ವಯಂವರದಲ್ಲಿ ಭಾಗವಹಿಸಿ, ಸಾಕಷ್ಟು ಹರಸಾಹಸಗಳನ್ನು ಮಾಡಿ ಯುವರಾಣಿ ಪದ್ಮಿನಿಯನ್ನು ಗೆದ್ದು ವಿವಾಹವಾದನು.

ರತನಸಿಂಗನನ್ನು ವರಿಸಿದ ನಂತರ ರಾಣಿ ಪದ್ಮಿನಿ ಪದ್ಮಾವತಿಯಾಗಿ ಚಿತ್ತೋಢಿಗೆ ಆಗಮಿಸಿದಳು. ಅಲ್ಲಿ ಅವಳ ಸೌಂದರ್ಯಕ್ಕೆ ಎಲ್ಲರೂ ಬೆರಗಾದರು. ರಾಜಾ ರತನಸಿಂಗ ಪದ್ಮಾವತಿಯ ಸೇವೆಗಾಗಿ ಒಂದು ವಿಶೇಷವಾದ ಸೇವಕಿಯರ ತಂಡವನ್ನು ನಿಯೋಜಿಸಿದನು. ಅವಳಿಗೆ ಯಾವುದೇ ಕೊರತಯಾಗದಂತೆ ನೋಡಿಕೊಳ್ಳಲು ಪ್ರಾರಂಭಿಸಿದನು.

ರಾಣಿ ಪದ್ಮಾವತಿ ಹಾಗೂ ರಾಜಾ ರತನಸಿಂಗರ ದಾಂಪತ್ಯ ಜೀವನ ಸುಖಕರವಾಗಿ ಸಾಗಿತ್ತು. ಒಂದಿನ ರಾಜಾ ರತನಸಿಂಗ ರಾಘವ ಚೈತನ್ಯ ಎಂಬ ರಾಜಪುರೋಹಿತನನ್ನು ರಾಜದ್ರೋಹದ ಆಪಾದನೆ ಮೇಲೆ ಗಡಿಪಾರು ಮಾಡಿದನು.

ಆಗ ರಾಘವ ಚೈತನ್ಯ ರಾಜಾ ರತನಸಿಂಗನ ಮೇಲೆ ಸೇಡು ತೀರಿಸಿಕೊಳ್ಳಲು ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಯೊಡನೆ ಕೈಜೋಡಿಸಿದನು.

ಅಲ್ಲಾವುದ್ದೀನ್ ಖಿಲ್ಜಿಗೆ ರಾಣಿ ಪದ್ಮಾವತಿಯ ಸೌಂದರ್ಯವನ್ನು ನಾನಾ ಬಗೆಯಲ್ಲಿ ವರ್ಣಿಸಿ, ಅವಳ ಮೇಲೆ ಕಾಮದಾಸೆಯನ್ನು ಹುಟ್ಟಿಸಿದನು. ರಾಣಿ ಪದ್ಮಾವತಿಯ ಮೇಲೆ ಮೋಹಗೊಂಡ ಅಲ್ಲಾವುದ್ದೀನ್ ಖಿಲ್ಜಿ ಅವಳನ್ನು ಕಾಣಲು ಚಿತ್ತೋಢಗೆ ಆಗಮಿಸಿದನು.

ಅಲ್ಲಾವುದ್ದೀನ್ ಖಿಲ್ಜಿಯನ್ನು ಭೇಟಿಯಾಗಲು ಮೊದಲು ರಾಜಾ ರತನಸಿಂಗ ಹಾಗೂ ರಾಣಿ ಪದ್ಮಾವತಿ ಒಪ್ಪಿರಲಿಲ್ಲ. ಆಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಯುದ್ಧವಾಗಬಾರದೆಂಬ ಕಾರಣಕ್ಕೆ ರಾಣಿ ಕನ್ನಡಿಯಲ್ಲಿ ಅವನಿಗೆ ತನ್ನ ಮುಖವನ್ನು ತೋರಿಸಲು ಒಪ್ಪಿಕೊಂಡಳು.

ಕನ್ನಡಿಯಲ್ಲಿ ರಾಣಿ ಪದ್ಮಾವತಿಯ ಸುಂದರವಾದ ಮುಖವನ್ನು ನೋಡಿ ಅಲ್ಲಾವುದ್ದೀನ್ ಖಿಲ್ಜಿ ಸಂಪೂರ್ಣವಾಗಿ ಅವಳ ಸೌಂದರ್ಯಕ್ಕೆ ಮಾರುಹೋದನು. ಆದರೆ ಆತನಿಗೆ ತನ್ನ ಮುಖವನ್ನು ಕನ್ನಡಿಯಲ್ಲಿ ತೋರಿಸಿದ್ದು ರಾಣಿ ಪದ್ಮಾವತಿ ಅಲ್ಲ ಬದಲಾಗಿ ಆಕೆಯ ಸೇವಕಿ.

ಸೇವಕಿಯ ಸೌಂದರ್ಯವನ್ನೇ ಕಂಡು ಆಕೆ ಪದ್ಮಾವತಿಯೆಂದು ತಿಳಿದ ಖಿಲ್ಜಿ ಆಕೆಯನ್ನ ಪಡೆಯಬೇಕೆಂದು ರಾಜಾ ರತನಸಿಂಗನನ್ನು ಮೋಸದಿಂದ ಬಂಧಿಸಿದನು.

ಅಲ್ಲಾವುದ್ದೀನ ಖಿಲ್ಜಿ ರಾಜಾ ರತನಸಿಂಗನ ಬಿಡುಗಡೆಯ ಆಮೀಷವೊಡ್ಡಿ ರಾಣಿ ಪದ್ಮಾವತಿಗೆ ನೇರವಾಗಿ ಒಂದು ರಾತ್ರಿ ಸಂಭೋಗದ ಬೇಡಿಕೆಯಿಟ್ಟನು. ಆದರೆ ರಾಣಿ ಪದ್ಮಾವತಿ ಇವನ ಕಾಮದಾಟದ ಕನಸಿಗೆ ತಣ್ಣೀರೆರಚಿ ಬಿಟ್ಟಳು.

ತನ್ನ ಬುದ್ಧಿ ಉಪಯೋಗಿಸಿ ರಾಜಾ ರತನಸಿಂಗನನ್ನು ಖಿಲ್ಜಿಯ ಬಂಧನದಿಂದ ಬಿಡಿಸಿದಳು. ಇದರಿಂದ ಆಕ್ರೋಷಗೊಂಡ ಅಲ್ಲಾವುದ್ದೀನ್ ಖಿಲ್ಜಿ ನೇರವಾಗಿ ಚಿತ್ತೋಢಿನ ಮೇಲೆ ಯುದ್ಧ ಸಾರಿದನು.

ಅನೇಕ ದಿನಗಳವರೆಗೆ ಯುದ್ಧ ಸಾಗಿತು. ಅಲ್ಲಾವುದ್ದೀನ್ ಖಿಲ್ಜಿಯ ಬಲಿಷ್ಟ ಸೈನ್ಯದ ಎದುರು ರತನಸಿಂಗನ ಸೈನಿಕರು ಬಹಳ ದಿನಗಳ ಕಾಲ ಹೋರಾಡಲು ಸಾಧ್ಯವಾಗಲಿಲ್ಲ. ರಜಪೂತರ ಸೇನೆ ಸೋಲುವ ಎಲ್ಲ ಸಾಧ್ಯತೆಗಳು ಸಮೀಪಿಸಿದವು.

ರಾಣಿ ಪದ್ಮಾವತಿಯ ಸೌಂದರ್ಯಕ್ಕೆ ಆಸೆಪಟ್ಟಿದ್ದ ಮತ್ತೊಬ್ಬ ವೈರಿ ರಾಜ ದೇವಪಾಲನಿಂದ ರಾಜಾ ರತನಸಿಂಗ ಕೊಲ್ಲಲ್ಪಟ್ಟನು. ಅಲ್ಲಾವುದ್ದೀನ್ ಖಿಲ್ಜಿ ತನ್ನ ಕುಟೀಲ ಪ್ರಯತ್ನದಲ್ಲಿ ಯಶಸ್ವಿಯಾದನು.

ರಾಜಾ ರತನಸಿಂಗನ ಸಾವಿನ ಸುದ್ದಿ ಕೇಳಿ ರಾಣಿ ಪದ್ಮಾವತಿ ಕಂಗಾಲಾದಳು. ಹೆಣ್ಣುಬಾಕನಾದ ನೀಚ ಖಿಲ್ಜಿಗೆ ತನ್ನ ಮೈ ಮನಸನ್ನು ಒಪ್ಪಿಸುವುದು ರಾಣಿ ಪದ್ಮಾವತಿಗೆ ಒಂಚೂರು ಇಷ್ಟವಿರಲಿಲ್ಲ. ಅವನಿಗೆ ಸಂಕಟದಿಂದ ಸೆರಗು ಹಾಸುವ ಬದಲು ಸಂತಸದಿಂದ ಸಾಯುವುದು ಲೇಸು ಎಂಬ ನಿರ್ಧಾರಕ್ಕೆ ರಾಣಿ ಪದ್ಮಾವತಿ ಬಂದಳು.

ಅಲ್ಲಾವುದ್ದೀನ್ ಖಿಲ್ಜಿ ಒಳ ಬರುವ ಮುನ್ನವೇ ತಡಮಾಡದೆ ರಾಣಿ ಪದ್ಮಾವತಿ ಜೋಹರ ಪದ್ಧತಿಯ ಅನುಸಾರವಾಗಿ ಒಂದು ದೊಡ್ಡ ಅಗ್ನಿ ಕುಂಡದಲ್ಲಿ ಸುಮಾರು 2000 ಚಿತ್ತೋಢಿನ ಹೆಣ್ಣುಮಕ್ಕಳೊಂದಿಗೆ ಹಾರಿ ತನ್ನ ಪ್ರಾಣ ತ್ಯಾಗ ಮಾಡಿದಳು.

ಅವಳ ಜೊತೆಜೊತೆಗೆ ಯುದ್ಧದಲ್ಲಿ ತಮ್ಮ ಪತಿಯರನ್ನು ಕಳೆದುಕೊಂಡು ಸಾವಿರಾರು ರಜಪೂತ ಸ್ತ್ರೀಯರು ತಮ್ಮ ಪ್ರಾಣತ್ಯಾಗ ಮಾಡಿದರು.

ರಾಣಿ ಪದ್ಮಾವತಿ ಪವಿತ್ರಳಾಗಿ ಪ್ರಾಣಬಿಟ್ಟ ನಂತರ ಒಳಬಂದ ಅಲ್ಲಾವುದ್ದೀನ್ ಖಿಲ್ಜಿಗೆ ಭಾರೀ ನಿರಾಸೆ ಕಾದಿತ್ತು.

ಯುದ್ಧದಲ್ಲಿ ಗೆದ್ದರೂ, ರಾಣಿ ಪದ್ಮಾವತಿಯನ್ನು ಪಡೆಯುವಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಕೊನೆಗೂ ಸೋತನು. ಪ್ರಾಣ ಹೋಗುವ ಸ್ಥಿತಿ ಬಂದರೂ, ಮಾನ ಕಳೆದುಕೊಳ್ಳಬಾರದು ಎಂಬ ಜೀವನ ಸಂದೇಶ ನಮಗೆ ರಾಣಿ ಪದ್ಮಾವತಿಯಿಂದ ತಿಳಿದು ಬರುತ್ತದೆ.

ಇದಿಷ್ಟು ರಾಣಿ ಪದ್ಮಾವತಿಯ ಕಥೆ!!!

ಆದರೆ ಬಾಲಿವುಡ್ ಸಂಜಯ್ ಲೀಲಾ ಭನ್ಸಾಲಿ ರಾಣಿ ಪದ್ಮಿನಿಯ ಈ ಕಥೆಯನ್ನೇ ಇಟ್ಟುಕೊಂಡು ಪದ್ಮಾವತಿ ಎನ್ನುವ ಚಿತ್ರ ನಿರ್ಮಿಸಿದ್ದು ಬಿಡುಗಡೆಗೂ ಮುನ್ನ ಆ ಚಿತ್ರದ ವಿರುದ್ಧ ರಜಪೂತರಿಂದ, ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಹಾಗಾಗೋದಕ್ಕೂ ಕಾರಣವಿದೆ, ಚಿತ್ರ ರಾಜಸ್ಥಾನಿನಲ್ಲಿ ಚಿತ್ರೀಕರಣವಾಗುವ ಸಂದರ್ಭದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರ ನಿರ್ವಹಿಸುತ್ತಿರುವ ರಣವೀರ್ ಸಿಂಗ್ ಹಾಗು ರಾಣಿ ಪದ್ಮಿನಿಯ ಪಾತ್ರ ನಿರ್ವಹಿಸುತ್ತಿರುವ ದೀಪಿಕಾ ಪಡುಕೋಣೆಯ ನಡುವೆ ಕಿಸ್ಸಿಂಗ್ ದೃಷ್ಯ ಚಿತ್ರೀಕರಣ ನಡೆಯುತ್ತಿದ್ದುದನ್ನ ನೋಡಿದ ರಜಪೂತ್ ಕರಣಿ ಸೇನಾ ಚಿತ್ರದ ಸೆಟ್ ಸುಟ್ಟು ಹಾಕಿದ್ದರು.

ಕಾಮಪಿಶಾಚಿ ಅಲ್ಲಾವುದ್ದೀನ್ ಖಿಲ್ಜಿ ರಾಣಿ ಪದ್ಮಿನಿಯನ್ನ ಪಡೆಯಬೇಕೆಂದು ಯೋಚಿಸಿಯೂ ಆಕೆಯ ಮುಖವನ್ನ ನೋಡದೆ ಹೋಗಿದ್ದ.

ಇತ್ತ ರಾಣಿ ಪದ್ಮಿನಿ ಮತಾಂಧ, ಕಾಮಿ ಅಲ್ಲಾವುದ್ದೀನ್ ನ ಕಾಮತೃಷೆಗೆ ಬಲಿಯಾಗದೆ ಜೋಹಾರ್ ಮಾಡಿಕೊಂಡು ಬೆಂಕಿಗೆ ತನ್ನ ಪ್ರಾಣವನ್ನ ಆತ್ಮಾಹುತಿ ಮಾಡಿಕೊಂಡ ಸ್ವಾಭಿಮಾನಿ, ಶೂರೆ ರಾಣಿ ಪದ್ಮಿನಿ.

ಹೀಗಿರುವಾಗ ಭನ್ಸಾಲಿ ಖಿಲ್ಜಿ ಹಾಗು ರಾಣಿ ಪದ್ಮಿನಿಯ ಕಿಸ್ಸಿಂಗ್ ದೃಷ್ಯವನ್ನ ಅದ್ಹೇಗೆ ಚಿತ್ರೀಕರಿಸಿದ ಅನ್ನೋದೇ ರಾಣಿ ಪದ್ಮಿನಿಯನ್ನ ತಮ್ಮ ಪೂರ್ವಜೆ, ತಾಯಿ ಅಂತ ಪೂಜಿಸೋ ರಜಪೂತರಿಗೆ ಪಿತ್ತ ನೆತ್ತಿಗೇರುವಂತೆ ಮಾಡಿದ್ದು.

ಇತಿಹಾಸದ ಜೊತೆ ಆಟವಾಡಿ ಸುಳ್ಳು ಗೊಳ್ಳು ಕಥೆಯನ್ನ ಹೆಣೆದು ಕೋಟಿ ಕೋಟಿ ಬಾಚಿಕೊಳ್ಳಲು ಬಾಲಿವುಡ್ ಪ್ರಯತ್ನಿಸಿದ್ದು ಇದೇ ಮೊದಲೇನಲ್ಲ, ಹಲವು ಬಾರಿ ಬಾಲಿವುಡ್ ನಲ್ಲಿ ನಡೆದಿವೆ.

ಆದರೆ ಭನ್ಸಾಲಿ ಯಾಕೆ ಆ ರೀತಿಯಲ್ಲಿ ರಾಣಿ ಪದ್ಮಿನಿಯನ್ನ ಚಿತ್ರೀಕರಿಸಿದ ಅನ್ಮೋದನ್ನ ಚಿತ್ರ ವೀಕ್ಷಿಸಿದ ಬಳಿಕವೇ ಗೊತ್ತಾಗಬೇಕಿದೆ.

– ವೈಷ್ಣವಿ ಗುಪ್ತಾ