ದೇಶದಲ್ಲಿರುವ 12 ಪವಿತ್ರ ಜ್ಯೋತಿರ್ಲಿಂಗಗಳ ನಡುವಿನ ರಹಸ್ಯ ನಿಮಗೆ ಗೊತ್ತೆ?

ನಮ್ಮ ಭಾರತದ ನೈಜ ಇತಿಹಾಸ, ಸನಾತನ ಹಿಂದೂಗಳ ಚಾಣಾಕ್ಷ ಬುದ್ಧಿಮತ್ತೆ, ಸಾಧನೆ ಹಾಗು ಅವರಿಗಿದ್ದ ಆಗಿನ ಕಾಲದ ವೈಜ್ಞಾನಿಕ ಮನೋಭಾವನೆಯನ್ನ ನಾವು ಈಗಲೂ ಅರಿತುಕೊಳ್ಳುವುದರಲ್ಲಿ ವಿಫಲರಾಗಿದ್ದೇವೆ.

ಮೆಕಾಲೆ ಇಂಜೆಕ್ಟ್ ಮಾಡಿ ಹೋದ ಕಾನ್ವೆಂಟ್ ಎಂಬ ಭೂತಕ್ಕೆ ಬಲಿಯಾಗಿ ಈಗಲೂ ನಮ್ಮತನವನ್ನ, ನಮ್ಮ ಸಂಸ್ಕೃತಿಯನ್ನ ಮರೆತು ವಿದೇಶಿಗರೇ ಶ್ರೇಷ್ಟರು ಭಾರತೀಯರು ಕನಿಷ್ಠರು ಅನ್ನೋ ಭಾವನೆ ನಮ್ಮಲ್ಲಿ ಆಳವಾಗಿ ಬೇರೂರಿಬಿಟ್ಟಿದೆ.

ನಮ್ಮ ಪೂರ್ವಜರು, ಋಷಿಮುನಿಗಳ ಸಾಧನೆಯನ್ನ ನಮ್ಮ ದೇಶದ ತಥಾಕಥಿತ ಬುದ್ಧಿಜೀವಿಗಳು, ಸಂಶೋಧಕರೇ ಅಲ್ಲಗಳೆದು ಇಡೀ ಪ್ರಪಂಚದ ಎದುರು ತಲೆ ತಗ್ಗಿಸುವಂತಹ ಅನೇಕ ವಾದಗಳನ್ನು ಮಂಡಿಸಿ, ಸಂಶೋಧನೆಗಳನ್ನ ಮಾಡಿಯೇ ಈ ಮಾತನ್ನ ಹೇಳ್ತಿದೀವಿ ಅಂತ ಬೇರೆ ಪುಂಗಿ ಊದುತ್ತಾರೆ.

ಅದರೆ ಭಾರತದ ಬಗ್ಗೆ ಮಾತು ಬಂದರೆ ವಿಶ್ವದ ಕಣ್ಣು ಈಗ ಭಾರತದ ಮೇಲೆ, ಭಾರತದಲ್ಲಿ ಏನೇ ಬದಲಾವಣೆಯಾದರೂ ಅದನ್ನ ಜಗತ್ತು ಅನುಸರಿಸುತ್ತೆ, ನಮ್ಮ ಪೂರ್ವಜರು ಇಡೀ ವಿಶ್ವ ಪರ್ಯಟನೆ ಮಾಡಿದವರು ಇಡೀ ಪ್ರಪಂಚಕ್ಕೆ ನಾಗರೀಕತೆಯ ಪಾಠ ಹೇಳಿಕೊಟ್ಟವರು ಅನ್ನೋದನ್ನ ನಾವು ಭಾರತದ ನೈಜ ಇತಿಹಾಸ ಹಾಗು ಭಾರತ ದರ್ಶನ ಮಾಡಿದರೆ ಅರ್ಥವಾಗುತ್ತದೆ.

ವಿಶ್ವ ನಮ್ಮತ್ತ ತಿರುಗಿ ನೋಡುತ್ತೆ ಅನ್ನೋದಕ್ಕೆ ಕಾರಣವೇ ಇಲ್ಲಿನ ಹಿಂದೂ ಧರ್ಮ, ಸಂಸ್ಕೃತಿ, ಆಚರಣೆ, ಪರಂಪರೆ, ಆದರೆ ಹೊರದೇಶದ ಪರದೇಸಿಗಳಿಗೆ ಅರ್ಥವಾಗುವ ಈ ವಿಷಯ ನಮ್ಮ ದೇಶದವರಾಗಿ ನಮಗೇಕಿಲ್ಲ?

ಇರಲಿ, ಅದರ ಬಗ್ಗೆ ಹೇಳುತ್ತ ಹೋದರೆ ನಮ್ಮ ಬಗ್ಗೆ ನಮಗೇ ನಾಚಿಕೆಯಾಗುತ್ತೆ.

ಭಾರತದ ಅಪರೂಪದ ಸಂಸ್ಕೃತಿ, ನಮ್ಮ ಪೂರ್ವಜರಿಗಿದ್ದ ಅದ್ವಿತೀಯ ವಿಜ್ಞಾನ ಹಾಗು ಖಗೋಳಶಾಸ್ತ್ರದಲ್ಲಿ ಅವರಿಗಿದ್ದ ಪಾಂಡಿತ್ಯವನ್ನು ಒಂದೇ ಒಂದು ಉದಾಹರಣೆಯ ಮೂಲಕ ತಿಳಿಸಿ ನಮ್ಮಲ್ಲಿ ಚಾಣಾಕ್ಷತನ ಎಷ್ಟಿದೆ ಅನ್ನೋದನ್ನ ಹೇಳುತ್ತೇನೆ.

ಇದನ್ನ ಓದಿದ ನಂತರ ನಿಮಗೆ ನಮ್ಮ ಸಂಸ್ಕೃತಿ, ಬುದ್ಧಿಮತ್ತೆಯಿಂದ ನಿಮಗೆ ಹಿಂದೂ ಅಂತ ಹೇಳಿಕೊಳ್ಳೋಕೆ ಹೆಮ್ಮೆಯಂತೂ ಇಮ್ಮಡಿಯಾಗುತ್ತೆ.

‘ಮಹಾಕಾಲ’ದಿಂದ ಭಾರತದಲ್ಲಿರುವ ಶಿವನ ಜ್ಯೋತಿರ್ಲಿಂಗಗಳ ನಡುವಿನ ಅದ್ಭುತ ಸಂಬಂಧ ರಹಸ್ಯ, ರೋಚಕ ಹಾಗು ನಂಬಲಸಾಧ್ಯ.

ಈ ಭೂಮಂಡಲ ಅಥವಾ ಪೃಥ್ವಿಯ ಕೇಂದ್ರಸ್ಥಾನ(Centre of the Earth) ಉಜ್ಜಯಿನಿ ಅನ್ನೋದನ್ನ ನಮ್ಮ ಸನಾತನಿಗಳು ಯಾವಾಗಲೋ ಸಾವಿರಾರು ವರ್ಷಗಳ ಹಿಂದೆಯೇ ತಿಳಿಸಿದ್ದರು, ಅದು ನಿಜವಂತ ಇತ್ತೀಚಿನ ಅನೇಕ ಸಂಶೋಧನೆಗಳೂ ಒಪ್ಪಿವೆ.

ಈ ಉಜ್ಜಯಿನಿಗೂ ನಮ್ಮ ಪೂರ್ವಜರಿಗೂ ಅವರಿಗಿದ್ದ ಖಗೋಳಶಾಸ್ತ್ರದ ಪಾಂಡಿತ್ಯಕ್ಕೂ ಸಂಬಂಧವೇನಂತ ಯೋಚಸುತ್ತಿದೀರಾ.

ಅದಕ್ಕೂ ಕಾರಣವಿದೆ. ಭಾರತದಲ್ಲಿರುವ ಶೇಷ ಜ್ಯೋತಿರ್ಲಿಂಗಗಳ ಸಂಬಂಧ ಉಜ್ಜಯಿನಿಯೊಂದಿಗಿದೆ.

ಅದನ್ನು ತಿಳಿಯೋಣ ಬನ್ನಿ

ಉಜ್ಜಯಿನಿಯಿಂದ ಶೇಷ ಜ್ಯೋತಿರ್ಲಿಂಗಗಳಿಗಿರುವ ದೂರವೂ(in KM’s) ಕೂಡ ಒಂದು ರೋಚಕವೇ.

ಉಜ್ಜಯಿನಿಯಿಂದ

ಸೋಮನಾಥ – 777km

ಓಂಕಾರೇಶ್ವರ – 111km

ಭೀಮಾಶಂಕರ – 666km

ಕಾಶಿವಿಶ್ವನಾಥ – 999km

ಶ್ರೀಶೈಲ ಮಲ್ಲಿಕಾರ್ಜುನ – 999km

ಕೇದಾರನಾಥ – 888km

ತ್ರಿಯಂಬಕೇಶ್ವರ – 555km

ಬೈಜನಾಥ – 999km

ರಾಮೇಶ್ವರಂ – 1999km

ಘೃಷ್ಣೇಶ್ವರ -555km

ಸನಾತನ ಧರ್ಮದಲ್ಲಿ ಕಾರಣವಿಲ್ಲದ ಯಾವ ಸಂಗತಿಗಳೂ ಇಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆ ಹಾಗು ಇದನ್ನ ನಮ್ಮ ಪೂರ್ವಜರು ಎರಡೂವರೆ ಸಾವಿರ ವರ್ಷ ಅದಕ್ಕಿಂತ ಮುಂಚೆಯೇ ತಿಳಿಸಿದ್ದರು.

ಜ್ಯೋತಿರ್ಲಿಂಗಗಳು ಹಾಗು ಅವುಗಳು ಸ್ಥಾಪಿಸಿರುವ ಜಾಗಗಳು ನಿಜಕ್ಕೂ ವೈಜ್ಞಾನಿಕವಾಗಿ ಭಾರತದ ರಕ್ಷಣೆ ಮಾಡುತ್ತಿವೆ ಎಂದರೆ ನೀವು ನಂಬುತ್ತೀರಾ?

ಹೌದು ಭಾರತದಲ್ಲಿನ ಜ್ಯೋತಿರ್ಲಿಂಗಗಳಿರುವ ಪ್ರದೇಶಗಳು ಅತಿ ಹೆಚ್ಚು ರೇಡಿಯೋ ಆ್ಯಕ್ಟಿವ್ ಕಿರಣಗಳನ್ನ ಸೂಸುವ ಪ್ರದೇಶಗಳಾಗಿವೆ. ಈ ರೇಡಿಯೋ ಆ್ಯಕ್ಟಿವ್ ಕಿರಣಗಳಿಂದ ಮನುಷ್ಯನಿಗೆ ಅತಿ ಅಪಾಯಕಾರಿಯಾಗಿದ್ದು ಇವುಗಳ ನಿಯಂತ್ರಣಕ್ಕೆಂದೇ ನಮ್ಮ ಪೂರ್ವಜರು ರೇಡಿಯೋ ಆ್ಯಕ್ಟಿವ್ ತರಂಗಗಳಿರುವ ಪ್ರದೇಶಗಳಲ್ಲಿ ಜ್ಯೋತಿರ್ಲಿಂಗಗಳ ಪ್ರತಿಷ್ಠಾಪನೆ ಮಾಡಿದ್ದರು.

ಪಂಚಾಮೃತವೆಂದು ನಾವು ಶಿವಲಿಂಗಕ್ಕೆ ಅಭಿಷೇಕ ಮಾಡೋದರ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ, ಆದರೆ ಜ್ಯೋತಿರ್ಲಿಂಗಗಳಿಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸತತವಾಗಿ ಅಭಿಷೇಕ ಮಾಡುವುದರ ಉದ್ದೇಶವಾದರೂ ಏನು ಅನ್ನೋದು ನಿಮಗೆ ಗೊತ್ತೆ?

ಅತಿ ಹೆಚ್ಚು ರೇಡಿಯೋ ಆ್ಯಕ್ಟಿವ್ ತರಂಗಗಳನ್ನ ಸೂಸುವ ಪ್ರದೇಶದಲ್ಲಿ ಶಿವಲಿಂಗವನ್ನ ಸ್ಥಾಪನೆ ಮಾಡಿ ಅದಕ್ಕೆ ಪಂಚಾಮೃತ ಅಭಿಷೇಕ, ಅಂದರೆ ಹಾಲು ತುಪ್ಪ ಮೊಸರು ಗೋಮಯ ಬೆಣ್ಣೆ ಹೀಗೆ ಅಭಿಷೇಕ ಮಾಡುವುದರಿಂದ ರೇಡಿಯೋ ಆ್ಯಕ್ಟಿವ್ ತರಂಗಗಳನ್ನ ತಡೆಯಬಹುದು.

ಈ ಕಾರಣಕ್ಕಾಗೇ ಜ್ಯೋತಿರ್ಲಿಂಗಗಳಿರೋ ಪ್ರದೇಶಗಳಲ್ಲಿ ನಿರಂತರವಾಗಿ ಅಭಿಷೇಕ ಮಾಡುತ್ತ ತರಂಗಗಳ ನಿಯಂತ್ರಣ ಮಾಡಬಹುದೆಂದು ಹಾಗು ಈ ವೈಜ್ಞಾನಿಕತೆಯನ್ನ ಸಾಮಾನ್ಯ ಜನರಿಗೆ ಹೇಳಿದರೆ ಅರ್ಥವಾಗುವುದಿಲ್ಲ ಅನ್ನೋ ಕಾರಣಕ್ಕೆ ನಮ್ಮ ಪೂರ್ವಜರು ದೇವರು, ಶಿವಲಿಂಗ ಅಂತ ಆಧ್ಯಾತ್ಮಿಕ, ಪೌರಾಣಿಕ ಕತೆಗಳ ಮೂಲಕ ನಮಗೆ ಇದರ ಅರಿವು ಮಾಡಿಸಿದ್ದರು.

ಉಜ್ಜಯಿನಿ ಈ ಭೂಮಂಡಲದ ಮಧ್ಯಭಾಗ ಎಂದು ನಮ್ಮ ಪೂರ್ವಜರೂ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದರು, ನಂತರ ಬಂದ ಬ್ರಿಟಿಷ್ ವಿಜ್ಞಾನಿಗಳು 100 ವರ್ಷಗಳ ಹಿಂದೆ ಪೃಥ್ವಿಯ ಮೇಲೆ ಎಳೆದ ಕಾಲ್ಪನಿಕ ರೇಖೆಯ ಮಧ್ಯಭಾಗವು(center place of the earth) ಕೂಡ ಉಜ್ಜಯಿನಿಯನ್ನೇ ಸೂಚಿಸಿತ್ತು ಅನ್ನುವುದು ಕೂಡ ಸಾವಿರಾರು ವರ್ಷಗಳ ಹಿಂದೆಯೇ ನಮ್ಮಲ್ಲಿದ್ದ ಖಗೋಳ ಶಾಸ್ತ್ರ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈಗಲೂ ಸೂರ್ಯನ ಹಾಗು ಅಂತರಿಕ್ಷದ ಮಾಹಿತಿಗಾಗಿ ಜಗತ್ತಿನ ವಿಜ್ಞಾನಿಗಳು ಭಾರತದ ಉಜ್ಜಯಿನಿಗೇ ಬರುತ್ತಾರೆ.

ಭಾರತದಲ್ಲಿ ಇಲ್ಲಿಯವರೆಗೂ ಆಯುರ್ವೇದ, ವಿಜ್ಞಾನ, ಖಗೋಳಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ, ಜೀವನ ಪದ್ಧತಿ ಸಮೇತ ಸಿಕ್ಕ ಸುಮಾರು 12,000 ಪುರಾತನ ಗ್ರಂಥಗಳಲ್ಲಿ ಅಮೇರಿಕ ನಾಲ್ಕು ಸಾವಿರ ಹಾಗು ಜರ್ಮನಿ ಎರಡು ಸಾವಿರದ ಏಳು ನೂರು ಗ್ರಂಥಗಳ ಮೇಲೆ ಪೆಟೆಂಟ್ ಪಡೆದು ನಮ್ಮ ಭಾರತದ ಸಂಸ್ಕೃತಿಯನ್ನ ವಿಶ್ವವ್ಯಾಪಿ ಮಾಡುತ್ತ ಲಾಭ ಮಾಡಿಕೊಳ್ಳುತ್ತಿವೆ ಆದರೆ ನಮ್ಮದೇ ಇತಿಹಾಸವನ್ನ ನಮ್ಮದೇ ಪ್ರಾಚೀನ ಗ್ರಂಥಗಳ ಬಗ್ಗೆ ನಮಗೆ ಗೊತ್ತರದಿರುವುದು ಅಥವಾ ತಿಳಿದುಕೊಳ್ಳಲೂ ಪ್ರಯತ್ನ ಮಾಡದಿರುವುದು ಮಾತ್ರ ನಿಜಕ್ಕೂ ವಿಷಾದನೀಯ ಹಾಗು ನಾಚಿಕೆಗೇಡಿನ ಸಂಗತಿಯೇ.

ಇದರಿಂದ ಸ್ಪಷ್ಟವಾಗುವ ವಿಚಾರವೆಂದರೆ ನಮ್ಮ ಸನಾತನ ಹಿಂದೂ ಧರ್ಮ ವೈಜ್ಞಾನಿಕವಾಗಿಯೇ ನಿರ್ಮಿಸಿದಂತ ಧರ್ಮವಾಗಿದ್ದು ಇದನ್ನ ಯಾರು ಎಷ್ಟೇ ಹೀಗಳೆದರು, ನಿರಾಕರಿಸಿದರೂ ಇದು ವಿಶ್ವವ್ಯಾಪಿ ಸಾರ್ವತ್ರಿಕ ಸತ್ಯ ಆದರೆ ಇದನ್ನ ನಾವು ಪೆಟೆಂಟ್ ಮಾಡಿಸಿಲ್ಲ ಅಷ್ಟೇ.

ನಮ್ಮತನ, ಇತಿಹಾಸ, ಸಂಸ್ಕೃತಿ ಆಚಾರ ವಿಚಾರ ನಾವು ಮರೆತರೆ ನಾವು ಜಗತ್ತಿನಲ್ಲಿ ಕಾಲ ಕಸಕ್ಕಿಂತ ಕಡೆಯಾಗುತ್ತೇವೆ. ಬನ್ನಿ ಈಗಲಾದರೂ ಇದರ ಬಗ್ಗೆ ಗಮನಹರಿಸಿ ನಮ್ಮ ಶಕ್ತಿಯನ್ನ ಬೌದ್ಧಿಕ ಸಾಮರ್ಥ್ಯವನ್ನ ಜಗತ್ತಿನೆದುರು ಅನಾವರಣವಗೊಳಿಸೋಣ.

– Vinod Hindu Nationalist