ಭಗತ್ ಸಿಂಗ್ ಈಸ್ ಎ ಟೆರರಿಸ್ಟ್, ಅಕ್ಬರ್ ದಿ ಗ್ರೇಟ್!! ಕೋಪ ಬರುತ್ತಿದೆಯಾ?!! ಓದಿ ನಿಮಗೇ ಅರ್ಥವಾಗುತ್ತೆ!!

ಒಬ್ಬ ಗುರು ತಪ್ಪು ಮಾಡಿದರೆ ಅಥವಾ ಏನಾದರೂ ತಪ್ಪು ಬೋಧಿಸಿದರೆ ಅವನ ಶಿಷ್ಯರು ಕೆಡುತ್ತಾರೆ. ಪೋಷಕರು ತಪ್ಪು ಮಾಡಿದರೆ ಅವರ ಮಕ್ಕಳು ಕೆಡುತ್ತಾರೆ. ಆದರೆ ಒಬ್ಬ ಲೇಖಕ ತಪ್ಪು ಮಾಡಿದರೆ ಇಡೀ ಪೀಳಿಗೆ ದಾರಿ ತಪ್ಪುತ್ತದೆ. ಈ ಮಾತು ಕೇಳುವುದಕ್ಕೆ ಕಠಿಣ ಎನಿಸುತ್ತೆ ಅದರೊ ಇದು ಸತ್ಯ.

ಉದಾಹರಣೆಗೆ NCERT(National Council Of Research and Training)  ಮುದ್ರಿಸುತ್ತಿರುವ ಪುಸ್ತಕಗಳಲ್ಲಿ ಪ್ರಿಂಟ್ ಆಗಿರೋದು ಭಗತ್ ಸಿಂಗ್ ಈಸ್ ಎ ಟೆರರಿಸ್ಟ್ ಅಂತೆ ಅಕ್ಬರ್ ದಿ ಗ್ರೇಟ್ ಅಂತೆ. ವಿಪರ್ಯಾಸವೆಂದರೆ ನಮ್ಮ ಈಗಿನ ಪೀಳಿಗೆಯ ಮಕ್ಕಳು ಇದನ್ನ ಓದುತ್ತಿದ್ದಾರೆ.

ಭಗತ್ ಸಿಂಗ್, ರಾಜಗುರು, ಸುಖದೇವರು ಈ ಕ್ರಾಂತಿಕಾರಿ ಉಗ್ರವಾದ ಹೋರಾಟಕ್ಕೆ ನಾಂದಿ ಹಾಡಿದವರು. ಅವರಿಗೆ ಬ್ರಿಟಿಷರೆದುರು ಕೈ ಚಾಚಿ ಸ್ವಾತಂತ್ರ್ಯವನ್ನು ಭಿಕ್ಷೆಯ ರೀತಿಯಲ್ಲಿ ಬೇಡಲು ಇಷ್ಟವಿರಲಿಲ್ಲ. ಹಾಗಾಗಿ ತಮ್ಮದೇ ತಂಡ ಕಟ್ಟಿ, ಬ್ರಿಟಿಷರಿಗೆ ಅವರದೇ ಭಾಷೆಯಲ್ಲೇ ಉತ್ತರಿಸೋಕೆ ಉಗ್ರ ಹೋರಾಟ ಮಾಡಿದ್ದವರು.

“ಕ್ರಾಂತಿ ಎಂದರೆ ಅದರಲ್ಲಿ ರಕ್ತಮಯ ಕಲಹ ಇರಬೇಕು ಎಂದೇನೂ ಇಲ್ಲ. ಹಾಗೆಯೇ ವೈಯುಕ್ತಿಕ ದ್ವೇಷಕ್ಕೂ ಇದರಲ್ಲಿ ಅವಕಾಶ ಇಲ್ಲ. ಅದು ಬಾಂಬ್ ಮತ್ತು ಪಿಸ್ತೂಲುಗಳ ಸಂಸ್ಕೃತಿ ಅಲ್ಲ. ನಮ್ಮ ಪ್ರಕಾರ ಕ್ರಾಂತಿ ಎಂದರೆ ಎದ್ದು ಕಾಣುವ ಅನ್ಯಾಯದಿಂದ ಕೂಡಿದ ಈಗಿನ ವ್ಯವಸ್ಥೆ ಬದಲಾಗಬೇಕು”

– ಭಗತ್ ಸಿಂಗ್

ಭಗತ್ ಸಿಂಗ್ ಹುಟ್ಟಿದ್ದೇ ಕ್ರಾಂತಿಕಾರಿಯಾಗಲು, ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ಹುತಾತ್ಮನಾಗಲು ಎಂದರೆ ಅತಿಶಯೋಕ್ತಿಯಲ್ಲ.

ಭಗತ್ ಸಿಂಗ್ ಇಡೀ ಕುಟುಂಬವೇ ಕ್ರಾಂತಿಕಾರಿ ಕುಟುಂಬವಾಗಿತ್ತು, ಭಗತ್ ಸಿಂಗ್ ರ ತಾತ ಅರ್ಜನ್ ಸಿಂಗ್ ಆರ್ಯ ಸಮಾಜದ ಸದಸ್ಯರಾಗಿದ್ದರು. ರಣಜಿತ್ ಸಿಂಗನ ಸೈನ್ಯದಲ್ಲಿದ್ದವರು. ತಂದೆ ಕಿಶನ್ ಸಿಂಗರು ಸಹ ತಂದೆಯ ಹಾದಿಯನ್ನೇ ಹಿಡಿದಿದ್ದರು. ಚಿಕ್ಕಪ್ಪಂದಿರಾದ ಅಜಿತ್ ಸಿಂಗ್ ಮತ್ತು ಸ್ವರ್ಣ ಸಿಂಗರು ಶ್ರೇಷ್ಠ ಕ್ರಾಂತಿಕಾರಿಗಳಾಗಿದ್ದವರು.

ಇಂತಹ ಕುಟುಂಬದಲ್ಲಿ ಮತ್ತೊಬ್ಬ ಕ್ರಾಂತಿಕಾರಿ ಹುಟ್ಟದೇ ಮತ್ಯಾರು ಹುಟ್ಟಲು ಸಾಧ್ಯ?

“ಭಗತ್ ಸಿಂಗ್, ರಾಜಗುರು ಸುಖದೇವರು ಉಗ್ರಗಾಮಿಗಳು” ಎಂದು ಪರೀಕ್ಷೆಯಲ್ಲಿ ಪುಟಗಟ್ಟಲೇ ಬರೆಯುವುದರಿಂದ ನಮ್ಮ ಈಗಿನ ವಿದ್ಯಾರ್ಥಿಗಳು ಆ ಕ್ಷಣಕ್ಕೆ ಪರೀಕ್ಷೆ ಬರೆದು ಅಂಕ ಗಳಸಬಹುದು. ಆದರೆ ಇದರಿಂದ ಆಗಬಹುದಾದ ದೊಡ್ಡ ಪರಿಣಾಮವೆಂದರೆ ಒಂದು ಪಂಗಡವೇ ಉಗ್ರಗಾಮಿಗಳಾಗಬಹುದು, ನಕ್ಸಲರಾಗಬಹುದು.

ಇದೆಲ್ಲ ಮಕ್ಕಳಿಗೆ ಹೇಳಿಕೊಡುವಂಥ ಪಾಠವಾ?

ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಭಗತ್ ಸಿಂಗ್,ರಾಜ ಗುರು, ಸುಖದೇವರು ಉಗ್ರಗಾಮಿಗಳು ಎಂದರೆ ದೇಶಕ್ಕಾಗಿ ಮಡಿದವರು ನೆಹರೂ, ಗಾಂಧೀನಾ? ವ್ಯಕ್ತಿಗಳನ್ನು ತುಳಿದು ಹಾಕುವುದರಿಂದ ಯಾರೂ ಅವರ ವಿಚಾರಗಳನ್ನು ಕೊಲ್ಲಲಾರರು.

ಇಡೀ ವರ್ಷ 7, 8, 9, 10 ನೇ ತರಗತಿಯಲ್ಲಿ ಇಂಥದ್ದೇ ಪಾಠ ಓದಿಕೊಂಡು ಪಾಸಾದವರು ಅದು ಎಷ್ಟರ ಮಟ್ಟಿಗೆ ದೇಶ, ಕಾಶ್ಮೀರ ವಿವಾದ, ಪಾಕಿಸ್ತಾನ, ಹಿಂದೂ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮೂಡಿಸಿಕೊಂಡಿರಬಹುದೋ ಆ ದೇವರೇ ಬಲ್ಲ.

10 ನೇ ತರಗತಿಯ ನಂತರ ಇವರೆಲ್ಲರೂ ಕಾಲೇಜು ಪಾಲಾಗುವುದರಿಂದ, ತಾವು ಇಷ್ಟು ದಿನ ಕಲಿತಿದು ಸುಳ್ಳು ಎಂದು ಅವರಿಗೆ ಗೊತ್ತಾಗೋದೇ ಇಲ್ಲ. ಎಲ್ಲೋ ನೂರಕ್ಕೆ ಒಬ್ಬರು ಹೊರಗಡೆ ಒಳ್ಳೆಯ ಸಂಸ್ಕಾರ ಸಿಕ್ಕು, ನೈಜ ಇತಿಹಾಸ ತಿಳಿದುಕೊಳ್ಳಲು ಪರಿತಪಿಸಿ ಸರಿ ದಾರಿ ಹಿಡಿಯುತ್ತಾರೆ. ಆದರೆ ಅದೆಷ್ಟೋ ಯುವಕ ಯುವತಿಯರು ತಾವು ಶಾಲೆಯಲ್ಲಿ ಓದಿದ್ದೇ ನಿಜ ಅಂತ ಭಾವಿಸಿ ನಿಜಕ್ಕೂ ಭಗತ್ ಸಿಂಗ್ ಒಬ್ಬ ಭಯೋತ್ಪಾದಕನೇ ಆಗಿದ್ದ, ಕೇವಲ ಅಕ್ಬರ್ ಮಾತ್ರ ಗ್ರೇಟ್ ಆಗಿದ್ದ ಅಂತಲೇ ಜೀವನಪೂರ್ತಿ ನಂಬಿ ಬಿಟ್ಟಿರುತ್ತಾರೆ.

ನಮ್ಮ ಪಠ್ಯ ಪುಸ್ತಕಗಳಲ್ಲಿನ ಪಾಠಗಳು ಹೇಗಿವೆಯೆಂದರೆ ಪಂಜಾಬಿನಿಂದ ಟಿಬೆಟ್ ವರೆಗೆ ತನ್ನ ರಾಜ್ಯವನ್ನು ಪರಾಕ್ರಮದಿಂದ ವಿಸ್ತರಿಸಿದ್ದ ಮಹಾರಾಜ ರಂಜಿತ್ ಸಿಂಗ್ ಬಗ್ಗೆ ಕೇವಲ ಹತ್ತೇ ಹತ್ತು ಸಾಲಲ್ಲಿ ಮುಗಿದು ಹೋಗಿರುತ್ತೆ.

ಆದರೆ ಯಾವುದೋ ಪರದೇಶದಿಂದ ಬಂದು ನಮ್ಮ ದೇಶವನ್ನು ಆಕ್ರಮಿಸಿ, ಲೂಟಿಗೈದು, ಹಿಂದುಗಳನ್ನ ಬಲವಂತವಾಗಿ ಮತಾಂತರಿಸಿ, ಮತಾಂತರಕ್ಕೆ ಒಪ್ಪದವರನ್ನ ಅಮಾನುಷವಾಗಿ ಕೊಂದು, ಹಿಂದೂ ಮಹಿಳೆಯರನ್ನ ಅತ್ಯಾಚಾರಗೈದು, ದೇವಸ್ಥಾನಗಳನ್ನು ಧ್ವಂಸಗೊಳಿಸಿದ ಅಕ್ಬರ್ ನಂತಹವನ ಬಗ್ಗೆ ಭರ್ತಿ ಒಂದು ಪಾಠವೇ ಇದೆ.

ಪಲಾಯನ ಪ್ರವೀಣನ ಪುತ್ರ, ಅನಕ್ಷರಸ್ಥ, ಅಕ್ಬರ್ ಮಹಾಶಯ The Great ಎಂದು ವರ್ಣಿಸಲ್ಪಟ್ಟು ನಮ್ಮ ಪಠ್ಯಪುಸ್ತಕಗಳಲ್ಲಿ ರಾರಾಜಿಸಲ್ಪಟ್ಟ.

ಮಕ್ಕಳು ಅಕ್ಬರ್ ದಿ ಗ್ರೇಟ್ ಎನ್ನುತ್ತಾರೆಯೇ ವಿನಃ ರಂಜಿತ್ ಸಿಂಗ್, ಮಹಾರಾಣಾ ಪ್ರತಾಪ್ ಸಿಂಗ್, ಗುರುಗೋವಿಂದ್ ಸಿಂಗ್, ನಾನಾ ಫಡ್ನವಿಸ್, ಶಿವಾಜಿ ಮಹಾರಾಜರು, ಪ್ರಥ್ವಿರಾಜ್ ಚೌಹಾಣ್, ಸಂಗೊಳ್ಳಿರಾಯಣ್ಣ, ಕಿತ್ತೂರು ಚೆನ್ನಮ್ಮ ಹಾಗು ಅನೇಕ ಭಾರತೀಯ ಕೆಚ್ಚೆದೆಯ ಹೋರಾಟಗಾರರ ಸಾಹಸದ ಪರಿಚಯವೇ ಅವರಿಗಿರುವುದಿಲ್ಲ.

ಎಡಪಂಥೀಯ ಚಿಂತನೆಯಿಂದ ಕೂಡಿದ್ದ ಕಾಂಗ್ರೆಸ್ ಹಾಗು ಕಮ್ಯುನಿಸ್ಟರಿಂದ ಈ ಬೌದ್ಧಿಕ ದಬ್ಬಾಳಿಕೆ ಮಕ್ಕಳ ಮೂಲಕ ತಮ್ಮ ನೀಚತನವನ್ನ, ಮುಸ್ಲಿಂ ತುಷ್ಟೀಕರಣ ಮಾಡಲು ಹೋಗಿದ್ದು ಎಷ್ಟರ ಮಟ್ಟಿಗೆ ಸರಿ??

ಇತಿಹಾಸದಿಂದ ಕಲಿಯುವುದು ಬಹಳ ಇದೆ ಆದರೆ ದುರುದ್ದೇಶದ ಇತಿಹಾಸದಿಂದ ಮಕ್ಕಳ ಭವಿಷ್ಯ ನೆಟ್ಟಗೆ ಆಗುವ ಹಾಗೆ ಕಾಣುತ್ತಿಲ್ಲ.

ಮೋದಿ ಸರ್ಕಾರ ಬಂದನಂತರ ಇಂತಹ ಸುಳ್ಳು ಗೊಳ್ಳು ಇತಿಹಾಸವನ್ನ ಸರಿದಾರಿಗೆ ಪ್ರಯತ್ನ ಮಾಡುತ್ತಿದ್ದಾರೇನೋ!! ಅಥವ ಅದನ್ನ ಕಾರ್ಯರೂಪಕ್ಕೆ ತರಬೇಕಾದರೆ ಯೋಜನೆಯಾದರೂ ರೂಪಿಸಿ ಮೊದಲು NCERT ಯಿಂದ ಎಡಪಂಥೀಯ ಇತಿಹಾಸಕಾರರನ್ನ ಹೊರದಬ್ಬಿ ಭಾರತದ ನೈಜ ಇತಿಹಾಸದ ಚಿತ್ರಣ ಪಠ್ಯಪುಸ್ತಕಗಳಲ್ಲಿ ಬರುವಂತೆ ಮಾಡಬೇಕಾಗಿದೆ.

ಇಂತ ಪಠ್ಯಕ್ರಮವನ್ನು ಬದಲಾಯಿಸದೆ ಹೋದರೆ ಮಕ್ಕಳು ಭಾರತದ ಇತಿಹಾಸವನ್ನು ಓದುವ ಬದಲು ಕಟ್ಟುಕತೆಗಳ ಓದಿ, ಭಾರತದ ಹಣೆಬರಹವೇ ಇಷ್ಟು ಎಂದು ತಪ್ಪು ದಾರಿ ಹಿಡಿಯುವ ಕಾಲ ಬಹಳ ದೂರ ಇಲ್ಲ.

– ಪ್ರಭು ರಾಮ್

  • 3K
    Shares