ಆ ಯೋಧನ ಕಣ್ಣ ಗುಡ್ಡೆಗಳನ್ನು ಕಿತ್ತು ಹಾಕಿ ತುಂಡು ತುಂಡಾಗಿ ಕತ್ತರಿಸಿದ್ದರು. ಆ ಯುದ್ಧಕ್ಕೆ ಮುನ್ನುಡಿ ಬರೆದ ಯೋಧನ ಕಥೆ..!!

ಆ ಯುವಕ ಮತ್ತು ತನ್ನ ನಾಲ್ಕು ಜನ ಸಂಗಡಿಗರು ಪಾಪಿ ಪಾಕಿಸ್ತಾನಿಯರು ದಾಳಿ ಮಾಡಲು ತಯಾರಿ ನಡೆಸಿದ್ದಾರೇನೋ ಎಂದು ನೋಡಲು ಹೋದರು. ಹಾಗೆಯೇ ಮರಳಿ ಕೂಡಾ ಬಂದರು. ಆದರೆ ತುಂಡು ತುಂಡಾದ ದೇಹ ಮಾತ್ರ ಮರಳಿ ಬಂದಿತ್ತು. ಆ ಐದು ಜನ ಸೈನಿಕರ ನೇತೃತ್ವವನ್ನು ವಹಿಸಿಕೊಂಡಿದ್ದವನು ಯುವಕ ಯೋಧ ಸೌರಬ್ ಕಾಲಿಯಾ.

1977ರಲ್ಲಿ ಪಾಕಿಸ್ತಾನ ಮತ್ತು ಭಾರತದ ರಕ್ಷಣಾ ಸಚಿವರು ಎದುರು ಬದುರು ಕುಳಿತು ಒಂದು ಒಪ್ಪಂದ ಮಾಡಿಕೊಂಡರು. ಆ ಒಪ್ಪಂದ ಇನ್ನು ಮುಂದೆ ಸೌಹಾರ್ದತೆಯಿಂದ ಇರೋಣ ಎಂಬುವಂತ ಒಪ್ಪಂದ. ಸೆಪ್ಟೆಂಬರ್ 1ತಿಂಗಳಿನಿಂದ ಏಪ್ರಿಲ್ ವರೆಗೆ ಅಲ್ಲಿ ವಿಪರೀತ ಮಂಜು ಸುರಿಯುತ್ತದೆ.

ಆ ಮಂಜಿನಿಂದ ಎರಡೂ ಕಡೆಯ ಸೈನಿಕರ ಜೀವಕ್ಕೂ ಅಪಾಯ. ಹೀಗಾಗಿ ಸೆಪ್ಟೆಂಬರ್ 15ರಿಂದ ಏಪ್ರಿಲ್ 15ರವರೆಗೆ ಯಾರೊಬ್ಬರೂ ಮತ್ತೊಬ್ಬರ ಬೇಲಿಗಳನ್ನು ಹಾರಿ ಗುಡ್ಡಗಳನ್ನು ಆಕ್ರಮಿಸಬಾರದು ಅಂತ ಆ ಒಪ್ಪಂದವಾಗಿತ್ತು. ಅಷ್ಟೇ ಅಲ್ಲ ಆ ಸಮಯದಲ್ಲಿ ಆ ಬೆಟ್ಟವನ್ನು ಇಳಿದು ಕೆಳ ಹೋಗಬೇಕು. ಏಪ್ರಿಲ್ 15ರ ನಂತರ ಮೇಲೆ ಏರಿ ತಮ್ಮ ತಮ್ಮ ಜಾಗಕ್ಕೆ ಬಂದು ಗಡಿ ಕಾಯಬೇಕೆಂದು ಆ ಒಪ್ಪಂದವಾಗಿತ್ತು.

1998ರಲ್ಲಿ ನವಾಜ್ ಷರೀಫ್ ಮತ್ತು ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಎದುರು ಬದುರು ಕುಂತರು , ಕೈ ಕುಲುಕಿದರು. ರೈಲು ಬಿಟ್ಟರು , ಬಸ್ಸೂ ಬಿಟ್ಟರು. ಹಿಂದೂಸ್ತಾನಿ-ಪಾಕಿಸ್ತಾನಿ ಭಾಯಿ ಭಾಯಿ ಎಂದೆಲ್ಲಾ ಭಾರತೀಯರು ಸಂಭ್ರಮ ಪಟ್ಟರು. ಆಗಲೇ ನಡೆಯಿತು ನೋಡಿ ಅಚಾತುರ್ಯ. ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನ ತೋರಿಸಲು ಮುಂದಾಯಿತು.

ಕಾರ್ಗಿಲ್ , ಬಟಾಲಿಕ್ , ದ್ರಾಸ್ ಇವೆಲ್ಲ ಲೈನ್ ಆಫ್ ಕಂಟ್ರೋಲ್ ನ ಉದ್ದಕ್ಕೂ ಇರುವ ಗಡಿ ಭಾಗದ ಪ್ರದೇಶಗಳು. ಲಡಾಖ್ ನ ಭಾಗಗಳಿವು. ರಕ್ಷಣಾ ದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರದೇಶಗಳು. ಶ್ರೀನಗರದಿಂದ ಸೋನ್ ಮಾರ್ಗ್ ಗೆ ಅಲ್ಲಿಂದ ಜೋಜಿ ಲಾ ಪಾಸ್ ನ ನಂತರ ಇರುವುದೇ ಕಾರ್ಗಿಲ್ ಪ್ರದೇಶ. ಜೋಜಿ ಲಾ ಪಾಸ್ ಕಳೆದುಕೊಂಡರೆ ಕತೆ ಮುಗಿದಂತೆ .

ಶ್ರೀನಗರದೊಂದಿಗೆ ಲಡಾಖ್ ನ ಸಂಪರ್ಕವೇ ಇಲ್ಲ‌‌. ಜೋಜಿ ಲಾ ಪಾಸ್ , 18 ಸಾವಿರ ಅಡಿ ಬೆಟ್ಟದೆತ್ತರಕ್ಕೂ ಸಾಗುವ ಮಾರ್ಗ. ಅತ್ಯಂತ ಕಡಿದಾದ ಪ್ರದೇಶ. ಮೇ ತಿಂಗಳಿನವರೆಗೂ ಅಲ್ಲಿ ಮಂಜು ಬೀಳುತ್ತಿರುತ್ತದೆ. ಒಪ್ಪಂದದ ಪ್ರಕಾರ ಭಾರತೀಯ ಸೈನಿಕರು ಬೆಟ್ಟದಿಂದ ಕೆಳಗೆ ಇಳಿದು ಹೋಗಿರುತ್ತಾರೆ. ಇದನ್ನರಿತ ಪರ್ವೇಜ್ ಮುಷರಫ್ ತನ್ನ ನರಿ ಬುದ್ದಿಯನ್ನು ತೋರಿಸಲು ಮುಂದಾದ.

1977ರಲ್ಲಿ ಆಗಿದ್ದ ಒಪ್ಪಂದವನ್ನು ಪಾಕಿಸ್ತಾನಿ ಸೇನಾ ನಾಯಕ ಪರ್ವೇಜ್ ಮುಷರಫ್ ಗಾಳಿಗೆ ತೂರಲು ರೆಡಿಯಾದ. ಒಪ್ಪಂದದ ಪ್ರಕಾರ ಮಂಜು ಬೀಳುವ ಪರಣಾಮ ನಮ್ಮ ಸೈನಿಕರು ಬೆಟ್ಟವನ್ನು ಇಳಿದು ಕೆಳ ಬಂದಿದ್ದರು. ಆಗ ಮುಷರಫ್ ಒಂದು ಯೋಜನೆ ಹಾಕಿ ತನ್ನ ಸೈನಿಕರನ್ನು ಬೆಟ್ಟ ಏರಿಸಿ ನಮ್ಮ ಬಂಕರುಗಳನ್ನು ವಶಪಡಿಕೊಳ್ಳಲು ಆದೇಶ ಮಾಡಿದ. ನಮ್ಮ ಸೈನಿಕರು 1977ರ ಒಪ್ಪಂದವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದುದರಿಂದ ಬೆಟ್ಟದ ಮೇಲೆ ಇರಲಿಲ್ಲ.

ಇದೇ ಸಮಯದಲ್ಲಿ ಪರ್ವೇಜ್ ಮುಷರ್ರಫ್ ತನ್ನ ಸೇನೆಗ ಆದೇಶ ಕೊಟ್ಟಿದ್ದ. ಪಾಕಿಸ್ತಾನದ ಸೇನೆ ಬೆಟ್ಟವನ್ನು ಏರಿ ನಮ್ಮದೇ ಬಂಕರುಗಳನ್ನು ವಶಪಡಿಸಿಕೊಂಡು ಕೂತುಬಿಟ್ಟಿತು. ಪಾಕ್ ಸೇನೆ ಬೆಟ್ಟದ ಮೇಲಿರುವ ಸುದ್ದಿ ದನಗಾಹಿಗಳ ಮೂಲಕ ಭಾರತೀಯ ಸೇನೆಗೆ ತಲುಪಿತು. ಅದರ ಸತ್ಯಾ ಸತ್ಯತೆ ತಿಳಿದುಕೊಂಡು ಬರಲು ನಮ್ಮ ಸೇನೆ ಯೋಧ ಸೌರಬ್ ಕಾಲಿಯಾ ನೇತೃತ್ವದಲ್ಲಿ ಐದು ಜನ ಯೋಧರನ್ನು ಬೆಟ್ಟ ಹತ್ತಿಸಿತು.

ಅಂದು ಮೇ 15 , 1999ರಂದು ಕ್ಯಾಪ್ಟನ್ ಸೌರಬ್ ಕಾಲಿಯಾ ಮತ್ತು 5 ಜನ ಸಂಗಡಿರೊಂದಿಗೆ ಕಸ್ಕರ್ ಭಾಗದಲ್ಲಿದ್ದ ಬಜರಂಗ್ ಪೋಸ್ ಕಡೆಗೆ ಹೊರಟ.
ದಟ್ಟವಾದ ಕಾಡು, ಮೈಕೊರೆಯುವ ಛಳಿ, ಅಘಾದವಾದ ಹಿಮಪಾತವನ್ನು ಲೆಕ್ಕಿಸದೇ ಸೌರಬ್ ಮುನ್ನಡೆದ. ಆ ಬೆಟ್ಟದ ಮೇಲೆ ಎಷ್ಟು ಜನ ಪಾಕಿಗಳು ಇದ್ದಾರೆ ಎಂಬ ಮಾಹಿತಿ ಸೌರಬ್ ಕಾಲಿಯಾಗೆ ಇರಲಿಲ್ಲ. ಬರೀ ಅದರ ಸತ್ಯಾ ಸತ್ಯತೆಯನ್ನು ತಿಳಿದುಕೊಂಡು ವರದಿ ಮಾಡಲು ಬೆಟ್ಟವನ್ನೇರಿ ತನ್ನ ಐದು ಜನರ ತಂಡದೊಂದಿಗೆ ಬಂದಿದ್ದ. ಬೆಟ್ಟವನ್ನೇರಿ ಬಜರಂಗ್ ಪೋಸ್ಟ್ ಹತ್ತಿರ ಹೋಗುತ್ತಿದ್ದಂತೆ ಸೌರಬ್ ಮತ್ತು ಅವನ ತಂಡವನ್ನು ನೂರಾರು ಜನ ಪಾಕಿಸ್ತಾನಿಯರು ಸುತ್ತುವರೆದು ಹಿಡಿದುಬಿಟ್ಟರು.

ಅಲ್ಲಿಯಿಂದಲೇ ಯುದ್ಧಕ್ಕೆ ಪಾಕಿಗಳು ಮುನ್ನುಡಿ ಬರೆದಂತಾಗಿತ್ತು. ಸೌರಬ್ ಕಾಲಿಯ ಮತ್ತು ಸಂಗಡಿಗರನ್ನು ಹಿಡಿದ ಪಾಕಿಗಳು ಸುಮಾರು 25 ದಿನಗಳ ಕಾಲ ಅವರಿಗೆ ಚಿತ್ರಹಿಂಸೆ ಕೊಟ್ಟು ಕೊನೆಯಲ್ಲಿ ಗುಂಡಿಟ್ಟು ಕೊಂದರು. ಜೂನ್ 9 ರಂದು ಪಾಪಿಸ್ತಾನ ಸೌರಬ್ ಕಾಲಿಯಾನ ದೇಹವನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತು.

ದೆಹಲಿಯಲ್ಲಿ ಅವನ ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಿದ ವೈದ್ಯರು ದಂಗುಬಡಿದರು. ಆ ಪರಿಯ ಚಿತ್ರಹಿಂಸೆಯ್ನು ಅವರು ಎಂದೂ ನೋಡಿರಲಿಲ್ಲ. ದೇಹವನ್ನು ಸಿಗರೇಟ್ ಇಟ್ಟು ಸುಟ್ಟಿದ್ದರು. ಕಬ್ಬಿಣದ ಕಂಬಿಗಳನ್ನು ಕಾಯಿಸಿ ಕಣ್ಣುಗುಡ್ಡೆಗಳನ್ನು ಅದರಲ್ಲಿ ಸುಟ್ಟು ಕಿತ್ತುಹಾಕಿದ್ದರು. ಬೆರಳುಗಳನ್ನು ತುಂಡು ತುಂಡಾಗಿ ಕತ್ತರಿಸಿದ್ದರು.

ಚಾಕುವಿನಿಂದ ಚರ್ಮ ಸುಲಿದಿದ್ದರು. ಪ್ರಾಣಿಗಳನ್ನು ಬಿಟ್ಟು ಕಚ್ಚಿಸಿದರು.ಮರ್ಮಾಂಗವನ್ನು ಕತ್ತರಿಸಿ ಬಿಸಾಡಿದರು. ಈ ಎಲ್ಲ ಚಿತ್ರಹಿಂಸೆಯನ್ನು ಕೊಟ್ಟು ಕೊನೆಗೆ ಗೊಂಡಿಟ್ಟುಕೊಂದರು. ಅಲ್ಲಿಗೆ ಯುದ್ಧ ಸ್ಥಿತಿ ನಿರ್ಮಾಣಗೊಂಡಿತು. ಆಗಲೇ ವಾಜಪೇಯಿಯವರ ಸರ್ಕಾರ ಬೆಚ್ಚಿಬಿದ್ದಿತು. ವಾಜಪೇಯಿಯವರು ಗಟ್ಟಿಗೊಳಿಸಿದ್ದ ಸಂಭಂದ ನುಚ್ಚು ನೂರಾಗಿತ್ತು. ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿತ್ತು. ಆಗಲೇ ಘೋಷಣೆಯಾಗಿದ್ದು “ಆಪರೇಷನ್ ವಿಜಯ್”.

ಭಾರತಾಂಬೆಗಾಗಿ ಕಾರ್ಗಿಲ್ ಯುದ್ಧಕ್ಕೆ ಪ್ರಥಮವಾಗಿ ಪ್ರಾಣತ್ಯಾಗ ಮಾಡಿದ ಸೌರಬ್ ಕಾಲಿಯಾನ ವಯಸ್ಸು ಆಗಿನ್ನು 22 ವರ್ಷಗಳು ಮಾತ್ರ.

ಇಂತಹ ವೀರಯೋಧರ ಬಲಿದಾನಗಳಿಂದಲೇ ನಾವಿಂದು ಆರಾಮಾಗಿದ್ದೇವೆ. ಅವರನ್ನು ನೆನಪಿಸಿಕೊಳ್ಳವುದು,ಅವರಿಗೆ ಗೌರವಿಸೋದು ನಮ್ಮ ಕರ್ತವ್ಯ. ಈ ಲೇಖನವನ್ನು ಓದಿದ ಮೇಲೆ ಎರಡು ಹನಿ ಕಣ್ಣೀರು ಸುರಿಸಿಬಿಡಿ. ಅದೇ ನಾವು ಸೈನಿಕರಿಗೆ ಕೊಡುವ ದೊಡ್ಡ ಗೌರವ. ನಮ್ಮಿಂದ ಗಡಿಗೆ ಹೋಗಿ ಹೋರಾಡಿ ಸಾಯೋದಕ್ಕಂತೂ ಆಗಲ್ಲ ಅದಕ್ಕಾಗಿ ದೇಶಕ್ಕಾಗಿ ಬದುಕೋಣ. ಪ್ರಾಣಾರ್ಪಣೆ ಮಾಡಿದ ವೀರ ಯೋಧರನ್ನು ನೆನೆಯೋಣ. ವೀರ ಯೋಧರ ಬಗ್ಗೆ ದಿನಕ್ಕೆ ಒಂದು ಸಾರಿಯಾದರೂ ನೆನಪಿಸಿಕೊಳ್ಳಿ. ಅಳು ಬಂದರೆ ಅತ್ತು ಬಿಡಿ , ಅತ್ತು ಬಿಡಿ.

ಜೈ ಹಿಂದ್

-ಸೌಮ್ಯ ಪಾಟೀಲ್

  • 4.9K
    Shares