ಜಿಹಾದಿ ಭಯೋತ್ಪಾದಕನಿಂದ ಸುಟ್ಟು ಬೂದಿಯಾದ ಜಗತ್ಪ್ರಸಿದ್ಧ ವಿಶ್ವವಿದ್ಯಾಲಯದ ಕಥೆ ನಿಮಗೆ ಗೊತ್ತೆ?

ನಲಂದಾ ವಿಶ್ವ ವಿದ್ಯಾಲಯದ ಹೆಸರಿನ ಕುರಿತಂತೆ ಸಾಕಷ್ಟು ಸಿದ್ಧಾಂತಗಳಿವೆ.

* ನಲಂದಾ ಅನ್ನೋದು ಇಲ್ಲಿನ ಮಾವಿನ ಮರದ ಕೆಳಗೆ ವಾಸವಾಗಿದ್ದ ನಾಗವೊಂದರ ಹೆಸರಂತೆ.

* ಭಗವಾನ್ ಬುದ್ಧ ಹರಿಸಿದ ಅಖಂಡ ಕೃಪೆಯ ಕಾರಣಕ್ಕಾಗಿ ನಲಂದಾ ಎಂಬ ಹೆಸರು ಬಂತಂತೆ.

* ವಿಶ್ವವಿದ್ಯಾಲಯ ನಿರ್ಮಾಣಗೊಂಡ ನಂತರ ಅದಕ್ಕೆ ಹರಿದು ಬಂದ ಧನ ಸಹಾಯ ಅಪಾರ. ಕೊಡುವವನಿಗೆ ಎಷ್ಟು ಕೊಟ್ಟರೂ ತೃಪ್ತಿಯಾಗುತ್ತಿರಲಿಲ್ಲವಂತೆ. ಹೀಗಾಗಿ ನಲಂದಾ ಎನ್ನಲಾಯ್ತಂತೆ. ಕೊನೆಯದನ್ನೇ ಬಹುತೇಕ ಪಂಡಿತರು ಒಪ್ಪಿಕೊಂಡಿದ್ದಾರೆ.

ಇದು ಪ್ರಸ್ತುತ ಪಟ್ನಾದಿಂದ 72 ಕಿ.ಮೀ ದೂರದಲ್ಲಿರುವ ರಾಜಗೀರ್ ನಿಂದ ಏಳು ಮೈಲು ದೂರದಲ್ಲಿ ಇದೆ

* ಸುಮಾರು 1500 ಕ್ಕೂ ಪ್ರಾಧ್ಯಾಪಕರ ವೃಂದವಿತ್ತು. ಪ್ರಾಧ್ಯಾಪಕರ ಪ್ರೌಢತೆ ಅವರುಗಳು ಕರಗತ ಮಾಡಿಕೊಂಡ ಸೂತ್ರ-ಶಾಸ್ತ್ರಗಳ ಮೇಲೆ ಅವಲಂಬಿತವಾಗಿತ್ತು.

ಉದಾಹರಣೆಗೆ ಇಲ್ಲಿ:

1000 ಪ್ರಾಧ್ಯಾಪಕರು 20 ಸೂತ್ರ-ಶಾಸ್ತ್ರಗಳ ಮೇಲೆ ಪಾಂಡಿತ್ಯ ಪಡೆದವರಾಗಿದ್ದರು.
500 ಅಧ್ಯಾಪಕರು 30 ಸೂತ್ರ-ಶಾಸ್ತ್ರಗಳ ಮೇಲೆ ಪ್ರಬುದ್ಧತೆ ಹೊಂದಿದ್ದರಂತೆ.
ಹ್ಯೂಎನ್ತ್ಸಾಂಗನೂ ಸೇರಿದಂತೆ ಹತ್ತು ಜನ 50 ಸೂತ್ರ-ಶಾಸ್ತ್ರಗಳನ್ನು ಕರಗತ ಗೊಳಿಸಿಕೊಂಡಿದ್ದರಂತೆ.

ಇಲ್ಲಿಯ ಶಿಕ್ಷಣ ನಮ್ಮ ಈಗಿನ ಪಿಹೆಚ್ಡಿ ತರದ್ದಾಗಿತ್ತು. ಅತ್ಯಂತ ಉನ್ನತಮಟ್ಟದ ಶಿಕ್ಷಣ ಕೊಡುವುದು ಅದು ಕೂಡಾ ಒಬ್ಬ ಪ್ರಾಧ್ಯಾಪಕರಿಗೆ ಒಬ್ಬರು ಅಥವಾ ಇಬ್ಬರು ಮಾತ್ರ ಶಿಷ್ಯರಿರುತಿದ್ದರು.

ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿವೇತನ ಸಹ ಕೊಡಲಾಗುತಿತ್ತು.

ಹ್ಯುಯೆನ್ತ್ಸಾಂಗನ ಕಾಲಕ್ಕೆ ಕುಲಪತಿಯಾಗಿದ್ದ ಶೀಲಭದ್ರ ಒಂದು ರೀತಿಯಲ್ಲಿ ಸರ್ವಜ್ಞನೇ ಆಗಿದ್ದನಂತೆ.

ವಿದ್ಯಾರ್ಥಿಗಳ ಆಯ್ಕೆ ಇಂದಿನ ಸಿ.ಇ.ಟಿಯಂತೆ ಪ್ರವೇಶ ಪರೀಕ್ಷೆಗಳ ಮುಖಾಂತರ ವಾಗುತಿತ್ತು.

ವಿದ್ಯಾರ್ಥಿಗಳು ಇಲ್ಲಿ ಓದಲು ದೇಶ ವಿದೇಶಗಳಿಂದ ಬರುತಿದ್ದರು.

ಇತ್ಸಿಂಗ್ ನು ವಿವರಿಸಿದಹಾಗೆ
ವಿಶ್ವವಿದ್ಯಾಲಯದಲ್ಲಿ ಸಮಯವನ್ನು ನೀರ್ಗಡಿಯಾರದ ಮೂಲಕ ಲೆಕ್ಕ ಹಾಕುತ್ತಿದ್ದರಂತೆ. ದೊಡ್ಡ ಪಾತ್ರೆಯೊಂದರಲ್ಲಿ ತಳದಲ್ಲಿ ರಂಧ್ರವಿರುವ ಚಿಕ್ಕ ಪಾತ್ರೆಯನ್ನು ತೇಲಿಬಿಡಲಾಗುತ್ತಿತ್ತು. ಇದು ನಾಲ್ಕು ಬಾರಿ ತಳ ಮುಟ್ಟಿದರೆ ಒಂದು ಗಂಟೆಯಾದಂತೆ. ಆಗ ಬಲವಾಗಿ ಗಂಟೆ ಬಡಿಯಲಾಗುತ್ತಿತ್ತಂತೆ (ಬುದ್ಧ ಮಂದಿರಗಳಲ್ಲಿ ಇದನ್ನು ಗಾಂಗ್ ಎನ್ನುತ್ತಾರೆ).

ಹೀಗೆ ದಿನದ ಅವಧಿ ಎಂಟುಗಂಟೆಗಳದ್ದು. ಮಧ್ಯಾಹ್ನದ ಅವಧಿ ಸೂಚಕ ಗಂಟೆ ಮತ್ತು ಶಂಖದ ಸದ್ದು ಬಂದ ನಂತರ ಆಹಾರ ಸೇವಿಸುವಂತಿರಲಿಲ್ಲ. ಪ್ರತಿ ದಿನ ಬೆಳಗ್ಗೆ ಏಳುವುದಕ್ಕೂ ಘಂಟಾನಾದವಿರುತ್ತಿತ್ತು.

ಇಲ್ಲಿ ಪ್ರಯೋಗಾಲಯಗಳೂ ಇದ್ದು, ಪ್ರಾಯೋಗಿಕ ಪರೀಕ್ಷೆಗಳನ್ನು ಸಹ ನಡೆಸಲಾಗುತಿತ್ತು.

ರತ್ನಸಾಗರ, ರತ್ನೋದಧಿ, ರತ್ನರಾಜಕವೆಂಬ ಮೂರು ಬೃಹತ್ ಕಟ್ಟಡಗಳಲ್ಲಿ ಗ್ರಂಥ ಸಂಗ್ರಹವಿತ್ತಂತೆ. ರತ್ನಸಾಗರವಂತೂ ಅತ್ಯಂತ ಅಮೂಲ್ಯ ಗ್ರಂಥಗಳನ್ನು ಹೊಂದಿದ ಒಂಭತ್ತು ಅಂತಸ್ತಿನ ಕಟ್ಟಡವಾಗಿತ್ತು. ಹತ್ತು ವರ್ಷಗಳ ಕಾಲ ಇಲ್ಲಿ ಅಧ್ಯಯನ ಮಾಡಿದ ಇತ್ಸಿಂಗನು ಸುಮಾರು ಐದುಲಕ್ಷ ಶ್ಲೋಕಗಳನ್ನು ಒಳಗೊಂಡ ನಾಲ್ಕು ನೂರು ಸಂಸ್ಕೃತ ಪುಸ್ತಕಗಳನ್ನು ಸಂಗ್ರಹಿಸಿದ್ದನಂತೆ. ಅದನ್ನು ತನ್ನ ದೇಶಕ್ಕೆ ಒಯ್ದದ್ದಲ್ಲದೇ ಚೀನೀ ಭಾಷೆಗೆ ಅನುವಾದವನ್ನು ಮಾಡಿದ್ದ.

ಅಷ್ಟು ದೊಡ್ಡ ಗ್ರಂಥಾಲಯಕ್ಕೆ ಯಾಕೆ ಬೆಂಕಿ ಬಿತ್ತು ಗೊತ್ತಾ?ಆ ಗ್ರಂಥಾಲಯದ ಗರ್ಭ ಅದೆಷ್ಟು ಪಾಂಡಿತ್ಯದ ಗ್ರಂಥಗಳನ್ನು ಹೊಂದಿತ್ತೆಂದರೆ ಅದನ್ನು ಭಸ್ಮ ಮಾಡಲು ಸತತ ಮೂರು ತಿಂಗಳುಗಳು ಬೇಕಾದವು ಕೊನೆಗೂ ಅಗ್ನಿದೇವನೆ ತಣಿದು ನಿಂತ!! ಇದರ ಹಿಂದಿನ ಸ್ವಾರಸ್ಯಕರ ಕಥೆ ಹೀಗಿದೆ.

ಭುಕ್ತಿಯಾರ ಖಿಲ್ಜಿ ಎಂಬ ಓರ್ವ ಜಿಹಾದಿ ಮತಾಂಧರಾಜ, ಅಸ್ವಸ್ಥನಾದ! ತನ್ನಲ್ಲಿರುವ 400 ಕ್ಕೂ ಅಧಿಕ ವೈದ್ಯರಿಗೆ ಈತನ ರೋಗ ಗುಣಪಡಿಸಲಾಗಲಿಲ್ಲ!! ಕೊನೆಗೆ ಯಾರೋ ನಲಂದಾ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀ ಭದ್ರ ಅವರ ಹೆಸರು ಸೂಚಿಸುತ್ತಾರೆ!

ಮೊದ ಮೊದಲು ಅನ್ಯ ಧರ್ಮದವರಿಂದ ತಾನು ಚಿಕಿತ್ಸೆ ಪಡೆಯುವುದಿಲ್ಲ ಎಂದು ನಿರಾಕರಿಸುತ್ತಾನೆ, ಆದರೆ ದಿನದಿಂದ ದಿನಕ್ಕೆ ತನ್ನ ದೇಹ ಕ್ಷೀಣಿಸುತ್ತಾ ಹೋದಾಗ ಧಿಗ್ಭ್ರಾಂತನಾಗಿ ಭದ್ರಅವರನ್ನು ಕರೆಸುತ್ತಾನೆ.ಆದರೆ ಅಲ್ಲಿಯೂ ಸಹ ತನ್ನದೊಂದು ಷರತ್ತು ಮುಂದಿಡುತ್ತಾನೆ ಅದೇನೆಂದರೆ ಯಾವುದೇ ರೀತಿಯ ಔಷಧಿಗಳಿಲ್ಲದೆ ಆತನನ್ನು ಗುಣಪಡಿಸಬೇಕೆಂದು.ಅದಕ್ಕೆ ಭದ್ರ ಸರಿ ಎಂದು ನಾಳೆ ಬರುವುದಾಗಿ ಹೇಳಿ ಹೊರಡುತ್ತಾರೆ.

ಮರುದಿನ ಒಂದು ಖುರಾನ್ ಖಿಲ್ಜಿಯ ಕೈಗಿಟ್ಟು ದಿನಾ ಈ ಪುಟದಿಂದ ಈ ಪುಟದವರೆಗೆ ಓದು ಎಂದು ಹೇಳುತ್ತಾರೆ. ಆಶ್ಚರ್ಯವೆಂದರೆ ಕೆಲವೆ ದಿನಗಳಲ್ಲಿ ಆತ ಗುಣಮುಖನಾಗುತ್ತಾನೆ.

ಆದರೆ ಓರ್ವ ಅನ್ಯಧರ್ಮದವಿನಿಂದ ಗುಣಮುಖನಾದೆ ಎಂಬ ಸತ್ಯವನ್ನು ಇಂಗಿಸಿಕೊಳ್ಳಲು ಆತನಿಂದ ಸಾಧ್ಯವಾಗಲಿಲ್ಲ.

ಕೂಡಲೇ ತನ್ನ ಸೈನ್ಯವನ್ನು ಕರೆದು ನಲಂದಾ ದಲ್ಲಿ ಖುರಾನ್ ಪುಸ್ತಕಗಳಿಗಾಗಿ ಹುಡುಕುವಂತೆ ಹೇಳುತ್ತಾನೆ, ಒಂದು ವೇಳೆ ಸಿಗದೇ ಹೋದಲ್ಲಿ ಇಡೀ ವಿಶ್ವವಿಶ್ವವಿದ್ಯಾಲಯವನ್ನೇ ಸುಟ್ಟು ಭಸ್ಮ ಮಾಡುವಂತೆ ಆಜ್ಞೆ ಮಾಡುತ್ತಾನೆ.

ಮುಂದೆ ನಡೆದದ್ದು ತಮಗೆಲ್ಲರಿಗೂ ಗೊತ್ತಿರುವ ಕರಾಳ ಇತಿಹಾಸ!

ಅಹಿಂಸೆಯೇ ಪರಮೋಧರ್ಮ ಎಂದು ಪಠಿಸುತಿದ್ದ ಅದೆಷ್ಟೋ ವಿದ್ವಾಂಸರ ನೆತ್ತರು ಕಾರಂಜಿಯಂತೆ ಹಾರಿತು!!

ಗ್ರಂಥಾಲಯ ಮೂರು ತಿಂಗಳಗಳ ಕಾಲ ಬೆಂಕಿಯನಾಲಿಗೆಯಲ್ಲಿ ಧಗಧಗಿಸಿತು…!!

ಸತತ ಎಂಟು ನೂರು ವರ್ಷಗಳು ಪ್ರಜ್ವಲಿಸಿದ ಜ್ಞಾನಜ್ಯೋತಿ ಬೆಂಕಿಯಲ್ಲೇ ಮಂಕಾಯಿತು.

ಶೀಲಭದ್ರ ಕೊಟ್ಟ ಚಿಕಿತ್ಸೆ ಏನು ಅಂತ ಯೋಚಿಸ್ತಾಇದಿರಾ! ? ಆತ ಆಯುರ್ವೇದದ ಕೆಲ ಔಷಧಿಗಳ ಲೇಪನ ತಾ ಕೊಟ್ಟ ಆ ಖುರಾನಿನ ಪುಟಗಳ ಮೇಲೆ ಲೇಪನ ಮಾಡಿದ್ದ . ಖುರಾನ್ ಓದುವಾಗ ಆ ದ್ರವ್ಯಗಳ ವಾಸನೆ ಮೂಗಿನ ಮುಖಾಂತರ ಹಾಗೂ ಪ್ರತಿಬಾರಿ ಪುಟತಿರುಗಿಸುವಾಗ ಆತ ನಾಲಿಗೆಗೆ ಎಂಜಲಿಗೆಂದು ಬೆರಳು ತಾಗಿಸಿ ಪುಟ ತಿರುಗಿಸುತ್ತಿದ್ದಾಗ ಬಾಯಿಯಮುಖಾಂತರ ಆತನ ದೇಹ ಸೇರುತಿತ್ತು!!

ಅಂತು ಹಾವಿಗೆ ಹಾಲು ಎರಯೋ ಕಥೆ ಅಂದರೆ ಇದೆ ನೋಡಿ.

ಅಂಥಃ ಭವ್ಯ ವಿಶ್ವವಿದ್ಯಾಲಯದ ಪುನರ್ ಸ್ಥಾಪನೆಯಾದರೆ!? ಯೆಸ್ 2015 ರಿಂದ ಈ ಕೆಲಸ ಮತ್ತೆ ಶುರುವಾಗಿದೆ.

ಭಾರತ ಸರ್ಕಾರ 2700 ಕೋಟಿ ರೂಪಾಯಿಗಳನ್ನು ಹತ್ತು ವರ್ಷಗಳ ಖರ್ಚಿಗೆಂದು ಬಿಡುಗಡೆ ಮಾಡಿದೆ. …!!

ಏನಾಗುತ್ತೋ ಕಾದು ನೋಡೋಣ! !

– ಡಾ. ನಾಗನಾಥ್ ಯಾದಗಿರಿ