ಅಂತರಾಷ್ಟ್ರೀಯಸುದ್ದಿ ಜಾಲ

ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿ ಪ್ರಯೋಗ : ಅಮೇರಿಕಾ ಟಾರ್ಗೆಟ್..!!??

ಅದ್ಯಾಕೋ ಗೊತ್ತಿಲ್ಲ ಉತ್ತರ ಕೊರಿಯಾಗೆ ಅಮೇರಿಕಾ ಮೇಲೆ ಎಲ್ಲಿಲ್ಲದ ಪ್ರೀತಿ..!! ಅಯ್ಯೋ ಇದೆನಿದು ಪ್ರತಿದಿನ ಅವರ ಜಗಳದ ಬಗ್ಗೆ ಓದತಿವಿ ಇವರೇನು ಪ್ರೀತಿ ಅಂತಿದಾರೆ ಅಂತಿರಾ?? ಹಾಗೆನೂ ಇಲ್ಲ ಈಗ ಈ ಎರಡು ದೇಶಗಳ ನಡುವೇ ಶೀತಲ ಸಮರ ಶುರುವಾಗಿದೆ.

ಉತ್ತರ ಕೊರಿಯಾ ಮತ್ತೆ ತನ್ನ ಸೊಕ್ಕಿನ ವರ್ತನೆಯನ್ನು ತೋರಿಸುತ್ತಿದೆ‌.

ಸದಾ ಯುದ್ಧದ ಉತ್ಸಾಹದಲ್ಲಿರುವ ಉತ್ತರ ಕೊರಿಯಾ, ಅಮೇರಿಕಾದ ಭೂಭಾಗವನ್ನು ತಲುಪುವಂತಹ ಅಣ್ವಸ್ತ್ರ ಸಿಡಿತೆಲೆ ಹೊತ್ತೊಯ್ಯುವ ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯನ್ನು ಮಂಗಳವಾರ ಯಶಸ್ವಿಯಾಗಿ ಪ್ರಯೋಗಿಸಿದೆ.

ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಇದೊಂದು ಮಹಾ ಸಾಧನೆ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದ ಸರಕಾರ ಹೆಮ್ಮೆ ಪಡುತ್ತಿದೆ. ನಮ್ಮ ತಂಟೆಗೆ ಬಂದರೆ ಉಷಾರ ಎಂದು ಜಗತ್ತಿನ ದೊಡ್ಡಣ್ಣ ಅಮೇರಿಕಾಗೆ ಮತ್ತೊಮ್ಮೆ ಪರೋಕ್ಷವಾಗಿ ಧಮಕಿ ಹಾಕಿದೆ‌. ಆದರೆ ಅಮೇರಿಕಾ ಇಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲಾ ಎಂದು ಪ್ರತ್ಯುತ್ತರ ನೀಡಿದೆ.

ಅಂತರಾಷ್ಟ್ರೀಯ ದಿಗ್ಬಂಧನಗಳ ನಡುವೆಯೂ ಕಳೆದೊಂದು ವರ್ಷದಲ್ಲಿ ಸರಣಿಯೋಪಾದಿಯಲ್ಲಿ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದ ಉತ್ತರ ಕೊರಿಯಾ ಸೆಪ್ಟೆಂಬರ್ ಬಳಿಕ ಸದ್ದು ಅಡಗಿಸಿತ್ತು.

ಮಂಗಳವಾರ ಹಾಫ್ ಸಾಂಗ್-15 ಎಂಬ ಅತ್ಯಾಧುನಿಕ ಕ್ಷಿಪಣಿಯನ್ನು ಉಡಾವಣೆ ವಾಹನದ ಮೂಲಕ ದಕ್ಷಿಣ ಪಿಯಾಂಗ್ ನ ಪ್ರಾಂತದಲ್ಲಿ ಸ್ಥಳೀಯ ಕಾಲಮಾನ ಬೆಳಗಿನ ಜಾವ ಮೂರು ಗಂಟೆಗೆ ಉಡಾಯಿಸಲಾಯಿತು ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ.

ಶಕ್ತಿಶಾಲಿ

ಹಾವ್‌ಸಾಂಗ್-14 ಕ್ಷಿಪಣಿ ಹೋಲಿಸಿದರೆ ಹಾವ್‌ಸಾಂಗ -15 ಮಿಷೆಲ್ ಹೆಚ್ಚು ಶಕ್ತಿಶಾಲಿಯಾಗಿದೆ. ಕ್ಷಿಪಣಿಯ 4475 ಕಿಲೋಮೀಟರ್ ಎತ್ತರದ ದೂರ ಕ್ರಮಿಸಿ (ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕ್ಕಿಂತಲೂ ದೂರ) ಬಳಿಕ ಉಡಾವಣಾ ಸ್ಥಳದಿಂದ 950 ಕಿಮೀ ದೂರದ ಜಪಾನ್ ತೀರದ ಸಮುದ್ರದಲ್ಲಿ ಉರಿದುಬಿತ್ತು. ಉತ್ತರ ಕೊರಿಯಾದ ಜಪಾನ್ ಗಡಿಯಲ್ಲಿ ನಿಂತು ಇದನ್ನು ಹಾರಿಸಿದರೆ ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ಡಿಸಿಯನ್ನು ತಲುಪಬಲ್ಲದು ಹೀಗಾಗಿಯೇ ಈ ಸಾಧನೆಯನ್ನು ಕಿಮ್ ಜಾಂಗ್ ಉನ್ ಸರ್ಕಾರ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ದೇಶಕ್ಕೆ ದೊರೆತ ಮಹಾ ಯಶಸ್ಸು ಎಂದು ಬಣ್ಣಿಸಿದೆ.

ನೆರೆಯ ರಾಷ್ಟ್ರಗಳಿಗೆ ಅಮೆರಿಕ ಅಭಯ :
ಉತ್ತರ ಕೊರಿಯಾದ ಈ ಕ್ರಮ ನೆರೆಯ ರಾಷ್ಟ್ರಗಳಾದ ಜಪಾನ್ ದಕ್ಷಿಣ ಕೊರಿಯಾದ ನಿದ್ದೆಗೆಡಿಸಿದ್ದು ಈ ಎರಡು ರಾಷ್ಟ್ರಗಳು ಆಪ್ತನಾಗಿರುವ ಅಮೆರಿಕ ಇದೊಂದು ಪ್ರಚೋದಾತ್ಮಕ ನಡೆ ಎಂದು ಕಿಡಿಕಾರಿದ ಇಂತಹ ಬೆದರಿಕೆ ತಂತ್ರಗಳಿಗೆ ತಮ್ಮ ದೇಶ ಬಗ್ಗುವುದಿಲ್ಲ ಸಮಾನ ಮನಸ್ಕ ರಾಷ್ಟ್ರಗಳ ಹಿತಾಸಕ್ತಿ ಕಾಪಾಡಲು ತಾವು ಬದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರುಗೇಟು ನೀಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ
Show More

Related Articles