ಅಂಕಣರಾಷ್ಟ್ರೀಯಸುದ್ದಿ ಜಾಲ

ಹೆಂಡತಿ ಬರೆದ ಪತ್ರ ಹಾಗೆಯೇ ಜೇಬಿನಲ್ಲಿತ್ತು ಆದರೆ ಆ ಪತ್ರವನ್ನು ಓದಲು ಆ ಯೋಧ ಬದುಕಿರಲಿಲ್ಲ. ವೀರ ಯೋಧನ ಕಥನ..!!

ಹೆಂಡತಿ ಬರೆದ ಪತ್ರ ಹಾಗೆಯೇ ಜೇಬಿನಲ್ಲಿತ್ತು ಆದರೆ ಆ ಪತ್ರವನ್ನು ಓದಲು ಆ ಯೋಧ ಬದುಕಿರಲಿಲ್ಲ. ವೀರ ಯೋಧನ ಕಥನ..!!

ನಾನೇನಾದರೂ ಯುದ್ಧದಲ್ಲಿ ಮರಣ ಹೊಂದಿದರೆ, ನಮಗೆ ಹುಟ್ಟುವ ಮಗನನ್ನು ಒಮ್ಮೆಯಾದರೂ ಕರೆದುಕೊಂಡು ಬಂದು, ನಿನ್ನಪ್ಪ ದೇಶಕೋಸ್ಕರ ಪ್ರಾಣ ನೀಡಿದ ಜಾಗ ಈ ಕಾರ್ಗಿಲ್ ಅಂಥ ಹೇಳಿ ತೋರಿಸುತ್ತೀಯಾ

ನಾನೇನಾದರೂ ಯುದ್ಧದಲ್ಲಿ ಮರಣ ಹೊಂದಿದರೆ, ನಮಗೆ ಹುಟ್ಟುವ ಮಗನನ್ನು ಒಮ್ಮೆಯಾದರೂ ಕರೆದುಕೊಂಡು ಬಂದು, ನಿನ್ನಪ್ಪ ದೇಶಕೋಸ್ಕರ ಪ್ರಾಣ ನೀಡಿದ ಜಾಗ ಈ ಕಾರ್ಗಿಲ್ ಅಂಥ ಹೇಳಿ ತೋರಿಸುತ್ತೀಯಾ ಎಂದು ತನ್ನ ಹೆಂಡತಿಗೆ ಪತ್ರ ಬರೆದ ಯೋಧ ತಾನು ಬರೆದಂತೆ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನು ಹೊಂದಿದ್ದ. ಹೆಸರು ಮೇಜರ್ ರಾಜೇಶ್ ಸಿಂಗ್.

ಯೋಧ ರಾಜೇಶ್ ಸಿಂಗ್ ಹುಟ್ಟಿದ್ದು 25 ಡಿಸೆಂಬರ್ 1970 ಉತ್ತರ ಪ್ರದೇಶದ ನೈನಿತಾಲ್ ನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಜೋಸೆಫ್ ಶಾಲೆಯಲ್ಲಿ , ನಂತರ ಪದವಿಪೂರ್ವ ಶಿಕ್ಷಣವನ್ನು ಸರ್ಕಾರಿ ಕಾಲೇಜ್ ನಲ್ಲಿ , ಪದವಿ ಶಿಕ್ಷಣವನ್ನು ಕುಮಾನ್ ಯುನಿವರ್ಸಿಟಿಯಲ್ಲಿ ಮುಗಿಸಿದರು.

ತದನಂತರ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಸೇರಿಕೊಂಡರು. 11 ಡಿಸೆಂಬರ್ 1993ರಲ್ಲಿ ಸೇನೆಗೆ ಆಯ್ಕೆಯಾದರು. ಸೇನೆಯಲ್ಲಿ 18 ಗ್ರೆನೆಡಿಯರ್ ಗೆ ನಿಯುಕ್ತಿಗೊಂಡರು.

ಮೇಜರ್ ರಾಜೇಶ್ ಅಧಿಕಾರಿ ಸೇರಿ ಆರು ವರ್ಷಗಳಾಗುವುದರೊಳಗೆ ಕಾರ್ಗಿಲ್ ಯುದ್ಧ ಘೋಷಣೆಯಾಯ್ತು. ಮೇಜರ್ ರಾಜೇಶ್ ಅಧಿಕಾರಿಗೆ ಹೆಲಿಕಾಪ್ಟರಗಳನ್ನು ತೊಲೊಲಿಂಗ್ ನ ಬಳಿಗೊಯ್ದು ಶತ್ರುಗಳ ಮೇಲೆ ನೇರ ದಾಳಿ ಮಾಡುವ ಜವಾಬ್ದಾರಿ ವಹಿಸಲಾಯ್ತು.

ಯುದ್ಧ ಘೋಷಣೆ ಯಾಕಾಯ್ತು? ಪಾಕಿಸ್ತಾನ ಕಂತ್ರಿ ಬುದ್ಧಿಯ ಬಗ್ಗೆ ಸ್ವಲ್ಪ ತಿಳಿದು ಕೊಂಡರೆ ಕಾರ್ಗಿಲ್ ಯುದ್ಧ ಯಾಕಾಯ್ತು ಎನ್ನುವುದರ ಬಗ್ಗೆ ಅರ್ಥವಾಗುತ್ತದೆ.

1977ರಲ್ಲಿ ಪಾಕಿಸ್ತಾನ ಮತ್ತು ಭಾರತದ ರಕ್ಷಣಾ ಸಚಿವರು ಎದುರು ಬದುರು ಕುಳಿತು ಒಂದು ಒಪ್ಪಂದ ಮಾಡಿಕೊಂಡರು. ಆ ಒಪ್ಪಂದ ಇನ್ನು ಮುಂದೆ ಸೌಹಾರ್ದತೆಯಿಂದ ಇರೋಣ ಎಂಬುವಂತ ಒಪ್ಪಂದ. ಸೆಪ್ಟೆಂಬರ್ 1ತಿಂಗಳಿನಿಂದ ಏಪ್ರಿಲ್ ವರೆಗೆ ಅಲ್ಲಿ ವಿಪರೀತ ಮಂಜು ಸುರಿಯುತ್ತದೆ.

ಆ ಮಂಜಿನಿಂದ ಎರಡೂ ಕಡೆಯ ಸೈನಿಕರ ಜೀವಕ್ಕೂ ಅಪಾಯ. ಹೀಗಾಗಿ ಸೆಪ್ಟೆಂಬರ್ 15ರಿಂದ ಏಪ್ರಿಲ್ 15ರವರೆಗೆ ಯಾರೊಬ್ಬರೂ ಮತ್ತೊಬ್ಬರ ಬೇಲಿಗಳನ್ನು ಹಾರಿ ಗುಡ್ಡಗಳನ್ನು ಆಕ್ರಮಿಸಬಾರದು ಅಂತ ಆ ಒಪ್ಪಂದವಾಗಿತ್ತು. ಅಷ್ಟೇ ಅಲ್ಲ ಆ ಸಮಯದಲ್ಲಿ ಆ ಬೆಟ್ಟವನ್ನು ಇಳಿದು ಕೆಳ ಹೋಗಬೇಕು. ಏಪ್ರಿಲ್ 15ರ ನಂತರ ಮೇಲೆ ಏರಿ ತಮ್ಮ ತಮ್ಮ ಜಾಗಕ್ಕೆ ಬಂದು ಗಡಿ ಕಾಯಬೇಕೆಂದು ಆ ಒಪ್ಪಂದವಾಗಿತ್ತು.

1998ರಲ್ಲಿ ನವಾಜ್ ಷರೀಫ್ ಮತ್ತು ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಎದುರು ಬದುರು ಕುಂತರು , ಕೈ ಕುಲುಕಿದರು. ರೈಲು ಬಿಟ್ಟರು , ಬಸ್ಸೂ ಬಿಟ್ಟರು. ಹಿಂದೂಸ್ತಾನಿ-ಪಾಕಿಸ್ತಾನಿ ಭಾಯಿ ಭಾಯಿ ಎಂದೆಲ್ಲಾ ಭಾರತೀಯರು ಸಂಭ್ರಮ ಪಟ್ಟರು. ಆಗಲೇ ನಡೆಯಿತು ನೋಡಿ ಅಚಾತುರ್ಯ. ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನ ತೋರಿಸಲು ಮುಂದಾಯಿತು.

ಕಾರ್ಗಿಲ್ , ಬಟಾಲಿಕ್ , ದ್ರಾಸ್ ಇವೆಲ್ಲ ಲೈನ್ ಆಫ್ ಕಂಟ್ರೋಲ್ ನ ಉದ್ದಕ್ಕೂ ಇರುವ ಗಡಿ ಭಾಗದ ಪ್ರದೇಶಗಳು. ಲಡಾಖ್ ನ ಭಾಗಗಳಿವು. ರಕ್ಷಣಾ ದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರದೇಶಗಳು. ಶ್ರೀನಗರದಿಂದ ಸೋನ್ ಮಾರ್ಗ್ ಗೆ ಅಲ್ಲಿಂದ ಜೋಜಿ ಲಾ ಪಾಸ್ ನ ನಂತರ ಇರುವುದೇ ಕಾರ್ಗಿಲ್ ಪ್ರದೇಶ. ಜೋಜಿ ಲಾ ಪಾಸ್ ಕಳೆದುಕೊಂಡರೆ ಕತೆ ಮುಗಿದಂತೆ.

ಶ್ರೀನಗರದೊಂದಿಗೆ ಲಡಾಖ್ ನ ಸಂಪರ್ಕವೇ ಇಲ್ಲ‌‌. ಜೋಜಿ ಲಾ ಪಾಸ್ , 18 ಸಾವಿರ ಅಡಿ ಬೆಟ್ಟದೆತ್ತರಕ್ಕೂ ಸಾಗುವ ಮಾರ್ಗ. ಅತ್ಯಂತ ಕಡಿದಾದ ಪ್ರದೇಶ. ಮೇ ತಿಂಗಳಿನವರೆಗೂ ಅಲ್ಲಿ ಮಂಜು ಬೀಳುತ್ತಿರುತ್ತದೆ. ಒಪ್ಪಂದದ ಪ್ರಕಾರ ಭಾರತೀಯ ಸೈನಿಕರು ಬೆಟ್ಟದಿಂದ ಕೆಳಗೆ ಇಳಿದು ಹೋಗಿರುತ್ತಾರೆ. ಇದನ್ನರಿತ ಪರ್ವೇಜ್ ಮುಷರಫ್ ತನ್ನ ನರಿ ಬುದ್ದಿಯನ್ನು ತೋರಿಸಲು ಮುಂದಾದ.

1977ರಲ್ಲಿ ಆಗಿದ್ದ ಒಪ್ಪಂದವನ್ನು ಪಾಕಿಸ್ತಾನಿ ಸೇನಾ ನಾಯಕ ಪರ್ವೇಜ್ ಮುಷರಫ್ ಗಾಳಿಗೆ ತೂರಲು ರೆಡಿಯಾದ. ಒಪ್ಪಂದದ ಪ್ರಕಾರ ಮಂಜು ಬೀಳುವ ಪರಣಾಮ ನಮ್ಮ ಸೈನಿಕರು ಬೆಟ್ಟವನ್ನು ಇಳಿದು ಕೆಳ ಬಂದಿದ್ದರು. ಆಗ ಮುಷರಫ್ ಒಂದು ಯೋಜನೆ ಹಾಕಿ ತನ್ನ ಸೈನಿಕರನ್ನು ಬೆಟ್ಟ ಏರಿಸಿ ನಮ್ಮ ಬಂಕರುಗಳನ್ನು ವಶಪಡಿಕೊಳ್ಳಲು ಆದೇಶ ಮಾಡಿದ. ನಮ್ಮ ಸೈನಿಕರು 1977ರ ಒಪ್ಪಂದವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದುದರಿಂದ ಬೆಟ್ಟದ ಮೇಲೆ ಇರಲಿಲ್ಲ.

ಇದೇ ಸಮಯದಲ್ಲಿ ಪರ್ವೇಜ್ ಮುಷರ್ರಫ್ ತನ್ನ ಸೇನೆಗ ಆದೇಶ ಕೊಟ್ಟಿದ್ದ. ಪಾಕಿಸ್ತಾನದ ಸೇನೆ ಬೆಟ್ಟವನ್ನು ಏರಿ ನಮ್ಮದೇ ಬಂಕರುಗಳನ್ನು ವಶಪಡಿಸಿಕೊಂಡು ಕೂತುಬಿಟ್ಟಿತು. ಪಾಕ್ ಸೇನೆ ಬೆಟ್ಟದ ಮೇಲಿರುವ ಸುದ್ದಿ ದನಗಾಹಿಗಳ ಮೂಲಕ ಭಾರತೀಯ ಸೇನೆಗೆ ತಲುಪಿತು. ಅದರ ಸತ್ಯಾ ಸತ್ಯತೆ ತಿಳಿದುಕೊಂಡು ಬರಲು ನಮ್ಮ ಸೇನೆ ಯೋಧ ಸೌರಬ್ ಕಾಲಿಯಾ ನೇತೃತ್ವದಲ್ಲಿ ಐದು ಜನ ಯೋಧರನ್ನು ಬೆಟ್ಟ ಹತ್ತಿಸಿತು.

ಸೌರಬ್ ಕಾಲಿಯಾ ಮತ್ತು ತಂಡ ಬೆಟ್ಟವನ್ನೇನೋ ಏರಿತು. ಹಾಗೆಯೇ ಮರಳಿ ಕೂಡಾ ಬಂದರು. ಆದರೆ ಬಂದದ್ದು ಬರೀ ಅವರ ತುಂಡು ತುಂಡಾದ ದೇಹ. ಬೆಟ್ಟವನ್ನೇರಿದ ಸೌರಬ್ ಕಾಲಿಯಾ ಮತ್ತು ತಂಡವನ್ನು ಹಿಡಿದ ಪಾಕಿಗಳು 25 ದಿನಗಳ ಕಾಲ ಹಿಂಸಿಸಿ ಕೊನೆಗೆ ತುಂಡು ತುಂಡಾಗಿ ಕತ್ತರಿಸಿ ಭಾರತೀಯ ಸೇನೆಗೆ ಹಸ್ತಾಂತರಿಸಿದ್ದರು. ಅಲ್ಲಿಗೆ ವಾಜಪೇಯಿ ಅವರ ತಾಳ್ಮೆಯ ಕಟ್ಟೆ ಒಡೆದಿತ್ತು. ಆಗಲೇ ಘೋಷಣೆಯಾಗಿದ್ದು “ಆಪರೇಷನ್ ವಿಜಯ್”.

ಯುದ್ಧ ಘೋಷಣೆಯಾಯ್ತು. ಆ ಯುದ್ಧದಲ್ಲಿ ಮೇಜರ್ ರಾಜೇಶ್ ಅಧಿಕಾರಿಗೆ ಹೆಲಿಕಾಪ್ಟರಗಳನ್ನು ತೊಲೊಲಿಂಗ್ ನ ಬಳಿಗೊಯ್ದು ಶತ್ರುಗಳ ಮೇಲೆ ನೇರ ದಾಳಿ ಮಾಡುವ ಜವಾಬ್ದಾರಿ ವಹಿಸಲಾಯ್ತು. ಅದರಂತೆ ಮೇಜರ್ ರಾಜೇಶ್ ಅಧಿಕಾರಿ ಯೋಜನೆ ರೂಪಿಸಿದರು. ಇನ್ನೇನು ಆ ಯೋಜನೆಯ ಪ್ರಕಾರ ಹೊರಡುವಷ್ಟರಲ್ಲಿ ರಾಜೇಶ್ ಅಧಿಕಾರಿಗೆ ಹೆಂಡತಿ ಕಿರಣ್ ಅವರಿಂದ ಪತ್ರ ಬಂತು. ಮದುವೆಯಾಗಿ ಹತ್ತು ತಿಂಗಳಾಗಿತ್ತಷ್ಟೇ.

ಹೆಂಡತಿಯ ಪತ್ರವನ್ನು ಓದಿದರೆ ಮನಸು ವಿಚಲಿತವಾಗಬಹುದು ಎಂದು ಅಂದುಕೊಂಡ ಮೇಜರ್ ರಾಜೇಶ್ ಅಧಿಕಾರಿ ಆ ಪತ್ರವನ್ನು ಬಿಡುವಿನ ಸಮಯದಲ್ಲಿ ಓದಿದರಾಯ್ತೆಂದು ಜೇಬಿನಲ್ಲಿ ಇಟ್ಟೊಕೊಂಡು ಯುದ್ಧಕ್ಕೆ ಹೊರಟರು‌.

ಮೇಜರ್ ರಾಜೇಶ್ ಅಧಿಕಾರಿ ಮತ್ತು ತಂಡ ತೋಲೋಲಿಂಗ್ ನತ್ತ ಹೋಗಿ ಪಾಕಿಗಳ ಬಂಕರ್ ಗಳನ್ನು ಉಡೀಸ್ ಮಾಡಲು ಮುಂದಾದರು. ಒಂದೊಂದೆ ಪಾಕಿಸ್ತಾನ ಬಂಕರ್ ರಾಜೇಶ್ ಅಧಿಕಾರಿ ಮತ್ತು ತಂಡದಿಂದ ಉಡೀಸ್ ಆದವು.

ಅಷ್ಟರಲ್ಲೇ ಅಚಾತುರ್ಯ ನಡೆದು ಹೋಯಿತು. ಪಾಕಿಗಳ ದಾಳಿ ಜಾಸ್ತಿಯಾಗಿ ಒಂದು ಗುಂಡು ಮೇಜರ್ ರಾಜೇಶ್ ಅಧಿಕಾರಿಯ ಎದೆಯನ್ನು ಸೀಳಿತು. ಎದೆಯಲ್ಲಿ ಗುಂಡು ಹೊಕ್ಕರೂ ರಾಜೇಶ್ ಅಧಿಕಾರಿ ಧೃತಿಗೆಡಲಿಲ್ಲ. ಉಳಿದ ಬಂಕರ್ ಒಂದನ್ನು ಉಡಾಯಿಸಿ ಆ ಬೆಟ್ಟವನ್ನು ಗೆದ್ದು ಪ್ರಾಣಾರ್ಪಣೆ ಮಾಡಿದರು.

ರಾಜೇಶ್ ಅಧಿಕಾರಿ ಅಂದುಕೊಂಡಂತೆ ತುಂಬು ಗರ್ಭಿಣಿ ಬರೆದ ಪತ್ರ ಓದಲು ಬಿಡುವೇನೋ ಸಿಕ್ಕಿತು ಆದರೆ ಆ ಪತ್ರ ಓದಲು ಮೇಜರ್ ರಾಜೇಶ್ ಅಧಿಕಾರಿಯೇ ಇರಲಿಲ್ಲ. ತಾಯಿ ಭಾರತಾಂಬೆಗೆ ತನ್ನ ಪ್ರಾಣವನ್ನು ಕೊಟ್ಟು ಬಿಟ್ಟಿದ್ದರು.

ಮೇಜರ್ ರಾಜೇಶ್ ಅಧಿಕಾರಿ ಯುದ್ಧಕ್ಕೆ ಹೊರಡುವ ಮುನ್ನ ಹೆಂಡತಿಗೆ ಒಂದು ಪತ್ರ ಬರೆದಿದ್ದರು. ನಾನೇನಾದರೂ ಯುದ್ಧದಲ್ಲಿ ಮರಣ ಹೊಂದಿದರೆ, ನಮಗೆ ಹುಟ್ಟುವ ಮಗನನ್ನು ಒಮ್ಮೆಯಾದರೂ ಕರೆದುಕೊಂಡು ಬಂದು, ನಿನ್ನಪ್ಪ ದೇಶಕೋಸ್ಕರ ಪ್ರಾಣ ನೀಡಿದ ಜಾಗ ಈ ಕಾರ್ಗಿಲ್ ಅಂಥ ಹೇಳಿ ತೋರಿಸುತ್ತೀಯಾ ಅಂತ ತನ್ನ ಹೆಂಡತಿಗೆ ಪತ್ರವನ್ನು ಬರೆದಿದ್ದರು.

ಅದಕ್ಕೆ ಮೇಜರ್ ರಾಜೇಶರ ಹೆಂಡತಿ ಮರುಉತ್ತರ ಬರೆದು ಪತ್ರ ಕಳಿಸಿದ್ದರು. ನೀವು ವೀರಮರಣ ಹೊಂದಿದ ಜಾಗವನ್ನಷ್ಟೇ ಅಲ್ಲ,ನಿಮ್ಮಂತೆಯೆ ನಿಮ್ಮ ಮಗನನ್ನು ಸಹ ಸೈನಿಕನನ್ನಾಗಿ ಮಾಡುತ್ತೇನೆ ಅಂತ ಬರೆದಿದದ್ದರು. ಆದರೆ ಆ ಪತ್ರವನ್ನು ಓದಲು ರಾಜೇಶ್ ಅಧಿಕಾರಿಯೇ ಇರಲಿಲ್ಲ.
ಮೇಜರ್ ರಾಜೇಶ್ ಅಧಿಕಾರಿಯವರ ಸಾಹಸಕ್ಕೆ ಭಾರತ ಸರ್ಕಾರ ಮಹಾವೀರ ಚಕ್ರ ಪ್ರಶಸ್ತಿ ಕೊಟ್ಟು ಗೌರವಿಸಿತು.

ಇಂತಹ ವೀರಯೋಧರ ಬಲಿದಾನಗಳಿಂದಲೇ ನಾವಿಂದು ಆರಾಮಾಗಿದ್ದೇವೆ. ಅವರನ್ನು ನೆನಪಿಸಿಕೊಳ್ಳವುದು,ಅವರಿಗೆ ಗೌರವಿಸೋದು ನಮ್ಮ ಕರ್ತವ್ಯ. ಈ ಲೇಖನವನ್ನು ಓದಿದ ಮೇಲೆ ಎರಡು ಹನಿ ಕಣ್ಣೀರು ಸುರಿಸಿಬಿಡಿ.

ಅದೇ ನಾವು ಸೈನಿಕರಿಗೆ ಕೊಡುವ ದೊಡ್ಡ ಗೌರವ. ನಮ್ಮಿಂದ ಗಡಿಗೆ ಹೋಗಿ ಹೋರಾಡಿ ಸಾಯೋದಕ್ಕಂತೂ ಆಗಲ್ಲ ಅದಕ್ಕಾಗಿ ದೇಶಕ್ಕಾಗಿ ಬದುಕೋಣ. ಪ್ರಾಣಾರ್ಪಣೆ ಮಾಡಿದ ವೀರ ಯೋಧರನ್ನು ನೆನೆಯೋಣ. ವೀರ ಯೋಧರ ಬಗ್ಗೆ ದಿನಕ್ಕೆ ಒಂದು ಸಾರಿಯಾದರೂ ನೆನಪಿಸಿಕೊಳ್ಳಿ. ಅಳು ಬಂದರೆ ಅತ್ತು ಬಿಡಿ , ಅತ್ತು ಬಿಡಿ.

ಜೈ ಹಿಂದ್

-ಸೌಮ್ಯ ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ
Show More

Related Articles