ರಾಜಕೀಯರಾಜ್ಯಸುದ್ದಿ ಜಾಲ

“ನಮೋ ಟಿ ಸ್ಟಾಲ್” ನಂತರ ಶುರುವಾಗಿದೆ ಕ್ಯಾಂಟೀನ್‌ಗಳ ಅಬ್ಬರ..!!

ಮಂಡ್ಯ: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿಗ ಕ್ಯಾಂಟೀನ್‌ಗಳ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ “ಇಂದಿರಾ ಕ್ಯಾಂಟೀನ್” ಪ್ರಾರಂಭವಾಗುತ್ತೆ ಎಂದು ತಿಳಿದ ಕೂಡಲೇ ಜೆಡಿಎಸ್ ಶಾಸಕರಾದ ಶರವಣ ಅವರು “ಅಪ್ಪಾಜಿ ಕ್ಯಾಂಟೀನ್” ಪ್ರಾರಂಭಿಸಿದ್ದರು.

ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೆಸರಲ್ಲಿಯೂ ಕೂಡ “ಸ್ವಾಮಿ ಕ್ಯಾಂಟೀನ್” ಕೂಡಾ ಶುರುವಾಗಿತ್ತು. ಕ್ಯಾಂಟಿನಗಳ ಸಾಲಿನಲ್ಲಿ ಈಗ ಹೊಸ ಸೇರ್ಪಡೆ “ರಮ್ಯಾ ಕ್ಯಾಂಟೀನ್”.

ಹೌದು..!! ಕನ್ನಡ ಚಿತ್ರರಂಗದ ಮೋಹಕ ತಾರೆ, ಮಂಡ್ಯ ಕ್ಷೇತ್ರದ ಮಾಜಿ ಸಂಸದೆ ರಮ್ಯಾ ಮೇಲಿರುವ ಅಭಿಮಾನದಿಂದ, ಅಭಿಮಾನಿಯೊಬ್ಬರು ಮಂಡ್ಯದ ಜನರಿಗೆ ರವಿವಾರ ಬೆಳಗ್ಗೆಯಿಂದ ಕ್ಯಾಂಟೀನ್ ಪ್ರಾರಂಭಿಸಲಿದ್ದಾರೆ. “ರಮ್ಯಾ ಕ್ಯಾಂಟೀನ್” ಆರಂಭಿತ್ತಿರುವ ಅಭಿಮಾನಿಯ ಹೆಸರು “ರಘು”. ಸುಮಾರು 15 ವರ್ಷಗಳಿಂದ ಮಂಡ್ಯದಲ್ಲಿ ರಸ್ತೆ ಬದಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು.

ಇದೀಗ ನೂತನವಾಗಿ ಕ್ಯಾಂಟೀನ್ ಪ್ರಾರಂಭಿಸಿರುವ ರಘು ಮಾಜಿ ಸಂಸದೆ ರಮ್ಯಾ ಅವರ ಪಕ್ಕಾ ಅಭಿಮಾನಿ. ರಮ್ಯಾ ಅವರು ಸಂಸದರಾಗಿದ್ದಾಗ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಹಳ್ಳಿ ಹಳ್ಳಿಗೆ ಭೇಟಿ ಮಾಡಿ ಅಲ್ಲಿನ ಜನಗಳ ಕಷ್ಟಗಳನ್ನು ಕೇಳಿದ್ದಾರೆ.

ಹಾಗಾಗಿ ರಮ್ಯಾ ಅವರ ಹೆಸರಲ್ಲೇ ಒಂದು ಕ್ಯಾಂಟೀನ್ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಮಂಡ್ಯ ನಗರದ “ಅಶೋಕ ನಗರ”ದ ತ್ರಿವೇಣಿ ರಸ್ತೆಯಲ್ಲಿ ” ರಮ್ಯಾ ಕ್ಯಾಂಟೀನ್” ಪ್ರಾರಂಭಿಸುತ್ತಿದ್ದು, ಕೇವಲ 10 ರೂ. ಊಟ ತಿಂಡಿ ನೀಡಲು ಮುಂದಾಗಿದ್ದಾರೆ.

10 ರೂ.ಗೆ ಸಿಗುತ್ತೆ ನಾನಾ ಐಟಂ: “ರಮ್ಯಾ ಕ್ಯಾಂಟೀನ್” ಆರಂಭಿಸುತ್ತಿರುವ ಕುರಿತು ಸುದ್ಧಿ ವಾಹನಿ ಜೊತೆ ಮಾತನಾಡಿದ ರಘು, “ನಾನೇ ಮಾಲೀಕರಾಗಿ, ನಾನೇ ಕೆಲಸಗಾರರಾಗಿ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿರುವುದರಿಂದ 10 ರೂ. ಊಟ ತಿಂಡಿ ನೀಡಿದರೂ ಸಹ ನನಗೆ ನಷ್ಟವಾಗುವುದಿಲ್ಲಾ” ಎಂದು ಹೇಳಿದರು.

ರಮ್ಯಾ ಕ್ಯಾಂಟೀನ್ ವಿಶೇಷ : ಮಸಾಲೆ ದೋಸೆ, ಪ್ಲೈನ್ ದೋಸೆ ಸೇರಿದಂತೆ ವಿವಿಧ ಬಗೆಯ ದೋಸೆಗಳು, ಇಡ್ಲಿ, ವಡೆ, ಮುದ್ದೆ, ಅನ್ನ, ಸಾಂಬಾರು, ರಾಗಿ ಗಂಜಿ ಸೇರಿದಂತೆ ಇತ್ಯಾದಿ ತಿಂಡಿ ತಿನಿಸುಗಳು ರಮ್ಯಾ ಕ್ಯಾಂಟೀನ್‌ನಲ್ಲಿ ಸಿಗುತ್ತವೆ.

Source : Publictv.in

ಈ ಸುದ್ದಿಯನ್ನು ಶೇರ್ ಮಾಡಿ
Show More

Related Articles