ಇತಿಹಾಸ ಕಂಡ ಭಾರತದ ಆ ‘ರೊಮ್ಯಾಂಟಿಕ್’ “ದೇಶಭಕ್ತ”, ‘ಐಯ್ಯಾಶಿ’ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು? ಪ್ರತಿಯೊಬ್ಬ ಭಾರತೀಯನೂ ತಿಳಿಯಲೇಬೇಕಾದ ವಿಷಯವಿದು!!!

ನೈಜ ವಿಷಯಗಳನ್ನ ಪ್ರತಿಯೊಬ್ಬ ಭಾರತೀಯನೂ ಅರಿಯಲೇಬೇಕು ಆದರೆ ಈಗಿನ ಪೀಳಿಗೆ ಇತಿಹಾಸ ಅಂದರೆ ಅದು ತಾವು ಓದುವ ಶಾಲಾ ಕಾಲೇಜಿನ ಇತಿಹಾಸವನ್ನೇ ನಿಜವಾದ ಇತಿಹಾಸ ಅಂತ ಅದನ್ನೇ ನಂಬಿ ಮೂರ್ಖರಾಗಿ ಕೂತುಬಿಟ್ಟಿದ್ದಾರೆ.

ಸತ್ಯ ಹೊರಬರಲೇಬೇಕು, ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಅನ್ನೋದು ಒಂದಿಲ್ಲೊಂದು ಹೊರಬರಲೇಬೇಕು, ಬಂದೇ ಬರುತ್ತೆ.

ಇರಲಿ ಈಗ ನಾನು ನಿಮಗೆ ಹೇಳಲೊರಟಿರೋದು ನಮ್ಮ ದೇಶವನ್ನಾಳಿದ್ದ “ದೇಶಭಕ್ತ” ಪ್ರಧಾನಮಂತ್ರಿಯೊಬ್ಬರ ಇತಿಹಾಸದ ಕುರಿತು, ನೀವೂ ಆ ಮನುಷ್ಯನ ಬಗ್ಗೆ ಈ ವಿಷಯಗಳನ್ನ ಅರಿಯಲೇಬೇಕು.

▪ಯಾವ ಲವ್ವರ್ ಬಾಯ್ ಲಂಡನ್ ನಲ್ಲಿರೋ ತನ್ನ ಪ್ರಿಯತಮೆಗೆ ವಿಶೇಷ ಏರ್ ಇಂಡಿಯಾ ಫ್ಲೈಟ್ ಮೂಲಕ ಪತ್ರ ಸಂದೇಶ ಕಳುಹಿಸುತ್ತಿದ್ದರು ಗೊತ್ತಾ?

▪ತನ್ನ ವಿದೇಶಿ ಪ್ರಿಯತಮೆಯ ಅಂತ್ಯಸಂಸ್ಕಾರಕ್ಕಾಗಿ ಹಾರವನ್ನ ವಿಶೇಷ ಭಾರತೀಯ ನೌಕೆಯ ಮೂಲಕ ಕಳಿಸಿಕೊಟ್ಟ ಆ “ದೇಶಭಕ್ತ”ನ್ಯಾರು ಗೊತ್ತಾ?

▪ಭಾರತದ 85,000 Sq.Km ಜಾಗವನ್ನ ಪಾಕಿಸ್ತಾನಕ್ಕೆ, 37,244 Sq.Km ಭೂಮಿಯನ್ನ ಚೀನಾಕ್ಕೆ ‘ಧಾರಾಳ’ವಾಗಿ ಬಿಟ್ಟುಕೊಟ್ಟ ಆ “ದೇಶಭಕ್ತ”ನ್ಯಾರು ಗೊತ್ತಾ?

▪ಹೈದ್ರಾಬಾದ್ ಪ್ರಾಂತ್ಯವನ್ನ ಮತ್ತೊಂದು ಕಾಶ್ಮೀರ ಮಾಡಿ ಪಾಕಿಸ್ತಾನದ ಪರ ಒಲವಿದ್ದ ರಜಾಕಾರ್, ನಿಜಾಮನಿಗೆ ಬೆಂಬಲ ಘೋಷಿಸುವ ಮಟ್ಟಕ್ಕೆ ಹೋಗಿದ್ದ ಆ “ದೇಶಭಕ್ತ”ನ್ಯಾರು ಗೊತ್ತೆ?

▪ಸ್ವಾತಂತ್ರ್ಯ ವೀರ ಸಾವರ್ಕರ್ 50 (25+25) ವರ್ಷಗಳ ಮರಣದಂಡನೆಗೆ ಬ್ರಿಟಿಷರಿಂದ ಗುರಿಯಾಗಿ 13 ವರ್ಷಗಳ ಕಾಲ ಕಾಲಾಪಾನಿ ಸಜೆ ಅನುಭವಿಸುತ್ತಿರುವಾಗ, 3 ವರ್ಷಗಳ ಕಾಲ ಜೈಲಿನಲ್ಲಿ 5 ಸ್ಟಾರ್ ಟ್ರೀಟ್‌ಮೆಂಟ್, ಪ್ರತ್ಯೇಕ ಕಿಚನ್, ಗಾರ್ಡನಿಂಗ್, ಬ್ಯಾಡ್ಮಿಂಟನ್ ಆಡುತ್ತ ಕಾಲ ಕಳೆದಿದ್ದ ಆ “ದೇಶಭಕ್ತ”ನ್ಯಾರು ಗೊತ್ತೆ?

▪’ವಿದ್ಯಾರ್ಹತೆ’ಯಿಂದ ನಾನೊಬ್ಬ ‘ಇಂಗ್ಲಿಷಿಗ’,
‘ದೃಷ್ಟಿಕೋನ’ದಿಂದ ನಾನೊಬ್ಬ ‘ಅಂತರರಾಷ್ಟ್ರೀಯವಾದಿ’,
‘ಸಂಸ್ಕೃತಿ’ಯ ದೃಷ್ಟಿಯಿಂದ ನೋಡಿದರೆ ನಾನೊಬ್ಬ ‘ಮುಸಲ್ಮಾನ’
ಆದರೆ ಆಕ್ಸಿಡೆಂಟಲಿ ನಾನೊಬ್ಬ ‘ಹಿಂದು’ ಅಂತ ಹೇಳಿದ್ದ ಆ “ದೇಶಭಕ್ತ”ನ್ಯಾರು ಗೊತ್ತೆ?

▪ಸರೋಜಿನಿ ನಾಯ್ಡುರವರ ಮಗಳು ಪದ್ಮಜಾ ನಾಯ್ಡು ಜೊತೆ ಡೇಟಿಂಗ್ ನಡೆಸಿ ಬಂಗಾಳದ ಗವರ್ನರ್ ಆಗಿ ನೇಮಿಸಿದ್ದ ಆ “ದೇಶಭಕ್ತ”ನ್ಯಾರು ಗೊತ್ತೆ?

▪ಬಾಬಾಸಾಹೇಬ್ ಅಂಬೇಡ್ಕರರು ದೇಶಕ್ಕಾಗಿ ಸಂವಿಧಾನ ಬರೆಯುತ್ತಿರೋ ಸಂದರ್ಭದಲ್ಲಿ ಫ್ರಾನ್ಸಿನ್ ಗುಂಥರ್ ರ ಪತ್ರ ಓದುತ್ತ “ಈ ಪತ್ರ ಓದುತ್ತಿದ್ದರೆ ನಿನ್ನ ಕೋಮಲವಾದ ಕೈಯನ್ನ ಮುಟ್ಟಬೇಕೆನಿಸುತ್ತಿದೆ” ಅಂತ ಹೇಳಿದ್ದ ಆ “ದೇಶಭಕ್ತ”ನ್ಯಾರು ಗೊತ್ತೆ?

▪ಇಡೀ ದೇಶದ ಆ ಪಕ್ಷದ ಕಮಿಟಿಗಳೆಲ್ಲಾ ಸರ್ದಾರ್ ಪಟೇಲರನ್ನ ಪ್ರಧಾನಿಯಾಗಿ ಆಯ್ಕೆ ಮಾಡಬೇಕೆಂದು ವೋಟ್ ಮಾಡಿದ್ದಾಗ “ನನ್ನನ್ನ ಪ್ರಧಾನಿ ಮಾಡಲಿಲ್ಲವೆಂದರೆ ಈ ಕಾಂಗ್ರೆಸ್ ನ್ನ ನುಚ್ಚು ನೂರು ಮಾಡ್ತೀನಿ” ಅಂತ ಪ್ರಧಾನಿ ಪಟ್ಟಕ್ಕೇರಿದ್ದ ಆ “ದೇಶಭಕ್ತ”ನ್ಯಾರು ಗೊತ್ತಾ?

▪ನೇಪಾಳ ಭಾರತದ ಜೊತೆ ವಿಲೀನವಾಗೋಕೆ ಸಿದ್ಧವಿದ್ದಾಗ ಅದನ್ನ ಕಿವಿಗೆ ಹಾಕಿಕೊಳ್ಳದೆ ಸದ್ದಿಲ್ಲದೆ ರಿಜೆಕ್ಟ್ ಮಾಡಿದ ಆ “ದೇಶಭಕ್ತ”ನ್ಯಾರು ಗೊತ್ತಾ?

  1. ▪ಸ್ವತಂತ್ರ ಭಾರತ ದೇಶದ ಸರ್ಕಾರದಲ್ಲಿ ನಡೆದ ಮೊದಲ ಹಗರಣದ ಬಗ್ಗೆ ಪ್ರಶ್ನಿಸಿದಾಗ “ಎಲ್ಲಿಗ್ ಹೊಯ್ತು ದುಡ್ಡು? ಇದೇ ದೇಶದಲ್ಲಿದೆ ತಾನೆ” ಅಂತ ಉಡಾಫೆಯ ಉತ್ತರ ಕೊಟ್ಟಿದ್ದ ಆ “ದೇಶಭಕ್ತ”ನ್ಯಾರು ಗೊತ್ತೆ?

▪ನಾವು ಹೇಳಿದ ಹಾಗೆ ಕಾರ್ಯನಿರ್ವಹಿಸದಿದ್ದರೆ ಸುಭಾಷ್ ಚಂದ್ರ ಬೋಸರನ್ನ ರಷ್ಯಾದಿಂದ ಭಾರತಕ್ಕೆ ಕಳಿಸಬೇಕಾಗುತ್ತೆ ಅಂತ ಹೇಳಿದ್ದ ರಷ್ಯಾಗೆ ಹೆದರಿ ರಷ್ಯನ್ನರ ಹೆಬ್ಬೆಟ್ಟಿನ ರೀತಿಯಲ್ಲಿ ಕೆಲಸ ಮಾಡಿದ್ದ ಭಾರತದ ಆ “ದೇಶಭಕ್ತ”ನ್ಯಾರು ಗೊತ್ತಾ?

▪ನೇತಾಜಿಯ ಜನಪ್ರಿಯತೆಯನ್ನ ಕಡಿಮೆಗೊಳಿಸಿ ತಾನೇ ಭಾರತದ ಸರ್ವಾಧಿಕಾರಿಯಾಗಿರಬೇಕೆಂಬ ದುರುದ್ದೇಶದಿಂದ ಸುಭಾಷ್ ಬಾಬು ರನ್ನ 2 ನೆ ವಿಶ್ವಯುದ್ಧದ ‘ಯುದ್ಧ ಕೈದಿ’ ಅಂತ ಘೋಷಣೆ ಮಾಡಿದ್ದ ಆ “ದೇಶಭಕ್ತ”ನ್ಯಾರು ಗೊತ್ತೆ?

▪1950 ರಲ್ಲಿ ಸರ್ದಾರ್ ಪಟೇಲರ ನಿಧನವಾದಾಗ ತನ್ನ ಮಂತ್ರಿಗಳಿಗೆ, ಸೆಕ್ರೆಟರಿಗಳಿಗೆ ಪಟೇಲರ ಅಂತಿಮಕ್ರಿಯೆಗೆ ಹೋಗಬಾರದಂತ ನೋಟೀಸ್ ಕಳಿಸಿದ್ದ ಆ “ದೇಶಭಕ್ತ”ನ್ಯಾರು ಗೊತ್ತಾ?

▪ಪಶ್ಚಿಮ ಬಂಗಾಳವನ್ನ ಪಾಕಿಸ್ತಾನಕ್ಕೆ ಬಿಟ್ಟುಕೊಡೋದಿಲ್ಲ ಅಂತ ಹೋರಾಟ ಮಾಡಿ ಪಶ್ಚಿಮ ಬಂಗಾಳವನ್ನ ಭಾರತದ ಅವಿಭಾಜ್ಯ ಅಂಗವಾಗಿರೋ ಹಾಗೆ ಮಾಡಿದ ಶ್ಯಾಮಾ ಪ್ರಸಾದ್ ಮುಖರ್ಜಿ ಹೋರಾಡಿದ್ದು ಆ “ದೇಶಭಕ್ತ”ನ ವಿರುದ್ಧವೇ, ಆ “ದೇಶಭಕ್ತ”ನ್ಯಾರು ಗೊತ್ತಾ?

▪ತನ್ನ ಆತ್ಮೀಯ ಸ್ನೇಹಿತನಾಗಿದ್ದ ಶೇಕ್ ಅಬ್ದುಲ್ಲಾನ ಮೂಲಕ ಶ್ರೀನಗರದ ಜೈಲಿನಲ್ಲಿ ಶ್ಯಾಮಾ ಪ್ರಸಾದ್ ಮುಖರ್ಜಿಯನ್ನ ಕೊಲ್ಲಿಸಿ ನಂತರ ಆ ಪ್ರಕರಣದ ತನಿಖೆಯನ್ನೇ ನಡೆಸದೆ ನಿಗೂಢವಾಗಿಟ್ಟ ಆ “ದೇಶಭಕ್ತ”ನ್ಯಾರು ಗೊತ್ತೆ?

▪ತನಗಿಂತ ಬುದ್ಧಿಮತ್ತೆಯಲ್ಲಿ, ಚಾಣಾಕ್ಷತೆಯಲ್ಲಿ ಮುಂದಿದ್ದ ಬಾಬಾಸಾಹೇಬ್ ಅಂಬೇಡ್ಕರರನ್ನ ಪಾರ್ಲಿಮೆಂಟಿಗೆ ಎಲೆಕ್ಟ್ ಆಗದ ಹಾಗೆ ಮಾಡಲು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ ಆ “ದೇಶಭಕ್ತ”ನ್ಯಾರು ಗೊತ್ತೆ?

▪ಭಾರತದಲ್ಲಿ ಸಮಾನ ನಾಗರಿಕ ಕಾನೂನನ್ನ ಜಾರಿಗೆ ತರಲು ಚಿಂತಿಸಿದ್ದ ಅಂಬೇಡ್ಕರರಿಗೆ ವಿರೋಧ ವ್ಯಕ್ತಪಡಿಸಿ ಅದನ್ನ ಜಾರಿಯಾಗುವ ಮುನ್ನವೇ ರದ್ದುಗೊಳಿಸಿದ ಆ “ದೇಶಭಕ್ತ”ನ್ಯಾರು ಗೊತ್ತೆ?

▪ಕಾಶ್ಮೀರದ ವಿಶೇಷ ಸವಲತ್ತು ನೀಡುವ 370 ನೆ ಕಲಂ ನ್ನ ಬಾಬಾಸಾಹೇಬ್ ಅಂಬೇಡ್ಕರ್ ವಿರೋಧಿಸಿದಾಗ ಗೋಪಾಲ್ ಅಯ್ಯಂಗಾರ್ ರವರು ಸಿದ್ಧಪಡಿಸಿದ್ದ ಜಮ್ಮು ಕಾಶ್ಮೀರಕ್ಕೆ ವಿಶೇಷ ಸವಲತ್ತು, ಪ್ರತ್ಯೇಕ ಕಾನೂನು, ಪ್ರತ್ಯೇಕ ಧ್ವಜ ನೀಡುವ ಡ್ರಾಫ್ಟ್ ನ್ನ ಜಾರಿಗೊಳಿಸಿದ ಆ “ದೇಶಭಕ್ತ”ನ್ಯಾರು ಗೊತ್ತೆ?

▪ಗುಜರಾತಿನಲ್ಲಿ ಮತಾಂಧ, ಜಿಹಾದಿ ಮೊಹಮ್ಮದ್ ಘಜ್ನಿಯಿಂದ ಧ್ವಂಸವಾಗಿದ್ದ ಸೋಮನಾಥ ಮಂದಿರವನ್ನ ಸರ್ದಾರ್ ಪಟೇಲರು ಮರುನಿರ್ಮಾಣ ಮಾಡಿದ್ದಾಗ “ಇದು ಭಾರತದ ಸೆಕ್ಯೂಲರಿಸಮ್ಮಿಗೆ ಧಕ್ಕೆ ತರುತ್ತೆ ಹಾಗಾಗಿ ಆ ಕಾರ್ಯಕ್ರಮಕ್ಕೆ ಹೋಗಬೇಡಿ” ಎಂದು ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದರಿಗೆ ಹೇಳಿದ್ದ ಆ “ದೇಶಭಕ್ತ”ನ್ಯಾರು ಗೊತ್ತೆ?

▪”ಈ ದೇಶದ ಕಟ್ಟರ್ ಮುಸ್ಲಿಂ ರಾಷ್ಟ್ರವಾದಿ ಯಾರು” ಅಂತ ಪಟೇಲರು ಯಾವ “ದೇಶಭಕ್ತ”ನ ಹೆಸರು ಹೇಳಿದ್ದರು ಗೊತ್ತಾ?

ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ದಿ ಗ್ರೇಟ್ ‘ಜವಾಹರಲಾಲ್ ಘಾಜಿ’, ಕ್ಷಮಿಸಿ ‘ಘಾಜಿ’ ಅಲ್ಲ ‘ಜವಾಹರಲಾಲ್ ನೆಹರು’

ಆತನ ಸೋ ಕಾಲ್ಡ್ “ದೇಶಭಕ್ತಿ”ಯಿಂದ, ಆತ ಆಗ ತೆಗೆದುಕೊಂಡಿದ್ದ ನಿರ್ಧಾರಗಳಿಂದ ದೇಶ ಈಗಲೂ ಬಳಲುತ್ತಿದೆ.

ಆದರೆ ಅವ್ಯಾವುವೂ ಈಗಿನ ಪೀಳಿಗೆಗೆ ಗೊತ್ತೇ ಇಲ್ಲ. ಇನ್ನೂ ಕೂಡ ಆತನ ಕುಟುಂಬವನ್ನೇ ಹೊಗಳುತ್ತ ಹೊಗಳುಭಟರಾಗಿ ಆ ಪಕ್ಷದ ಚಮಚಾಗಳಾಗಿ ಕೆಲಸ ಮಾಡುತ್ತಿರೋರು ಇನ್ನೂ ಆ ಕುಟುಂಬಕ್ಕೇ ಜೈ ಅಂದು 67 ಹರೆಯದಲ್ಲೂ ಕಳೆದ ಮೂರೂವರೆ ವರ್ಷಗಳಿಂದ ದಿನಕ್ಕೆ 18 ಗಂಟೆಗಳ ಕಾಲ ದುಡಿಯುತ್ತಿರುವ ಪ್ರಧಾನಿ ಮೋದಿಯವರನ್ನ ನಿಂದಿಸುತ್ತ ಕಾಲ ಕಳೆಯುತ್ತಿದ್ದಾರೆ ಹೊರತು ಆತ ದೇಶಕ್ಕಾಗಿ ಏನು ಮಾಡುತ್ತಿದ್ದಾನೆ ಅನ್ನೋದನ್ನ ಯೋಚಿಸದೆಯೇ ವಿಮರ್ಶೆ ಮಾಡಿದೆಯೇ ಆತನನ್ನ ದಿನಬೆಳಗಾದರೆ ಟೀಕಿಸುತ್ತ ಕಾಲಹರಣ ಮಾಡುತ್ತಿದ್ದಾರೆ.

ದೇಶಕ್ಕೊಬ್ಬ ಸಮರ್ಥ ಪ್ರಧಾನಿ ಸಿಕ್ಕಿದ್ದಾರೆ ಆತನಿಗೆ ನಾವು ಭಾರತೀಯರು ಕೈ ಜೋಡಿಸದೆ ಇದ್ದರೆ ನೆಹರು ಸಂತತಿಯ ರಾಹುಲ್ ಗಾಂಧಿಯೆಂಬ ಪಪ್ಪು ಮತ್ತೆ ಈ ದೇಶವನ್ನ ಅಧೋಗತಿಗೆ ತಗೊಂಡು ಹೋಗೋದ್ರಲ್ಲಿ ಸಂಶಯವೇ ಇಲ್ಲ.

ನಿರ್ಧಾರ ನಿಮಗೆ ಬಿಟ್ಟದ್ದು!!!

– ಕೃಷ್ಣ

  • 177
    Shares