ರಾಮ ಮಂದಿರ ವಿವಾದ ಎಲ್ಲಿಗೆ ಬಂತು ಗೊತ್ತೆ?

ನವದೆಹಲಿ(ಡಿ.05): ಹಿಂದೂಗಳ ಆರಾಧ್ಯ ದೈವ ಅಯೋಧ್ಯದಲ್ಲಿನ ರಾಮನ ಜನ್ಮ ಭೂಮಿ ಮತ್ತು ಬಾಬರಿ ಮಸೀದಿಯ ವಿವಾದ ಕುರಿತಂತೆ ಸರ್ವೋಚ್ಚ ನ್ಯಾಯಾಲಯ ಇವತ್ತಿನಿಂದ ಕೊನೆಯ ಹಂತದ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಕರ ಸೇವಕರಿಂದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ ನಾಳೆಗೆ 25 ವರ್ಷ ತುಂಬುತ್ತಿದೆ.

2.77 ಎಕರೆಯ ವಿವಾದಾತ್ಮಕ ರಾಮನ ಜನ್ಮ ಭೂಮಿಯನ್ನು ಅಲಹಾಬಾದ್ ಹೈಕೋರ್ಟ್ ರಾಮ್ ಲಲ್ಲಾ ವಿರಾಜ್’ಮಾನ್, ಸುನ್ನಿ ವಕ್ಫ್’ಬೋರ್ಡ್ ಹಾಗೂ ನಿರ್ಮೋಹಿ ಅಕಾರಗೆ ಸಮವಾಗಿ ಹಂಚಿಕೆ ಮಾಡಿ ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಮಾನವನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಹಲವು ಹಿಂದೂ ಪರ ನಾಯಕರು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಅಬ್ದುಲ್ ನಜೀರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪಿನ ಮೇಲ್ಮನವಿ ಕುರಿತಂತೆ ವಿಚಾರಣೆ ನಡೆಸಲಿದೆ.