ರವಿ ಬಸ್ರೂರ ಅವರ ಗರಡಿಯಲ್ಲಿ ಮತ್ತೊಂದು ಉದಯೋನ್ಮುಖ ಪ್ರತಿಭೆ ಕಿನ್ನಾಳ ರಾಜ್..

ರವಿ ಬಸ್ರೂರು ಹೆಸರು ಕನ್ನಡಚಿತ್ರರಂಗದಲ್ಲಿ ಯಾರಿಗೆ ತಾನೆ ಗೊತ್ತಿಲ್ಲ, ಹಾಲಿವುಡ್ ಸಿನಿಮಾರಂಗದ ಸಂಗೀತವನ್ನು ಮೀರುವಂತ ಸಂಗೀತ ನಿರ್ದೇಶನದ ಮೂಲಕ ಇವರು ಪರಿಚಿತರು. 

ಸಿನಿಮಾ ನಿರ್ದೇಶಕನದಲ್ಲೂ ಸಹ ತಮ್ಮನ್ನು ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಇವರ ಕಾರ್ಯವೈಖರಿ ಮತ್ತು ಸರಳ ಸಜ್ಜನಿಕೆಯನ್ನು ಬರೆಯಲು ಪುಟಗಳು ಸಾಲುವುದಿಲ್ಲ, ಇತ್ತೀಚೆಗೆ ತೆರೆಕಂಡಂತಹ ಚಿತ್ರವಾದ “ಕಟಕ” ಐವತ್ತು ದಿನವನ್ನು ಪೊರೈಸಿದ್ದಲ್ಲದೆ ವಿದೇಶದಲ್ಲಿಯೂ ಸಹ ಜಯಭೇರಿ ಬಾರಿಸಿದೆ.

ಇವರ ಇನ್ನೊಂದು ವಿಶೇಷತೆಯೆಂದರೆ ಹೊಸ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಪ್ರೊತ್ಸಾಹ ನೀಡಿ ಅವರನ್ನು ಚಿತ್ರರಂಗಕ್ಕೆ ಸದ್ಧಿಲ್ಲದೆ ಪರಿಚಯಿಸಿ ಉನ್ನತ ಮಟ್ಟದಲ್ಲಿ ತಲಪಲು ಸಹಾಯ ಮಾಡುತ್ತಾರೆ.

ಅಂತಹ ಒಂದು ಉದಯೋನ್ಮುಖ ಪ್ರತಿಭೆ ಕಿನ್ನಾಳ ರಾಜ್

ಇವರು ಮೂಲತಃ ಕೊಪ್ಪಳದ ಕಿನ್ನಾಳದವರು ಸಧ್ಯ ಬೆಂಗಳೂರಿನ ನಾಗರಬಾವಿಯಲ್ಲಿ ನೆಲೆಸಿದ್ದಾರೆ.
ಇವರ ಅದ್ಭುತ ಗೀತೆ ರಚನೆಯ ಪ್ರತಿಭೆಯಿಂದ ರವಿ ಬಸ್ರೂರು ಅವರ ಸಂಗೀತ ನಿರ್ದೇಶನದ ವೈರ ಮತ್ತು ಸಂಹಾರ ಚಿತ್ರದಲ್ಲಿ ಚಿತ್ರಗೀತೆಗೆ ಪದಪುಂಜವನ್ನು ಹೆಣೆದು ಅದ್ಭುತವಾದ ಗೀತೆ ರಚನೆ ಮಾಡಿದ್ದಾರೆ ಇಷ್ಟೆ ಅಲ್ಲ ಈಗ ಸಧ್ಯದಲ್ಲೆ ತೆರೆಕಾಣುವ ಬಹುವೆಚ್ಚದ ಅಂಜನಿಪುತ್ರ ಸಿನಿಮಾದ ಟೈಟಲ್ ಸಾಂಗ್ ಇವರೆ ರಚಿಸಿದ್ದು ಅದು ಸಿನಿಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. 

ಇವರು ಸಿನಿಮಾಗಳಿಗೆ ಡೈಲಾಗ್ ಸಹ ಬರೆಯುತ್ತಿದ್ದಾರೆ!!
ಇವರ ಪ್ರತಿಭೆಯನ್ನು ಪ್ರೋತ್ಸಾಹಿಸಿದ ರವಿ ಬಸ್ರೂರು’ಅವರಿಗೆ ಅನಂತ ಕೋಟಿ ಪ್ರಣಾಮಗಳು, ಹೊಸ ಪ್ರತಿಭೆಗಳು ಮತ್ತಷ್ಪು ಬೆಳೆಯಲಿ ಕನ್ನಡ ಚಿತ್ರರಂಗ ಮತ್ತಷ್ಟು ಉತ್ತಮ ಹಂತ ತಲುಪಲಿ ಎಂದು ಆಶಿಸುತ್ತೆನೆ.

ರವಿಬಸ್ರೂರು ಚಿತ್ರ ತಂಡಕ್ಕೆ UKmedia ತಂಡದ ವತಿಯಿಂದ ಶುಭಹಾರೈಕೆಗಳು.