ಸೈನಿಕರ ಸಾವಿಗೆ ಮೋದಿ ಕಾರಣ ಎಂದ ರಮ್ಯಾಗೆ ಅಭಿಮಾನಿಯಿಂದ ಒಂದು ಪ್ರಶ್ನೆ

ಸೈನಿಕರ ಸಾವಿಗೆ ಮೋದಿ ಕಾರಣ ಎಂದ ರಮ್ಯಾಗೆ ಅಭಿಮಾನಿಯಿಂದ  ಒಂದು ಪ್ರಶ್ನೆ

ನನ್ನ ಪ್ರೀತಿಯ ಚಲನಚಿತ್ರದ ಗುಳಿಕೆನ್ನೆಯ ನಟಿಯಾದ ರಮ್ಯಾ ಅವರೇ. ನಿಮ್ಮೆಲ್ಲ ಚಿತ್ರಗಳನ್ನು ನಾನು  ಚಿಕ್ಕವನಾಗಿದ್ದಾಗಿನಿಂದ ನೋಡಿಕೊಂಡು ಬೆಳೆದಿದ್ದೇನೆ ನಿಮ್ಮ ಮುಗ್ದತೆಯ ಸುಂದರ ನಟನೆ ಅಂದಿನ ಎಲ್ಲ ನಟಿಯರಲ್ಲಿ ಹೊಟ್ಟೆಕಿಚ್ಚು ಮೂಡುವಷ್ಟು ಸುಂದರ ಅಭಿನಯ ಹೊಂದಿತ್ತು.

ಆದ್ರೆ ನಂತರದ ದಿನಗಳಲ್ಲಿ ರಾಜಕೀಯದತ್ತ ಒಲವು ತೋರಿದ್ದು ನಮ್ಮಂತ ಅಭಿಮಾನಿಗಳಿಗೆ ಹೆಮ್ಮೆಯ ವಿಷಯವು ಆಗಿತ್ತು !!ಆದರೆ ಈಗಿನ ನಿಮ್ಮ ಟ್ವಿಟ್ಟಾಸುರನ ಟ್ವಿಟುಗಳನ್ನು ನೋಡಿ ನಮಗೆಲ್ಲ ಇರುಸುಮುರುಸು ಉಂಟಾಗಿದೆ !!ಚಿತ್ರರಂಗದಲ್ಲಿ ನಾನು ನಿಮ್ಮ ಅಭಿಮಾನಿಯಷ್ಟೇ ಸಮಾನವಾಗಿ   ರಾಜಕೀಯದಲ್ಲಿ ಪ್ರಮುಖ ನಾಯಕ ನರೇಂದ್ರ ಮೋದಿಯವರ ಅಭಿಮಾನಿಯಾಗಿದ್ದೇನೆ . ಆದರೆ ನಿಮ್ಮ ಒಂದು ಟ್ವಿಟ್ಟಿನಿಂದ ನನ್ನಂತ ಅನಂತ ಮೋದಿ ಅಭಿಮಾನಿಗಳಿಗೆ ತೀವ್ರವಾಗಿ ನೋವಾಗಿದೆ ..

“ಸಕ್ಮಾದಲ್ಲಿ ನೆಡೆದ ಸೈನಿಕರ ಮಾರಣಹೋಮಕ್ಕೆ ಮೋದಿ ಕಾರಣ” ಎಂದು ಹೇಳಿದ ತಲೆಬುಡವಿಲ್ಲದ ಮಾತು ಅಸಂಭದ್ಧವಾಗಿದೆ. ನಿಮ್ಮ ಮತ್ತು ಮೋದಿಯವರ ತುಲನೆಯಂತೂ ನಾನು ಮಾಡುವುದಿಲ್ಲ ಏಕೆಂದೆರೆ ?ಚಿತ್ರರಂಗದಲ್ಲಿ ನಟಿಸುವ ನಕಲಿ ನಟನೆ ನನಗೆ ಮುಖ್ಯವಲ್ಲ ನನಗೆ ನಿಜಜೀವನದಲ್ಲಿ ಎಲ್ಲ ಜವಾಬ್ದಾರಿಗಳನ್ನು ಹೊತ್ತುಕೊಂಡು ಗಡಿಯ ಸುರಕ್ಷೆ ಮತ್ತು ದೇಶದ ಮುಂದಿನ ಭವಿಷ್ಯದ ಕನಸು ಹೊತ್ತಿರುವ ಮೋದಿಯವರ ನಿಜವಾದ ನಗು ನನಗೆ ಮುಖ್ಯ.

ನೀವು ಸ್ವಇಚ್ಛೆಯಿಂದ ಈ ಮಾತನ್ನು ಹೇಳಿದ್ದಿರೋ ಅಥವಾ ಕಾಂಗ್ರೆಸ್ಸಿನ ಒತ್ತಡದಿಂದ ಹೇಳಿದಿರೋ ನಮಗೆ ಗೊತ್ತಿಲ್ಲ .. ಇರಲಿ ಈಗ ವಿಷಯಕ್ಕೆ ಬರೋಣ : ಗಡಿಯಲ್ಲಿ ಪಾಕಿಸ್ತಾನದ ಸೈನಿಕರು ಗುಂಡಿನ ಸುರಿಮಳೆ ಸುರಿಸಿ ನಮ್ಮ ಸೈನಿಕರ ಹೆಣಗಳು ಉರುಳುತ್ತಿದ್ದರೆ ಅದನ್ನು ವಿರೋಧಿಸದೆ ಇದು ಗಾಡಿಯಲ್ಲಿ ಮಾಮೂಲು ಎಂದು ಹೇಳುವ  ಸೋನಿಯಾ ಗಾಂಧಿಯವರಂತ ಕಾಂಗ್ರೆಸ್ನವರು ಎಲ್ಲಿ?? ಆಗ ನಮ್ಮ ಸೈನಿಕನಿಗೆ ತನಗೆ ನೀಡಿದ ಮದ್ದು ಗುಂಡುಗಳ ಲೆಕ್ಕವನ್ನು ಕೊಡಬೇಕು ಎನ್ನುವ ನಿಮ್ಮ  ಧೋರಣೆಯ ಬಗ್ಗೆ ನಿಮಗೆ ಮಾತನಾಡಲು ಆಗುವುದಿಲ್ಲವಾ ಅಥವಾ ಪಕ್ಷಕ್ಕಾಗಿ ಮಾತ್ರ ನಿಮ್ಮ ಟ್ವಿಟ್ಟರ್ ಮಾತನಾಡುತ್ತದೆಯೆ ?

ಪಾಕಿಸ್ತಾನ ಹಾರಿಸಿದ ಗುಂಡುಗಳ ಪ್ರತ್ಯುತ್ತರವಾಗಿ ಗುಂಡಿನ ದಾಳಿ ನೆಡೆಸಿ ನಮಗೆ ಗುಂಡುಗಳ ಲೆಕ್ಕ ಬೇಕಿಲ್ಲ ನಮ್ಮದೇಶದ ಸುರಕ್ಷತೆ ಮುಖ್ಯ ಎಂದ ಮೋದಿಯವರ ಬಗ್ಗೆ ನಿಮ್ಮ ಈ ಮಾತು ಸಮಂಜಸವಲ್ಲ

ದಯವಿಟ್ಟು ಇನ್ನಾದರೂ ಎಚ್ಚೆತ್ತುಕೊಳ್ಳಿ ಇಲ್ಲದಿದ್ದರೆ ನಮ್ಮಂತ ಅಭಿಮಾನಿಗಳು ಟ್ವಿಟ್ಟರ್ ಗೆ ಕಾಲಿಟ್ಟರೆ ಅಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು.

ಮೋದಿಯೆಂದರೆ ಸೈನಿಕರ ಪಾಲಿಗೆ ರಿಯಲ್ ಹೀರೋ ಅಂತ ಸ್ವತಃ ಸೈನಿಕರೇ ಒಪ್ಪಿದಮೆಲೆ ನಿಮ್ಮದೇನು ಇಲ್ಲಸಲ್ಲದ ಅಪವಾದ ???

ಉತ್ತರಿಸಿ

ಟ್ವಿಟ್ಟರಿನಲ್ಲಿ ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವ ನಿಮ್ಮ ಅಭಿಮಾನಿ ..