ಮುಂಬೈ ತಂಡವನ್ನು ಮಣಿಸಿ ಉಪಾಂತ್ಯಕ್ಕೆ ಲಗ್ಗೆ ಇಟ್ಟ ಕನ್ನಡಿಗರು..!!

ನಾಗಪುರದಲ್ಲಿ ನಡೆದ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ಸ್‌ನಲ್ಲಿ ಕರ್ನಾಟಕ ತಂಡ ಮುಂಬೈ ತಂಡವನ್ನು ಒಂದು ಇನ್ನಿಂಗ್ಸ್ ಹಾಗೂ 20 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ವಿನಯ ಕುಮಾರ ಪಡೆ ಪಂದ್ಯಾವಳಿಯ ಸೆಮಿಫೈನಲ್ಸ್ ಪ್ರವೇಶಿಸಿದೆ. ಈ ಮೂಲಕ ಕನ್ನಡಿಗರಿಗೆ ಮತ್ತೊಂದು ರಣಕಿ ಕಪ್ ಗೆದ್ದು ಕೊಡುವ ಉತ್ಸಾಹದಲ್ಲಿದೆ ಕರ್ನಾಟಕ ತಂಡ.

ನಾಗಪುರದಲ್ಲಿ ನಡೆದ ಪಂದ್ಯದ 4ನೇ ದಿನವಾದ ಇಂದು ಮುಂಬೈ ತಂಡ 2ನೇ ಇನ್ನಿಂಗ್ಸ್‌ನಲ್ಲಿ 377 ರನ್‌ಗೆ ಆಲೌಟ್ ಮಾಡಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಶ್ರೇಯಸ್ ಗೋಪಾಲ್ ಅವರ ಶತಕದ ನೆರವಿನಿಂದ ಕರ್ನಾಟಕ ತಂಡ 570 ರನ್ ಪೇರಿಸುವ ಮೊದಲ ಇನ್ನಿಂಗ್ಸ್‌ನಲ್ಲಿ 397 ರನ್‌ಗಳ ಭಾರಿ ಮುನ್ನಡೆ ಗಳಿಸಿತ್ತು. 

ಮುಂಬೈನ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಅವರ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಪಡೆ 6 ವಿಕೆಟ್ ನೀಡಿತು. 2ನೇ ಇನ್ನಿಂಗ್ಸ್‌ನಲ್ಲಿ ಕೆ. ಗೌತಮ್ 6 ವಿಕೆಟ್ ಪಡೆಯುವ ಮೂಲಕ ಕರ್ನಾಟಕದ ಗೆಲುವವನ್ನು ಖಚಿತ ಪಡಿಸಿದರು.

ರಣಜಿಯಲ್ಲಿ ಅತ್ಯತ್ತಮ ಪಾರ್ಮ್ ನಲ್ಲಿರುವ ದಾವಣಗೆರೆ ಏಕ್ಸಪ್ರೇಸ್ ವಿನಯ ಕುಮಾರ ಅವರ ಮೇಲೆ ಕನ್ನಡಿಗರ ಅಪಾರ ಬೆಂಬಲವಿದೆ. ಮತ್ತೊಂದು ರಣಜಿ ಕಪ್ ಕರ್ನಾಟಕಕ್ಕೆ ತಂದು ಕೊಡಲಿ ಎಂದು ಆರು ಕೋಟಿ ಕನ್ನಡಿಗರ ಆಶಯವಾಗಿದೆ.

ಸಂಕ್ಷಿಪ್ತ ಸ್ಕೋರ್ ವಿವರ ಇಲ್ಲಿದೆ

ಕರ್ನಾಟಕ ತಂಡ ಗೆದ್ದು ಬರಲಿ ಎಂದು ಈ ಮೂಲಕ ಹಾರೈಸೋಣ..
#ಜೈ_ಕರ್ನಾಟಕ