ಮೂರು ಪಾಕ್ ಉಗ್ರರನ್ನು 72 ಕನ್ಯೆಯರ ಬಳಿ ಕಳುಹಿಸಿದ ಭಾರತೀಯ ಸೈನ್ಯ..!!

ಜಮ್ಮು ಕಾಶ್ಮೀರ: ಭಾರತವನ್ನು ನೇರವಾಗಿ ಎದುರಿನಿಂದ ಎದರಿಸಲಾಗದ ಶಂಡ ಪಾಕಿಸ್ತಾನ ಉಗ್ರರನ್ನು ಭಾರತ ಮೇಲೆ ಚೂ ಬೀಡುವ ಮೂಲಕ ತನ್ನ ಹೇಡಿ ಕೃತ್ಯವನ್ನು ಮುಂದುವರೆಸಿದ್ದಾರೆ.

ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಪಾಕಿಸ್ತಾನಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಹಂದ್ವಾರದ ಉನಿಸೂ ಎಂಬಲ್ಲಿ ಪಾಕಿಸ್ತಾನ ಮೂಲದ ಮೂವರು ಉಗ್ರರು ಒಳನುಸುಳಿದ್ದಾರೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಜಮ್ಮು ಕಾಶ್ಮೀರ ಪೊಲೀಸ್, ಸಿಆರ್‌ಪಿಎಫ್ ಮತ್ತು ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆಗೆಗಿಳಿದು, ರಾತ್ರಿಯಿಡೀ ಮಳೆ, ಚಳಿಯನ್ನೆದೆ ಪಾಕ್ ಮೂಲದ ಮೂರು ಉಗ್ರರನ್ನು ಭಾರತೀಯ ಹೆಮ್ಮೆಯ ಸೈನಿಕರು ರಾತ್ರಿಯಿಡೀ ಕಾರ್ಯಾಚರಣೆ ಮಾಡಿ ಹೊಡೆದುರುಳಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ಎಸ್‍ಪಿ ವೈದ್ ಟ್ವೀಟ್ ಮಾಡಿದ್ದಾರೆ. 

ಪಾಕ್ ಮೂಲದ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಹತ್ಯೆಯಾಗಿರುವ ಉಗ್ರರಿಂದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವೈದ್‌ ತಿಳಿಸಿದ್ದಾರೆ.