ಮೂರನೇ ದ್ವೀಶತಕ ಸಿಡಿಸಿ ಏಕದಿನದಲ್ಲಿ ಹೊಸ ಇತಿಹಾಸ ನಿರ್ಮಿಸಿದ ರೋ’Hit..!!

ಭಾರತ ತಂಡದ ಆರಂಭಿಕ ಸ್ಫೋಟಕ ಬ್ಯಾಟ್ಸ್‌ಮನ್ ರೋ’Hit’ ಶರ್ಮಾ ಏಕದಿನ ಆಟದಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ರೋ’Hit’ ಅವರ ಈ ದಾಖಲೆಯನ್ನು ಮುರಿಯಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ ಅನಿಸುತ್ತದೆ. ಸಿಂಹಳಿಯರ ವಿರುದ್ಧದ 2ನೇ ಒಂಡೇ ಆಟದಲ್ಲಿ ರೋ’Hit’ ಶರ್ಮಾ ತಮ್ಮ ವೃತ್ತಿ ಜೀವನದ 3ನೇ ದ್ವಿಶತಕ ಸಿಡಿಸುವುದರೊಂದಿಗೆ ಏಕದಿನ ಇತಿಹಾಸ ನೂತನ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.

ಇದಕ್ಕೂ ಮುಂಚೆ ಆಸ್ಟ್ರೇಲಿಯಾ ವಿರುದ್ಧದ 2013 ರಲ ಜೈಪುರದಲ್ಲಿ ನಡೆದ ಪಂದ್ಯದಲ್ಲಿ 209 ಮತ್ತು ಇದೆ ಸಿಂಹಳಿಯರ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2014ರಲ್ಲಿ ಶ್ರೀಲಂಕಾ ವಿರುದ್ಧ 264 ಸಿಡಿಸಿದ್ದರು. ಈಗ ಮತ್ತದೆ ಸಿಂಹಳಿಯರ ವಿರುದ್ಧವೇ ಮತ್ತೊಂದು ದ್ವಿಶತಕ (208) ಬಾರಿಸಿ ಮೂರು ಧ್ವೀಶತಕವನ್ನು ತಮ್ಮ ಹೆಸರಿನಲ್ಲಿ ದಾಖಲಿಸಿಕೊಂಡರು.

ಕ್ಯಾಪ್ಟನ್‌ನಾಗಿ ದ್ವಿಶತಕ ಬಾಸಿರಿದ್ದು ಹೊಸ ದಾಖಲೆ..!!

ಹೌದು..!! ಇಲ್ಲಿಯವರೆಗೆ ಯಾವೋಬ್ಬ ಆಟಗಾರನೂ ನಾಯಕನಾಗಿ ಏಕದಿನ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದ ಉದಾಹರಣೆಗಳಿಲ್ಲಾ. ನಾಯಕನಾಗಿ ದ್ವಿಶತಕ ಸಿಡಿಸಿ ನೂತನ ದಾಖಲೆ ರೋ’Hit’ ಅವರ ಮುಡಿಗೆ ಸೇರಿದೆ. ರೋಹಿತ್ ನಾಯಕನಾಗಿ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋತ ಸೇಡನ್ನು ಹಲವು ದಾಖಲೆಗಳನ್ನು ಸೃಷ್ಟಿಸುವ ಮೂಲಕ ಎರಡನೇ ಪಂದ್ಯದಲ್ಲಿ ತೀರಿಸಿಕೊಂಡಿದ್ದಾರೆ.

ಟಾಸ್ ಗೆದ್ದು ಆಟ ಸೋತ ಸಿಂಹಳಿಯರು..!!

ಸಿಂಹಳಿಯರ ತಂಡವು ಮೊಹಾಲಿಯ IS ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಕ್ಷೇತ್ರರಕ್ಷಣೆ ಆಯ್ಕೆ ಮಾಡಿ ಭಾರತವನ್ನು ಬ್ಯಾಟಿಂಗ್ ಇಳಿಸಿ ತಪ್ಪು ಮಾಡಿತು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಶ್ರೀಲಂಕಾ ಬೌಲರ್’ಗಳನ್ನು ಮನಸೋಇಚ್ಛೆ ದಂಡಿಸಿದರು.

ತಾಳ್ಮೆಯಿಂದ ಆಡಿ ನಂತರ ರೊಚ್ಚಿಗೆದ್ದ ರೋ’Hit’

ಪ್ರಾರಂಭದಲ್ಲಿ ತಾಳ್ಮೆಯ ಆಟವಾಟಿದ ರೋಹಿತ್ ಶಿಖರ್ ಧವನ್’ಗೆ ಉತ್ತಮ ಬೆಂಬಲ ನೀಡಿದರು. 21.1 ಓವರ್’ಗಳವರೆಗೂ ಇವರಿಬ್ಬರ ಜೋಡಿ 115 ಓಟಗಳನ್ನು ದಾಖಲಿಸಿದ್ದರು. ಪಥಿರಣ ಬೌಲಿಂಗ್’ನಲ್ಲಿ ತಿರಮನ್ನೆ’ಗೆ ಕ್ಯಾಚ್ ನೀಡುವುದರೊಂದಿಗೆ ಇಬ್ಬರ ಜುಗಳಬಂದಿ ಅಂತ್ಯವಾಯಿತು.

ಅಯ್ಯರ್ ಜೊತೆ ರೋ’Hit’ ಆಟ

ರೋ’Hit’ ಶರ್ಮಾಗೆ ಜೊತೆಯಾದ ಭಾರತ ತಂಡದ ಉದಯೋನ್ಮುಖ ಆಟಗಾರನಾದ ಶ್ರೇಯಸ್ ಅಯ್ಯರ್ ಪ್ರಾರಂಭದಿಂದಲೇ ಬೀರುಸಿನ ಆಟವಾಡತೊಡಗಿದರು. 30 ನೇ ಓವರ್’ಗಳ ನಂತರ ಶುರುವಾಯಿತು ರೋಹಿತ್ ಶರ್ಮಾರ ಸ್ಫೋಟಕ ಆಟದ ಧರ್ಭಾರ..!! ಇಬ್ಬರ ಅಬ್ಬರ ಆಟಕ್ಕೆ ಸಿಂಹಳಿಯ ಬೌಲರ್‌ಗಳು ಬೆಳಲಿ ಬೆಂಡಾಗ ಬೇಕಾಯಿತು. 2ನೇ ವಿಕೆಟ್ ಜೊತೆಯಾಟಕ್ಕೆ ಇಬ್ಬರೂ ಬರೋಬ್ಬರಿ 239 ರನ್ ಭಾರಿಸಿದ್ದರು. ಪೆರೇರಾ ಬೌಲಿಂಗ್‌ನಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಡಿ ಸಿಲ್ವಾ’ಗೆ ಕ್ಯಾಚ್ ನೀಡಿ ಶ್ರೇಯಸ್ ಅಯ್ಯರ್ ಅವರು ನಿರ್ಗಮಿಸಿದರು. 70 ಎಸೆತಗಳ 88 ರನ್’ಗಳ ಆಟದಲ್ಲಿ 9 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸ್’ರ್ ಅಯ್ಯರ ಸಿಡಿಸಿದ್ದರು.

ರೋ’Hit’ ದಾಖಲೆಗಳ ಸರಮಾಲೆ..!!

ಭಾರತ ತಂಡ ಹಂಗಾಮಿ ನಾಯಕ ರೋ’Hit’ ಶರ್ಮಾ ಕೊನೆಯ ಓವರ್’ನಲ್ಲಿ ತಮ್ಮ ಏಕದಿನ ವೃತ್ತಿ ಜೀವನದ 3ನೇ ದ್ವಿಶತಕ ದಾಖಲಿಸಿದರು. ಆಡಿದ 153 ಎಸೆತಗಳ ಅದ್ಭುತ ಇನ್ನಿಂಗ್ಸ್’ನಲ್ಲಿ 208 ರನ್’ಗಳು ಮೂಡಿಬಂದವು. 13 ಭರ್ಜರಿ ಬೌಂಡರಿ ಹಾಗೂ 12 ಸ್ಫೋಟಕ ಸಿಕ್ಸ್’ರ್’ಗಳು ಇದರಲ್ಲಿ ಒಳಗೊಂಡಿದ್ದವು.

ಭಾರತ ತಂಡ 50 ಓವರ್’ಗಳಲ್ಲಿ 4 ವಿಕೇಟ್ ನಷ್ಟಕ್ಕೆ 392 ರನ್’ಗಳ ಬೃಹತ್ ಮೊತ್ತ ಪೇರಿಸಿ ದೊಡ್ಡ ಟಾರ್ಗೆಟ್ ಸಿಂಹಳಿಯರಿಗೆ ಕೊಟ್ಟಿದೆ‌. ಸಿಂಹಳಿಯರ ಫರ್ನಾಂಡೋ 106/0, ಪೆರೇರಾ 80/3 ದುಬಾರಿ ಏನಿಸಿಕೊಂಡರು.

Source : Suvarna Tv