ದಲಿತ ಯುವತಿ ಮೇಲೆ ಅತ್ಯಾಚಾರ. ಕಣ್ಮುಚ್ಚಿ ಕುಳಿತ ರಾಜ್ಯ ಸರ್ಕಾರ..!!

ನಿನ್ನೆ ರಾತ್ರಿ ವಿಜಯಪುರ ನಗರದ ದರ್ಗಾ ಹತ್ತಿರ ದಲಿತ ಯುವತಿ‌ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೆ ರಾತ್ರೋ ರಾತ್ರಿ ಅಂಬೇಡ್ಕರ್ ವೃತ್ತ ದಲ್ಲಿ ಶವ ಇಟ್ಟುಕೊಂಡು ಪ್ರತಿಭಟನೆಗೆ ಕುಳಿತಿದ್ದಾರೆ ಧರಣಿ ನಿರತರು…!!

ಮುಖ್ಯಮಂತ್ರಿಗಳು‌ ಅಲ್ಲೇ ಪಕ್ಕದ ಜಿಲ್ಲೆಯಲ್ಲಿ ಇದ್ದಾರಂತೆ.. ಬಂದು ಕ್ರಮಜರುಗಿಸುವ ಮತ್ತದೇ ಹುಸಿ ಭರವಸೆ ಕೊಡಬೇಕಂತೆ… ಕುಟುಂಬಕ್ಕೆ ಒಂದಷ್ಟು ಪರಿಹಾರ ( ಮಾನಪ್ರಾಣಕ್ಕೆ ಬೆಲೆಕಟ್ಟಿ) ಘೋಷಿಸಬೇಕಂತೆ..!

“ಪರಿಹಾರ”ಕ್ಕಾಗಿ ಹೋರಾಡುವುದು ಬೇಡ ಬಂಧುಗಳೇ… ಅದರಿಂದ ಆ ನನ್ನ ಸೋದರಿಯ ಮಾನ ಪ್ರಾಣ ಮರಳಿ ಬಾರದು..! ಸಿ.ಬಿ.ಐ ಸಿ.ಐ.ಡಿ ಯ ತನಿಖೆಯೂ ಬೇಡ ಅದರಿಂದ ಕೇಸು ಮೂಲೆ ಸೇರಿ ಮುಕ್ಕಾಗಿ ಹಳೆಯ ಒಂದಷ್ಟು ಕೇಸುಗಳೊಂದಿಗೆ ಸೇರಿ ಕೊಳೆಯುತ್ತದಷ್ಟೆ..!

ಆ ಮುಖ್ಯಮಂತ್ರಿಯೂ ಬರಲಿ ಉಸ್ತುವಾರಿ ಮಂತ್ರಿಯೂ ಬರಲಿ ಗೃಹಮಂತ್ರಿಯೂ ಬರಲಿ ಅಲ್ಲಿನ ಎಂಪಿ ಎಮ್ಮೆಲ್ಲೆಯೂ ಬರಲಿ, ಮೀಸಲು ಕ್ಷೇತ್ರಗಳಿಂದ ಗೆದ್ದ ನಾಲಾಯಕ್ ಗಳೂ ಬರಲಿ…

ಬಂದು ಆನ್ ಸ್ಪಾಟ್ ನಲ್ಲಿ ಇಷ್ಟು ಮಾಡಲು ಹೇಳಿ..

• 24 ಗಂಟೆಯೊಳಗೆ ಆ ಕೃತ್ಯ ಎಸಗಿರುವ ವಿಕೃತ ಕ್ರೂರಿ ಅಪರಾಧಿಗಳನ್ನು ಬಂಧಿಸಬೇಕು.

• ಅರೋಪಿಗಳು ಸಾರ್ವಜನಿಕವಾಗಿ ಬೆತ್ತಲೆ ಮಾಡಿ ಬಡಿದು ಮೆರವಣಿಗೆ ಮಾಡಬೇಕು.

• ಅವರಿಗೆ ಬೇಷರತ್ ಮರಣದಂಡನೆ ವಿಧಿಸಬೇಕು.

ಇದಾಗದೇ ಯಾರ ಮಾತಿಗೂ ಸಂಧಾನವಾಗಿ ಶವವನ್ನು ಕದಲಿಸಬೇಡಿ…

ಬರಲಿ.. ವಿಶ್ವಸಂಸ್ಥೆಯೇ ತಿರುಗಿ ನೋಡಲಿ.. ಆಡಳಿತ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಖಕ್ಕೆ ಉಗಿಯಲಿ.

ಯಾಕೆ..!? ದೆಹಲಿಯಲ್ಲಿ ಮೇಲ್ವರ್ಗದ ಹೆಣ್ಣೊಬ್ಬಳ (ನಿರ್ಭಯಾ ಪ್ರಕರಣ) ಅತ್ಯಾಚಾರ ವಿಚಾರ ಜಗತ್ತಿನಲ್ಲಿ ಮಾರ್ಧನಿಸಲಿಲ್ಲವೇ..!? ಆ ವಿಕೃತಕೊಲೆಗಡುಕರಿಗೆ ಮರಣದಂಡನೆ ವಿಧಿಸಲಿಲ್ಲವೇ…!? ಥೂ…. ನಾಚಿಗೆಗೆಟ್ಟ ಕ್ರೂರ ಸಮಾಜವೇ… ಹೆಣ್ಣೆಂದರೆ ಹೆಣ್ಣೆ ಮಾನವೆಂದರೆ ಶ್ರೀಮಂತೆ ಬಡವಿ ಎಂದು ನೋಡಬಹುದೇ..!? ಮಾನ ಪ್ರಾಣದಲ್ಲಿಯೂ ಜಾತಿ ನೋಡುವ ನಿಮ್ಮ ಹೀನಪರಂಪರೆಯು ಸರ್ವನಾಶವಾಗಿಹೋಗಲಿ..!

ಹಾಗೆಯೇ ಮಗಳ , ಅಕ್ಕತಂಗಿಯ ಅತ್ಯಾಚಾರವಾಯಿತೆಂದರೆ “ಪರಿಹಾರ” (ಪುಡಿಗಾಸಿಗೆ ಸಮವೇ ನನಕ್ಕ ತಂಗಿಯ ಮಾನ!!) ಹೋರಾಡುವ ಕುಟುಂಬದ ಹೋರಾಟಗಾರರ ದರಿದ್ರ ದೈನೇಸೀ ಮನಸ್ಥಿತಿ ಸರ್ವನಾಶವಾಗಲಿ..
ಸಾಧ್ಯವಾದರೆ ಇಂಥ ಹೋರಾಟಗಾರರು ಗರ್ಭದಲ್ಲೇ ಸತ್ತು ಹೋಗಲಿ…!

ಎಲ್ಲಿದ್ದೀರಿ..?? ಉಗ್ರ ಮಹಿಳಾ ಹೋರಾಟಗಾರರೇ… ಪ್ರಗತಿಪರ ಜಾತ್ಯಾತೀತ ಜಾತೀವಾದಿ ಬಂಧುಗಳೇ… ದಲಿತ ಹುಲಿಗಳೇ… ಬಹುಜನ ಸಂಘಟಕರೇ…. ಮಾನವರೇ…. ದಯಮಾಡಿ ಇದರ ಬಗ್ಗೆ ದನಿ ಎತ್ತಿ‌ ವಿಜಯಪುರಕ್ಕೆ ಹೋಗಿ ನ್ಯಾಯ ಸಿಗುವವರೆಗೂ ಸರ್ಕಾರದ ಕುತ್ತಿಗೆ ಹಿಡಿದು ಕೇಳಿ. ಅಲ್ಲಿನ ನಿರ್ಭಯಾಳೂ‌ ಹೆಣ್ಣೆ, ಇಲ್ಲಿನ ದಾನವೇಶ್ವರಿಯೂ ಹೆಣ್ಣೇ..!!! ಅವಳದೂ ಮಾನವೇ.. ಇವಳದೂ ಮಾನವೇ.. ಅವಳದೂ ಪ್ರಾಣವೇ.. ಇವಳದೂ ಪ್ರಾಣವೇ…
ನೋಡೋಣ… ನೀವೂ ಮನುಷ್ಯರಾಗಿ ವರ್ತಿಸಿ..!!

ಕೃಪೆ – ಹ.ರಾ.ಮಹಿಶ