ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ..!! ಫೇಸ್‌ಬುಕ್ ಬಳಸುವ ಸಹೋದರಿಯರೇ ಎಚ್ಚರ..!!

ಇತ್ತಿಚಿಗೆ “ಲವ್ ಜಿಹಾದ್” ಎಂಬ ಭೂತ ದಿನೆ ದಿನೆ ತನ್ನ ಜಾಲವನ್ನು ವಿಸ್ತರಿಸುತ್ತಿದೆ, ಅದರಲ್ಲೂ ಮತಾಂದ ಮುಸ್ಲಿಮರು ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿ ಹಿಂದೂ ಯುವತಿಯರಿಗೆ ಬಲೆ ಹಾಕುತ್ತಿದ್ದಾರೆ.

ಇಂತಹದೆ ಪ್ರಕರಣ ಈಗ ನಗರದಲ್ಲಿ ನಡೆದಿದ್ದು ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ ಹುಟ್ಟಿದ ಪ್ರೇಮಾಂಕುರ ಮದುವೆಯಾದ ಆರೇ ಆರು ತಿಂಗಳಿಗೆ ಮುರಿದುಬಿದ್ದಿರುವ ಮತ್ತೊಂದು ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮೈಸೂರು ತಾಲೂಕಿನಲ್ಲಿರುವ ಜಯಪುರದ ನಿವಾಸಿ “ಫೈಸಲ್ ಅಹಮದ್‍”ಗೆ ಫೇಸ್‌ಬುಕ್ ಮೂಲಕ ಗುಜರಾತಿನ ದ್ವಾರಕಾ ಜಿಲ್ಲೆಯ ದೇವಭೂಮಿಯ “ನ್ಯಾನ್ಸಿ ಜೋಷಿ” ಎಂಬ ಹಿಂದೂ ಯುವತಿಯ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ತಿರುಗಿ ಹಿಂದೂ ಸಹೋದರಿ ಮತಾಂದರ ಪ್ರೇಮಪಾಶಕ್ಕೆ ಬಿದ್ದಿದ್ದಳು, ಪ್ರೀತಿ ಮೊಳಕೆ ಒಡೆದ ಯುವತಿ ಗುಜರಾತಿನಿಂದ ಮೈಸೂರಿಗೆ ಬಂದು ಫೈಸಲ್‌ನನ್ನು ಮದುವೆಯಾಗಿದ್ದರು. ಆದರೆ ಮದುವೆಯಾಗಿ ಆರೇ ತಿಂಗಳಲ್ಲಿ ಇವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪರಸ್ಪರ ದೂರವಾಗಿದ್ದಾರೆ..!!

ಫೈಸಲ್ ಮತ್ತು ಜೋಷಿ ಮೂರು ವರ್ಷಗಳ ಹಿಂದೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದರು. ನಂತರ ಇಬ್ಬರ ನಡುವೆ ಪ್ರೀತಿಯಾಗಿದ್ದು, ಯುವತಿಯ ಮನೆಯವರು ಪ್ರೀತಿಗೆ ನಿರಾಕರಿಸಿದ್ದರಿಂದ ಆರು ತಿಂಗಳ ಹಿಂದೆ ಮನೆಯಿಂದ ಒಬ್ಬಳೆ ಓಡಿ ಬಂದಿದ್ದಾಳೆ. ಬಳಿಕ ಫೈಸಲ್ ಯುವತಿಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿ ನಂತರ ಮೈಸೂರಿನಲ್ಲೇ ಮದುವೆ ಮಾಡಿಕೊಂಡಿದ್ದನು.

ಮದವೆಯಾದ ನಂತರ ಗಂಡ ಮತ್ತು ಅತ್ತೆಯಿಂದ ಮುಸ್ಲಿಂ ಧರ್ಮಪಾಲನೆ ಮಾಡುವಂತೆ ಒತ್ತಾಯ ಮಾಡುತ್ತಿದ್ದರು, ಕುರಾನ್ ಓದುವಂತೆ, ಮಾಂಸಾಹಾರ ತಿನ್ನುವಂತೆ ಕಿರುಕುಳ ನೀಡುತ್ತಿದ್ದರು ಎಂದು ಹಿಂದೂ ಯುವತಿ ಆರೋಪಿಸುತ್ತಿದ್ದಾರೆ. ಕೊನೆಗೆ ಪತಿ ಮತ್ತು ಅತ್ತೆ ಕಾಟಕ್ಕೆ ಬೇಸತ್ತು ತನ್ನ ತಂದೆ ಮನೆಗೆ ಫೋನ್ ಮಾಡಿ ವಿಷಯವನ್ನು ತಿಳಿಸಿದ್ದಾರೆ. ವಿಷಯ ತಿಳಿದ ಬಳಿಕ ಯುವತಿಯ ಸಹೋದರ ಮೈಸೂರಿಗೆ ಬಂದು ತಂಗಿಯನ್ನ ರಕ್ಷಣೆ ಮಾಡಿದ್ದಾರೆ.

ಸಹೋದರ ತಂಗಿಯನ್ನು ಕರೆದುಕೊಂಡು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗಿದ್ದಾರೆ. ಅಲ್ಲಿ ಯುವತಿ ತಾನು ತನ್ನ ತಂದೆ ಮನೆಗೆ ಮರಳುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾರೆ. ನಂತರ ಪೊಲೀಸರು ತಡರಾತ್ರಿ ಯುವತಿಯನ್ನು ಗುಜರಾತ್ ರಾಜ್ಯಕ್ಕೆ ವಾಪಸಾಗಲು ಸಹಾಯ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ಯುವತಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.