ಐದು ಜನ CRPF ಯೋಧರು ಹುತಾತ್ಮರಾಗಿರುವಾಗ ಅದೇಗೆ ಹೊಸ ವರ್ಷವನ್ನು ಸಂಭ್ರಮಿಸುರೊ..!!??

ಹೊಸ ವರ್ಷ, ನ್ಯೂಯಿಯರ್, ಪಾರ್ಟಿ, ಮೋಜು ಮಸ್ತಿ,‌ ಗುಂಡು ತುಂಡು ಅಂತ ಇತ್ತ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ಭಾರತೀಯರು ಬಿದ್ದು ಒದ್ದಾಡುತ್ತಿದ್ದರೆ ಅತ್ತ ಗಡಿಯಲ್ಲಿ ನಮ್ಮನ್ನ ರಕ್ಷಿಸಲು ಭಾರತೀಯ ಸೇನೆ 24/7 ರೆಡಿಯಾಗಿ ನಿಂತಿದೆ.

ಇದೇ ಸಂದರ್ಭವನ್ನ ನೋಡಿಕೊಂಡು ಪಾಪಿ ಪಾಕಿಸ್ತಾನ ಮತ್ತೆ ತನ್ನ ನರಿ ಬುದ್ಧಿಯನ್ನ ತೋರಿಸಿ ಸೀಸ್ ಫೈರ್ ಉಲ್ಲಂಘಿಸಿ ಮತ್ತೆ ಭಾರತೀಯ ಸೇನೆಯ ಮೇಲೆ ದಾಳಿ ನಡೆಸುತ್ತಿದೆ, ‌ಇದರ ಜೊತೆ ಜೊತೆಗೆ ಪಾಕಿಸ್ತಾನಿ ಪ್ರೇರಿತ ಉಗ್ರರು ಭಾರತೀಯ ಸೇನೆಯ CRPF ಕ್ಯಾಂಪಿನ ಮೇಲೆ ಗ್ರೇನೆಡ್ ಗಳನ್ನ ಎಸೆದು ನಾಲ್ಕು ಜನ ಭಾರತೀಯ ಯೋಧರ ಪ್ರಾಣವನ್ನೇ ತೆಗೆದುಬಿಟ್ಟಿದೆ..

ಜಮ್ಮು ಕಾಶ್ಮೀರದ ಅವಂತಿಪುರದಲ್ಲಿರುವ 185 ನೆಯ CRPF ಬೆಟಾಲಿಯನ್ ಕ್ಯಾಂಪಿನ ಮೇಲೆ ಇಬ್ಬರು ಸಶಸ್ತ್ರಧಾರಿ ಉಗ್ರರು ಏಕಾಏಕಿ ದಾಳಿ ನಡೆಸಿರುವ ಪರಿಣಾಮ ನಾಲ್ಕು ಜನ CRPF ಯೋಧರು ಪ್ರಾಣತ್ಯಾಗ ಮಾಡಿದ್ದಾರೆ.

ಇಬ್ಬರು ಉಗ್ರರು ಸಿ.ಆರ್.ಪಿ.ಎಫ್ ಕ್ಯಾಂಪನ್ನ ಸುತ್ತುವರೆದು ತಮ್ಮ ಕೈಲಿದ್ದ ಗ್ರೇನೇಡುಗಳನ್ನ ಕ್ಯಾಂಪಿನ ಮೇಲೆ ಎಸೆದು ಕ್ಯಾಂಪನ್ನೇ ಧ್ವಂಸಗೊಳಿಸೋಕೆ ಸಂಚು ರೂಪಿಸಿದ್ದರು, ಆದರೆ ಭಾರತೀಯ ಸೇನೆ ಇಬ್ಬರೂ ಉಗ್ರರನ್ನ ಸದೆಬಡಿದಿದ್ದಾರೆ.

ಉಗ್ರ ಜೊತೆಗಿನ ಗುಂಡಿನ ಚಕಮಕಿಯಲ್ಲಿ 4 ಜನ ಭಾರತೀಯ ಯೋಧರು ಶಹೀದ್ ಆಗಿದ್ದು ಕೆಲ ಯೋಧರಿಗೆ ಗಂಭೀರ ಗಾಯಗಳಾಗಿವೆ.

ಇದೊಂದು ಭಯೋತ್ಪಾದಕರ ಫಿದಾಯಿನ್(ಆತ್ಮಾಹುತಿ) ದಾಳಿಯಾಗಿತ್ತು ಅನ್ನೋದನ್ನ ಭಾರತೀಯ ಸೇನೆಯ ಮೂಲಗಳು ತಿಳಿಸಿವೆ..

ಬಾರ್ಡರ್ ನಲ್ಲಿ ನಮಗಾಗಿ ಯೋಧರು ಹಗಲು ಇರುಳು ಕಾಯುತ್ತಿದ್ದರೆ ಇತ್ತ ನಾವು ಮಾತ್ರ ಅದ್ಯಾವ ವಿಷ್ಯದ ಪರಿವೇ ಇಲ್ಲದೆ ಹೊಸ ವರ್ಷ ಬಂತು ಅಂತ ಪಾಶ್ಚಾತ್ಯ ಸಂಸ್ಕೃತಿಗೆ ಜೋತುಬಿದ್ದು ಗುಂಡು ತುಂಡು ಪಾರ್ಟಿ ಮೋಜು ಮಸ್ತಿ ಅಂತ ಮಾಡುತ್ತಿರೋದನ್ನ ಕಂಡರೆ ಇವರಿಗಾಗಿಯಾ ಆ ಯೋಧರು ಪ್ರಾಣ ಕಳೆದುಕೊಳ್ಳುತ್ತಿರೋದು ಅಂತ ಒಮ್ಮೆ ರಕ್ತ ಕುದಿಯುತ್ತೆ.

ಭಾರತೀಯ ಯೋಧರು ಬಲಿಯಾಗಿದ್ದಾರ ಪರಿವೂ ಇಲ್ಲದೆ ನಾವಿದ್ದೇವಲ್ಲಾ ಅನ್ನೋ ಸಂಕಟ ಒಂದೆಡೆಯಾದರೆ ಅತ್ತ ಯೋಧರು ಪ್ರಾಣಬಿಡುತ್ತಿರೋ ದೃಶ್ಯ ಇನ್ನೊಂದೆಡೆ!!

ಉಗ್ರರ ದಾಳಿಗೆ ಬಲಿಯಾದ ಸೈನಿಕರಿಗೆ ಕನಿಷ್ಟಪಕ್ಷ ಶೃದ್ಧಾಂಜಲಿಯಾದರೂ ಸಲ್ಲಿಸೋಣ!!.

#ವಂದೇ #ಭಾರತ #ಮಾತರಂ