ಅಂಕಣಧಾರ್ಮಿಕರಾಷ್ಟ್ರೀಯಸುದ್ದಿ ಜಾಲ

ಮೂರು ಕಾಸಿನ ಕಿಮ್ಮತ್ತಿರದ ಧರ್ಮಾಂದ ಆಚರಣೆ ನಮಗೆ ಬೇಕೆ..??

ಹಿಂದೂಗಳು ಅರ್ಥವಿಲ್ಲದ, ಮೂರು ಕಾಸಿನ ಉಪಯೋಗವೇ ಇಲ್ಲದ ಒಂದು ಆಚರಣೆ ಮಾಡ್ತಾ ಇದ್ದೇವೆ ಅಂದರೆ ಅದು ಜನವರಿ 1 ರ NEW YEAR, ಅದು ಹಿಂದಿನ ದಿನದ ಸೂರ್ಯಾಸ್ತ ದಿಂದಲೇ ಅರಂಭ ಆಗಿ, ಸಾವಿರ ಸಾವಿರ ಖರ್ಚು ಮಾಡಿ ಕೇವಲ ಮದ್ಯಪಾನ ಮಾಂಸಾಹಾರ ಕುಣಿತ ವಾಂತಿ, NEW YEAR ಪ್ರಾರಂಭ ಅನ್ನುವ ಮಧ್ಯರಾತ್ರಿ 12 ಗಂಟೆ ಆಗುವುದರ ಒಳಗೆ ಕುಡಿದದ್ದು ತಲೆಗೇರಿ ಹೆಚ್ಚಿನವರು ನೆಲ ಕಚ್ಚಿ ಇರ್ತಾರೆ, ಇನ್ನು ಹಲವರು ಜನವರಿ 1 ರ ಸೂರ್ಯೋನನ್ನು ಕಾಣೋದೇ ಮಧ್ಯಾನ ; ಪಾರ್ಟಿ ಹೆಸರಲ್ಲಿ ತುಂಡು ಬಟ್ಟೆಯಲ್ಲಿ ಶೋಕಿ ಮಾಧಕ ದ್ರವ್ಯ ನಶೆ ಯಲ್ಲಿ DJ ಹಾಡಿಗೆ ದೇಹ ತೇಲಿಸಿ ಪ್ರಪಂಚವನ್ನೇ ಮರೆಸಿ, ಕಾಡ್ಗಿಚ್ಚಿನಂತೆ ಹರಡಿ ಸಂಸ್ಕ್ರತಿಯ ಕಗ್ಗೊಲೆ ಮಾಡುತ್ತಿರುವ ಈ ಆಚರಣೆ ಧರ್ಮಾಭಿಮಾನಿಗಳೆಲ್ಲ ಸೇರಿ ಅಂತ್ಯ ಹಾಡಲೇ ಬೇಕಿದೆ.

ಇವೆಲ್ಲವಕ್ಕೂ ಕಾರಣ ಬ್ರಿಟೀಷ್ ಕ್ಯಾಲಂಡರ್ ಬದಲಾಯಿಸುವ ಜನವರಿ ಒಂದನ್ನೇ ನಮ್ಮ ಹೊಸವರುಷ ಎನ್ನುವ ಭ್ರಮೇಗೆ ಬಿದ್ದದ್ದು, ಅದೇ ದಿನ HAPPY NEW YEAR ಅನ್ನುವ ಸಂದೇಶ ಹಂಚಿಕೊಳ್ಳುತ್ತಿರುವುದು ಬದಲಾಗಬೇಕಿದೆ.

ನಮಗೆಲ್ಲ ಗೊತ್ತಿರುವಂತೆ ಯುಗಾದಿ ನಮ್ಮೆಲ್ಲರ ಹೊಸ ವರುಷ ಅವತ್ತೆ ದಿನ ಅರಂಭವಾಗುವಂತೆ, ವರ್ಷ ಕೊನೆಗೊಳ್ಳುವಂತೆ ಕ್ಯಾಲೆಂಡರ್ ರಚನೆ ಎಲ್ಲ ಹಿಂದು ಕ್ಯಾಲೆಂಡರ್ ತಯಾರಿಕ ಸಂಸ್ಥೆಗಳು ಮಾಡಲೇಬೇಕು. ಇಂಥ ಕ್ಯಾಲೆಂಡರ್‌ಗಳಿಗೆ ಪ್ರಚಾರ ಮತ್ತು ಖರೀದಿ ಆದರಲ್ಲಿ ಜಾಹೀರಾತು ನೀಡುವ ಮೂಲಕ ನಾವೆಲ್ಲ ಧರ್ಮ ಕಾರ್ಯ ಮಾಡಬೇಕಿದೆ.

ಹಿಂದೂಗಳ ಪ್ರತಿ ಮನೆ ಮನೆಯನ್ನು ಇಂಥ ಹಿಂದು ಕ್ಯಾಲೆಂಡರ್‌ಗಳು ತಲುಪಿ ಕ್ಯಾಲೆಂಡರ್ ಬದಲಾಯಿಸುವ ದಿನ ಯುಗಾದಿಯೇ ಅದಾಗ ಮನೆಯವರೆಲ್ಲರೂ ಇಡೀ ಹಿಂದೂ ಸಮಾಜದಲ್ಲಿ ಬದಲಾವಣೆ ಜಾಗೃತಿ ಸಾದ್ಯ.

ಕುಡುಕರ ದಿನದ ವಿರುದ್ದ ಯುಗಾದಿಯ ಶುಭ ದಿನ ಪ್ರಕೃತಿಯ ಬದಲಾವಣೆಯಾಗುವ ಶುಭಕಾಲ ಮುಂಜಾನೆ ಸೂರ್ಯೋದಯಕ್ಕೆ ಮುಂಚ ಎದ್ದು ಶುದ್ಧಿಯಾಗಿ ನಿತ್ಯ ಕರ್ಮ ಮುಗಿಸಿ ಮನೆಯ ಮುಂದೇ ಹಸಿರು ತೋರಣ ಹೂವಿನಿಂದ ಅಲಂಕರಿಸಿ ರಂಗೋಲಿ ಹಚ್ಚಿ ಸೂರ್ಯೋದಯಕ್ಕೆ ಸರಿಯಾಗಿ ಹತ್ತಿರದ ದೇವಾಲಯಕ್ಕೆ ಹೋಗಿ ದೇವರ ಧರ್ಶನ ಮಾಡಿ ತೀರ್ಥ ಪ್ರಸಾದ ಸ್ವೀಕರಿಸಿ, ಸಿಹಿ ತಿನಿಸು ಬಗೆ ಬಗೆ ಖಾಧ್ಯಗಳನ್ನು ದೇವರಿಗೆ ನೈವೇದ್ಯ ಮಾಡಿ ಅಥಿತಿಗಳನ್ನು ಕರೆದು ಸತ್ಕಾರ ಮಾಡಿ ಕುಂಕುಮ ಅರಶಿನ ನೀಡಿ ಸುಮಂಗಲೇ ಯರಿಗೆ ಹಾರೈಸಿ ನೆರೆ ಕರೆ ಮನೆಯವರಿಗೂ ಬೇವು-ಬೆಲ್ಲ ಹಂಚಿ ಕಷ್ಟ-ಸುಖ ಜೀವನದಲ್ಲಿ ಸಮನಾಗಿ ಸ್ವೀಕರಿಸಿ ಸಂತೋಷದ ಜೀವನ ನಿಮ್ಮದಾಗಿಲಿ ಎಂದು ಎಲ್ಲರಿಗೂ ಹಾರೈಸಿ ಹಿರಿಯರ ಆಶೀರ್ವಾದ ಪಡೆದು ಕಿರಿಯರ ಜೊತೆ ಕುಟುಂಬ ಭಂದು -ಬಳಗ ಸ್ನೇಹಿತರು ಜೊತೆಗೂಡಿ ಸಂಭ್ರಮಿಸುವ ಸುಸಂಸ್ಕೃತ ಯುಗಾದಿ ಹಬ್ಬವನ್ನೇ ಕಡ್ಡಾಯವಾಗಿ ಹಿಂದೂಗಳಾದ ನಾವೆಲ್ಲ ಹೊಸ ವರುಷ.

ಆಚರಣೆಯಾಗಿ ಮಾಡಿ ಜನವರಿ ಒಂದರ ಈ ವಿಕೃತಿ ಕೊನೆಗಾಣಿಸಲೇ ಬೇಕಿದೆ ನಮ್ಮ ಸ್ವಾಸ್ತ್ಯ ಸಮಾಜಕ್ಕಾಗಿ ಕ್ಯಾಲೆಂಡರ್ ಬದಲಾಯಿಸು ದಿನದಿಂದಲೇ ಗುರುತಿಸುವ NEW YEAR ಅನ್ನು ಸಂಪೂರ್ಣವಾಗಿ ಯುಗಾದಿಗೆ ಕ್ಯಾಲೆಂಡರ್ ಬದಲಾಯಿಸುವ ಮೂಲಕ ಸಮಾಜ ಬದಲಾವಣೆಗೆ ನಮ್ಮ ಕೊಡುಗೆ ಸಲ್ಲಿಸೋಣ.

ಈಗಾಗಲೇ ಇಂಥ ಹಿಂದೂ ಧರ್ಮ ಪರ ಕಾಳಜಿಯೊಂದಿಗೇ ಯುಗಾದಿ ಯಿಂದಲೇ ಪ್ರಾರಂಭವಾಗುವ ಎಲ್ಲ ಹಿಂದೂ ಹಬ್ಬ ಹರಿದಿನ ಮಹತ್ವ, ವಿವರಣೆ ಒಳಗೋಂಡ ಹಿಂದೂಕಾಲಚಕ್ರ ಅನ್ನುವ ಕ್ಯಾಲೆಂಡರ್ ಅನ್ನು #PrasannaDharmajagruthi ಅನ್ನುವವರು ಪರಿಚಯಿಸಿದ್ದು (ಬ್ರಿಟೀಷ್ ದಿನದ ಗುರುತು ಜೊತೆಗಿದೆ) ಎಲ್ಲರೂ ಇದರ ಉಪಯೋಗ ಪಡೆಯಿರಿ, ಖರೀದಿಸಿ ಬಳಸಿ.

ಹೊಸ ವರುಷದ ಸಂಭ್ರಮದಲ್ಲಿ ನಶೆಯಲ್ಲಿ ಅಪಘಾತಕ್ಕಿಡಾಗಿ ಇಲ್ಲಿ ಅಷ್ಟು ಜನ ಅಲ್ಲಿ ಅಷ್ಟು ಜನ ಸತ್ತರು ಅನ್ನೋ ಇತ್ತೀಚೆಗೆ ಹೆಚ್ಚು ವರದಿ ಯಾಗುತ್ತಿರುವ ಸುದ್ದಿ ನೀವೆಲ್ಲ ಕೇಳಿರಬಹುದು ಕೂಡ, ಯುಗಾದಿಗೆ ಪ್ರಾರಂಭವಾಗುವ ಕ್ಯಾಲೆಂಡರ್ ಬಳಸುವ ಮೂಲಕ ಧರ್ಮ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಿ.

ಈ ಕೆಲಸ ರಾಜ್ಯ ರಾಷ್ಟ್ರಾದ್ಯಂತ ಆಗಲೇ ಬೇಕಾದ ಅಗತ್ಯ ಬದಲಾವಣೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ..

ಈ ಪೋಸ್ಟನ್ನು ಅತೀ ಹೆಚ್ಚು ಶೇರ್ ಮಾಡಿ ಧರ್ಮ ಜಾಗೃತಿಯಲ್ಲಿ ಸಹಕರಿಸಿ…

#ಜೈ_ಶ್ರೀರಾಮ್

ಈ ಸುದ್ದಿಯನ್ನು ಶೇರ್ ಮಾಡಿ
Show More

Related Articles