RCBಯಲ್ಲೇ ಉಳಿದ ವಿರಾಟ.. ಮುಂಬೈನಲ್ಲಿಯೇ ಉಳಿದ ರೋ’Hit’ ಚೈನೈ ತಂಡಕ್ಕೆ ಮರಳಿದ ದೋನಿ..!!

ಮುಂಬೈ: ಚುಟುಕು ಕ್ರಿಕೆಟ್ ಪ್ರಸಿದ್ಧ ಆಟ IPL ಟೂರ್ನಿಯ 11ನೇ ಆವೃತ್ತಿಯಲ್ಲಿ ಫ್ರಾಂಚೈಸ್‌ಗಳು ಯಾವ ಆಟಗಾರರನ್ನು ಉಳಿಸಿಕೊತ್ತಾರೆ ಎಂಬ ಕುತೂಹಲಕ್ಕೆ ಗುರುವಾರ ಸಂಜೆ ತೆರೆ ಬಿದ್ದಿದೆ.

ಅತ್ಯುತ್ತಮ ಫಾರ್ಮ್‌ನಲ್ಲಿರುವ ಭಾರತ ತಂಡದ ನಾಯಜ ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರನ್ನು IPL ಕ್ರಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ತಮ್ಮಲ್ಲೇ ಉಳಿಸಿಕೊಂಡಿವೆ. ಮಹೇಂದ್ರ ಸಿಂಗ್ ದೋನಿ ಅವರು ತಮ್ಮ ಮೂಲ ತಂಡ ಚೈನೈ ಸೂಪರ್ ಕಿಂಗ್ಸ್‌ಗೆ ಮರಳಿದ್ದಾರೆ.

ಮುಂಬೈನಲ್ಲಿ ಗುರುವಾರ ನಡೆದ ಆಟಗಾರರನ್ನು ಉಳಿಸಿಕೊಳ್ಳುವ (ರಿಟೆನ್ಶನ್‌) ಪ್ರಕ್ರಿಯೆಯಲ್ಲಿ ಕೊಹ್ಲಿಗೆ RCB ಫ್ರಾಂಚೈಸ್‌ ₹ 17 ಕೋಟಿ ರೂ. ನೀಡಿ ತಮ್ಮಲ್ಲೇ ಉಳಿಸಿಕೊಂಡಿತು. ಇದು IPL ಆಡಳಿತ ನಿಗದಿ ಮಾಡಿದ್ದ ಮೊತ್ತಕ್ಕಿಂತ ಜಾಸ್ತಿ. ಉಳಿಸಿಕೊಳ್ಳುವ ಆಟಗಾರರಿಗೆ ಐಪಿಎಲ್ ನಿಗದಿ ಮಾಡಿರುವ ಗರಿಷ್ಠ ಮೊತ್ತ ₹ 15 ಕೋಟಿ. 

ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್‌‌ನ್ನು ರಾಜಸ್ಥಾನ ರಾಯಲ್ಸ್ ತಂಡ ತಮ್ಮಲ್ಲೇ ಉಳಿಸಿಕೊಂಡಿದ್ದು ಡೇವಿಡ್‌ ವಾರ್ನರ್‌ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಉಳಿಸಿಕೊಂಡಿದೆ. ವೇಗದ ಬೌಲರ್‌ ಭುವನೇಶ್ವರ್ ಕುಮಾರ್ ಕೂಡ ಇದೇ ತಂಡದಲ್ಲಿ ಮುಂದುವರೆಯಲಿದ್ದಾರೆ.

 

IPL ನಿಂದ ಹೊರಗೆ ಉಳಿದ ಗೌತಮ್ ಗಂಭೀರ್‌..!!

ಸ್ಫೋಟಕ ಆರಂಭಿಕ ಆಟಗಾರ ಗೌತಮ್ ಗಂಭೀರ್‌ನ್ನು ಕೋಲ್ಕತ್ತ ನೈಟ್‌ ರೈಡರ್ಸ್ ಈ ಬಾರಿ ಕಡೆಗಣಿಸಿದೆ. ವೆಸ್ಟ್ ಇಂಡೀಸ್‌ನ ಸುನಿಲ್ ನಾರಾಯಣ್‌ ಮತ್ತು ಆ್ಯಂಡ್ರೆ ರಸೆಲ್ ಅವರನ್ನು ಉಳಿಸಿಕೊಂಡ KKR ಗಂಭೀರ್ ನ್ನು ಕೈಬಿಟ್ಟಿದೆ. ಹೀಗಾಗಿ ಅವರು ಈ ಬಾರಿಯ ಹರಾಜು ಪ್ರಕ್ರಿಯೆವರೆಗೆ ಕಾಯಬೇಕಾಗಿ ಬಂದಿದೆ.

ಎಡಗೈ ಸ್ಪಿನ್ನರ್ ಆದ ಅಕ್ಷರ್ ಪಟೇಲ್ ನ್ನು ಕಿಂಗ್ಸ್ ಇಲೆವನ್ ಪಂಜಾಬ್‌ ತಮ್ಮಲ್ಲೇ ಉಳಿಸಿಕೊಂಡಿದ್ದು ಡೆಲ್ಲಿ ಡೇರ್ ಡೆವಿಲ್ಸ್‌ ಫ್ರಾಂಚೈಸ್‌ ದಕ್ಷಿಣ ಆಫ್ರಿಕಾದ ವೇಗಿ ಕ್ರಿಸ್ ಮಾರಿಸ್, ದೆಹಲಿಯ ಯುವ ಆಟಗಾರ ರಿಷಭ್ ಪಂತ್‌ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್‌ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡದೇ ಇರಲು ತಿರ್ಮಾನಿಸಿದೆ.

ನಾಯಕ ರೋಹಿತ್ ಜೊತೆ ಹಾರ್ದಿಕ್‌ ಪಾಂಡ್ಯ ಮತ್ತು ಜಸ್‌ಪ್ರೀತ್ ಬೂಮ್ರಾ ಅವರನ್ನು ಸಹ ಮುಂಬೈ ಇಂಡಿಯನ್ಸ್ ತಂಡ ತಮ್ಮಲ್ಲೇ ಉಳಿಸಿಕೊಂಡಿದೆ.

3 ಉಳಿಸಿಕೊಂಡ 4 ಫ್ರಾಂಚೈಸ್‌..

IPL ನಿಯಮದ ಪ್ರಕಾರ ಒಟ್ಟು 5 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಪ್ರತಿ ಪ್ರಾಂಚೈಸ್‌ಗೆ ಅವಕಾಶ ಇತ್ತು. ಗುರುವಾರ ನಡೆದ ಮೊದಲ ಹಂತದ ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮೂವರು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿತ್ತು. ಉಳಿದ ಇಬ್ಬರನ್ನು ಇದೇ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಉಳಿಸಿಕೊಳ್ಳಬಹುದಾಗಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌, ಡೆಲ್ಲಿ ಡೇರ್ ಡೆವಿಲ್ಸ್‌ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮಾತ್ರ ಮೂವರು ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಂಡಿವೆ.

IPL ಗೆ ಮರಳಿದ ಸಿಎಸ್‌ಕೆ, ಆರ್‌ಆರ್

ಎರಡು ವರ್ಷಗಳ ನಿಷೇಧ ಶಿಕ್ಷೆ ಅನುಭವಿಸಿದ ನಂತರ ಚೆನ್ನೈ ಸೂಪರ್ ಕಿಂಗ್ಸ್‌ (CSK ) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಈ ಬಾರಿಯ IPLಗೆ ವಾಪಸ್ಸಾಗಿವೆ.

2014ರಲ್ಲಿ ನಡೆದಿದ್ದ ಸ್ಪಾಟ್‌ ಫಿಕ್ಸಿಂಗ್ ಪ್ರಕರಣದಲ್ಲಿ ಈ ಎರಡೂ ತಂಡಗಳನ್ನು ಅಮಾನತು ಮಾಡಲಾಗಿತ್ತು. ಅವುಗಳ ಬದಲು ಗುಜರಾತ್ ಲಯನ್ಸ್‌ ಮತ್ತು ಪುಣೆ ಸೂಪರ್ ಜೈಂಟ್ಸ್‌ ತಂಡಗಳು ಕಳೆದ ಎರಡು ಆವೃತ್ತಿಗಳಲ್ಲಿ ಆಡಿದ್ದವು. CSK ನಾಯಕರಾಗಿದ್ದ ದೋನಿ ಪುಣೆ ತಂಡದಲ್ಲಿದ್ದರು. ಗುಜರಾತ್ ತಂಡಕ್ಕೆ ಸುರೇಶ್ ರೈನಾ ನಾಯಕರಾಗಿದ್ದರು. ಈ ವರ್ಷದಿಂದ  ಗುಜರಾತ್ ಮತ್ತು ಪುಣೆ ತಂಡಗಳು IPLನಲ್ಲಿ ಆಟ ಆಡುವುದಿಲ್ಲ.