ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ..!! ಭವ್ಯ ಭಾರತದ ರಾಜಕೀಯದ ದುಸ್ಥಿತಿ..!!

ನಾವು ಯಾವಾಗ ಸುಧಾರಿಸೋದು.?

ಆಡಳಿತ ಪಕ್ಷ ಯಾವುದೇ ಇರಲಿ
ಎಡಪಂಥೀಯರ ಮನೆಯಲ್ಲಿ ಒಂದು ನಾಯಿ ಸತ್ತರೂ ಮೋದಿ ಅದಕ್ಕೆ ಉತ್ತರ ಕೊಡಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರವಿರುವ ರಾಜ್ಯದಲ್ಲಿ ಹಿಂದೂಗಳ ಸಾಲು ಸಾಲು ಹೆಣ ಉರುಳಿದರು ಅದಕ್ಕೆ ರಾಹುಲ್ ಆಗಲಿ ಸೋನಿಯಾಳಾಗಲಿ ಉತ್ತರ ಕೊಡಬೇಕಾಗಿಲ್ಲ. ಬಿಜೆಪಿ ರಾಜ್ಯದಲ್ಲಿ ಎಡಪಂಥೀಯನೊಬ್ಬ ಓಡುವಾಗ ಎಡವಿ ಬಿದ್ದರೂ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕಾಗುತ್ತದೆ. ಆದೇ ಕಾಂಗ್ರೆಸ್ ರಾಜ್ಯದಲ್ಲಿ ಸಿಎಂ ಹಿಂದೂಗಳ ಹೆಣದಮೇಲೆ ಇನ್ನಷ್ಟು ಬಲವಾಗಿ ಕೂತು ಅಧಿಕಾರ ಮುಂದುವರೆಸಬಹುದು.

ಎಡಪಂಥೀಯನೊಬ್ಬನಿಗೆ ಏಯ್ ಅಂದರೆ ಸಾಕು
ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಯಾಕೆಂದರೆ ಅವರ ಪರವಾಗಿರುವ ಸಂಸ್ಥೆಗಳು ಎಲ್ಲಾ ಕ್ಷೇತ್ರದಲ್ಲೂ ಅ ಮಟ್ಟಕ್ಕೆ ಪ್ರಭಾವ ಬೆಳೆಸಿಕೊಂಡಿವೆ. ಅದೇ ಬಲಪಂಥೀಯನೊಬ್ಬನ ಹತ್ಯೆ ರಾಜ್ಯ ಮಟ್ಟದಲ್ಲೂ ಸರಿಯಾಗಿ ಚರ್ಚೆಯಾಗೋದಿಲ್ಲ. ನ್ಯೂಯಾರ್ಕ್ ಟೈಮ್ಸ್ ಆಗಲಿ, ವಾಲ್ ಸ್ಟ್ರೀಟ್ ಜರ್ನಲ್ಗೇ ಆಗಲಿ ಎಡಪಂಥೀಯರ ಹೆಣ ಬೀಳೋದನ್ನು ಮಾತ್ರ ಕಾಯ್ತಾ ಇರ್ತದೆ.

ಎಡಪಂಥೀಯನೊಬ್ಬನ ಹತ್ಯೆಯನ್ನು ಮತ್ತೊಬ್ಬ ಎಡಪಂಥೀಯನೇ ಮಾಡಿದ್ದರೂ ಆರೋಪಿಗಳ ಬಂಧನ ಆಗುವವರೆಗೂ ಅದನ್ನು ಬಲಪಂಥೀಯರ ತಲೆಯ ಮೇಲೆ ಕಟ್ಟಲು ಪ್ರಯತ್ನಿಸುತ್ತಾರೆ. ಒಂದು ಹತ್ಯೆಯಿಂದ ರಾಜಕೀಯವಾಗಿ ಎಷ್ಟು ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತದೋ ಅದಷ್ಟೂ ಲಾಭವನ್ನು ಬಾಚಿಕೊಳ್ಳುತ್ತಾರೆ. ಅದೇ ಒಬ್ಬ ಬಲಪಂಥೀಯನ ಹತ್ಯೆಯಾದರೆ ಕೊಂದವರು ಎಡಪಂಥೀಯರು ಅಂತ ಗೊತ್ತಿದ್ದರೂ ಅವರ ಕೃತ್ಯದ ಬಗ್ಗೆ ಎಲ್ಲೂ ಉಲ್ಲೇಖ ಮಾಡೋದಿಲ್ಲ.

ಎಡಪಂಥೀಯನೊಬ್ಬ ತನಗೆ ತಾನೇ ಗುಂಡು ಹಾರಿಸಿಕೊಂಡು ಅಥವಾ ಆತ್ಮಹತ್ಯೆ ಮಾಡಿಕೊಂಡು ಸತ್ತರೂ ಅದರ ಹೊಣೆಯನ್ನು ಬಲಪಂಥೀಯರು ಹೊತ್ತುಕೊಳ್ಳುವಂತೆ ಮಾಡುತ್ತಾರೆ. ಅದೇ ಒಬ್ಬ ಬಲಪಂಥೀಯನನ್ನು ಕೊಂದದ್ದು ನಾವೇ ಎಂದು ಎಡಪಂಥೀಯರು ಒಪ್ಪಿಕೊಂಡರೂ ಅದಕ್ಕೆ ವಿರೋಧದ ಬದಲು ಬೆಂಬಲ ಸಿಗುತ್ತದೆ.

ಎಡಪಂಥೀಯ ನೆಟ್ವರ್ಕ್ ಬಲಪಂಥೀಯರಿಗಿಂತ ಶಕ್ತಿಯುತವಾದದ್ದು. ಒಬ್ಬ ನಕ್ಸಲ್ ಅಥವಾ ಒಬ್ಬ ಭಯೋತ್ಪಾದಕ ಅಥವಾ ಒಬ್ಬ ವಿಚಾರವ್ಯಾಧಿ ಸತ್ತರೆ ಕ್ಷಣಾರ್ಧದಲ್ಲೇ ಒಂದು ಹೋರಾಟ ರೂಪುಗೊಳ್ಳುತ್ತದೆ. ಬಣ್ಣಬಣ್ಣದ ಪ್ರತಿಭಟನಾ ಫಲಕಗಳು, ವಿಭಿನ್ನ ಘೋಷಣೆಗಳು,ವೈಭವಯುತ ಲೇಖನಗಳು, ಬಿಸಿಬಿಸಿ ಟಿವಿ ಚರ್ಚೆಗಳು ರೂಪುಗೊಳ್ಳುತ್ತವೆ. ವಿಶ್ವವಿದ್ಯಾಲಯದಲ್ಲಿರುವ ಕಾಂಗ್ರೆಸ್ ಪ್ರಾಯೋಜಿತ ಉಪನ್ಯಾಸಕರು, ಕಾಂಗ್ರೆಸ್ ಕ್ಯಾಂಟಿನ್ ನಲ್ಲಿ ಗಂಜಿನೆಕ್ಕುವ ಸಾಹಿತಿಗಳು, ಅ ಪಕ್ಷದ ಮುಖವಾಹಿನಿಯಂತೆ ಕೆಲಸ ಮಾಡುವ ಪತ್ರಕರ್ತರು, ಹಿಂದೂಗಳನ್ನು ಮುಗಿಸಲೆಂದೇ ವಿದೇಶಿ ಬಂಡವಾಳದೊಂದಿಗೆ ಬೀಡು ಬಿಟ್ಟಿರುವ ಸಂಘಸಂಸ್ಥೆಗಳು ಎಲ್ಲರೂ ಈ ಅವಕಾಶವನ್ನು ಬಳಸಿಕೊಂಡು ಬಿಜೆಪಿ ವಿರೋಧಿ ಮತಬ್ಯಾಂಕನ್ನು ಸೃಷ್ಟಿಸಿಬಿಡುತ್ತಾರೆ. ಆದರೆ ಬಲಪಂಥೀಯರಿಗೆ ಇಂತಹ ವಿಷಯಗಳಲ್ಲಿ ಬಲನೇ ಇರೋದಿಲ್ಲ

ಗೌರಿಯಂತಹ ಎಡವಾದಿ ಸತ್ತಾಗ ಬಲಪಂಥೀಯ ನಾಯಕರೆನಿಸಿಕೊಂಡವರು, RSS ನಂತಹ ಸಂಘಟನೆ ಕೂಡ ಅದನ್ನು ಖಂಡಿಸಿ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿತ್ತು. ಆದರೆ ಒಬ್ಬ ಬಲಪಂಥೀಯನ ಹತ್ಯೆಯನ್ನು ಖಂಡಿಸಿ ಮಾತನಾಡಿರುವ ಎಡವಾದಿ ಸಾಹಿತಿ, ವಿಚಾರವ್ಯಾಧಿ ಅಥವಾ ಸಿಕ್ಯುಲರ್ ನಾಯಕ ಮತ್ತವನ ಸಂಘಟನೆಯ ಬಗ್ಗೆ ಕೇಳಿದ್ದೀರಾ.?

ನಾನಿಲ್ಲಿ ಬಲಪಂಥೀಯನ ಹತ್ಯೆಯನ್ನು ವೈಭವೀಕರಿಸಿ ಅದರಿಂದ ಬಿಜೆಪಿ ಮತಬ್ಯಾಂಕ್ ಸೃಷ್ಪಿಸಬೇಕೆಂದು ಹೇಳುತ್ತಿಲ್ಲ. ನಮ್ಮ ಸಮುದಾಯಕ್ಕೆ, ನಮ್ಮ ಸಿದ್ಧಾಂತಕ್ಕೆ ಈ ಮಟ್ಟದ ಅಪಾಯ ಎದುರಾಗುತ್ತಿದ್ದಾಗಲೂ ನಾವು ಬೀದಿಗಿಳಿಯದೇ ಇರೋದು ಎಷ್ಟು ಸರಿ ಎಂಬುದೇ ನನ್ನ ಪ್ರಶ್ನೆ.

#ಸತ್ಯಾಸತ್ಯತೆ

– Sameeksha V Chinnu

  • 304
    Shares