ಬಾಂಗ್ಲಾ ವಲಸಿಗರಿಗೆ ಕಾಂಗ್ರೇಸ್ಸಿನಿಂದ ವೋಟರ್‌ ಐಡಿ: ಯಡಿಯೂರಪ್ಪ ಆರೋಪ

ಬೆಂಗಳೂರು: ಬೆಂಗಳೂರು ನಗರದಲ್ಲಿರುವ ಸುಮಾರು 2.50 ಲಕ್ಷ ಬಾಂಗ್ಲಾ ದೇಶದ ಅಕ್ರಮ ವಲಸಿಗರಿಗೆ ವೋಟರ್‌ ಐಡಿ ನೀಡುವ ಕೆಲಸವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ. ಇದರ ಜವಾಬ್ದಾರಿ ಯನ್ನು ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಶಾಸಕ ಭೈರತಿ ಬಸವರಾಜುಗೆ ನೀಡಿದ್ದಾರೆ. ಭಾಜಪ ನಾಯಕರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಭಾಜಪ ರಾಜ್ಯಾಧ್ಯಕ್ಷ ಬಿ.ಎಸ್‌  ಯಡಿಯೂರಪ್ಪನವರು ಹೇಳಿದ್ದಾರೆ.

ಪರಿವರ್ತನಾ ಯಾತ್ರೆಯ ಅಧ್ಯಕ್ಷೀಯ ಭಾಷಣ ಮಾಡಿದ ಯಡಿಯೂರಪ್ಪನವರು, ಚುನಾವಣೆ ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಸವಣ್ಣ ನೆನಪಾಗುತ್ತಿದ್ದಾರೆ. ಜಾತಿಗಳನ್ನು ಒಡೆಯುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕಣ್ಮರೆಯಾಗಿದೆ. ಭಾಜಪವನ್ನು ಅಧಿಕಾರಕ್ಕೆ ತಂದರೆ ಬೆಂಗಳೂರನ್ನು ಮಾದರಿ ನಗರವಾಗಿ ಮಾರ್ಪಾಡು ಮಾಡಲಿದ್ದೇವೆ ಎಂದು ಯಡಿಯೂರಪ್ಪನವರು ಭರವಸೆ ನೀಡಿದರು.

ರಾಜ್ಯಾದ್ಯಂತ ನಡೆಯುತ್ತಿರುವ ಪರಿವರ್ತನಾ ಯಾತ್ರೆಯಲ್ಲಿ ಈಗಾಗಲೇ 2.50 ಕೋಟಿ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದೇನೆ. ಜನವರಿ 10ಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‌ ಶಾ ಅವರು ಚಿತ್ರದುರ್ಗಕ್ಕೆ ಬರಲಿದ್ದಾರೆ. ಜನವರಿ 28ಕ್ಕೆ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಬರಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾಜಪ 150ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲವು ಸಾಧಿಸಲಿದೆ ಎಂದು ಯಡಿಯೂರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ರಿವರ್ಸ್‌ ಗೇರ್‌..!! : ಸ್ಮಾರ್ಟ್‌ ಸಿಟಿಗಾಗಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬಂದಿರುವ ಅನುದಾನದಲ್ಲಿ ಪ್ರತಿಶತ 10 ಹಣ ಸಮರ್ಪಕವಾಗಿ ಉಪಯೋಗಿಸಿಕೊಂಡಿಲ್ಲ. ರಾಜ್ಯದ ಅಭಿವೃದ್ಧಿ ಸ್ಲೋ ಮೋಷನ್‌ನಲ್ಲಿ ಸಾಗುತ್ತಿದೆ. ಅಭಿವೃದ್ಧಿ ವಿಚಾರವಾಗಿ ಪ್ರಧಾನಿ ಮೋದಿ ಹಾಗೂ ಭಾಜಪ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟಾಪ್‌ಗೇರ್‌ನಲ್ಲಿ ಇದ್ದಾರೆ. ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ನ್ಯೂಟ್ರಲ್‌ ಗೇರ್‌ನಲ್ಲಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಿವರ್ಸ್‌ ಗೇರ್‌ನಲ್ಲಿದ್ದಾರೆ ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್‌ ಅವರು ಟೀಕೆ ಮಾಡಿದರು.

ಕಾಂಗ್ರೇಸ್‌ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಗಾರ್ಡನ್‌ ಸಿಟಿ ಬೆಂಗಳೂರು ಗಾಬೇಜ್‌ ಸಿಟಿಯಾಗಿದೆ. ಅಭದ್ರತೆ, ಹಿಂಸಾಚಾರ ಹೆಚ್ಚಾಗಿದೆ. ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ಗೋವಾದ ತನಕ 19 ರಾಜ್ಯದಲ್ಲಿ ಭಾಜಪ ಮತ್ತು NDA ಆಡಳಿತದ ಸರ್ಕಾರ ಇದೆ. ಭಾಜಪ ಇಸ್‌ ಎವರಿ ವೇರ್‌, ಕಾಂಗ್ರೆಸ್‌ ಇಸ್‌ ನೋ ವೇರ್‌ ಆಗಿಬಿಟ್ಟಿದೆ ಎಂದು ಕೇಂದ್ರ ಸಚಿವ ಜಾವಡೇಕರ್‌ ಅವರು ವ್ಯಂಗ್ಯವಾಡಿದರು. 

Vadnagar: Prime Minister Narendra Modi addresses a public meeting in his home town Vadnagar on Sunday. PTI Photo / PIB(PTI10_8_2017_000135A)

Prime Minister Narendra Modi during the celebration function of 50 years of Basava jayanthi at Vigyan Bhawan 2017 Express photo by Renuka Puri.