ದೀಪಕ್ ಹತ್ಯೆಯ ಬೆನ್ನಲ್ಲೇ ಮತ್ತೊಂದು ಹತ್ಯೆಗೆ ವಿಫಲ ಯತ್ನ..!!

ದೀಪಕ್ ರಾಂ ಹತ್ಯೆಯ ಕಣ್ಣಿರು ಇನ್ನೂ ಮಾಸಿಲ್ಲಾ ಅಷ್ಟರಲ್ಲಿಯೇ ಸುರತ್ಕಲ್ ಹತ್ತಿರ ಮತ್ತೊಂದು ಹಿಂದೂ ಯುವಕನ ಹತ್ಯೆಗೆ ವಿಫಲ ಯತ್ನ ಮತಾಂದರು ನಡೆಸಿದ್ದಾರೆ..!!

ಮಂಗಳೂರು ಜ. 8 : ಸುರತ್ಕಲ್ ಹತ್ತಿರ ರಾತ್ರಿ ಸುಮಾರು 8.30ಕ್ಕೆ ಮತ್ತೊಂದು ತಲುವಾರು ದಾಳಿ ಮತಾಂದರಿಂದ ನಡೆದಿದೆ. ರಸ್ತೆಯಲ್ಲಿ ಬರುತ್ತಿದ್ದ ಹಿಂದೂ ಯುವಕನನ್ನು ಹತ್ಯೆ ಮಾಡಲು ಹೊಂಚು ಹಾಕಿ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಯುವಕ ಸುರತ್ಕಲ್ ನ ಹಿಂದೂ ಜಾಗರಣಾ ವೇದಿಕೆ ಸಹ ಸಂಚಾಲಕ ಭರತ್ ಕುಮಾರ ಎಂದು ತಿಳಿದು ಬಂದಿದೆ.

ಭರತ್ ತನ್ನ ಬೈಕಿನಲ್ಲಿ ಮನೆಯಡೆಗೆ ಹೋಗುತ್ತಿದ್ದ ಸಮಯದಲ್ಲಿ ದಾರಿ ಮಧ್ಯ ಗಿಡಗಳ ಮರೆಗೆ ಅಡಗಿ ಕುಳಿತಿದ್ದ ಮತಾಂದ ದುಷ್ಕರ್ಮಿಗಳು ಭರತ್ ಕುಮಾರನನ್ನು ಅಡ್ಡಗಟ್ಟಿ ತಲುವಾರ ನಿಂದ‌ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಬೈಕನ್ನು ಅಲ್ಲಿಯೇ ಬಿಟ್ಟು ಭರತ್ ಸ್ವಲ್ಪ ದೂರ ಓಡಿ ಹೋಗುವುದರೊಂದಿಗೆ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೇಕು..