ಕ್ಷಮೇ ಕೇಳದೆ ಇದ್ದರೆ “ನಾನು ಬಿಜೆಪಿ, ನಾನು ಆರ್.ಎಸ್.ಎಸ್” ಹೆಸರಿನಲ್ಲಿ ಜೈಲ್ ಭರೋ..!!

ಬೆಂಗಳೂರು : ಭಾಜಪ, RSS ನವರು ಒಂಥರಾ ಉಗ್ರಗಾಮಿಗಳೇ ಎಂದು ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಮಲ ಪಡೆ ಹೋರಾಟ ಮಾಡಲು ಮುಂದಾಗಿದೆ.

ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ರಾಜ್ಯ ಭಾಜಪ ಪ್ರಧಾನ ಕಾರ್ಯದರ್ಶಿಯಾದ ಸಂಸದೆ ಶೋಭಾ ಕರಂದ್ಲಾಜೆ ಅವರು “ಕಳೆದ ಸುಮಾರು ಎಪ್ಪತ್ತು(70) ವರ್ಷಗಳಿಂದ ದೇಶದ ಸೇವೆ ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ವಾಜಪೇಯಿ ಅವರು ಕಟ್ಟಿದ ಭಾಜಪವನ್ನು ಉಗ್ರಗಾಮಿಗಳ ಪಕ್ಷ ಎನ್ನುತ್ತಾರೆ.  ಇಂದು ಸಂಜೆಯೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ದಿನೇಶ್‌ ಗುಂಡುರಾವ್‌ ಅವರು ಕ್ಷಮೆ ಯಾಚಿಸಬೇಕು’ ಎಂದು ಶೋಬಾ ಕರಂದ್ಲಾಜೆ ಅವರು ಆಗ್ರಹಿಸಿದರು.

‘ಕ್ಷಮೆ ಕೇಳದೆ ಇದ್ದರೆ ನಾಳೆಯಿಂದ ”ನಾನು ಬಿಜೆಪಿ, ನಾನು ಆರ್‌ಎಸ್‌ಎಸ್‌” ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಜೈಲ್‌ ಭರೋ ನಡೆಸುತ್ತೇವೆ. ತಾಕತ್ತಿದ್ದರೆ ನಮ್ಮನ್ನು ಬಂಧಿಸಿ’ ಎಂದು ಶೋಬಾ ಕರಂದ್ಲಾಜೆ ಅವರು ಮುಖ್ಯಮಂತ್ರಿ ಅವರಿಗೆ ನೇರ ಸವಾಲು ಹಾಕಿದರು.

ಉಲ್ಟಾ ಹೊಡೆದ ಮುಖ್ಯಮಂತ್ರಿ !

ಭಾರೀ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಚಾಮಾರಾಜನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ‘ಹಿಂದುತ್ವ ಉಗ್ರಗಾಮಿಗಳು’ ಎಂದು ಹೇಳಿದ್ದು ಎಂದು ಸಮಜಾಯಿಷಿ ನೀಡಿದ್ದಾರೆ.

  • 1.7K
    Shares