ಶಿಷ್ಟಾಚಾರ ಬದಿಗೊತ್ತಿ ಮೋದಿ, ಇಸ್ರೇಲ್ ಪ್ರಧಾನಿಯನ್ನು ಸ್ವಾಗತಿಸಿದ್ದು ಏಕೆ ಗೊತ್ತೆ..??

ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಬಂದಿಲಿದಿದ್ದು, ಸುಮಾರು 15 ವರ್ಷಗಳ ಬಳಿಕ ಇಸ್ರೇಲ್ ಪ್ರಧಾನಿ ಒಬ್ಬರು ಭಾರತಕ್ಕೆ ಬಂದಿದ್ದಾರೆ. ಈ ವೇಳೆ ನರೇಂದ್ರ ಮೋದಿಯವರು ತಮ್ಮ ಶಿಷ್ಟಾಚಾರವನ್ನು ಬದಿಗೊತ್ತಿ ಸ್ವತಃ ತಾವೇ ವಿಮಾನ ನಿಲ್ದಾಣಕ್ಕೆ ತೆರಳಿ ಬೆಂಜಮಿನ್ ಅವರಿಗೆ ಭಾರತಕ್ಕೆ ಸ್ವಾಗತ ಕೋರಿದ್ದಾರೆ.

ಈ ಕುರಿತು ಸಂತಸ ವ್ಯಕ್ತಪಡಿಸಿ ಟ್ವಿಟ್ ಮಾಡಿದ ಮೋದಿಯವರ, “ನನ್ನ ಆತ್ಮೀಯ ಗೆಳೆಯನಿಗೆ ಭಾರತಕ್ಕೆ ಸ್ವಾಗತ, ನಿಮ್ಮ ಭೇಟಿ ಐತಿಹಾಸಿಕವಾದದ್ದು, ನಮ್ಮ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ” ಎಂದು ಮೋದಿಯವರು ಟ್ವೀಟರ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಜುಲೈ ನಲ್ಲಿ ಇಸ್ರೇಲ್ ಭೇಟಿ ನೀಡಿದಾಗ, ಇದೇ ರೀತಿ ಶಿಷ್ಟಾಚಾರ ಬದಿಗೊತ್ತಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಸಹ ನಮ್ಮ ಪ್ರಧಾನಿ ನರೇಂದ್ರ ಮೋದಿಯವನ್ನು ಟೆಲ್ ಅವೀವ್‍ ವಿಮಾನ ನಿಮಾನ ನಿಲ್ದಾಣಕ್ಕೆ ತೆರಳಿ ಸ್ವತಃ ಸ್ವಾಗತಿಸಿದ್ದರು ಇಲ್ಲಿ ನೆನೆಯಬಹುದು. ಅಮೇರಿಕಾ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಹಾಗೂ ಧರ್ಮ ಗುರು ಪೋಪ್ ಅವರಿಗೆ ಈ ಸ್ವಾಗತ ನೀಡಿದ್ದರು. ಇಸ್ರೇಲ್ ನ ಪ್ರಧಾನಿಯಿಂದ ಈ ವಿಶೇಷ ಸ್ವಾಗತ ಪಡೆದ ಮೂರನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾತ್ರರಾಗಿದ್ದರು.

ಆರು ದಿನಗಳ ಭೇಟಿಗೆ ಭಾರತಕ್ಕೆ ಬಂದಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಅವರಿಗೆ ಪ್ರಧಾನಿ ಮೋದಿ ರಾತ್ರಿ ಔತಣ ಕೂಟವನ್ನು ಸಿದ್ದಪಡಿಸಿದ್ದಾರೆ. ಅಷ್ಟೆ ಅಲ್ಲದೇ ಇಸ್ರೇಲ್ ಪ್ರಧಾನಿ ತಾಜ್ ಮಹಲ್ ಗೂ ಭೇಟಿ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ಹೇಳುತ್ತಿವೆ.

ಭಾರತಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ಬರುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರಾಷ್ಟ್ರಪತಿ ಭವನದ ಎದುರಿಗೆ ಅಧಿಕೃತ ಸ್ವಾಗತ ಕಾರ್ಯಕ್ರಮ ನಡೆಸಲಾಯಿತು. ನಂತರ ಎರಡು ದೇಶದ ಪ್ರಧಾನಿಗಳು ‘ತೀನ್ ಮೂರ್ತಿ’ ಸ್ಮಾರಕಕ್ಕೆ ಭೇಟಿ ನೀಡಿದರು.

ಏನಿದು “ತೀನ್ ಮೂರ್ತಿ”.? : ಒಂದು ಶತಮಾನದ ಹಿಂದೆ ಭಾರತದ ಮೂರು ರೆಜಿಮೆಂಟ್ ಗಳು ಹೈಫಾ ಯುದ್ಧದಲ್ಲಿ ಭಾಗವಹಿಸಿದ್ದ ಸ್ಮರಣಾರ್ಥವಾಗಿ ಈ ಸ್ಮಾರಕವನ್ನು ಕಟ್ಟಲಾಗಿದೆ. ಅಲ್ಲದೇ ಇದೇ ವೇಳೆ ‘ತೀನ್ ಮೂರ್ತಿ ಮಾರ್ಗ್’ ಚೌಕಕ್ಕೆ “ತೀನ್ ಮೂರ್ತಿ ಹೈಫಾ ಚೌಕ್” ಎಂದು ಮರುನಾಮಕರಣ ಮಾಡಿದರು

ಇಲ್ಲಿನ ಸ್ಮಾರಕದಲ್ಲಿ ಸ್ಥಾಪನೆ ಮಾಡಿರುವ ಮೂರು ಕಂಚಿನ ಮೂರ್ತಿಗಳು ಮೈಸೂರು, ಹೈದರಾಬಾದ್ ಮತ್ತು ಜೋಧ್ಪುರ್ ಪಡೆಗಳನ್ನು ಪ್ರತಿನಿಧಿಸುತ್ತವೆ. ಮೊದಲ ವಿಶ್ವ ಯುದ್ಧದ ವೇಳೆಯಲ್ಲಿ ಇಸ್ರೇಲ್ ನ ಹೈಫಾ ನಗರವನ್ನು 1918, ಸೆಪ್ಟೆಂಬರ್ 23 ಬ್ರಿಟಿಷ್ ಒಕ್ಕೂಟದ ಸೇನೆ ಗೆದ್ದಿತ್ತು. ಮೊದಲ ವಿಶ್ವ ಯುದ್ಧದಲ್ಲಿ ಭಾರತೀಯ ಸೈನಿಕರು ತೋರಿದ ಪರಾಕ್ರಮದ ಸ್ಮರಣಾರ್ಥಕ್ಕಾಗಿ ಇಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು. ಹೈಫಾ ನಗರವನ್ನು ಬ್ರಿಟಿಷರಿಂದ ವಿಮೋಚನೆ ಮಾಡುವ ಯುದ್ದದಲ್ಲಿ ಭಾರತದ 44 ಸೈನಿಕರು ತಮ್ಮ ಪ್ರಾಣತ್ಯಾಗ ಮಾಡಿದ್ದರು ಇಲ್ಲಿ ನೆನಸಬಹುದು.

ಪ್ರಧಾನಿ ನರೇಂದ್ರ ಮೋದಿಯವರು ಶಿಷ್ಟಾಚಾರ ಉಲ್ಲಂಘಿಸುತ್ತಿರುವುದು ಇದೇ ಮೊದಲೆನಲ್ಲ. ಈ ಹಿಂದೆ 2015ರ ಗಣರಾಜ್ಯೋತ್ಸವಕ್ಕೆ ಆಗಮಿಸಿದ್ದ ವಿಶೇಷ ಅತಿಥಿ ಅಮೇರಿಕಾದ ಅಧ್ಯಕ್ಷರಾದ ಬರಾಕ್ ಒಬಾಮಾ ಅವರು ಭಾರತಕ್ಕೆ ಆಗಮಿಸಿದ್ದ ವೇಳೆ ಸ್ವತ್ಃ ನರೇಂದ್ರ ಮೋದಿ ಅವರೇ ವಿಮಾನ ನಿಲ್ದಾಣಕ್ಕೆ ತೆರಳಿ ಅವರನ್ನು ಸ್ವಾಗತಿಸಿದ್ದರು ನೆನೆಪಿಸಬಹುದು. ಇದರ ನಂತರ ಬುಲೆಟ್ ರೈಲು ಯೋಜನೆಯ ಶಂಕುಸ್ಥಾಪನೆಗೆ ಆಗಮಿಸಿದ್ದ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರನ್ನು ಸಹ 2017ರ ಸೆಪ್ಟೆಂಬರ್ ನಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ನ ಅಹಮದಬಾದ್ ವಿಮಾನ ನಿಲ್ದಾಣಕ್ಕೆ ಹೋಗಿ ಸ್ವಾಗತಿಸಿದ್ದರು.

ಭಾರತಕ್ಕೆ ಭೇಟಿ ನೀಡುತ್ತಿರುವ ಎರಡನೇಯ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಗಿದ್ದು, ಈ ಮೊದಲು 2003ರಲ್ಲಿ ಪ್ರಧಾನಿಯಾಗಿದ್ದ ಏರಿಯಲ್ ಶರೋನ್ ಅವರು ಭಾರತ ಪ್ರವಾಸವನ್ನು ಕೈಗೊಂಡಿದ್ದರು.

ಮೂಲ : Publictv