ವಾಟ್ಸಪ್ ನಲ್ಲಿ ಕಿರಿ ಕಿರಿ ಮಾಡಿದರೆ ಇನ್ನೂ ಮುಂದೆ “ಡಿಸ್ ಮಿಸ್ ಭಾಗ್ಯ..!!

ಕ್ಯಾಲಿಫೋರ್ನಿಯಾ: ಇನ್ನುಮುಂದೆ ವಾಟ್ಸಪ್ ಗುಂಪಿನಲ್ಲಿ ಕಿರಿ ಕಿರಿ ಮಾಡಿ ತೊಂದರೆ ಕೊಡುವ ಗೆಳೆಯರನ್ನು ಗುಂಪಿಗೆ ಸೇರಿಸುವ ಗುಂಪಿನ ಅಡ್ಮಿನ್ ನನ್ನು ಇನ್ನು ಮುಂದೆ ಗುಂಪಿನಿಂದ ಡಿಸ್‍ಮಿಸ್ ಮಾಡಬಹುದು..!!

ಹೌದು.. ವಾಟ್ಸಪ್ ನಲ್ಲಿ ಇಲ್ಲಿತನಕ ಒಬ್ಬ ಅಡ್ಮಿನ್ ‘ರಿಮೂ’ ಮಾಡಿದ್ರೆ ಆ ಅಡ್ಮಿನ್ ಗುಂಪಿನಿಂದಲೇ ಹೊರಗೆ ಹೋಗುತ್ತಿದ್ದ. ಮತ್ತೆ ರಿಮೂ ಆಗಿದ್ದ ವ್ಯಕ್ತಿ ವಾಪಸ ಗುಂಪಿಗೆ ಸೇರಿಕೊಳ್ಳ ಬೇಕಾದರೆ ಆ ವ್ಯಕ್ತಿಯನ್ನು ಅಡ್ಮಿನ್ ಗಳ ಪೈಕಿ ಯಾರಾದರೂ ಒಬ್ಬರು ಸೇರಿಸ ಬೇಕಾಗುತಿತ್ತು.

ಇನ್ನೂ ಮುಂದೆ ಈ ಎರಡು ಕ್ರಿಯೆಗಳನ್ನು ಮಾಡುವ ಅಗತ್ಯವಿಲ್ಲ..!! ಅಡ್ಮಿನ್ ಡಿಸ್‍ಮಿಸ್ ಮಾಡಿದ್ರೆ ಆ ವ್ಯಕ್ತಿ ಅಡ್ಮಿನ್ ಆಗಿ ಮುಂದುವರಿಯುವುದಿಲ್ಲ. ಬದಲಾಗಿ ಆತ ಗ್ರೂಪ್ ನಲ್ಲಿರುವ ಸದಸ್ಯನಾಗಿಯೇ ಮುಂದುವರಿಯ ಬೇಕಾಗುತ್ತದೆ. ಆದರೆ ಈ ವಿಶೇಷತೆ ವಾಟ್ಸಪ್ ಎಲ್ಲ ಬಳಕೆದಾರರಿಗೆ ಸಿಗುವುದಿಲ್ಲ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ವಾಟ್ಸಪ್ ಬೀಟಾ ಆವೃತ್ತಿ ಬಳಸುತ್ತಿರುವ ಬಳಕೆದಾರರಿಗೆ ಈ ಸೇವೆ ಆರಂಭದಲ್ಲಿ ಸಿಗುತ್ತದೆ.

ಇದರ ಜೊತೆ ಜೊತೆಯಲ್ಲೇ ಫೇಸ್ಬುಕ್ ಒಡೆತನದ ವಾಟ್ಸಪ್ ಹೊಸ ಸಂಯೋಜನೆ `ರಿಸ್ಟ್ರಿಕ್ಟೆಡ್ ಗ್ರೂಪ್ಸ್’ ನೀಡಲು ಮುಂದೆ ಬಂದಿದೆ. ಈ ಹೊಸ ಸಂಯೋಜನೆ ಆಯ್ಕೆ ಮಾಡಿದರೆ ಆ ಗುಂಪಿನಲ್ಲಿ ಅಡ್ಮಿನ್ ಬಿಟ್ಟು ಬೇರ‌್ಯಾವ ಸದಸ್ಯರು ಯಾವುದೇ ಸಂದೇಶವನ್ನು ಕಳುಹಿಸಲು ಸಾಧ್ಯವಿಲ್ಲ..!!

ಒಂದು ಸಮಯ ಈ ಆಯ್ಕೆ ಮಾಡಿದರೆ ಅಡ್ಮಿನ್ ಕಳುಹಿಸಿದ ಸಂದೇಶಗಳನ್ನು ಸದಸ್ಯರು ನೋಡಬಹುದೇ ಹೊರತು ಅದಕ್ಕೆ ಉತ್ತರಿಸಲು ಇನ್ನು ಮುಂದೆ ಸಾದ್ಯವಿಲ್ಲ. ಒಂದು ವೇಳೆ ಸದಸ್ಯರು ಸಂದೇಶ ಕಳಿಸಿದರೂ ಅಡ್ಮಿನ್ ಸಮ್ಮತಿ ಇಲ್ಲದೇ ಇದ್ದರೆ ಅದು ಯಾರ ಕಣ್ಣಿಗೂ ಕಾಣಿಸುವುದಿಲ್ಲ..!!