ಬರೋಬ್ಬರಿ 42 ದಿನಗಳ ನಂತರ ರಷ್ಯಾದಲ್ಲಿ ಸೂರ್ಯೋದಯ..!! ಯಾಕೆ ಅಂತಿರಾ..? ಈ ಸುದ್ದಿ ಓದಿ

ಮಾಸ್ಕೋ: ಉತ್ತರ ರಷ್ಯಾದ ಆರ್ಕ್ಟಿಕ್ ವೃತ್ತದ ಭಾಗದಲ್ಲಿ ಬರುವ ಮುರ್ಮಾನ್ಸ್ಕ್ ಶಹರದ ಜನ ಸುದೀರ್ಘ 40 ದಿನಗಳ ನಂತರ ಶುಕ್ರವಾರ 2018ನೇ ವರ್ಷದ ಪ್ರಥಮ ಸೂರ್ಯನ ಬೆಳಕಿನ ಕಿರಣಗಳನ್ನು ನೋಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಆರ್ಕ್ಟಿಕ್ ಭಾಗದ ಹಲವು ಸ್ಥಳಗಳಲ್ಲಿ ಡಿಸೆಂಬರ್ 2 ರಿಂದ ಜನವರಿ 11 ರ ರವರೆಗೆ ಸುಮಾರು 42 ದಿನಗಳ ಕಾಲ ಯಾವುದೇ ಸೂರ್ಯನ ಕಿರಣ ಕಿರಣಗಳು ಕಾಣಿಸುವುದೇ ಇಲ್ಲಾ..!! ಅಂದರೆ ಬರೋಬ್ಬರಿ 42 ದಿನಗಳ ಕಾಲ ಸೂರ್ಯೋದಯ ಆಗುವುದೇ ಇಲ್ಲಾ. ಹೀಗಾಗಿ ವರ್ಷದ ಪ್ರಥಮ ಸೂರ್ಯೋದಯವನ್ನು ಕಾಣಲು ಇಲ್ಲಿನ ಸ್ಥಳೀಯರು ಸನ್ ರೈಸ್ ಹಿಲ್ ಹತ್ತಿರದ ಒಂದು ಸ್ಥಳದಲ್ಲಿ ಸೇರಿ ಸಂಭ್ರಮ ವ್ಯಕ್ತಪಡಿಸುತ್ತಾರೆ.

ಕೇವಲ 30 ನಿಮಿಷಗಳ ಸಮಯದಲ್ಲಿ ಸೂರ್ಯೋದಯಾದ ಪೋಟೊಗಳನ್ನು ಇಲ್ಲಿನ ಜನರು ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಆರ್ಕ್ಟಿಕ್ ಮತ್ತು ಅಂಟಾರ್ಟಿಕಾ ಪ್ರದೇಶದಲ್ಲಿ ವರ್ಷದಲ್ಲಿ ಒಂದು ದಿವಸ ಅಂದರೇ 24 ಗಂಟೆ ಕಾಲ ಸೂರ್ಯ ಮುಳುಗುವುದೇ ಇಲ್ಲ-ಸಂಪೂರ್ಣ ಹಗಲು, ನಂತರ ಒಂದು ದಿವಸ (24 ಗಂಟೆಗಳ ಕಾಲ) ಸೂರ್ಯ ಉದಯಿಸುವುದೇ ಇಲ್ಲ..!! ಹಗಲು ರಾತ್ರಿಗಳ ವ್ಯತ್ಯಾಸ ಅಲ್ಲದೇ ಈ ಪ್ರದೇಶದಲ್ಲಿ ವರ್ಷದಲ್ಲಿ ಕೆಲವು ದಿನ ನಿರಂತರ ಹಗಲು ಇದ್ದರೆ ನಂತರದ ದಿನಗಳಲ್ಲಿ ನಿರಂತರ ರಾತ್ರಿಯೂ ಇರುತ್ತವೆ..!!

  • 459
    Shares