ಪಾಶ್ಚಿಮಾತ್ಯ ಆಚರಣೆಯಲ್ಲಿ ತೊಡಗಿರುವ ಇಂದಿನ ಶಾಲೆಗಳ ನಡುವೆ ಹಿಂದೂಗಳ ಪ್ರಮುಖ ಹಬ್ಬ ಸಂಕ್ರಮಣವನ್ನು ಅದ್ಧೂರಿಯಾಗಿ ಆಚರಿಸಿದ ಶಾಲೆ..!!

ಹೌದು..!! ನಂಬಲು ಅಸಾಧ್ಯವಾಗಿರಬಹುದು ಆದರೆ ಇದು ನಿಜ. ಸದಾ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಆಚರಿಸುವ ಈಗಿನ್ ಪಬ್ಲಿಕ್ ಶಾಲೆಗಳಲ್ಲಿ ಸಿಲಿಕಾನ್ ಸಿಟಿಯಲ್ಲಿನ ಸುನಿತಾ ಮಂಜುನಾಥ್ ರವರ ರಾಧಾಕೃಷ್ಣ ಪಬ್ಲಿಕ್ ಶಾಲೆಯಲ್ಲಿ ಹಳ್ಳಿ ಸಂಸ್ಕೃತಿಯನ್ನು ಬಿಂಬಿಸುವ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಹೌದು..!! ಸಿಲಿಕಾನ್ ಸಿಟಿಯಲ್ಲಿನ ಸುನಿತಾ ಮಂಜುನಾಥ್ ರವರ ಹೊಸ ಪ್ರಯತ್ನದ ಫಲವಾಗಿ ರಾಧಾಕೃಷ್ಣ ಪಬ್ಲಿಕ್ ಶಾಲೆಯ ತುಂಬಾ ಹಳ್ಳಿಯ ವಾತಾವರಣ ನಿರ್ಮಾಣವಾಗಿತ್ತು..! ಆಧುನಿಕ ಜೀವನ ಶೈಲಿಯಲ್ಲಿ ಹಳ್ಳಿಯ ಸಂಸ್ಕೃತಿ ಕಾಣಿಸುವುದೇ ಅಪರೂಪವಾಗಿರುವ ಸಂದರ್ಭದಲ್ಲಿ ತಮ್ಮ ಶಾಲೆಯ ಮಕ್ಕಳಿಗೆ ಹಳ್ಳಿಯ ಜೀವನ, ಅಲ್ಲಿನ ರೈತರು, ಗೋಮಾತೆ, ಹಳ್ಳಿಗಳಲ್ಲಿ ಆಚರಿಸುವ ಹಬ್ಬದ ರೀತಿ ನಿಯಮಗಳ ಪರಿಚಯ ಮಾಡಿ ಕೊಡಲು ನಾಗಶೆಟ್ಟಿಹಳ್ಳಿಯಲ್ಲಿ‌ನ ತಮ್ಮ ಶಾಲೆಯಲ್ಲಿ ಅದ್ಭುತವಾಗಿ ಹಳ್ಳಿಯನ್ನೇ ಮರುನಿರ್ಮಾಣ ಮಾಡಿದ್ದರು..!

ಶಾಲೆಯಲ್ಲಿ ಎತ್ತ ನೋಡಿದರತ್ತ ಸಾಂಸ್ಕೃತಿಕ ಉಡುಗೆ ತೊಡುಗೆಯನ್ನು ತೊಟ್ಟ ಮಕ್ಕಳು, ಅಲ್ಲಲ್ಲಿ ಕಬ್ಬಿನ ರಾಶಿ, ತರಕಾರಿ ಅಂಗಡಿಗಳ ಅಣುಕುಗಳು‌, ಭಕ್ತಿಯಿಂದ ನಡೆದ ಗೋಮಾತೆ ಪೂಜೆ, ಅಂಗಳ ತುಂಬೆಲ್ಲಾ ಸಗಣಿಯಿಂದ ಸಾರಿಸಿ ಅದರ ಮೇಲೆ ಸುಂದರವಾಗಿ ರಂಗೋಲಿಯ ಚಿತ್ತಾರ, ಮಡಿಕೆಯಲ್ಲಿ ಅಲ್ಲೇ ತಯಾರಿಸಿದ ಮಾಡಿದ ಪೊಂಗಲ್, ನಿಜವಾಗಿಯೂ ಈ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ನೋಡಲು ಎರಡು ಕಣ್ಣು ಸಾಲದು..

ಶಾಲೆಯ ಶಿಕ್ಷಕರ ಸಹಕಾರದಿಂದ ಶಾಲೆಯನ್ನು ಹಳ್ಳಿಯ ರೀತಿ ಸಿಂಗರಿಸಿ ಸಗಣಿಯಿಂದ ಸಾರಿಸಿ, ರಂಗೋಲಿಯನ್ನು ಹಾಕಿ, ಮಾವಿನ ತೋರಣ, ಬಾಳೆ ಕಂಬಗಳನ್ನು ಕಟ್ಟಿ, ಕೃತಕ ಸಂತೆಯನ್ನು ಸೃಷ್ಟಿಸಿದ್ದು ಶಾಲಾ ಮಕ್ಕಳ ಮನ ತಣಿಸುವುದರ ಜೊತೆಗೆ ಮರೆತು ಹೋಗಿರುವ ನಮ್ಮ ಹಳ್ಳಿಯ ಸಂಸ್ಕೃತಿಯನ್ನು ಮತ್ತೆ ನೆನಪಿಸಿ ಬಗ್ಗೆ ಹೆಮ್ಮೆ ಪಡುವಂತಿತ್ತು.

ಸುಗ್ಗಿ ಕಣದ ನಿರ್ಮಾಣ : ರೈತರು ಕಟಾವಿಗೆ ಬಂದ ಬೆಳೆಯನ್ನು ರಾಶಿ ಮಾಡಲು ಮಾಡುವ ರಾಶಿ ಕಣದ ನಿರ್ಮಾಣ ಮಾಡಿದ್ದರಲ್ಲದೆ, ರೈತಾಪಿ ಜನರು ದೇವರೆಂದು ಪೂಜಿಸುವ ಕಣಕ್ಕೆ ಪೂಜೆ ಮಾಡಿದ್ದು ವಿಶೇಷವಾಗಿತ್ತು.

ಸಾಮೂಹಿಕ ಪೊಂಗಲ್ : ಇದಿಷ್ಟೇ ಅಲ್ಲದೇ ಸುನಿತಾ ಮಂಜುನಾಥ್ ಅವರು ಶಾಲಾ ಶಿಕ್ಷಕರ ಜೊತೆಗೂಡಿ ಸಾಮೂಹಿಕವಾಗಿ ಶಾಲೆಯ ಆವರಣದಲ್ಲೇ ಪೊಂಗಲ್ ಅನ್ನು ತಯಾರಿಸಿ ಶಾಲಾ ಮಕ್ಕಳಿಗೆ ಬಡಿಸಿದ್ದು ವಿಶೇಷವಾಗಿತ್ತು.

ಗೋ ಪೂಜೆಯ ಮಹತ್ವ : ಶಾಲೆಯ ಆವರಣದಲ್ಲಿಯೇ ಕೃತಕವಾಗಿ ನೆಲ್ಲು ಹುಲ್ಲಿನ ಗುಡಿಸಲನ್ನು ನಿರ್ಮಿಸಿ ಅಲ್ಲಿ ಹಬ್ಬದ ಅಂಗವಾಗಿ ರೈತರ ದೇವತೆ ಎಂದು ಕರೆಸಿಕೊಳ್ಳುವ ಗೋಮಾತೆಗೆ ಭಕ್ತಿಯಿಂದ ಪೂಜೆಯನ್ನು ಮಾಡಿ ಮಕ್ಕಳಿಗೆ ಕಾಮಧೇನುವಿನ ಮಹತ್ವವನ್ನು ತಿಳಿಸಿಕೊಟ್ಟರು.

ಮುಖ್ಯ ಅತಿಥಿಯಾಗಿ ಬಿಗ್ ಬಾಸ್ ಪ್ರಥಮ್ : ಇತ್ತಿಚಿಗೆ ಸಾಮಾಜಿಕ ಕೆಲಸಗಳಲ್ಲಿ ತುಂಬಾ ಮುಂದಿರುವ ಬಿಗ್ ಬಾಸ್ ವಿಜೇತ ಪ್ರಥಮ್ ಅವರು ಸುನಿತಾ ಮಂಜುನಾಥ್ ರವರ ಕರೆಗೆ ಓಗೊಟ್ಟು ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಕ್ಕಳಿಗೆ ಅರಿವು ಮೂಡಿಸುತ್ತಿರುವ ರೀತಿಯನ್ನು ನೋಡಿ ಖುಷಿ ಪಟ್ಟರು.

ವಿಭಿನ್ನ ಪ್ರಯತ್ನಕ್ಕೆ ನಮ್ಮದೊಂದು ಸಲಾಮ್ : ಸದಾ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಈಗಿನ ಪಬ್ಲಿಕ್ ಸ್ಕೂಲ್‌ಗಳಲ್ಲಿ ಈ ರೀತಿಯಾದ ಒಂದು ಅದ್ಭುತವಾದ ಪರಿಕಲ್ಪನೆಯನ್ನು ವಾಸ್ತವ ರೂಪಕ್ಕೆ ತಂದು ಶಾಲಾ ಮಕ್ಕಳಿಗೆ ನಮ್ಮ ರೈತಾಪಿ ಜನರ ಜೀವನ ಶೈಲಿಯನ್ನು ತೋರಿಸುವುದರ ಜೊತೆಗೆ ಸಂಕ್ರಾಂತಿ ಹಬ್ಬದ ಸುಗ್ಗಿ ಪೂಜೆಯ ಮಹತ್ವವನ್ನು ತಿಳಿಸಿಕೊಟ್ಟ ಸುನಿತಾ ಮಂಜುನಾಥ್ ಅವರಿಗೆ ನಮ್ಮ ಕಡೆಯಿಂದ ಅನಂತಕೋಟಿ ನಮನಗಳು..

ಶೇರ್ ಮಾಡಿ ಇವರು ಮಾಡುತ್ತಿರುವ ಕಾರ್ಯ ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ. ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿನ ನಮ್ಮ ಶಾಲೆಗಳಿಗೆ ಈ ಶಾಲೆ ಮಾದರಿಯಾಗಲಿ.. ಭವ್ಯ ಭಾರತ ಪರಂಪರೆಯನ್ನು ಮತ್ತು ಹಿಂದೂಗಳನ್ನು ಮರೆಯುತ್ತಿರುವವರಿಗೆ ಈ ಶಾಲೆಯೊಂದು ಅದ್ಭುತ ಉದಾಹರಣೆ.